ಅಂತಿಮ ಘಟ್ಟದತ್ತ ಸರಿಗಮಪ ಶೋ; ಆರು ಸ್ಪರ್ಧಿಗಳಲ್ಲಿ ಯಾರ ಮುಡಿಗೆ ವಿನ್ನರ್ ಪಟ್ಟ?
ಕನ್ನಡ ಸುದ್ದಿ  /  ಮನರಂಜನೆ  /  ಅಂತಿಮ ಘಟ್ಟದತ್ತ ಸರಿಗಮಪ ಶೋ; ಆರು ಸ್ಪರ್ಧಿಗಳಲ್ಲಿ ಯಾರ ಮುಡಿಗೆ ವಿನ್ನರ್ ಪಟ್ಟ?

ಅಂತಿಮ ಘಟ್ಟದತ್ತ ಸರಿಗಮಪ ಶೋ; ಆರು ಸ್ಪರ್ಧಿಗಳಲ್ಲಿ ಯಾರ ಮುಡಿಗೆ ವಿನ್ನರ್ ಪಟ್ಟ?

6 ವರ್ಷದಿಂದ 60 ವರ್ಷದ ವರೆಗಿನ ಸ್ಪರ್ಧಿಗಳು ಭಾಗವಹಿಸಿದ ಸರೆಗಮಪ ಆವೃತ್ತಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಇನ್ನು ಈ ಆವೃತ್ತಿಯು ಅಂತಿಮ ಘಟ್ಟ ತಲುಪಿದ್ದು 6 ಸ್ಪರ್ಧಿಗಳಲ್ಲಿ ಸರಿಗಮಪ ಟೈಟಲ್ ಯಾರ ಮುಡಿಗೇರಲಿದೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಈ ಕುತೂಹಲಕ್ಕೆ ಬ್ರೇಕ್ ಇದೇ ಜೂನ್ 7 ರಂದು ಸಂಜೆ 6 ಗಂಟೆಗೆ ಸಿಗಲಿದೆ.

ಅಂತಿಮ ಘಟ್ಟದತ್ತ ಸರಿಗಮಪ; ಅಂತಿಮ ಆರು ಸ್ಪರ್ಧಿಗಳಲ್ಲಿ ಯಾರ ಮುಡಿಗೆ ವಿನ್ನರ್ ಪಟ್ಟ?
ಅಂತಿಮ ಘಟ್ಟದತ್ತ ಸರಿಗಮಪ; ಅಂತಿಮ ಆರು ಸ್ಪರ್ಧಿಗಳಲ್ಲಿ ಯಾರ ಮುಡಿಗೆ ವಿನ್ನರ್ ಪಟ್ಟ?

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಜೀ ಕನ್ನಡದ ಸರಿಗಮಪ. 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸಿದ ಈ ಆವೃತ್ತಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಇನ್ನು ಈ ಆವೃತ್ತಿಯು ಅಂತಿಮ ಘಟ್ಟ ತಲುಪಿದ್ದು 6 ಸ್ಪರ್ಧಿಗಳಲ್ಲಿ ಸ ರಿ ಗ ಮ ಪ ಟೈಟಲ್ ಯಾರ ಮುಡಿಗೇರಲಿದೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಈ ಕುತೂಹಲಕ್ಕೆ ಬ್ರೇಕ್ ಇದೇ ಜೂನ್ 7 ರಂದು ಸಂಜೆ 6 ಗಂಟೆಗೆ ಸಿಗಲಿದೆ.

ಈ ಆವೃತ್ತಿಯಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಲ್ಲದೇ ಅವರ ಸ್ಪೂರ್ತಿದಾಯಕ ಕಥೆಗಳು ಕೂಡ ಜನರನ್ನು ಮತ್ತಷ್ಟು ಪ್ರೇರೇಪಿಸಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇನ್ನು ಫಿನಾಲೆಯಲ್ಲಿ ದ್ಯಾಮೇಶ, ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ನಡುವೆ ಪೈಪೋಟಿ ನಡೆಯಲಿದ್ದು ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದು ನೋಡಬೇಕಿದೆ.

ಸರಿಗಮಪ ಫಿನಾಲೆ ಕ್ಷಣಗಳನ್ನು ಜೂನ್ 5 ರಂದು ನಡೆಯಲಿದ್ದು ನಿರೂಪಣಾ ಜವಾಬ್ದಾರಿಯನ್ನು ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಹೊತ್ತಿದ್ದಾರೆ. ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಗೈಡೆನ್ಸ್ ನ ಸ್ಪರ್ಧಿಗಳಿಗೆ ಕೊಡಲಿದ್ದಾರೆ. ಅಷ್ಟೇ ಅಲ್ಲದೇ ವೀಕ್ಷಕರು ಫಿನಾಲೆಯನ್ನು ಲೈವ್ ಆಗಿ Zee5 OTT ಪ್ಲಾಟ್ಫಾರ್ಮ್ ಮೂಲಕ ವೀಕ್ಷಿಸಬಹುದಾಗಿದೆ.

ಇನ್ನು Zee5 ನಲ್ಲಿ ಲೈವ್ ನೋಡಲು ಮಿಸ್ ಮಾಡಿದವರು ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ. ತಮ್ಮ ನೆಚ್ಚಿನ ಶೋ 'ಸ ರಿ ಗ ಮ ಪ' ಫಿನಾಲೆಯ ಸಂಭ್ರಮದ ಕ್ಷಣಗಳನ್ನು 7 ರಂದು ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ನೋಡಬಹುದು ಮತ್ತು ಯಾರು ಗೆಲುವು ಸಾಧಿಸಿದರು ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ. ವಿನ್ನರ್ ಯಾರು? ಯಾವ ಸ್ಪರ್ಧಿ ಯಾವ ಹಾಡು ಹಾಡಿದರು? ಇವೆಲ್ಲವನ್ನೂ ತಿಳ್ಕೊಳೋಕೆ ವೀಕ್ಷಿಸಿ ಜೂನ್ 7 ರಂದು ಜೀ ಕನ್ನಡ.