ಕನ್ನಡ ಸುದ್ದಿ  /  Entertainment  /  Rishabh Shetty Starrer Kantara Movie Twitter Review Here

Kantara Twitter Review: ‘ಕಾಂತಾರ’ ಸಿನಿಮಾ ನೋಡಿದ ಜನ ಏನಂದ್ರು.. ಇಲ್ಲಿದೆ ಟ್ವಿಟರ್‌ ವಿಮರ್ಶೆ..

ದಕ್ಷಿಣ ಕನ್ನಡದ ಸಂಸ್ಕೃತಿ ಮತ್ತು ಅಲ್ಲಿನ ಸೊಗಡಿನ 'ಕಾಂತಾರ' ಸದ್ಯ ಕರ್ನಾಟಕ ಮಾತ್ರವಲ್ಲ ಪಕ್ಕದ ಹಲವು ರಾಜ್ಯಗಳು ಮತ್ತು ವಿದೇಶಗಳಲ್ಲಿಯೂ ಬಿಡುಗಡೆ ಆಗಿದೆ. ವಿದೇಶಗಳಿಂದಲೂ ನೋಡುಗರು ಸಿನಿಮಾ ಮೆಚ್ಚಿದ್ದಾರೆ. ಹಾಗಾದರೆ, ಈ ಸಿನಿಮಾ ನೋಡಿದ ನೆಟ್ಟಿಗರು ಟ್ವಿಟರ್‌ನಲ್ಲಿ ಏನೆಲ್ಲ ಹೇಳಿದ್ದಾರೆ? ಇಲ್ಲಿದೆ ಟ್ವಿಟರ್‌ ವಿಮರ್ಶೆ..

‘ಕಾಂತಾರ’ ಸಿನಿಮಾ ನೋಡಿದ ಜನ ಏನಂದ್ರು.. ಇಲ್ಲಿದೆ ಟ್ವಿಟರ್‌ ವಿಮರ್ಶೆ..
‘ಕಾಂತಾರ’ ಸಿನಿಮಾ ನೋಡಿದ ಜನ ಏನಂದ್ರು.. ಇಲ್ಲಿದೆ ಟ್ವಿಟರ್‌ ವಿಮರ್ಶೆ.. (Twitter)

ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಾಯಕನಾಗಿ ನಟಿಸಿದ 'ಕಾಂತಾರ' ಸಿನಿಮಾ ಇಂದು (ಸೆ. 30) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್‌ ನಿರ್ಮಾಣದ ಈ ಸಿನಿಮಾ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವನ್ನೇ ಪಡೆದುಕೊಂಡಿದೆ.

ಸಿನಿಮಾ ಬಿಡುಗಡೆಗೂ ಮುನ್ನ ಅಂದರೆ 29ರಂದು ಪ್ರಿಮೀಯರ್‌ ಶೋ ಆಯೋಜಿಸಲಾಗಿತ್ತು. ಈ ಶೋಗೆ ಸಿನಿಮಾ ಸೆಲೆಬ್ರಿಟಿಗಳೂ ಸೇರಿ ತಂಡದ ಆಪ್ತರೆಲ್ಲರೂ ಆಗಮಿಸಿದ್ದರು. ಸಿನಿಮಾ ನೋಡಿದ ಎಲ್ಲರೂ ಅಚ್ಚರಿಯ ರೀತಿಯಲ್ಲಿಯೇ ಕಂಮೆಂಟ್‌ ನೀಡಿದ್ದಾರೆ.

ಅದೇ ರೀತಿ ಸೋಷಿಯಲ್‌ ಮೀಡಿಯಾದಲ್ಲಿಯೂ ಕಾಂತಾರ ಸಿನಿಮಾಕ್ಕೆ ದೊಡ್ಡ ಕ್ರೇಜ್‌ ಸೃಷ್ಟಿಯಾಗಿದೆ. ಸಿನಿಮಾ ನೋಡಿದವರೆಲ್ಲ, ಉದ್ಗಾರ ತೆಗೆಯುತ್ತಿದ್ದಾರೆ. ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಪೂರ್ಣಾಂಕ ನೀಡಿದರೆ, ಚಿತ್ರದ ಹಿನ್ನೆಲೆ ಸಂಗೀತಕ್ಕೂ ಮಾರು ಹೋಗಿದ್ದಾರೆ.

ದಕ್ಷಿಣ ಕನ್ನಡದ ಸಂಸ್ಕೃತಿ ಮತ್ತು ಅಲ್ಲಿನ ಸೊಗಡಿನ ಈ ಸಿನಿಮಾ ಸದ್ಯ ಕರ್ನಾಟಕ ಮಾತ್ರವಲ್ಲ ಪಕ್ಕದ ಹಲವು ರಾಜ್ಯಗಳು ಮತ್ತು ವಿದೇಶಗಳಲ್ಲಿಯೂ ಬಿಡುಗಡೆ ಆಗಿದೆ. ವಿದೇಶಗಳಿಂದಲೂ ನೋಡುಗರು ಸಿನಿಮಾ ಮೆಚ್ಚಿದ್ದಾರೆ. ಹಾಗಾದರೆ, ಈ ಸಿನಿಮಾ ನೋಡಿದ ನೆಟ್ಟಿಗರು ಟ್ವಿಟರ್‌ನಲ್ಲಿ ಏನೆಲ್ಲ ಹೇಳಿದ್ದಾರೆ? ಇಲ್ಲಿದೆ ಟ್ವಿಟರ್‌ ವಿಮರ್ಶೆ..

IPL_Entry_Point