ತಿರುಪತಿ ದೇಗುಲಕ್ಕೆ ರಾಜ್ ನಿಧಿಮೋರು ಜತೆ ಭೇಟಿ ನೀಡಿದ ಸಮಂತಾ ರುತ್ ಪ್ರಭು; ಡೇಟಿಂಗ್ ವದಂತಿಗೆ ರೆಕ್ಕೆಪುಕ್ಕ
ನಟಿ ಸಮಂತಾ ರುತ್ ಪ್ರಭು ಅವರು ತಿರುಪತಿ ಬಾಲಾಜಿ ದೇಗುಲಕ್ಕೆ ನಿನ್ನೆ ಭೇಟಿ ನೀಡಿದ್ದಾರೆ. ಈಕೆಯ ಜತೆ ನಿರ್ದೇಶಕ ರಾಜ್ ನಿಧಿಮೋರು ಕೂಡ ಇದ್ದರು. ಇದು ಸಮಂತಾ ಮತ್ತು ರಾಜ್ ಅವರ ಡೇಟಿಂಗ್ ವದಂತಿಗೆ ತುಪ್ಪ ಸುರಿದಿದೆ. ನಾಗ ಚೈತನ್ಯರಿಗೆ ಡಿವೋರ್ಸ್ ನೀಡಿದ ಬಳಿಕ ಸಮಂತಾರ ಬಾಯ್ ಫ್ರೆಂಡ್ ಈ ರಾಜ್ ನಿದಿಮೋರ್ ಎನ್ನಲಾಗುತ್ತಿದೆ.

ನಟಿ ಸಮಂತಾ ರುತ್ ಪ್ರಭು ಅವರು ಶುಭಂ ಮೂಲಕ ನಿರ್ಮಾಪಕರಾಗುತಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಅಂದರೆ ಮೇ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನ ನಟಿಯು ತಿರುಪತಿ ಬಾಲಾಜಿ ದೇಗುಲಕ್ಕೆ ನಿನ್ನೆ ಭೇಟಿ ನೀಡಿದ್ದಾರೆ. ಈಕೆಯ ಜತೆ ನಿರ್ದೇಶಕ ರಾಜ್ ನಿಧಿಮೋರು ಕೂಡ ಇದ್ದರು. ಇದು ಸಮಂತಾ ಮತ್ತು ರಾಜ್ ಅವರ ಡೇಟಿಂಗ್ ವದಂತಿಗೆ ತುಪ್ಪ ಸುರಿದಿದೆ. ನಾಗ ಚೈತನ್ಯರಿಗೆ ಡಿವೋರ್ಸ್ ನೀಡಿದ ಬಳಿಕ ಸಮಂತಾರ ಬಾಯ್ ಫ್ರೆಂಡ್ ಈ ರಾಜ್ ನಿಧಿಮೋರು ಎನ್ನಲಾಗುತ್ತಿದೆ. ಕಳೆದ ವರ್ಷ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾಗಿದ್ದರು.
ತಿರುಪತಿಯಲ್ಲಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಅವರು ಸಾಂಪ್ರದಾಯಿಕ ಸಲ್ವಾರ್ ಕಮೀಜ್ ತೊಟ್ಟು ತಿರುಪತಿ ವೆಂಕಟೇಶ್ವರ ದೇವರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ತೆಳು ಗುಲಾಬಿ ಬಣ್ಣದ ಸಲ್ವಾರ್‌ನಲ್ಲಿ ಸಮಂತಾ ಆಕರ್ಷಕವಾಗಿ ಕಾಣುತ್ತಿದ್ದರು.
ಸಮಂತಾ ರುತ್ ಪ್ರಭು ಮತ್ತು ರಾಜ್ ಇಬ್ಬರು ಜತೆಯಾಗಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಇತರೆ ಭದ್ರತಾ ಸಿಬ್ಬಂದಿಗಳೂ ಇದ್ದರು. ಮತ್ತೊಂದು ವಿಡಿಯೋದಲ್ಲಿ ಆರ್ಚಕರ ನೆರವಿನೊಂದಿಗೆ ಪೂಜೆ ಸಲ್ಲಿಸುತ್ತಿರುವುದನ್ನು ನೋಡಬಹುದು.
ರಾಜ್ ನಿದಿಮೋರು ಅವರು ರಾಜ್ ಆಂಡ್ ಡಿಕೆಯ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಸಿಟಾಡೆಲ್: ಹನಿ ಬನ್ನಿಯ ಸಹ ನಿರ್ದೇಶಕರು. ಈ ಸಿನಿಮಾದಲ್ಲಿ ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಶೋನ ಎರಡನೇ ಸೀಸನ್ ಕೆಲವು ದಿನಗಳ ಹಿಂದೆ ಆರಂಭವಾಗಿತ್ತು. ಅಂದಹಾಗೆ, ರಾಜ್ ಅವರು ಶ್ಯಾಮಲಿ ಡೆ ಅವರನ್ನು ವಿವಾಹವಾಗಿದ್ದಾರೆ. ಹೀಗಿದ್ದರೂ ಡೇಟಿಂಗ್ ವದಂತಿ ಹಬ್ಬಿದೆ.
ಸಮಂತಾರ ಪ್ರೊಡಕ್ಷನ್ ವೆಂಚ್ಯೂರ್
ಡಿಸೆಂಬರ್ 2023ರಲ್ಲಿ ಸಮಂತಾ ಅವರು ಟ್ರಾಲಾಲ ಮೂವಿಂಗ್ ಫಿಕ್ಚರ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು.
ಸಮಂತಾ ರುತ್ ಪ್ರಭು ಬಗ್ಗೆ
ಸಮಂತಾ ರುತ್ ಪ್ರಭು ಒಂದೊಮ್ಮೆ ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದರು. ಅನಾರೋಗ್ಯದ ಕಾರಣದಿಂದ ಕೆಲವು ವರ್ಷ ಚಿತ್ರರಂಗದಿಂದ ದೂರವಿದ್ದರು. ಹೆಚ್ಚಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಈಗ ಈ ಸ್ಥಾನವನ್ನು ಬೇರೆ ನಟಿಯರು ಪಡೆದಿರಬಹುದು. ಸಮಂತಾ ನಾಲ್ಕು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳು , ಎರಡು ನಂದಿ ಪ್ರಶಸ್ತಿಗಳು ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ .
ಇವರು ತೆಲುಗಿನ ಯೇ ಮಾಯಾ ಚೆಸಾವೆ, ಬಾನಾ ಕಾಥಡಿ, ದೂಕುಡು, ಏಕ್ ದಿವಾನಾ ಥಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ರಾಜಮೌಳಿಯವರ ಈಗ ಸಿನಿಮಾದಲ್ಲಿ ನಾನಿ ಮತ್ತು ಕಿಚ್ಚ ಸುದೀಪ್ ಜತೆ ನಟಿಸಿದ್ದಾರೆ. ಸೀತಮ್ಮ ವಾಕಿತ್ಲೊ ಸಿರಿಮಲ್ಲೆ ಚೆಟ್ಟು, ಜಬರ್ದಸ್ತ್, ರಾಮಯ್ಯ ವಸ್ತವಯ್ಯ, ಮನಂ, ಅಂಜಾನ್ ಕತ್ತಿ, ಸನ್ ಆಫ್ ಸತ್ಯಮೂರ್ತಿ, 10 ಎಂಡ್ತತುಕುಲ್ಲಾ, ವೆಲ್ರಾಜ್, ಬೆಂಗಳೂರು ನಾಟ್ಕಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.