S Bali: ಸರಿಗಮಪ ಜ್ಯೂರಿ ರಿದಮ್ ಕಿಂಗ್ ಶ್ರೀ ಎಸ್ ಬಾಲಸುಬ್ರಹ್ಮಣ್ಯಂ ನಿಧನ; ಬಹುವಾದ್ಯ ಪರಿಣಿತ ಇನ್ನು ನೆನಪು ಮಾತ್ರ
ಕನ್ನಡ ಸುದ್ದಿ  /  ಮನರಂಜನೆ  /  S Bali: ಸರಿಗಮಪ ಜ್ಯೂರಿ ರಿದಮ್ ಕಿಂಗ್ ಶ್ರೀ ಎಸ್ ಬಾಲಸುಬ್ರಹ್ಮಣ್ಯಂ ನಿಧನ; ಬಹುವಾದ್ಯ ಪರಿಣಿತ ಇನ್ನು ನೆನಪು ಮಾತ್ರ

S Bali: ಸರಿಗಮಪ ಜ್ಯೂರಿ ರಿದಮ್ ಕಿಂಗ್ ಶ್ರೀ ಎಸ್ ಬಾಲಸುಬ್ರಹ್ಮಣ್ಯಂ ನಿಧನ; ಬಹುವಾದ್ಯ ಪರಿಣಿತ ಇನ್ನು ನೆನಪು ಮಾತ್ರ

ಖ್ಯಾತ ವಾದ್ಯಗಾರ ಹಾಗೂ ಸಂಗೀತ ನಿರ್ದೇಶಕರಾದ ಎಸ್ ಬಾಲಿ ನಿಧನರಾಗಿದ್ದಾರೆ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋದಲ್ಲಿ ಜ್ಯೂರಿಯಾಗಿದ್ದರು.

ಶ್ರೀ ಎಸ್ ಬಾಲಸುಬ್ರಹ್ಮಣ್ಯಂ ನಿಧನ
ಶ್ರೀ ಎಸ್ ಬಾಲಸುಬ್ರಹ್ಮಣ್ಯಂ ನಿಧನ (ಜೀ ಕನ್ನಡ)

ಖ್ಯಾತ ವಾದ್ಯಗಾರ ಹಾಗೂ ಸಂಗೀತ ನಿರ್ದೇಶಕರಾದ ಎಸ್ ಬಾಲಿ ನಿಧನರಾಗಿದ್ದಾರೆ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪದಲ್ಲಿ ಜ್ಯೂರಿ ಮೆಂಬರ್ ಆಗಿದ್ದರು. ಸಾಕಷ್ಟು ಜನರಿಗೆ ಸಂಗೀತದ ಸವಿ ಮುಟ್ಟಿಸಿದವರಾಗಿದ್ದರು. ಚಿಕ್ಕಂದಿನಿಂದಲೇ ಇವರಿಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಇವರು ಸಂಗೀತಾಭ್ಯಾಸ ಮಾಡಿದವರಾಗಿದ್ದರು. ಸಾಕಷ್ಟು ಕಾರ್ಯಕ್ರಮಗಳಲ್ಲಿ ಇವರು ಮೃದಂಗ ವಾದನ ಮಾಡಿದ್ದಾರೆ. ಹಲವು ಸಂಗೀತ ವಿದ್ವಾಂಸರ ಜೊತೆ ಕೆಲಸ ಮಾಡಿರುವ ಅನುಭವ ಇವರಲ್ಲಿತ್ತು.

‘ರಿದಮ್ ಕಿಂಗ್’ ಇನ್ನಿಲ್ಲ

ಖ್ಯಾತ ವಾದ್ಯಗಾರರು, ಸಂಗೀತ ನಿರ್ದೇಶಕರು, ಸರಿಗಮಪ ವೇದಿಕೆಯ ಜ್ಯೂರಿಯಾಗಿದ್ದ ಶ್ರೀ ಎಸ್.ಬಾಲಸುಬ್ರಹ್ಮಣ್ಯಂ ಎಸ್.ಬಾಲಿ ಎಂದೇ ಪ್ರಸಿದ್ಧರಾಗಿದ್ದರು. ಮೃದಂಗ, ತಬಲಾ, ಢೋಲಕ್‌ , ಢೋಲ್ಕಿ, ಖಂಜರಿ, ಕೋಲ್‌ ಹೀಗೆ ಸಾಕಷ್ಟು ವಾದನಗಳನ್ನು ಇವರು ನುಡಿಸುತ್ತಿದ್ದರು. ಬಹುವಾದ್ಯ ಪರಿಣಿತರಾದ ಇವರನ್ನು ‘ರಿದಮ್ ಕಿಂಗ್’ ಎಂದು ಕರೆಯಲಾಗುತ್ತಿತ್ತು.

ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮ್‌ದರವರ ನಿತ್ಯೋತ್ಸವದಿಂದ ಮೊದಲಾಗಿ ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದವರಾಗಿದ್ದರು. ಬಾಲಿ ಅವರು ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವದೆಲ್ಲೆಡೆ ಬಾಲಿ ಅವರ ಲಯ ಸಂಗೀತ ಮೊಳಗುತ್ತ ಸಾಗಿದೆ. ಆದರೆ ಇಂದು ಅವರ ವಾದನಗಳು ಮೌನವಾಗಿವೆ. ಅವರು ಇಹ ಲೋಕ ತ್ಯಜಿಸಿದ್ದಾರೆ.

ಜಿ.ಕೆ.ವೆಂಕಟೇಶ್, ವಿಜಯಭಾಸ್ಕರ್, ಎಂ.ರಂಗರಾವ್, ಡಾ.ರಾಜೀವ ತಾರಾನಾಥ್, ಅಶ್ವತ್ಥ್-ವೈದಿಯವರು ಸಂಯೋಜಿಸಿದ್ದ ಚಿತ್ರಗೀತೆಗಳಿಗೆ ಬಾಲಿ ಅವರು ಕೆಲಸ ಮಾಡಿದ್ದರು. ಶಂಕರ್ ನಾಗ್ ಅವರ ಸಂಕೇತ್ ಸ್ಟುಡಿಯೋ ನಿರ್ಮಾಣದಲ್ಲೂ ಬಾಲಿ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಹಿನ್ನೆಲೆ ಸಂಗೀತದ ಬಗ್ಗೆ ಅಡಿಯೋ-ವಿಡಿಯೋ-ಓದುವ ಹೀಗೆ ಮೂರು ಅಯಾಮದ ಪುಸ್ತಕವನ್ನು ಬರೆದಿದ್ದ ಬಾಲಿ ಅವರು ತಮ್ಮ ‘ರಮ್ಯ ಕಲ್ಚರಲ್ ಅಕಾಡಮಿ’ಯ ಮೂಲಕ ನೂರಾರು ಹೊಸ ಕಲಾವಿದರನ್ನು ರೂಪಿಸಿದ್ದರು. ಜೀ ಟಿವಿಯ ಜನಪ್ರಿಯ ಕಾರ್ಯಕ್ರಮ ‘ಸರಿಗಮಪ’ದ ತೀರ್ಪುಗಾರರ ಮಂಡಳಿಯಲ್ಲೂ ಬಾಲಿ ಅವರಿದ್ದರು.

Whats_app_banner