Kannada News  /  Entertainment  /  Rrr Movie Scott Buxton Fame Ray Stevenson Bollywood Actor Photographer Aditya Singh Rajput Passes Away Rsm
ಹಾಲಿವುಡ್‌ ನಟ ರೇ ಸ್ಟೀವನ್‌ಸನ್, ಬಾಲಿವುಡ್‌ ನಟ ಆದಿತ್ಯ ಸಿಂಗ್‌ ರಜಪೂತ್‌ ನಿಧನ
ಹಾಲಿವುಡ್‌ ನಟ ರೇ ಸ್ಟೀವನ್‌ಸನ್, ಬಾಲಿವುಡ್‌ ನಟ ಆದಿತ್ಯ ಸಿಂಗ್‌ ರಜಪೂತ್‌ ನಿಧನ

RRR: ಆರ್‌ಆರ್‌ಆರ್‌ ಚಿತ್ರದ ರೇ ಸ್ಟೀವನ್‌ಸನ್,ಬಾಲಿವುಡ್‌ನ ಆದಿತ್ಯ ಸಿಂಗ್ ರಜಪೂತ್‌ ಇನ್ನಿಲ್ಲ; ದಿನದ ಅಂತರದಲ್ಲಿ ಇಬ್ಬರು ನಟರ ಸಾವಿನ ಸುದ್ದಿ

23 May 2023, 10:22 ISTRakshitha Sowmya
23 May 2023, 10:22 IST

ನಮ್ಮೆಲ್ಲರಿಗೂ ಇದು ಶಾಕಿಂಗ್‌ ಸುದ್ದಿ, ರೇ ಸ್ಟೀವನ್‌ಸನ್, ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲಿ, ನೀವು ನಮ್ಮೆಲ್ಲರ ಹೃದಯದಲ್ಲಿ ಸದಾ ನೆಲೆಸಿರುತ್ತೀರಿ ಸರ್‌ ಸ್ಕಾಟ್‌ ಎಂದು ಆರ್‌ಆರ್‌ಆರ್‌ ತಂಡ ಟ್ವೀಟ್‌ ಮಾಡಿದೆ.

ನಿನ್ನೆಯಷ್ಟೇ ಬಾಲಿವುಡ್‌ ನಟ, ಮಾಡೆಲ್‌ ಆದಿತ್ಯ ಸಿಂಗ್‌ ರಜಪೂತ್‌ ಸಾವಿನ ಸುದ್ದಿ ಚಿತ್ರರಂಗಕ್ಕೆ ಆಘಾತ ನೀಡಿತ್ತು. ಇದೀಗ 'ಆರ್‌ಆರ್‌ಆರ್‌' ಚಿತ್ರದಲ್ಲಿ ನಟಿಸಿದ್ದರೇ ಸ್ಟೀವನ್‌ಸನ್ ನಿಧನದ ಸುದ್ದಿ ಚಿತ್ರರಂಗಕ್ಕೆ ಮತ್ತೆ ಶಾಕ್‌ ನೀಡಿದೆ. ಸ್ಟೀವನ್‌ಸನ್‌ ಭಾನುವಾರ ನಿಧನರಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ರೇ ಸ್ಟೀವನ್‌ಸನ್

'ಆರ್‌ಆರ್‌ಆರ್‌' ಸಿನಿಮಾ ರಿಲೀಸ್‌ ಆದ ನಂತರ ರಾಮ್‌ ಚರಣ್‌ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಇಮೇಜ್‌ ಬಹಳ ಬದಲಾಗಿದೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ನಟಿಸಿದ ಇತರ ನಟರಿಗೂ ಸಿನಿಮಾದಿಂದ ಒಂದೊಳ್ಳೆ ಹೆಸರು ದೊರೆತಿದೆ. ಅದರಲ್ಲೂ ಚಿತ್ರಕ್ಕೆ ಆಸ್ಕರ್‌ ದೊರೆತ ನಂತರ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲಿಗಿಂತ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಬ್ರಿಟಿಷ್‌ ಅಧಿಕಾರಿ ಸ್ಕಾಟ್‌ ಬುಕ್ಸನ್‌ ಆಗಿ ನೆಗೆಟಿವ್‌ ಪಾತ್ರದಲ್ಲಿ ನಟಿಸಿದ್ದ ರೇ ಸ್ಟೀವನ್‌ಸನ್‌ಗೆ ಕೂಡಾ ಸಿನಿಮಾ ಇನ್ನಷ್ಟು ಹೆಸರು ತಂದು ನೀಡಿತ್ತು. ಈ ಸಿನಿಮಾ ನಂತರ ರೇ ಸ್ಟೀವನ್‌ಸನ್ ಹಾಲಿವುಡ್‌ನ 2-3 ಸಿನಿಮಾಗಳಿಗೆ ಸಹಿ ಹಾಕಿದ್ದರು. ಆದರೆ ಇದ್ದಕ್ಕಿದ್ದಂತೆ ಮೇ 21, ಭಾನುವಾರ ಅವರು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ರೇ ಸ್ಟೀವನ್‌ಸನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ 'ಆರ್‌ಆರ್‌ಆರ್‌' ಚಿತ್ರತಂಡ ದುಃಖ ವ್ಯಕ್ತಪಡಿಸಿದೆ. ರೇ ಸ್ಟೀವನ್‌ಸನ್‌, ಬಂದೂಕು ಹಿಡಿದಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಚಿತ್ರತಂಡ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ. ''ನಮ್ಮೆಲ್ಲರಿಗೂ ಇದು ಶಾಕಿಂಗ್‌ ಸುದ್ದಿ, ರೇ ಸ್ಟೀವನ್‌ಸನ್, ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲಿ, ನೀವು ನಮ್ಮೆಲ್ಲರ ಹೃದಯದಲ್ಲಿ ಸದಾ ನೆಲೆಸಿರುತ್ತೀರಿ ಸರ್‌ ಸ್ಕಾಟ್‌'' ಎಂದು ಬರೆದುಕೊಂಡಿದ್ದಾರೆ.

ಆದಿತ್ಯ ಸಿಂಗ್‌ ರಜಪೂತ್‌

ಹಿಂದಿ ಚಿತ್ರರಂಗದಲ್ಲಿ ನಟ, ಮಾಡೆಲ್‌, ಫೋಟೋಗ್ರಾಫರ್‌ ಆಗಿ ಗುರುತಿಸಿಕೊಂಡಿದ್ದ ಆದಿತ್ಯ ಸಿಂಗ್‌ ರಜಪೂತ್‌ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮುಂಬೈನ ಅಂಧೇರಿ ಅಪಾರ್ಟ್‌ಮೆಂಟ್‌ನಲ್ಲಿ ಆದಿತ್ಯ ವಾಸಿಸುತ್ತಿದ್ದರು. ಮನೆಯ ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಸ್ನೇಹಿತರೊಬ್ಬರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಆದಿತ್ಯ ಸಿಂಗ್‌ ರಜಪೂತ್‌ ಸಾವನ್ನಪ್ಪಿದ್ದಾರೆ. ಅತಿಯಾಗಿ ಡ್ರಗ್ಸ್‌ ಸೇವಿಸಿದ ಪರಿಣಾಮ ಆದಿತ್ಯ ಸಿಂಗ್‌ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.

ಆದಿತ್ಯ ಸಿಂಗ್‌, ಸಾವನ್ನಪ್ಪುವ ಹಿಂದಿನ ದಿನ ಸ್ನೇಹಿತರೊಂದಿಗೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕಾಲ ಕಳೆದಿದ್ದರು ಎಂದು ಮಾಹಿತಿ ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು ವರದಿ ಬಂದ ನಂತರ ಆದಿತ್ಯ ಅವರದ್ದು ಸಹಜ ಸಾವೇ, ಇಲ್ಲವೇ ಎಂಬುದು ತಿಳಿದುಬರಲಿದೆ.

ಒಟ್ಟಿನಲ್ಲಿ ಒಂದು ದಿನದ ಅಂತರದಲ್ಲಿ ಇಬ್ಬರು ನಟರ ಸಾವಿನ ಸುದ್ದಿ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿರುವುದಂತೂ ನಿಜ.