ಮೇ 10ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ರಾಬಿನ್‍ಹುಡ್; ಸಿನಿಮಾ ವೀಕ್ಷಿಸಲು ತಯಾರಾಗಿ
ಕನ್ನಡ ಸುದ್ದಿ  /  ಮನರಂಜನೆ  /  ಮೇ 10ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ರಾಬಿನ್‍ಹುಡ್; ಸಿನಿಮಾ ವೀಕ್ಷಿಸಲು ತಯಾರಾಗಿ

ಮೇ 10ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ರಾಬಿನ್‍ಹುಡ್; ಸಿನಿಮಾ ವೀಕ್ಷಿಸಲು ತಯಾರಾಗಿ

ರಾಬಿನ್‌ಹುಡ್ ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾಗುವ ದಿನಾಂಕ ನಿಗದಿಯಾಗಿದೆ. ಜೀ5 ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಮೇ10, 2025 ರಂದು ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಬಹಿರಂಗಪಡಿಸಿದೆ.

ಮೇ 10ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ರಾಬಿನ್‍ಹುಡ್
ಮೇ 10ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ರಾಬಿನ್‍ಹುಡ್

ರಾಬಿನ್‌ಹುಡ್ ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾಗುವ ದಿನಾಂಕ ನಿಗದಿಯಾಗಿದೆ. ಈ ಸಿನಿಮಾದಲ್ಲಿ ನಾಯಕನಟನಾಗಿ ನಿತಿನ್ ಅಭಿನಯಿಸಿದ್ದು, ಚಲೋ ಮತ್ತು ಭೀಷ್ಮ ಖ್ಯಾತಿಯ ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದಾರೆ. ಈ ಆಕ್ಷನ್-ಕಾಮಿಡಿ ಚಿತ್ರ ಎರಡು ವರ್ಷಗಳಿಗೂ ಹೆಚ್ಚು ಕಾಲ ಚಿತ್ರೀಕರಣದಲ್ಲಿತ್ತು. ಅಂತಿಮವಾಗಿ ಮಾರ್ಚ್ 28, 2025 ರಂದು ತೆರೆಗೆ ಬಂದಿತು. ಆದರೆ, ಬಾಕ್ಸ್ ಆಫೀಸ್‌ನಲ್ಲಿ ಅಂತಹ ಕಮಾಲ್ ಮಾಡಿಲ್ಲ. ಇದೀಗ ಜೀ5 ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಮೇ 10, 2025 ರಂದು ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಬಹಿರಂಗಪಡಿಸಿದೆ.

ರಾಬಿನ್‌ಹುಡ್ ಒಟಿಟಿ ಬಿಡುಗಡೆ ದಿನಾಂಕ

ಇತ್ತೀಚಿನ ನವೀಕರಣವೆಂದರೆ ಜೀ5 ನಲ್ಲಿ ಟಿವಿ ಪ್ರೀಮಿಯರ್ ಕೂಡ ಅದೇ ದಿನಾಂಕದಂದು ಸ್ಟ್ರೀಮಿಂಗ್ ಮಾಡಲಿದೆ. ಕೆಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಡಿಜಿಟಲ್ ಮತ್ತು ದೂರದರ್ಶನದಲ್ಲಿ ಏಕಕಾಲದಲ್ಲಿ ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತವೆ. ಈ ಚಿತ್ರವು ಮೇ 10, 2025 ರಂದು ಸಂಜೆ 5 ಗಂಟೆಗೆ ಜೀ ನೆಟ್‌ವರ್ಕ್‌ಗಳಲ್ಲಿ ಸ್ಟ್ರೀಮ್ ಆಗಲಿದೆ.

ತೆಲುಗಿನ ರಾಬಿನ್‌ಹುಡ್ ಸಿನಿಮಾದಲ್ಲಿ ಕನ್ನಡದ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ನಿತಿನ್ ಅವರೊಂದಿಗಿನ ಅವರ ಕೆಮಿಸ್ಟ್ರಿ ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಆದರೆ, ಒಟಿಟಿ ಬಿಡುಗಡೆಯು ತಂಡಕ್ಕೆ ಸ್ವಲ್ಪ ಆತಂಕಕಾರಿಯಾಗಿದೆ. ಏಕೆಂದರೆ ಚಿತ್ರವು ಆನ್‌ಲೈನ್‌ನಲ್ಲಿ ಸಾಕಷ್ಟು ಟ್ರೋಲಿಂಗ್ ಅನ್ನು ಎದುರಿಸಬೇಕಾಯಿತು. ಆದರೆ, ಅನೇಕರು ಚಿತ್ರಮಂದಿರಗಳಲ್ಲಿ ರಾಬಿನ್‌ಹುಡ್ ಸಿನಿಮಾವನ್ನು ವೀಕ್ಷಿಸದ ಕಾರಣ ಒಟಿಟಿನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುವ ಸಾಧ್ಯತೆಯಿದೆ.

ರಾಬಿನ್‌ಹುಡ್ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು

ಮತ್ತೆ ಪುಟಿದೇಳಲು ಒಂದು ಹಿಟ್ ಬೇಕಾಗಿದ್ದ ನಿತಿನ್, ರಾಬಿನ್‌ಹುಡ್ ಚಿತ್ರದ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದರು. ದುರದೃಷ್ಟವಶಾತ್, ಉತ್ತಮ ಹಾಸ್ಯವನ್ನು ಹೊಂದಿದ್ದರೂ, ಆಕ್ಷನ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತು. ಸಿನಿಮಾ ಅಷ್ಟೇನೂ ಕಲೆಕ್ಷನ್ ಮಾಡದೇ ಇರುವುದು ನಿರ್ಮಾಪಕರಿಗೆ ಭಾರಿ ನಷ್ಟ ಹೊಂದಿದೆ.

ನಿತಿನ್ ಈಗ ತಮ್ಮ ಮುಂದಿನ ಚಿತ್ರ 'ತಮ್ಮುಡು' ಸಿನಿಮಾದ ಬ್ಯುಸಿಯಲ್ಲಿದ್ದಾರೆ. ಈ ಸಿನಿಮಾ ಜುಲೈ 4, 2025 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಸದ್ಯಕ್ಕೆ, ರಾಬಿನ್‌ಹುಡ್ ತನ್ನ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ.

Priyanka Gowda

eMail