ಜೀವ ಭಯದ ನಡುವೆಯೇ, ರಿಯಲ್‌ ಲೊಕೇಷನ್‌ನಲ್ಲಿ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಶೂಟಿಂಗ್; ಆ ಭದ್ರತೆ ಹೇಗಿರಬಹುದೆಂಬ ಅಂದಾಜಿದೆಯೇ?
ಕನ್ನಡ ಸುದ್ದಿ  /  ಮನರಂಜನೆ  /  ಜೀವ ಭಯದ ನಡುವೆಯೇ, ರಿಯಲ್‌ ಲೊಕೇಷನ್‌ನಲ್ಲಿ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಶೂಟಿಂಗ್; ಆ ಭದ್ರತೆ ಹೇಗಿರಬಹುದೆಂಬ ಅಂದಾಜಿದೆಯೇ?

ಜೀವ ಭಯದ ನಡುವೆಯೇ, ರಿಯಲ್‌ ಲೊಕೇಷನ್‌ನಲ್ಲಿ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಶೂಟಿಂಗ್; ಆ ಭದ್ರತೆ ಹೇಗಿರಬಹುದೆಂಬ ಅಂದಾಜಿದೆಯೇ?

ಸಿನಿಮಾ, ಕಲಾವಿದರು, ನಿರ್ದೇಶಕರ ಬಗ್ಗೆ ಮಾತ್ರವಲ್ಲದೆ ಬಿಗಿ ಭದ್ರತೆಯ ನಡುವೆ ನಡೆದ ಶೂಟಿಂಗ್‌ ಅನುಭವವನ್ನೂ ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಬಿಗಿ ಭದ್ರತೆ ನಡುವೆ ಹೊರಾಂಗಣ ಚಿತ್ರೀಕರಣ ಸವಾಲಿನದ್ದಾಗಿತ್ತು, ಆದರೆ ಕೊನೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯಿತು ಎಂದಿದ್ದಾರೆ ಸಲ್ಮಾನ್.

ಜೀವ ಭಯದ ನಡುವೆಯೇ, ರಿಯಲ್‌ ಲೊಕೇಷನ್‌ನಲ್ಲಿ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಶೂಟಿಂಗ್
ಜೀವ ಭಯದ ನಡುವೆಯೇ, ರಿಯಲ್‌ ಲೊಕೇಷನ್‌ನಲ್ಲಿ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಶೂಟಿಂಗ್

Salman Khan Security: ಸಲ್ಮಾನ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿಕಂದರ್‌ ಸಿನಿಮಾ ಮಾ. 30ರ ಈದ್‌ ಹಬ್ಬದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ತಮಿಳಿನ ಡೈರೆಕ್ಟರ್‌ ಎ.ಆರ್‌ ಮುರುಗದಾಸ್‌ ನಿರ್ದೇಶನದಲ್ಲಿನ ಈ ಚಿತ್ರದ ಹೈಪ್‌ ಈಗಾಗಲೇ ಮುಗಿಲು ಮುಟ್ಟಿದೆ. ಟ್ರೇಲರ್‌ ಮೂಲಕ ಸಿನಿಮಾ ಮೇಲಿನ ಕ್ರೇಜ್‌ ಜಾಸ್ತಿಯಾಗಿದ್ದು, ಈಗಾಗಲೇ ಮುಂಗಡ ಬುಕಿಂಗ್‌ನಲ್ಲೂ ಸಿಕಂದರ್‌ ಸಿನಿಮಾ ಕಮಾಲ್‌ ಮಾಡುತ್ತಿದೆ. ಹೀಗಿರುವಾಗಲೇ ಇದೇ ಚಿತ್ರ ಮೂಡಿಬಂದ ರೀತಿ, ಶೂಟಿಂಗ್‌ ಅನುಭವಗಳ ಬಗ್ಗೆ ನಟ ಸಲ್ಮಾನ್ ಖಾನ್‌ ಮಾತನಾಡಿದ್ದಾರೆ. ಆಮೀರ್‌ ಖಾನ್‌ ನಡೆಸಿದ ಸಂದರ್ಶನದಲ್ಲಿ ನಿರ್ದೇಶಕ ಮುರುಗದಾಸ್‌ ಸಹ ಭಾಗವಹಿಸಿದ್ದರು.

ಸಿಕಂದರ್‌ ಸಿನಿಮಾ ಬಿಡುಗಡೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಈ ಸಿನಿಮಾದ ಪ್ರಚಾರ ಕೆಲಸದಲ್ಲಿಯೂ ಚಿತ್ರತಂಡ ತೊಡಗಿಸಿಕೊಂಡಿದೆ. ಈ ಪ್ರಮೋಷನ್‌ ನಿಮಿತ್ತ, ನಟ ಮತ್ತು ನಿರ್ದೇಶಕರನ್ನು ಸಂದರ್ಶಿಸಿದ್ದಾರೆ ಆಮೀರ್‌ ಖಾನ್.‌ ಸಿನಿಮಾ, ಕಲಾವಿದರು, ನಿರ್ದೇಶಕರ ಬಗ್ಗೆ ಮಾತ್ರವಲ್ಲದೆ ಬಿಗಿ ಭದ್ರತೆಯ ನಡುವೆ ನಡೆದ ಶೂಟಿಂಗ್‌ ಅನುಭವವನ್ನೂ ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಬಿಗಿ ಭದ್ರತೆ ನಡುವೆ ಹೊರಾಂಗಣ ಚಿತ್ರೀಕರಣ ಸವಾಲಿನದ್ದಾಗಿತ್ತು, ಆದರೆ ಕೊನೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯಿತು ಎಂದಿದ್ದಾರೆ ಸಲ್ಮಾನ್.

ನೈಜ ಸ್ಥಳಗಳಲ್ಲಿ ಶೂಟಿಂಗ್‌..

ಸಲ್ಮಾನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂಭಾಷಣೆಯ ಸಮಯದಲ್ಲಿ, ಚಿತ್ರೀಕರಣ ಸವಾಲಿನದ್ದಾಗಿತ್ತೇ ಎಂದು ಆಮೀರ್‌ ಖಾನ್‌ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ನಿರ್ದೇಶಕರು, ಹಗಲು ರಾತ್ರಿ ರೈಲ್ವೆ ನಿಲ್ದಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ನಿಜವಾದ ಸ್ಥಳಗಳಲ್ಲಿ, ಚಿತ್ರೀಕರಣ ವೀಕ್ಷಿಸಲು ನೂರಾರು ಜನರು ಕಟ್ಟಡಗಳ ಮೇಲೆ ಸೇರಿದ್ದರು. ಆ ಸಮಯದಲ್ಲಿ ಸಲ್ಮಾನ್‌ ಖಾನ್‌ ಅವರ ಭದ್ರತೆಯೇ ನಮಗೆ ದೊಡ್ಡ ಸವಾಲಿನದ್ದಾಗಿತ್ತು" ಎಂದಿದ್ದಾರೆ. ನೈಜ ಸ್ಥಳಗಳಲ್ಲಿನ ಚಿತ್ರೀಕರಣಕ್ಕೆ ಭಾರೀ ಭದ್ರತೆಯ ಅಗತ್ಯವಿದೆ ಎಂದ ಸಲ್ಮಾನ್ ಖಾನ್‌, ಆ ಸಮಯದಲ್ಲಿ ಎಲ್ಲರೂ ಹೆಚ್ಚು ಜಾಗರೂಕರಾಗಿದ್ದರು. ಆದಾಗ್ಯೂ, ಕೊನೆಯಲ್ಲಿ ಎಲ್ಲವೂ ಸುಗಮವಾಗಿ ನಡೆದಿತ್ತು ಎಂದಿದ್ದಾರೆ.

ಸಲ್ಮಾನ್‌ ಖಾನ್‌ ಸಿನಿಮಾ ಶೂಟಿಂಗ್‌ ಸೆಟ್‌ ಒಂದು ರೀತಿ ಕೋಟೆಯಂತಿತ್ತು. ಸಿನಿಮಾ ಮಂದಿಯನ್ನು ಹೊರತುಪಡಿಸಿ, ಬೇರೆಯವರಿಗೆ ಸೆಟ್‌ನಲ್ಲಿ ಪ್ರವೇಶ ನಿಷಿದ್ಧ. ಮೊಬೈಲ್‌ ಫೋನ್‌ಗಳಿಗೂ ಅನುಮತಿ ಇರುತ್ತಿರಲಿಲ್ಲ. ಇದೆಲ್ಲದರ ಜತೆಗೆ ಶೂಟಿಂಗ್‌ ನಡೆಯುವ ಪ್ರದೇಶದ ಸುತ್ತ ಮುತ್ತ ಸಲ್ಮಾನ್‌ ಖಾನ್‌ ಅವರ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿರುತ್ತಿದ್ದರು. ಅವರ ಜತೆಗೆ ಸದಾ ಅಂಗರಕ್ಷಕರೂ ಇರುತ್ತಿದ್ದರು. 

ಕೊಲೆ ಬೆದರಿಕೆ ನಡುವೆಯೇ ಶೂಟಿಂಗ್‌

ಸಿಕಂದರ್ ಶೂಟಿಂಗ್‌ ಸಮಯದಲ್ಲಿ, ಸಲ್ಮಾನ್ ಖಾನ್‌ ಅವರಿಗೆ ಸಾಕಷ್ಟು ಕೊಲೆ ಬೆದರಿಕೆಗಳು ಬಂದಿದ್ದವು. ಆ ಕಾರಣಕ್ಕೂ ಈ ಚಿತ್ರದ ಶೂಟಿಂಗ್‌ ಸಮಯದಲ್ಲಿ ಅವರ ಭದ್ರತೆ ಮೊದಲಿನಿಗಿಂತ ಹೆಚ್ಚಾಗಿತ್ತು. ಕಳೆದ ವರ್ಷ ನವೆಂಬರ್ 5 ರಂದು ಮುಂಬೈ ಪೊಲೀಸರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಸಂದೇಶ ಬಂದಿತ್ತು, ಸಲ್ಮಾನ್ ಕ್ಷಮೆಯಾಚಿಸಬೇಕು ಅಥವಾ ಅವರ ಸುರಕ್ಷತೆಗಾಗಿ 5 ಕೋಟಿ ರೂ. ಪಾವತಿಸಬೇಕು ಎಂದು ಒತ್ತಾಯಿಸಿದ್ದರು. ಅಂದಹಾಗೆ, ಸಿಕಂದರ್‌ ಚಿತ್ರದ ಬಹುತೇಕ ಶೂಟಿಂಗ್‌ ಮುಂಬೈ ಮತ್ತು ಸುತ್ತಲಿನ ಕೆಲವು ಪ್ರದೇಶಗಳಲ್ಲಿ ನಡೆದಿದೆ. ಭವ್ಯ ಸೆಟ್‌ಹಾಕಿ ಚಿತ್ರೀಕರಿಸಲಾಗಿದೆ.

ಸಿಕಂದರ್‌ ಚಿತ್ರವನ್ನು ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಸಾಜಿದ್ ನಾಡಿಯಾಡ್‌ವಾಲಾ ನಿರ್ಮಿಸಿದ್ದಾರೆ. ಗಜನಿ, ತುಫಾಕಿ, ಹಾಲಿಡೇ ಮತ್ತು ಸರ್ಕಾರ್‌ ಸಿನಿಮಾಗಳ ಮೂಲಕ ಹೆಸರುವಾಸಿಯಾದ ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಿಕಂದರ್‌ನಲ್ಲಿ ಕಾಜಲ್ ಅಗರ್ವಾಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಲ್ಮಾನ್‌ ಖಾನ್‌ ಸಂದರ್ಶನದ ವಿಡಿಯೋ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner