Telugu Movies OTT: ತಾಂಡೇಲ್ ಇಷ್ಟವಾಯ್ತ? ಅದೇ ರೀತಿಯ 10 ಪ್ರಣಯ ಸಾಹಸ ಸಿನಿಮಾಗಳು ಇಲ್ಲಿವೆ ನೋಡಿ
Romantic Action Movies: ಇತ್ತೀಚೆಗೆ ಒಟಿಟಿಯಲ್ಲಿ ತಾಂಡೇಲ್ ಸಿನಿಮಾ ಬಿಡುಗಡೆಯಾಗಿದೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಸಾಕಷ್ಟು ಜನರಿಗೆ ಇಷ್ಟವಾಗಿದೆ. ಇದೇ ಸಮಯದಲ್ಲಿ ತಾಂಡೇಲ್‌ನಂತಹ ಇನ್ನಷ್ಟು ಸಿನಿಮಾ ನೋಡಲು ಬಯಸುವವರಿಗೆ ಇಲ್ಲಿ ಹತ್ತು ರೊಮ್ಯಾಂಟಿಕ್ ಸಾಹಸ ಸಿನಿಮಾಗಳ ವಿವರ ನೀಡಲಾಗಿದೆ.

Romantic Action Movies: ಇತ್ತೀಚೆಗೆ ಒಟಿಟಿಯಲ್ಲಿ ತಾಂಡೇಲ್ ಸಿನಿಮಾ ಬಿಡುಗಡೆಯಾಗಿದೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಸಾಕಷ್ಟು ಜನರಿಗೆ ಇಷ್ಟವಾಗಿದೆ. ಇದೇ ಸಮಯದಲ್ಲಿ ತಾಂಡೇಲ್‌ನಂತಹ ಇನ್ನಷ್ಟು ಸಿನಿಮಾ ನೋಡಲು ಬಯಸುವವರಿಗೆ ಇಲ್ಲಿ ಹತ್ತು ರೊಮ್ಯಾಂಟಿಕ್ ಸಾಹಸ ಸಿನಿಮಾಗಳ ವಿವರ ನೀಡಲಾಗಿದೆ.
ಅರ್ಜುನ್ ರೆಡ್ಡಿ
ಸಂದೀಪ್ ವಂಗಾ ಬರೆದು ನಿರ್ದೇಶಿಸಿದ ತೆಲುಗು ಸಿನಿಮಾವಿದು. ವಿಜಯ್ ದೇವೇರಕೊಂಡ ಮತ್ತು ಶಾಲಿನಿ ಪಾಂಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಹುಲ್ ರಾಮಕೃಷ್ಣ, ಜಿಯಾ ಶರ್ಮಾ, ಸಂಜಯ್ ಸ್ವರೂಪ್, ಗೋಪಿನಾಥ್ ಭಟ್, ಕಮಲ್ ಕಾಮರಾಜು ಮತ್ತು ಕಾಂಚನಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ.
ಡಿಯರ್ ಕಾಮ್ರೇಡ್
ಇದು ಕೂಡ ಜನಪ್ರಿಯ ತೆಲುಗು ಪ್ರಣಯ ಸಾಹಸ ಸಿನಿಮಾ. ಭರತ್ ಕಮ್ಮಾ ಬರೆದು ನಿರ್ದೇಶಿಸಿದ್ದಾರೆ. ವಿಜಯ್ ದೇವರಕೊಂಡ , ರಶ್ಮಿಕಾ ಮಂದಣ್ಣ ಮತ್ತು ಶ್ರುತಿ ರಾಮಚಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿದೆ.
ಶ್ಯಾಮ್ ಸಿಂಘಾ ರಾಯ್
ರಾಹುಲ್ ಸಂಕೃತ್ಯಾನ್ ನಿರ್ದೇಶನದ ಈ ಸಿನಿಮಾದಲ್ಲಿ ಪಿರಿಯೆಡಿಕಲ್ ಕಥೆ ಇದೆ. ಈ ಚಿತ್ರದಲ್ಲಿ ನಾನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಸಾಯಿ ಪಲ್ಲವಿ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಆರ್ಯ
ಇದು 2004ರ ತೆಲುಗು ಸಿನಿಮಾ. ಅಲ್ಲು ಅರ್ಜುನ್ , ಅನು ಮೆಹ್ತಾ ಮತ್ತು ಶಿವ ಬಾಲಾಜಿ ನಟಿಸಿದ್ದಾರೆ. ಸುಕುಮಾರ್ ಅವರ ಚೊಚ್ಚಲ ನಿರ್ದೇಶನವಿದೆ. ಸನ್‌ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಉಪ್ಪೇನ
ತೆಲುಗು ಭಾಷೆಯ ಪ್ರಣಯ ಡ್ರಾಮಾ. ಬುಚಿ ಬಾಬು ಸನಾ ಚೊಚ್ಚಲ ನಿರ್ದೇಶನದ ಸಿನಿಮಾ. ವಿಜಯ್ ಸೇತುಪತಿ ಜತೆಗೆ ಪಂಜ ವೈಷ್ಣವ್ ತೇಜ್ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿದೆ.
ಪರುಗು
ಇದು ಕೂಡ ತೆಲುಗು ಪ್ರಣಯ ಸಾಹಸ ಸಿನಿಮಾ. ಭಾಸ್ಕರ್ ನಿರ್ದೇಶನವಿದೆ. ಅಲ್ಲು ಅರ್ಜುನ್ , ಶೀಲಾ ಕೌರ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಖುಷಿ
ಇದು ಎಸ್. ಜೆ. ಸೂರ್ಯ ನಿರ್ದೇಶನದ ತೆಲುಗು ಪ್ರಣಯ ಹಾಸ್ಯ ಸಿನಿಮಾವಾಗಿದೆ. ಪವನ್ ಕಲ್ಯಾಣ್ ಮತ್ತು ಭೂಮಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿದೆ.
ಈಗ
ಕಿಚ್ಚ ಸುದೀಪ್ ವಿಲನ್ ಪಾತ್ರದಲ್ಲಿ ನಟಿಸಿರುವ ಈಗ ಸಿನಿಮಾ ಕೂಡ ಪ್ರಣಯ ಸಾಹಸ ಸಿನಿಮಾ. ಎಸ್.ಎಸ್. ರಾಜಮೌಳಿ ನಿರ್ದೇಶನದ ನಾನಿ , ಸಮಂತಾ ಮತ್ತು ಸುದೀಪ್ ನಟನೆಯ ಈ ಸಿನಿಮಾ ಈಗ ಆಹಾ ಒಟಿಟಿಯಲ್ಲಿದೆ.
ಬೃಂದಾವನಂ (ಸನ್ ನೆಕ್ಸ್ಟ್ ಒಟಿಟಿ) ಮತ್ತು ಮಿರ್ಚಿ (ಅಮೆಜಾನ್‌ಪ್ರೈಮ್ ವಿಡಿಯೋ) ಕೂಡ ಈ ಟಾಪ್ 10 ಲಿಸ್ಟ್‌ನಲ್ಲಿರುವ ತೆಲುಗು ರೋಮ್ಯಾಂಟಿಕ್ ಸಾಹಸ ಸಿನಿಮಾಗಳಾಗಿವೆ.
ತಾಂಡೇಲ್ ಸಿನಿಮಾ ವಿಮರ್ಶೆ
ತಾಂಡೇಲ್ ಒಂದೊಳ್ಳೆ ಪ್ರೇಮಕಥೆಯ ಸಿನಿಮಾ. ಜತೆಗೆ ದೇಶಭಕ್ತಿಯ ಮಿಶ್ರಣವನ್ನೂ ಮಾಡಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಚಂದೂ. ಸರಳವಾಗಿ ಊಹಿಸಿಬಿಡಬಲ್ಲ, ಪರಿಚಿತ ಕಥೆಯಾದರೂ, ನೋಡುಗನನ್ನು ಸೀಟಿನ ತುದಿಗೆ ತಂದು ಕೂರಿಸುವಂತೆ ಮಾಡುವ ನಿರ್ದೇಶಕರ ನಿರೂಪಣೆ ಶೈಲಿ ಈ ಚಿತ್ರದ ಪ್ಲಸ್ ಪಾಯಿಂಟ್ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ಓದಿ.


