Yash Birthday: ಬರ್ತ್‌ಡೇಗೂ ಮುನ್ನವೇ ಟ್ರೆಂಡಿಂಗ್‌ನಲ್ಲಿ ಯಶ್‌; ಅಭಿಮಾನಿಗಳಿಂದ CDP ಬಿಡುಗಡೆ, ಟಾಕ್ಸಿಕ್‌ನಿಂದ ಸಿಗಲಿದೆ ಸರ್ಪ್ರೈಸ್‌
ಕನ್ನಡ ಸುದ್ದಿ  /  ಮನರಂಜನೆ  /  Yash Birthday: ಬರ್ತ್‌ಡೇಗೂ ಮುನ್ನವೇ ಟ್ರೆಂಡಿಂಗ್‌ನಲ್ಲಿ ಯಶ್‌; ಅಭಿಮಾನಿಗಳಿಂದ Cdp ಬಿಡುಗಡೆ, ಟಾಕ್ಸಿಕ್‌ನಿಂದ ಸಿಗಲಿದೆ ಸರ್ಪ್ರೈಸ್‌

Yash Birthday: ಬರ್ತ್‌ಡೇಗೂ ಮುನ್ನವೇ ಟ್ರೆಂಡಿಂಗ್‌ನಲ್ಲಿ ಯಶ್‌; ಅಭಿಮಾನಿಗಳಿಂದ CDP ಬಿಡುಗಡೆ, ಟಾಕ್ಸಿಕ್‌ನಿಂದ ಸಿಗಲಿದೆ ಸರ್ಪ್ರೈಸ್‌

ಜನವರಿ 8ರಂದು ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಂದ ವಿಶೇಷ ಕಾಮನ್‌ ಡಿಪಿ ಬಿಡುಗಡೆ ಆಗಿದೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಈ ಸಿಡಿಪಿಗೆ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ.

Yash Birthday: ಬರ್ತ್‌ಡೇಗೂ ಮುನ್ನವೇ ಟ್ರೆಂಡಿಂಗ್‌ನಲ್ಲಿ ಯಶ್‌; ಅಭಿಮಾನಿಗಳಿಂದ CDP ಬಿಡುಗಡೆ, ಟಾಕ್ಸಿಕ್‌ನಿಂದ ಸಿಗಲಿದೆ ಸರ್ಪ್ರೈಸ್‌
Yash Birthday: ಬರ್ತ್‌ಡೇಗೂ ಮುನ್ನವೇ ಟ್ರೆಂಡಿಂಗ್‌ನಲ್ಲಿ ಯಶ್‌; ಅಭಿಮಾನಿಗಳಿಂದ CDP ಬಿಡುಗಡೆ, ಟಾಕ್ಸಿಕ್‌ನಿಂದ ಸಿಗಲಿದೆ ಸರ್ಪ್ರೈಸ್‌

Yash Birthday: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಅದ್ಧೂರಿ ಬಜೆಟ್‌ನ ಬಹು ನಿರೀಕ್ಷಿತ ಈ ಸಿನಿಮಾ ಈಗಾಗಲೇ ಹತ್ತು ಹಲವು ಕಾರಣಕ್ಕೆ ಸುದ್ದಿಯಲ್ಲಿದೆ. ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ, ಪ್ಯಾನ್‌ ವರ್ಲ್ಡ್‌ಗೆ ಈ ಸಿನಿಮಾ ತೋರಿಸುವ ನಿಟ್ಟಿನಲ್ಲಿ ಇಡೀ ಚಿತ್ರತಂಡ ಶ್ರಮಿಸುತ್ತಿದೆ. ಅದೇ ರೀತಿಯಲ್ಲಿ ಸಿನಿಮಾವನ್ನು ತೆರೆಗೆ ತರುವಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್‌ ನಿರ್ಧರಿಸಿ, ದೊಡ್ಡ ಮೊತ್ತವನ್ನೇ ಈ ಸಿನಿಮಾ ಮೇಲೆ ಹೂಡಿಕೆ ಮಾಡುತ್ತಿದೆ. ಈ ನಡುವೆ ನಟ ಯಶ್‌ ಬರ್ತ್‌ಡೇ ಹಿನ್ನೆಲೆ ಫ್ಯಾನ್ಸ್‌ಗಳಿಂದ ವಿಶೇಷ ಉಡುಗೊರೆಯೂ ಸಿಕ್ಕಿದೆ.

ಜನವರಿ 8ರಂದು ಸ್ಯಾಂಡಲ್‌ವುಡ್‌ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ ಅಭಿಮಾನಿ ವಲಯದಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ನೆಚ್ಚಿನ ನಟನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು, ಮುಂಚಿತವಾಗಿಯೇ ಟ್ರೆಂಡ್‌ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ, ಕಾಮನ್‌ ಡಿಪಿ ಅನ್ನೋ ಸಂಸ್ಕೃತಿಯೂ ಈಗ ಅಭಿಮಾನಿ ವಲಯದಲ್ಲಿ ಚಾಲ್ತಿಯಲ್ಲಿದೆ. ಅದನ್ನು ಸೆಲೆಬ್ರಿಟಿಗಳಿಂದಲೇ ಬಿಡುಗಡೆ ಮಾಡಿಸಿ, ಅದನ್ನು ಅವರ ಎಲ್ಲ ಅಭಿಮಾನಿಗಳು ತಮ್ಮ ಜಾಲತಾಣದಲ್ಲಿ ಶೇರ್‌ ಮಾಡಿ, ನೆಚ್ಚಿನ ನಟನಿಗೆ ಶುಭಾಶಯ ಕೋರಲಾಗುತ್ತದೆ. ಅದರಂತೆ ಈಗ ಯಶ್‌ ಸಿಡಿಪಿ ಬಿಡುಗಡೆ ಆಗಿದೆ.

ಏನಿದೆ ಸಿಡಿಪಿಯಲ್ಲಿ?

ಪ್ರತಿ ವರ್ಷ ವಿಭಿನ್ನ ರೀತಿಯಲ್ಲಿ ಸಿಡಿಪಿ ವಿನ್ಯಾಸ ಮಾಡಿ ಅದನ್ನು ತಮ್ಮ ನೆಚ್ಚಿನ ನಟನಿಗೆ ಅರ್ಪಿಸುವ ಅಭಿಮಾನಿಗಳು, ಅದರಲ್ಲಿಯೇ ಖುಷಿ ಕಾಣುತ್ತಾರೆ. ಈಗ ನಟ ಯಶ್‌ ಅವರ ಅಭಿಮಾನಿಗಳು ವಿಭಿನ್ನ ಪರಿಕಲ್ಪನೆಯಲ್ಲಿ ಸಿಡಿಪಿ ಹೊರತಂದಿದ್ದಾರೆ. ಬೃಹತ್‌ ಅರಮನೆಯ ಮುಂದೆ ಸಿಂಹಾಸನದ ಮೇಲೆ ಕೂತ ಭಂಗಿಯಲ್ಲಿ ಯಶ್‌ ಕಂಡಿದ್ದಾರೆ. ಅವರ ಮುಂಭಾಗದಲ್ಲಿ ಅಭಿಮಾನಿಗಳು ಬೆಂಕಿ ಹಿಡಿದು ನಿಂತಿದ್ದಾರೆ. ಎರಡು ಬದಿಯ ಅರಮನೆ ಮೇಲೆ ಯಶ್‌ ಬಾಸ್‌ ಎಂಬ ಬಾವುಟವೂ ಹಾರಾಡುತ್ತಿದೆ. ನನಗೆ ನಾನೇ ಎದುರಾಳಿ ಎಂಬಂತೆ, ಯಶ್‌ ಮುಂಭಾಗ, ಅವರೇ ನಿಂತ ಭಂಗಿಯೂ ಇದೆ. ಸದ್ಯ ಈ ಸಿಡಿಪಿಗೆ ಫ್ಯಾನ್ಸ್‌ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಟಾಕ್ಸಿಕ್‌ ಅಪ್‌ಡೇಟ್‌ ಇಲ್ವಾ?

ಸ್ಟಾರ್‌ಗಳ ಬರ್ತ್‌ಡೇ ಅಂದರೆ, ಅಲ್ಲಿ ಅಭಿಮಾನಿಗಳಿಗೆ ಒಂದಷ್ಟು ವಿಶೇಷತೆ ಇದ್ದೇ ಇರುತ್ತವೆ. ಹೊಸ ಸಿನಿಮಾಗಳಾಗಲಿ, ಶೂಟಿಂಗ್‌ ಹಂತದ ಸಿನಿಮಾಗಳ ಸಣ್ಣ ಝಲಕ್‌ಗಳು ದಕ್ಕುತ್ತವೆ. ಅದೇ ರೀತಿ ನಟ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಈ ಸಿನಿಮಾದಿಂದಲೂ ಏನಾದರೂ ಅಪ್‌ಡೇಟ್‌ ಸಿಗಬಹುದು ಎಂದು ಫಾನ್ಸ್‌ ಕಾಯುತ್ತಿದ್ದರು. ಅದರಂತೆ, ಇದೇ ಸಿನಿಮಾದಿಂದ ವಿಶೇಷ ಉಡುಗೊರೆ ಫ್ಯಾನ್ಸ್‌ಗೆ ಸಿಗುವುದು ಅಧಿಕೃತವಾಗಿದೆ. ಸ್ವತಃ ಯಶ್‌, ಟಾಕ್ಸಿಕ್‌ ಚಿತ್ರದ ಹೊಸ ಲುಕ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಜ. 8ರಂದು ಈ ಚಿತ್ರದ ಝಲಕ್‌ ಹೊರಬೀಳಲಿದೆ.

ಬರ್ತ್‌ಡೇಗೆ ಯಶ್‌ ಗೈರು..

ಇನ್ನು ಕಳೆದ ಒಂದು ವಾರದ ಹಿಂದೆಯೇ, ನನ್ನ ಹುಟ್ಟುಹಬ್ಬದಂದು ನಾನು ಊರಲ್ಲಿ ಇರುವುದಿಲ್ಲ ಎಂದು ಯಶ್‌ ಪತ್ರದ ಮೂಲಕ ಮನವಿ ಮಾಡಿದ್ದರು. "ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.

ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್" ಎಂದಿದ್ದರು.

Whats_app_banner