Saif Ali Khan: ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆ; ಹೀಗಿದೆ ಕರೀನಾ ಕಪೂರ್ ಖಾನ್ ತಂಡದ ಹೇಳಿಕೆ
ಕನ್ನಡ ಸುದ್ದಿ  /  ಮನರಂಜನೆ  /  Saif Ali Khan: ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆ; ಹೀಗಿದೆ ಕರೀನಾ ಕಪೂರ್ ಖಾನ್ ತಂಡದ ಹೇಳಿಕೆ

Saif Ali Khan: ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆ; ಹೀಗಿದೆ ಕರೀನಾ ಕಪೂರ್ ಖಾನ್ ತಂಡದ ಹೇಳಿಕೆ

ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ಕಳ್ಳ ನುಗ್ಗಿ ನಟನಿಗೆ ಚೂರಿ ಇರಿದ ಘಟನೆ ನಡೆದಿದೆ. ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆಗಳನ್ನು ಹಾಕಲಾಗಿದೆ ಎಂಬ ಮಾಹಿತಿ ಇದೆ. ಕರೀನಾ ಕಪೂರ್ ಖಾನ್ ತಂಡ ಘಟನೆ ಬಗ್ಗೆ ಹೇಳಿಕೆ ನೀಡಿದೆ.

ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆ
ಸೈಫ್‌ ಅಲಿ ಖಾನ್‌ ತೋಳಿನ ಗಾಯಕ್ಕೆ ಹತ್ತು ಹೊಲಿಗೆ

Saif Ali Khan House Robbery: ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಅವರ ಮನೆಗೆ ಗುರುವಾರ (ಜನವರಿ 16) ನಸುಕಿನ ವೇಳೆ ಕಳ್ಳನೊಬ್ಬ ಮನೆಯೊಳಗೆ ನುಗ್ಗಿ ಸೈಫ್ ಅಲಿ ಖಾನ್ ಅವರಿಗೆ ಚೂರಿ ಇರಿದಿದ್ದಾನೆ. ಈಗ ಅವರನ್ನು ತುರ್ತಾಗಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಮಾಹಿತಿಯ ಪ್ರಕಾರ ಒಂದು ಆಳವಾದ ಗಾಯವಾಗಿದ್ದು 10 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಟ ಸೈಫ್ ಅಲಿ ಖಾನ್‌ಗೆ ಆರು ಗಾಯಗಳಾಗಿದೆ. ಅದರಲ್ಲಿ ಎರಡು ಗಾಯಗಳು ಬಲವಾಗಿದೆ ಎಂದು ತಿಳಿದು ಬಂದಿದೆ. ಸೈಫ್ ಅಲಿ ಖಾನ್‌ ಪತ್ನಿ ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಸ್ನೇಹಿತರಾದ ಸೋನಮ್ ಕಪೂರ್ ಮತ್ತು ರಿಯಾ ಕಪೂರ್ ಮತ್ತು ಸಹೋದರಿ ಕರಿಷ್ಮಾ ಕಪೂರ್ ಅವರೊಂದಿಗೆ ಅಂದಿನ ರಾತ್ರಿ ಕಳೆದಿರಬಹುದು. ಅಂದು 'ಗರ್ಲ್ಸ್ ನೈಟ್‌' ಇತ್ತು ಎಂದು, ಕಳ್ಳತನದ ಸಮಯದಲ್ಲಿ ಬಹುಶಃ ಮನೆಯಲ್ಲಿ ಕರೀನಾ ಕಪೂರ್ ಇರಲಿಲ್ಲ ಎಂಬ ಊಹಾ ಪೋಹಗಳು ಹರಿದಾಡುತ್ತಿದ್ದವು. ಆದರೆ ಆಕೆಯ ತಂಡವು ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಕರೀನಾ ಕಪೂರ್ ಖಾನ್ ತಂಡದ ಹೇಳಿಕೆ

ಕರೀನಾ ಕಪೂರ್ ತಂಡ ನೀಡಿದ ಮಾಹಿತಿ ಪ್ರಕಾರ, “ಅಂದು ಎಲ್ಲರೂ ಮನೆಯಲ್ಲೇ ಇದ್ದರು. ಕಳ್ಳ ಹರಿತವಾದ ವಸ್ತುವಿನಿಂದ ಇರಿದಿದ್ದು ಸೈಫ್‌ ಅಲಿ ಖಾನ್ ಅವರ ತೋಳಿಗೆ ಗಾಯವಾಗಿದೆ. ಕುಟುಂಬದ ಇತರ ಸದಸ್ಯರು ಸುರಕ್ಷಿತವಾಗಿದ್ಧಾರೆ” ಯಾರೂ ತನಿಖೆಗೆ ಅಡ್ಡ ಬರಬಾರದು, ತೊಂದರೆ ಉಂಟು ಮಾಡಬಾರದು ಅಭಿಮಾನಿಗಳು ಸಮಾಧಾನದಿಂದ ಇರಬೇಕು ಎಂದು ಕರೀನಾ ಕಪೂರ್ ಖಾನ್‌ ಟೀಮ್ ತಿಳಿಸಿದೆ. ಪೊಲೀಸರು ತನಿಖೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಅಭಿಮಾನಿಗಳು ಮತ್ತು ಮಾಧ್ಯಮಗಳು ತಾಳ್ಮೆಯಿಂದ ವರ್ತಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಎಲ್ಲರ ಕಾಳಜಿಗೆ ಧನ್ಯವಾದ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿ ಘಟನೆ ಬಗ್ಗೆ ಹೇಳಿದ್ದಿಷ್ಟು

ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ಘಟನೆಯನ್ನು ದೃಢಪಡಿಸಿದ್ದು, ಸೈಫ್ ಅಲಿಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ದರೋಡೆಕೋರನೊಂದಿಗಿನ ಸಂಘರ್ಷದಲ್ಲಿ ಅವರು ಇರಿದಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿದ್ದೇವೆ. ಮುಂಬೈ ಕ್ರೈಂ ಬ್ರಾಂಚ್ ಕೂಡ ಘಟನೆಯ ಬಗ್ಗೆ ಸಮಾನಾಂತರ ತನಿಖೆ ನಡೆಸುತ್ತಿದೆ ಎಂದು ಅವರು ವಿವರಿಸಿದರು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದು ಆರೋಪಿ ಪತ್ತೆಗಾಗಿ ಶೋಧ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಮೂವರು ಶಂಕಿತರ ಬಂಧನ

ಇತ್ತೀಚಿನ ವರದಿಗಳ ಪ್ರಕಾರ, ಪ್ರಕರಣದಲ್ಲಿ ಮೂವರು ಶಂಕಿತರನ್ನು ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ.

ಸೈಫ್ ಅಲಿ ಖಾನ್ ಅವರು ತಮ್ಮ ಪತ್ನಿ ಕರೀನಾ ಕಪೂರ್ ಖಾನ್ ಮತ್ತು ಇಬ್ಬರು ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲೇ ಈ ಘಟನೆ ಸಂಭವಿಸಿದೆ.

Whats_app_banner