Harshika Poonacha: ಮದುವೆಗೆ ಮುನ್ನವೇ ಭಾವಿ ಪತ್ನಿ ಹರ್ಷಿಕಾರನ್ನು ನಿರ್ಮಾಪಕಿಯನ್ನಾಗಿಸಿದ ಭುವನ್ ಪೊನ್ನಣ್ಣ
ಕನ್ನಡ ಸುದ್ದಿ  /  ಮನರಂಜನೆ  /  Harshika Poonacha: ಮದುವೆಗೆ ಮುನ್ನವೇ ಭಾವಿ ಪತ್ನಿ ಹರ್ಷಿಕಾರನ್ನು ನಿರ್ಮಾಪಕಿಯನ್ನಾಗಿಸಿದ ಭುವನ್ ಪೊನ್ನಣ್ಣ

Harshika Poonacha: ಮದುವೆಗೆ ಮುನ್ನವೇ ಭಾವಿ ಪತ್ನಿ ಹರ್ಷಿಕಾರನ್ನು ನಿರ್ಮಾಪಕಿಯನ್ನಾಗಿಸಿದ ಭುವನ್ ಪೊನ್ನಣ್ಣ

ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಣ್ಣ ಜೋಡಿಯ ಮದುವೆಗೆ ದಿನಗಣನೆ ಆರಂಭವಾಗಿದೆ. ಮದುವೆಯ ಬಿಜಿ ಕೆಲಸಗಳ ನಡುವೆಯೇ ಈ ಜೋಡಿ, ಭುವನಂ ಎಂಟರ್‌ಟೈನ್‌ಮೆಂಟ್‌ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ತೆರೆದಿದೆ. ಮೊದಲ ಸಿನಿಮಾವನ್ನೂ ಘೋಷಣೆ ಮಾಡಿದೆ.

Harshika Poonacha: ಮದುವೆಗೆ ಮುನ್ನವೇ ಭಾವಿ ಪತ್ನಿ ಹರ್ಷಿಕಾರನ್ನು ನಿರ್ಮಾಪಕಿಯನ್ನಾಗಿಸಿದ ಭುವನ್ ಪೊನ್ನಣ್ಣ
Harshika Poonacha: ಮದುವೆಗೆ ಮುನ್ನವೇ ಭಾವಿ ಪತ್ನಿ ಹರ್ಷಿಕಾರನ್ನು ನಿರ್ಮಾಪಕಿಯನ್ನಾಗಿಸಿದ ಭುವನ್ ಪೊನ್ನಣ್ಣ

Harshika Bhuvan: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಇದೇ ಮದುವೆ ಶುಭ ಸುದ್ದಿಯ ನಡುವೆಯೇ ಇನ್ನೊಂದು ವಿಶೇಷ ಸುದ್ದಿಯನ್ನು ಹಂಚಿಕೊಂಡಿದೆ ಈ ಜೋಡಿ. ಅದೇನೆಂದರೆ ಈ ಜೋಡಿ ಒಟ್ಟಿಗೆ ಸ್ವಂತ ಪ್ರೊಡಕ್ಷನ್‌ ಹೌಸ್‌ ತೆರೆದಿದ್ದು, ಹೊಸ ಸಿನಿಮಾದ ಶೀರ್ಷಿಕೆಯನ್ನೂ ಘೋಷಣೆ ಮಾಡಿದೆ.

ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್‌ಗೆ ಭುವನಂ ಎಂಟರ್ಟೈನ್‌ಮೆಂಟ್ ಎಂದು ಹೆಸರಿಡಲಾಗಿದೆ. ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರಕ್ಕೆ ಭುವನಂ ಶ್ರೇಷ್ಠಮ್ ಗಚ್ಚಾಮಿ ಎಂಬ ಶೀರ್ಷಿಕೆ ಫಿಕ್ಸ್‌ ಆಗಿದೆ. ಇದೊಂದು ಬಾಕ್ಸರ್‌ನ ಕಥೆಯಾಗಿದ್ದು ಆರು ವರ್ಷದ ಹಿಂದೆ ಈ ರೀತಿಯ ಸಿನಿಮಾ ಒಂದನ್ನು ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಇದೀಗ ಆ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಬಾಕ್ಸರ್​ ಪಾತ್ರದಲ್ಲಿ ಭುವನ್​ ಪೊನ್ನಣ್ಣ ಕಾಣಿಸಿಕೊಳ್ಳಲಿದ್ದು, ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್​ ಇರಲಿದೆ ಎಂದೂ ಭುವನ್ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್, ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್​ ಮೇಲೆ ಕೆಲಸ ಮಾಡುತ್ತಿದ್ದಾರೆ.

ಸದ್ಯ ಮದುವೆಯ ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಭುವನ್ ಹಾಗೂ ಹರ್ಷಿಕಾ ಹೇಳಿಕೊಂಡಿದ್ದಾರೆ. ಮದುವೆ ಸಮಾರಂಭ ಮುಗಿಸಿಕೊಂಡು, ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನೂ ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ಭುವನ್‌ ನಾಯಕನಾಗಿ ಕಾಣಿಸಿಕೊಂಡರೆ, ಹರ್ಷಿಕಾ ನಿರ್ಮಾಪಕಿಯಾಗಿರಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಪ್ಲಾನ್‌ ಇದೆ ಎಂದು ಭುವನ್ ಹೇಳಿಕೊಂಡಿದ್ದಾರೆ.

ಆಗಸ್ಟ್‌ 24ರಂದು ಮದುವೆ

ಚಂದನವನದ ಈ ಜೋಡಿಯ ವಿವಾಹ ಆಗಸ್ಟ್ 23 ಮತ್ತು 24 ರಂದು ಹರ್ಷಿಕಾ ಅವರ ಹುಟ್ಟೂರಾದ ವಿರಾಜಪೇಟೆಯ ಅಮ್ಮತ್ತಿಯಲ್ಲಿ ಕೊಡವ ಸಂಪ್ರದಾಯದಂತೆ ನಡೆಯಲಿದೆ. ಈಗಾಗಲೇ ಲಗ್ನಪತ್ರಿಕೆಯನ್ನು ಮುದ್ರಿಸಲಾಗಿದ್ದು, ಚಂದನವನದ ಬಹುತೇಕ ಎಲ್ಲರಿಗೂ ಲಗ್ನ ಪತ್ರಿಕೆಯನ್ನೂ ಈ ಜೋಡಿ ನೀಡಿದೆ.

ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner