Samantha: ನಾಗಚೈತನ್ಯ ಜತೆಗೆ ಡಿವೋರ್ಸ್‌ ಬಳಿಕ ಆದ ಕಷ್ಟ ಹೇಗಿತ್ತು? ಈಗ ಹೇಗಿದೆ.. ವಿವರಣೆ ನೀಡಿದ ಸಮಂತಾ..
ಕನ್ನಡ ಸುದ್ದಿ  /  ಮನರಂಜನೆ  /  Samantha: ನಾಗಚೈತನ್ಯ ಜತೆಗೆ ಡಿವೋರ್ಸ್‌ ಬಳಿಕ ಆದ ಕಷ್ಟ ಹೇಗಿತ್ತು? ಈಗ ಹೇಗಿದೆ.. ವಿವರಣೆ ನೀಡಿದ ಸಮಂತಾ..

Samantha: ನಾಗಚೈತನ್ಯ ಜತೆಗೆ ಡಿವೋರ್ಸ್‌ ಬಳಿಕ ಆದ ಕಷ್ಟ ಹೇಗಿತ್ತು? ಈಗ ಹೇಗಿದೆ.. ವಿವರಣೆ ನೀಡಿದ ಸಮಂತಾ..

ಡಿವೋರ್ಸ್‌ ವಿಚಾರದ ಹಿನ್ನೆಲೆಯನ್ನು ನೇರವಾಗಿ ಫ್ಯಾನ್ಸ್‌ ಜತೆಗೆ ಜಾಲತಾಣದ ಮೂಲಕ ಹೇಳಿಕೊಳ್ಳುವವರಿದ್ದರು ಸಮಂತಾ. ಆದರೆ, ಇಡೀ ಸೋಷಿಯಲ್‌ ಮೀಡಿಯಾದಲ್ಲಿ ಅವರೆದುರೇ ಸಾಕಷ್ಟು ದೂರುಗಳು ಬರಲಾರಂಭಿಸಿದವು. ಹಾಗಾಗಿ ಅಲ್ಲಿ ಅದರ ಬಗ್ಗೆ ಸಮಂತಾ ಚರ್ಚೆ ಮಾಡಲಿಲ್ಲ.

<p>ನಾಗಚೈತನ್ಯ ಜತೆಗೆ ಡಿವೋರ್ಸ್‌ ಬಳಿಕ ಆದ ಕಷ್ಟ ಹೇಗಿತ್ತು? ಈಗ ಹೇಗಿದೆ.. ವಿವರಣೆ ನೀಡಿದ ಸಮಂತಾ..</p>
ನಾಗಚೈತನ್ಯ ಜತೆಗೆ ಡಿವೋರ್ಸ್‌ ಬಳಿಕ ಆದ ಕಷ್ಟ ಹೇಗಿತ್ತು? ಈಗ ಹೇಗಿದೆ.. ವಿವರಣೆ ನೀಡಿದ ಸಮಂತಾ..

ಮುಂಬೈ: ಕರಣ್‌ ಜೋಹರ್‌ ನಿರೂಪಣೆಯ ಕಾಫಿ ವಿಥ್‌ ಕರಣ್‌ ಸೀಸನ್‌ 7 ಶುರುವಾಗಿದೆ. ನೇರ ಮಾತುಗಳ ಮೂಲಕವೇ ಬಾಳಿವುಡ್‌ನಲ್ಲಿ ಬಿಸಿ ಬಿಸಿ ಚರ್ಚೆಯ ಹುಟ್ಟಿಗೆ ಕಾರಣವಾಗಿದೆ. ವೈಯಕ್ತಿಕ ವಿಚಾರಗಳಿಗೂ ಕಾಫಿ ವಿಥ್‌ ಕರಣ್‌ ಶೋ ವೇದಿಕೆ ಕಲ್ಪಿಸಿದ್ದು, ಈಗಾಗಲೇ ಹಲವು ಸೆಲೆಬ್ರಿಟಿಗಳು ಆಗಮಿಸಿ ಹರಟೆ ಹೊಡೆದಿದ್ದಾರೆ. ಕಾಂಟ್ರವರ್ಸಿ ಹೇಳಿಕೆಗಳನ್ನೂ ನೀಡಿದ್ದಾರೆ. ಪ್ರೀತಿ, ಪ್ರೇಮ, ಡೇಟಿಂಗ್‌, ಸೆಕ್ಸ್‌ ಇತ್ಯಾದಿ ವಿಚಾರಗಳನ್ನು ಕರಣ್‌ ಮುಂದೆ ಹೇಳಿಕೊಂಡಿದ್ದಾರೆ. ಇದೀಗ ಡಿವೋರ್ಸ್‌ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದ ಸೌತ್‌ ಸ್ಟಾರ್‌ ನಟಿ ಸಮಂತಾ ಶೋದಲ್ಲಿ ಹಾಜರಾಗಿ ನಾಗಚೈತನ್ಯ ಬಗ್ಗೆ, ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ.

ಮೊದಲ ಸಲ ಕಾಫಿ ವಿಥ್‌ ಕರಣ್‌ ಶೋನಲ್ಲಿ ಸಮಂತಾ ಕಾಣಿಸಿಕೊಂಡರೆ, ಅವರಿಗೆ ಅಕ್ಷಯ್‌ ಕುಮಾರ್‌ ಸಾಥ್‌ ನೀಡಿದ್ದರು. ಮಾತು ಆರಂಭಿಸಿದ ಕರಣ್‌, ಡಿವೋರ್ಸ್‌ ವಿಚಾರವನ್ನೇ ಮುನ್ನೆಲೆಗೆ ತಂದರು. ಪತಿ ನಾಗಚೈತನ್ಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನೆ ಮುಗಿಸುವ ಮುನ್ನವೆ, ಮಧ್ಯ ಪ್ರವೇಶಿಸಿದ ಸಮಂತಾ, ಪತಿಯಲ್ಲ, ಮಾಜಿಪತಿ.. ಎಂದು ಸರಿ ಪಡಿಸಿದ್ದಾರೆ. ಅದಾದ ಬಳಿಕ ಅಂದಿನ ಜೀವನ ಈಗಿನ ಜೀವನ ಹೇಗಿದೆ? ಎರಡರ ನಡುವಿನ ವ್ಯತ್ಯಾಸ ತಿಳಿಸುವಿರಾ? ಎಂದು ಪ್ರಶ್ನೆ ಎಸೆದಿದ್ದರು.

ಸಮಂತಾ ಹೇಳಿದ್ದೇನು?

ಡಿವೋರ್ಸ್‌ ವಿಚಾರದ ಹಿನ್ನೆಲೆಯನ್ನು ನೇರವಾಗಿ ಫ್ಯಾನ್ಸ್‌ ಜತೆಗೆ ಜಾಲತಾಣದ ಮೂಲಕ ಹೇಳಿಕೊಳ್ಳುವವರಿದ್ದರು ಸಮಂತಾ. ಆದರೆ, ಇಡೀ ಸೋಷಿಯಲ್‌ ಮೀಡಿಯಾದಲ್ಲಿ ಅವರೆದುರೇ ಸಾಕಷ್ಟು ದೂರುಗಳು ಬರಲಾರಂಭಿಸಿದವು. ಹಾಗಾಗಿ ಅಲ್ಲಿ ಅದರ ಬಗ್ಗೆ ಸಮಂತಾ ಚರ್ಚೆ ಮಾಡಲಿಲ್ಲ. ಈ ಬಗ್ಗೆ ಕಾಫಿ ವಿಥ್‌ ಕರಣ್‌ ಶೋದಲ್ಲಿ ಹೇಳಿಕೊಳ್ಳುವ ಅವರು, "ನನಗೆ ಬೇರೆ ದಾರಿ ಇರಲಿಲ್ಲ. ದೂರು ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾನು ಆ ಮಾರ್ಗವನ್ನು ಅನುಸರಿಸಬೇಕಾಯಿತು. ನಾನು ಎಲ್ಲರೆದುರು ಪಾರದರ್ಶಕವಾಗಿರಲು ಬಯಸುತ್ತೇನೆ. ಇಬ್ಬರ ನಡುವೆ ಡಿವೋರ್ಸ್‌ ಘಟಿಸಿದಾಗ, ಬೇಸರ ಆಗಲಿಲ್ಲ. ಅದಕ್ಕೆ ಕಾರಣ; ಜನಗಳು. ಅವರಿಗೆ ನಾನು ಉತ್ತರ ನೀಡಬೇಕಿತ್ತು. ಅದು ನನ್ನ ಜವಾಬ್ದಾರಿ ಕೂಡ ಹೌದು. ಆದರೆ, ಆ ಸಮಯದಲ್ಲಿ ನಾನು ಅದನ್ನು ಮಾಡಲು ಆಗಲಿಲ್ಲ" ಎಂದಿದ್ದಾರೆ ಸಮಂತಾ.

ಈಗ ಹೇಗಿದ್ದೀರಿ ಎಂದ ಕರಣ್‌ಗೆ ಸ್ಯಾಮ್‌ ಉತ್ತರ ನೋಡಿ...

ಡಿವೋರ್ಸ್‌ ವಿಚಾರದ ಸುದೀರ್ಘ ಚರ್ಚೆಯ ಬಳಿಕ "ಅದೆಲ್ಲವು ಆಯಿತು. ಈಗ ಹೇಗಿದ್ದೀರಿ? ಎಂದು ಕರಣ್‌ ಸಮಂತಾಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅಷ್ಟೇ ಜಾಳಿಯಾಗಿ ಉತ್ತರ ನೀಡಿದ ಸ್ಯಾಮ್, "ಆರಂಭದಲ್ಲಿ ತುಂಬ ಕಷ್ಟವಾಗಿತ್ತು. ಈಗ ಚೆನ್ನಾಗಿದೆ. ಹಿಂದೆಂದಿಗಿಂತಲೂ ಬಲಶಾಲಿಯಾಗಿದ್ದೇನೆ. ಸ್ಟ್ರಾಂಗ್‌ ಆಗಿದ್ದೇನೆ. ಆದರೆ, ನಮ್ಮಿಬ್ಬರ ನಡುವೆ ಸೌಹಾರ್ದಯುತವಾದ ಪರಿಸ್ಥಿತಿ ಇರಲಿಲ್ಲ" ಎಂದು ಉತ್ತರ ನೀಡಿದ್ದಾರೆ.

ವಿಕ್ಕಿ ಕೌಶಲ್‌ ಜತೆಗೊಂದು ಸಿನಿಮಾ..

“ಯಶೋದ”, “ಶಾಕುಂತಲಂ” ಸಿನಿಮಾಗಳ ಜತೆಯಲ್ಲಿ ಬಾಲಿವುಡ್‌ನಲ್ಲಿಯೂ ಸಮಂತಾ ಬೇಡಿಕೆ ಹೆಚ್ಚಿಸಿಕೊಂಡಿದ್ದಾರಂತೆ. ಫ್ಯಾಮಿಲಿ ಮ್ಯಾನ್‌ 2 ಮೂಲಕ ಅವರ ಅಭಿನಯವನ್ನು ನೋಡಿ ಫಿದಾ ಆಗಿದ್ದಾರೆ. ಅದರಂತೆ ಸಾಕಷ್ಟು ಹಿಂದಿ ಪ್ರಾಜೆಕ್ಟ್‌ಗಳಲ್ಲಿ ಸಮಂತಾ ಹೆಸರು ಹೇಳಿಬರುತ್ತಿದೆ. ಅದರಂತೆ ಇದೀಗ ನಟ ವಿಕ್ಕಿ ಕೌಶಾಲ್‌ ಜತೆಗೂ ಸಮಂತಾ ಸಿನಿಮಾ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. The Immortal Ashwatthama ಚಿತ್ರದಲ್ಲಿ ನಾಯಕಿಯಾಗಿ ಸಮಂತಾ ನಟಿಸಲಿದ್ದಾರಂತೆ. ಈ ಚಿತ್ರವನ್ನು "ಉರಿ" ಚಿತ್ರ ಖ್ಯಾತಿಯ ಆದಿತ್ಯಾ ಧಾರ್‌ ನಿರ್ದೇಶನ ಮಾಡಲಿದ್ದಾರೆ.

Whats_app_banner