Rekhachithram OTT: ಮಲಯಾಳಂ ಸೂಪರ್ ಹಿಟ್ ರೇಖಾಚಿತ್ರಂ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ
Rekhachithram OTT: ಮಲಯಾಳಂನಲ್ಲಿ ಈ ವರ್ಷ ಬಿಡುಗಡೆ ಆಗಿ ಅತ್ಯಧಿಕ ಲಾಭ ಕಂಡ ಸಿನಿಮಾ ಸಾಲಿನಲ್ಲಿ ನಿಂತಿದೆ ರೇಖಾಚಿತ್ರಂ ಸಿನಿಮಾ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆದ ಈ ಸಿನಿಮಾದಲ್ಲಿ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿದೆ.

Rekhachithram OTT: ಮಲಯಾಳಂ ಮಿಸ್ಟರಿ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾ ಒಟಿಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಫೆಬ್ರವರಿಯಲ್ಲಿಯೇ ಒಟಿಟಿಗೆ ಬರುವ ಸಾಧ್ಯತೆಯಿದೆ ಎಂಬ ವದಂತಿ ಇತ್ತು. ಆದಾಗ್ಯೂ, ಒಟಿಟಿ ವೀಕ್ಷಕರಿಗೆ ಚಿತ್ರದ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಹೀಗಿರುವಾಗಲೇ ಈಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿದೆ.
ಯಾವಾಗಿನಿಂದ ಸ್ಟ್ರೀಮಿಂಗ್: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ರೇಖಾಚಿತ್ರಂ ಸಿನಿಮಾ ಮಾರ್ಚ್ 14ರಂದು ಸೋನಿಲೈವ್ ಒಟಿಟಿಯಲ್ಲಿ ಪ್ರಸಾರ ಆರಂಭಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಈ ಬಗ್ಗೆ ಸೋನಿ ಲೈವ್ ಒಟಿಟಿಯಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಂದರೆ, ಮಾರ್ಚ್ 7ರಂದು ರೇಖಾಚಿತ್ರಂ ಸಿನಿಮಾ ಸೋನಿ ಲೈವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿಲಿದೆ. ಮೂಲ ಮಲಯಾಳಂನಲ್ಲಿನ ಈ ಚಿತ್ರ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ವೀಕ್ಷಣೆಗೆ ಲಭ್ಯ ಇರಲಿದೆ.
ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಸೋನಿ ಲೈವ್, "ಇದು ಮರೆತುಹೋದ ಅಪರಾಧ. ಹೂತುಹೋದ ಸತ್ಯ. ಇದೆಲ್ಲವನ್ನೂ ಹೊರತೆಗೆಯುವ ಸಮಯ ಬಂದಿದೆ. ಮಾರ್ಚ್ 7 ರಿಂದ ಸೋನಿಲೈವ್‌ನಲ್ಲಿ ರೇಖಾಚಿತ್ರಂ" ಎಂದಿದೆ. ಕಿರು ಟೀಸರ್ ಸಹ ಬಿಡುಗಡೆ ಆಗಿದ್ದು, ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ ಇರಲಿದೆ.
ಮಿಸ್ಟರಿ ಕ್ರೈಮ್ ಥ್ರಿಲ್ಲರ್..
ಮಿಸ್ಟರಿ ಕ್ರೈಮ್ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾದಲ್ಲಿ ಆಸಿಫ್ ಅಲಿ ಮತ್ತು ಅನಸೂಯ ರಾಜನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೋಶಿ ಚಾಕೋ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಜನವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರೇಖಾಚಿತ್ರಂ ಸಿನಿಮಾ, ಈ ವರ್ಷದ ಹಿಟ್ ಸಿನಿಮಾಗಳ ಸಾಲಿನಲ್ಲಿ ಇದೆ. ಈ ವರ್ಷದ ಅತಿ ಹೆಚ್ಚು ಲಾಭದಾಯಕ ಸಿನಿಮಾ ಎಂದೂ ಹೇಳಲಾಗುತ್ತಿದೆ. ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ 55 ಕೋಟಿ ಕಲೆಕ್ಷನ್ ಮಾಡಿದೆ. ನಾಯಕ ನಟ ಆಸಿಫ್ ಅಲಿ ಮತ್ತು ಅನುಸೂಯಾ ರಾಜನ್ ನಟನೆಗೂ ಪೂರ್ಣಾಂಕ ಸಿಕ್ಕಿದೆ.
ಏನಿದು ರೇಖಾಚಿತ್ರಂ ಕಥೆ..
ವಿವೇಕ್ ಗೋಪಿನಾಥ್ ಒಬ್ಬ ಪೊಲೀಸ್ ಅಧಿಕಾರಿ. ಸವಾಲಿನ ಪ್ರಕರಣವೊಂದನ್ನು ಬೆನ್ನುಹತ್ತುವ ವಿವೇಕ್, ನಲವತ್ತು ವರ್ಷಗಳ ಹಿಂದೆ ಮಾಡಿದ ಕೊಲೆಯ ಬಗ್ಗೆ ವ್ಯಕ್ತಿಯೋರ್ವ ಫೇಸ್ಬುಕ್ ಲೈವ್‌ನಲ್ಲಿ ಬಹಿರಂಗಪಡಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನನ್ನು ಕೊಂದವರು ಯಾರು? 100 ವರ್ಷಗಳ ಹಿಂದಿನ ಪ್ರಕರಣವನ್ನು ವಿವೇಕ್ ಗೋಪಿನಾಥ್ ಹೇಗೆ ಪತ್ತೆಮಾಡುತ್ತಾನೆ? ಮಮ್ಮುಟ್ಟಿ ಅಭಿಮಾನಿಯಾಗಿರುವ ನಟಿ ರೇಖಾ ಕಣ್ಮರೆಯಾಗಲು ಕಾರಣವೇನು? ಇದು ಈ ಚಿತ್ರದ ಕಥೆ.
