Toxic Movie: ಯಶ್‌ ಬರ್ತ್‌ಡೇಗೆ ಟಾಕ್ಸಿಕ್ ಝಲಕ್; ಪಾರ್ಟಿ ಮೂಡ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ ರಾಕಿಂಗ್‌ ಸ್ಟಾರ್
ಕನ್ನಡ ಸುದ್ದಿ  /  ಮನರಂಜನೆ  /  Toxic Movie: ಯಶ್‌ ಬರ್ತ್‌ಡೇಗೆ ಟಾಕ್ಸಿಕ್ ಝಲಕ್; ಪಾರ್ಟಿ ಮೂಡ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ ರಾಕಿಂಗ್‌ ಸ್ಟಾರ್

Toxic Movie: ಯಶ್‌ ಬರ್ತ್‌ಡೇಗೆ ಟಾಕ್ಸಿಕ್ ಝಲಕ್; ಪಾರ್ಟಿ ಮೂಡ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ ರಾಕಿಂಗ್‌ ಸ್ಟಾರ್

ರಾಕಿಂಗ್‌ ಸ್ಟಾರ್ ಯಶ್‌ ಹುಟ್ಟುಹಬ್ಬದಂದು ಟಾಕ್ಸಿಕ್ ಝಲಕ್ ಬಿಡುಗಡೆಯಾಗಿದೆ. ಪಾರ್ಟಿ ಲುಕ್‌ನಲ್ಲಿ ಯಶ್‌ ರಿಚ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇಷ್ಟು ದಿನ ಇದ್ದ ನಿರೀಕ್ಷೆ ಇನ್ನಷ್ಟು ಎತ್ತರಕ್ಕೇರಿದೆ.

ಯಶ್‌ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಝಲಕ್
ಯಶ್‌ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಝಲಕ್

ಕನ್ನಡದ ಸ್ಟಾರ್ ನಟ ಕೆಜಿಎಫ್‌ ಖ್ಯಾತಿಯ ಯಶ್ ಅವರ ಹೊಸ ಸಿನಿಮಾ ಟಾಕ್ಸಿಕ್ ಝಲಕ್ ಬಿಡುಗಡೆಯಾಗಿದೆ. ಗೀತು ಮೋಹನ್‌ದಾಸ್-ನಿರ್ದೇಶನದ ಪೋಸ್ಟರ್‌ ಹಂಚಿಕೊಂಡು ಝಲಕ್ ಬಿಡುಗಡೆಯಾಗುವ ಬಗ್ಗೆ ಯಶ್‌ ಈಗಾಗಲೇ ಮಾಹಿತಿ ನೀಡಿದ್ದರು. ಜನವರಿ 8 ಯಶ್‌ ಅವರ ಜನ್ಮದಿನದಂದೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇದೊಂದು ಬಹು ನಿರೀಕ್ಷಿತ ಚಿತ್ರವಾಗಿದ್ದು ಸಾಕಷ್ಟು ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಮೊದಲ ವಿಡಿಯೋ ತುಣುಕು ಬಿಡುಗಡೆಗಾಗಿ ಸಾಕಷ್ಟು ಅಭಿಮಾನಿಗಳು ಕಾದಿದ್ದು ಇದೀಗ ಪಾರ್ಟಿ ಸೀನ್ ಬಿಡುಗಡೆಯಾಗಿದೆ. ಪಾರ್ಟಿ ಲುಕ್‌ನಲ್ಲಿ ಯಶ್‌ ರಿಚ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಈ ಟಾಕ್ಸಿಕ್ ಸಿನಿಮಾ ಸಾಮಾಜಿಕ ಮಾಧ್ಯಮದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಡ್ರಾಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್‌ನ ಮಾನ್‌ಸ್ಟರ್ ಮೈಂಡ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಜನವರಿ 8 ಯಶ್ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳ ಆಸೆ ಈಡೇರಿದೆ.

ಇದನ್ನೂ ಓದಿ: ಸಿನಿ ಸ್ಮೃತಿ ಅಂಕಣ: ಈ ದಾಖಲೆಗಳನ್ನು ಮುರಿಯಲು ಅದೆಷ್ಟು ವರ್ಷ ಬೇಕೋ?; ಭಾರತೀಯ ಚಿತ್ರರಂಗದಲ್ಲಿ ‘ಪುಷ್ಪ 2’ ಚಿತ್ರದ ಐದು ಹೊಸ ರೆಕಾರ್ಡ್ಸ್‌

ಹೇಗಿದೆ ಯಶ್‌ ಲುಕ್?
ಯಶ್‌ ತುಂಬಾ ರಿಚ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್‌ನಿಂದ ಕ್ಲಬ್‌ಗೆ ಬಂದು ಇಳಿಯುತ್ತಾರೆ. ಎಲ್ಲೆಡೆ ರೆಡ್‌ ಲೈಟ್‌. ಕಣ್ಣು ಕುಕ್ಕುವ ಬೆಳಕಿನ ಅಲಂಕಾರ. ಯಾರೋ ಕಾರ್ ಡೋರ್ ಓಪನ್ ಮಾಡುತ್ತಾರೆ. ಆಗ ಯಶ್ ಲಗ್ಸುರಿ ಕಾರ್‌ನಿಂದ ಇಳಿದು ತಕ್ಷಣ ಸಿಗರೇಟ್‌ ಹೊತ್ತಿಸಿಕೊಂಡು ಒಳಗಡೆ ಹೋಗುತ್ತಾರೆ. ಆಗ ಅವರ ಲುಕ್ ಮಾತ್ರ ವೀಕ್ಷಕರಲ್ಲಿ ಸಂಚಲನ ಮೂಡಿಸುವಂತಿದೆ. ಅಲ್ಲಿ ಸಾಕಷ್ಟು ಜನ ಪಾರ್ಟಿಯ ಮೋಜಿನಲ್ಲಿ ಮುಳುಗಿ ಅಮಲಿನಲ್ಲಿ ತೇಲುತ್ತಾ ಇರುತ್ತಾರೆ. ಕಾರ್ಡ್ಸ್‌ ಆಡುವವರು, ಡ್ರಗ್ಸ್‌ ತೆಗೆದುಕೊಳ್ಳುವವರು ಹೀಗೆ ಸಾಕಷ್ಟು ರೀತಿಯಲ್ಲಿ ಪಾರ್ಟಿಯ ಮೋಜಿನ ಚಿತ್ರಣವನ್ನು ನೀಡಿದ್ದಾರೆ. ಯಶ್‌ ಅವರ ಹಿಂದಿನಿಂದ ಒಂದಷ್ಟು ಜನ ನಡೆದುಕೊಂಡು ಬರುತ್ತಾರೆ. ಪಿಯಾನೋ ಪಕ್ಕದಲ್ಲಿ ಕುಳಿತುಕೊಂಡ ಹುಡುಗಿಯನ್ನು ತನ್ನೆಡೆಗೆ ಸೆಳೆಯುತ್ತಾ ಅವಳ ಮೇಲೆ ಬಾಟಲಿಯಲ್ಲಿದ್ದ ಮದ್ಯವನ್ನು ಸುರಿಯುತ್ತಾರೆ. ಮ್ಯೂಸಿಕ್ ಈ ಸೀನ್‌ಗಳಿಗೆ ಕಿಕ್ ಕೊಡುವಂತಿದೆ.

ಇಲ್ಲಿದೆ ನೋಡಿ ಟಾಕ್ಸಿಕ್ ಟಾನಿಕ್

ಈ ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿ ಇದೆ. ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾಗಳ ಮೂಲಕ ಇಡೀ ದೇಶದ ಗಮನವನ್ನು ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾಕ್ಕೆ ಅಭಿಮಾನಿಗಳಷ್ಟೇ ಅಲ್ಲದೇ, ಇತರ ಚಿತ್ರರಂಗಗಳು ಸಹ ಕಣ್ರೆಪ್ಪೆ ಮಿಟುಕಿಸದೇ ಕಾಯುತ್ತಿರುವ ಹೊತ್ತಲ್ಲೇ ಝಲಕ್ ಹೊರಬಿದ್ದಿದೆ. ಇದನ್ನು ನೋಡಿದ ನಂತರ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಎತ್ತರಕ್ಕೇರಿದೆ. ಹಾಲಿವುಡ್‌ ಮೂವಿಯ ಹಾಗೆ ಈ ಸಿನಿಮಾ ಇದೆ ಈ ಸಿನಿಮಾ ನೋಡಲು ನಾನು ಕಾತರದಿಂದಿದ್ದೇನೆ ಎನ್ನುವ ಕಾಮೆಂಟ್‌ಗಳು ಕಂಡುಬರುತ್ತಿದೆ.

Whats_app_banner