31 ವರ್ಷಗಳ ವಯಸ್ಸಿನ ಅಂತರವನ್ನು ಪ್ರಶ್ನಿಸಿದಾಗ, ರಶ್ಮಿಕಾ ಮಾತ್ರವಲ್ಲ ಅವರ ಮಗಳ ಜತೆಗೂ ಅಭಿನಯಿಸುತ್ತೇನೆ ಎಂದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಸಿಕಂದರ್' ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಮೇಲೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ವಯಸ್ಸಿನ ನಡುವಿನ ಅಂತರದ ಬಗ್ಗೆ ಪ್ರಶ್ನೆ ಮಾಡಲಾಯಿತು. ಆ ಪ್ರಶ್ನೆಗೆ ಸಲ್ಮಾನ್ ಉತ್ತರಿಸಿದ ಬಗೆ ಹೀಗಿತ್ತು.

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸಹನಟಿ ರಶ್ಮಿಕಾ ಮಂದಣ್ಣ ಅವರಿಗಿಂತ ಸಲ್ಮಾನ್ ಖಾನ್ 31 ವರ್ಷ ದೊಡ್ಡವರು ಎಂಬ ವಯಸ್ಸಿನ ವ್ಯತ್ಯಾಸದ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿದೆ. ಆಗ, ಸಲ್ಮಾನ್ ಖಾನ್ ಅವರು ನೀಡಿದ ಉತ್ತರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ತಮ್ಮ ಮುಂಬರುವ ಚಿತ್ರ 'ಸಿಕಂದರ್' ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಮೇಲೆ ಸಲ್ಮಾನ್ ಖಾನ್ ವಯಸ್ಸಿನ ನಡುವಿನ ಅಂತರದ ಬಗ್ಗೆ ಮಾತನಾಡಿದ್ದಾರೆ. "ರಶ್ಮಿಕಾ ಮಾತ್ರವಲ್ಲ ಅವರ ಮಗಳೊಟ್ಟಿಗೂ ನಾನು ಅಭಿನಯಿಸುತ್ತೇನೆ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲೇ ಇದೆ ಓದಿ.
ರಶ್ಮಿಕಾ ಮಗಳ ಜತೆಗೂ ಅಭಿನಯಿಸುತ್ತೇನೆ ಎಂದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರು ವೇದಿಕೆಯ ಮೇಲೆ ಮಾತನಾಡುತ್ತಾ. “ಹೌದು ನನಗೂ ಮತ್ತು ರಶ್ಮಿಕಾ ಅವರಿಗೂ 31 ವರ್ಷ ವಯಸ್ಸಿನ ಅಂತ ಇದೆ. ಆದರೆ ಸಹನಟಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ಅವರಿಗೇ ಏನೂ ಸಮಸ್ಯೆ ಇಲ್ಲ. ಅವರ ತಂದೆಗೂ ಏನೂ ಸಮಸ್ಯೆ ಇಲ್ಲ. ನಿಮಗ್ಯಾಕೆ ಈ ಸಮಸ್ಯೆ?” ಎಂದು ಪ್ರಶ್ನೆ ಮಾಡಿದ್ದಾರೆ. ಇವರ ಮದುವೆ ಆಗುತ್ತೆ, ಮಗುವಾಗುತ್ತೆ, ದೊಡ್ಡ ಸ್ಟಾರ್ ಆಗಬಹುದು ಆಗ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ರಶ್ಮಿಕಾ ಮಗಳ ಅಮ್ಮ, ಅಂದರೆ ರಶ್ಮಿಕಾ ಅವರೂ ಸಹ ಅನುಮತಿ ನೀಡ್ತಾರೆ ಅಲ್ವಾ? ಎನ್ನುತ್ತಾ ರಶ್ಮಿಕಾ ಮಂದಣ್ಣ ಕಡೆಗೆ ತಿರುಗಿದ್ದಾರೆ. ರಶ್ಮಿಕಾ ಏನು ಹೇಳಬೇಕು ಎಂದು ತೋಚದೆ ನಾಚಿ ನಗುತ್ತಾ ಹೌದು, ಎಂಬಂತೆ ತಲೆಯಾಡಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ 'ಸಿಕಂದರ್' ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸಲ್ಮಾನ್ ಪ್ರಶ್ನೆ ಕೇಳಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡಾಗಲೇ ಅವರ ಎದುರಲ್ಲೇ ಸಲ್ಮಾನ್ ಖಾನ್ ತಮಾಷೆಯಾಗಿ ಮಾತನಾಡುತ್ತಲೇ ಖಡಕ್ ಉತ್ತರ ನೀಡಿದ್ದಾರೆ. ಸಲ್ಮಾನ್ ಖಾನ್ ನೀಡಿದ ಈ ಉತ್ತರವನ್ನು ಕೇಳುತ್ತಿದ್ದಂತೆಯೇ ಪ್ರೇಕ್ಷಕವರ್ಗದಿಂದ ನಗೆಯಾರಂಭವಾಯಿತು.
ಸಿಕಂದರ್ ಬಗ್ಗೆ ಹೆಚ್ಚಿದ ನಿರೀಕ್ಷೆ
ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಸಿಕಂದರ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ಕೂಡ ಅಭಿನಯಿಸುತ್ತಿದ್ದಾರೆ. ಸಾಕಷ್ಟು ಜನರ ಕಾತರ ಹೆಚ್ಚಾಗಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸಿಕಂದರ್ ಸಿನಿಮಾದ ಹಾಡುಗಳು ಸಹ ಬಿಡುಗಡೆಯಾಗಿದೆ. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಹೀಗೆ ಸಿನಿಮಾದ ಕುರಿತು ಇಷ್ಟಿಷ್ಟೇ ಸುಳಿವು ಸಿಕ್ಕಂತೆಲ್ಲ ಕಾತರತೆ ಹೆಚ್ಚುತ್ತಿದೆ. ರಶ್ಮಿಕಾ ಅವರನ್ನು ಸಲ್ಮಾನ್ ಖಾನ್ ಜೋಡಿಯಾಗಿ ನೋಡಲು ಎಲ್ಲರಲ್ಲೂ ಕುತೂಹಲ ಇದೆ. ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಹೇಗೆ ಕಾಣಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆಮಾಡಿದೆ.
