ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸೈಡ್‌ ಬಿ ಕಥೆಯನ್ನು 60 ಸೆಕೆಂಡ್‌ನಲ್ಲಿ ತೋರಿಸಿದ ವಿಕ್ಕಿ ಪೀಡಿಯಾ; ಮಚ್ಚೆ ನೋಡಿ ನಕ್ಕ ಚೈತ್ರಾ ಜೆ ಆಚಾರ್‌-sandalalwood news social media vicky pedia shows sapta sagaradache ello movie in 60 seconds chaitra j achar reaciton pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸೈಡ್‌ ಬಿ ಕಥೆಯನ್ನು 60 ಸೆಕೆಂಡ್‌ನಲ್ಲಿ ತೋರಿಸಿದ ವಿಕ್ಕಿ ಪೀಡಿಯಾ; ಮಚ್ಚೆ ನೋಡಿ ನಕ್ಕ ಚೈತ್ರಾ ಜೆ ಆಚಾರ್‌

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸೈಡ್‌ ಬಿ ಕಥೆಯನ್ನು 60 ಸೆಕೆಂಡ್‌ನಲ್ಲಿ ತೋರಿಸಿದ ವಿಕ್ಕಿ ಪೀಡಿಯಾ; ಮಚ್ಚೆ ನೋಡಿ ನಕ್ಕ ಚೈತ್ರಾ ಜೆ ಆಚಾರ್‌

ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌, ಚೈತ್ರಾ ಜೆ ಆಚಾರ್‌ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾವನ್ನು ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಖ್ಯಾತಿಯ ವಿಕ್ಕಿ ಪೀಡಿಯಾ ತಂಡವು ಕೇವಲ 60 ಸೆಕೆಂಡ್‌ನಲ್ಲಿ ತೋರಿಸಿದೆ. ನಟಿ ಚೈತ್ರಾ ಜೆ ಆಚಾರ್‌ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸೈಡ್‌ ಬಿ ಕಥೆನ 60 ಸೆಕೆಂಡ್‌ನಲ್ಲಿ ತೋರಿಸಿದ ವಿಕ್ಕಿ ಪೀಡಿಯಾ
ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸೈಡ್‌ ಬಿ ಕಥೆನ 60 ಸೆಕೆಂಡ್‌ನಲ್ಲಿ ತೋರಿಸಿದ ವಿಕ್ಕಿ ಪೀಡಿಯಾ

ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌, ಚೈತ್ರಾ ಜೆ ಆಚಾರ್‌ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾ ಈಗಾಗಲೇ ಪ್ಯಾನ್‌ ಇಂಡಿಯಾ ಪ್ರೇಕ್ಷಕರನ್ನು ಸೆಳೆದಿದೆ. ಈ ಸಿನಿಮಾವನ್ನು ಸೋಷಿಯಲ್‌ ಮೀಡಿಯಾದಲ್ಲಿ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ಕೇವಲ 90 ಸೆಕೆಂಡ್‌ನಲ್ಲಿ ಕಟ್ಟಿಕೊಟ್ಟಿದೆ. ಇವರ ಹಾಸ್ಯಕ್ಕೆ ನಟಿ ಚೈತ್ರಾ ಜೆ ಆಚಾರ್‌ ಕೂಡ ನಕ್ಕಿದ್ದಾರೆ. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಕ್ಕಿಪೀಡಿಯಾ ತುಂಬಾ ಜನಪ್ರಿಯವಾಗುತ್ತಿದೆ. ನಾನು ನಂದಿನಿ ಬೆಂಗಳೂರಿಗೆ ಬಂದಿನಿ ವಿಡಿಯೋದ ಬಳಿಕ ಈ ವಿಕ್ಕಿಪೀಡಿಯಾ ತಂಡದ ಜನಪ್ರಿಯತೆ ಹೆಚ್ಚಾಗಿತ್ತು. ಇತ್ತೀಚೆಗೆ ಕರಿಮಣಿ ಮಾಲೀಕ ನಾನಲ್ಲ ಹಾಡಿಗೆ ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ರಾಹುಲ್ಲಾನ ಎಳೆದುತಂದ ಕೀರ್ತಿ ಕೂಡ ಇದೇ ವಿಕ್ಕಿಪೀಡಿಯಾದ್ದು.

60 ಸೆಕೆಂಡಿನಲ್ಲಿ ಸಪ್ತ ಸಾಗರದಾಚೆ ಎಲ್ಲೋ

ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸಿನಿಮಾ ಸುಮಾರು 2 ಗಂಟೆ 22 ನಿಮಿಷ ಅವಧಿಯದ್ದು. ಸೈಡ್‌ ಬಿ ಕೂಡ ಸುಮಾರು ಇಷ್ಟೇ ಅವಧಿಯದ್ದು. ಸುಮಾರು ಐದು ಗಂಟೆಗೂ ಹೆಚ್ಚು ಅವಧಿಯ ಈ ಸಿನಿಮಾವನ್ನು ವಿಕ್ಕಿಪೀಡಿಯಾ ಕೇವಲ 60 ಸೆಕೆಂಡ್‌ನಲ್ಲಿ ತೋರಿಸಿದೆ. ಇವರ ಕಾಮಿಡಿಗೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಬಿದ್ದುಬಿದ್ದು ನಕ್ಕಿದ್ದಾರೆ. ಬನ್ನಿ ಈ 60 ಸೆಕೆಂಡ್‌ನ ವಿಡಿಯೋದಲ್ಲಿ ಏನೇನಿದೆ ನೋಡೋಣ.

ಈ ವಿಡಿಯೋದ ಆರಂಭದಲ್ಲಿ ವಿಕ್ಕಿಪೀಡಿಯಾದ ವಿಕಾಸ್‌ "ಮನು ನನಗೆ ಸಮುದ್ರ ಅಂದ್ರೆ ತುಂಬಾ ಇಷ್ಟ ಕಣೋ" ಎನ್ನುತ್ತಾನೆ. ನಂತರದ ಸೀನ್‌ನಲ್ಲಿ ಅಮಿತ್‌ ಚಿಟ್ಟೆ "ಮನು ಅವರೇ ನೀವು ಜೈಲಿಗೆ ಹೋಗಬೇಕು. ಯಾಕೆಂದರೆ ನನಗೆ ನನ್ನ ಮಗ ಅಂದರೆ ತುಂಬಾ ಇಷ್ಟ" ಎನ್ನುತ್ತಾನೆ. ಮುಂದಿನ ಸೀನ್‌ನಲ್ಲಿ "ಪ್ರಿಯಾ ನಾನು ಜೈಲಿಗೆ ಹೋಗ್ತಿನಿ, ಏಕೆಂದರೆ ನನಗೆ ನೀನಂದರೆ ತುಂಬಾ ಇಷ್ಟ" ಎನ್ನುತ್ತಾನೆ. ತಕ್ಷಣ ಪ್ರಿಯಾ "ಹ್ನೈ" ಎನ್ನುತ್ತಾಳೆ. ಅಮಿತ್‌ ಚಿಟ್ಟೆ ಹೃದಯಾಘಾತದಿಂದ ಕೆಳಕ್ಕೆ ಬೀಳುತ್ತಾನೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಎಂಡ್‌ ಆಗುತ್ತದೆ.

"ಸುರಭಿ ನಾನು ಜೈಲಿನಿಂದ ಬಂದಿದ್ದೀನಿ. ನನಗೆ ಪ್ರಿಯಾ ಅಂದರೆ ತುಂಬಾ ಇಷ್ಟ" ಎಂದು ಮನು ಹೇಳುತ್ತಾನೆ. ಸುರಭಿ ಹ್ನೈ ಎನ್ನುತ್ತಾಳೆ. ಸುರಭಿ ಪಾತ್ರಧಾರಿ ವಿಕಾಸ್‌ ಮುಖದಲ್ಲಿ ಚೈತ್ರಾ ಜೆ ಆಚಾರ್‌ ಕೆನ್ನೆಯಲ್ಲಿದ್ದಂತಹ ಮಚ್ಚೆ ಇರುತ್ತದೆ. "ವಿನೋದ ನಾನು ಜೈಲಿನಿಂದ ಬಂದಿದ್ದೇನೆ. ನನಗೆ ನಿನ್ನ ಅಕ್ಕ ಅಂದರೆ ತುಂಬಾ ಇಷ್ಟ" ಎಂದು ಮನು ಹೇಳುತ್ತಾನೆ. ವಿನೋದ ಹ್ನೈ ಎನ್ನುತ್ತಾನೆ. "ಪುನೀತ ನಾನು ಜೈಲಿನಿಂದ ಬಂದಿದ್ದೇನೆ, ನನಗೆ ನಿನ್ನ ಅಮ್ಮ ಅಂದರೆ ತುಂಬಾ ಇಷ್ಟ" ಎಂದು ಮನು ಹೇಳುತ್ತಾನೆ. ಪುನೀತ ಹ್ನೈ ಅನ್ನುತ್ತಾನೆ. "ದೀಪಕ್‌ ನಾನು ಜೈಲಿನಿಂದ ಬಂದಿದ್ದೇನೆ. ನನಗೆ ನಿಮ್ಮ ಹೆಂಡತಿ ಅಂದರೆ ತುಂಬಾ ಇಷ್ಟ" ಎನ್ನುತ್ತಾನೆ ಮನು. ದೀಪಕ್‌ ಹ್ನೈ ಎನ್ನುತ್ತಾನೆ.

ರೌಡಿ ಪಾತ್ರದಲ್ಲಿ ವಿಕಾಸ್‌ ಬೂಮರ್‌ ಜಗಿದುಕೊಂಡು "ಮನು... ನಾನು ಜೈಲಿನಿಂದ ಬಂದಿದ್ದೇನೆ ಕಣೋ, ನನಗೂ ನೀನು ಅಂದ್ರೆ ತುಂಬಾ ಇಷ್ಟ. ಲವ್‌ ಯು ಮನು" ಎಂದಾಗ ಹ್ನೈ ಎನ್ನುವ ಸರದಿ ಮನುವಿನದ್ದು. ಸಿನಿಮಾ ಮುಗಿಯುತ್ತದೆ. ಹಿನ್ನೆಲೆಯಲ್ಲಿ "ಮನು ಓಪನ್‌ ಮಾಡೋ, ನಂಗೆ ಆಗ್ತಾ ಇಲ್ಲ" ಎಂದು ಅಚ್ಚುತ್‌ ಕುಮಾರ್‌ ಪಾತ್ರದ ಧ್ವನಿ ಕೇಳಿಸುತ್ತದೆ.

ಒಟ್ಟಾರೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಕೆಲವು ಅಂಶಗಳನ್ನು ಇಟ್ಟುಕೊಂಡು ವಿಕ್ಕಿಪೀಡಿಯಾ ತಂಡ ಮಜವಾದ ವಿಡಿಯೋ ಹೊರತಂದಿದೆ. ಇದನ್ನು ನೋಡಿ ನೆಟ್ಟಿಗರು ನಕ್ಕಿದ್ದಾರೆ. ಅಷ್ಟೇ ಮಾತ್ರವಲ್ಲ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ನಟಿಸಿದ್ದ ಚೈತ್ರಾ ಜೆ ಆಚಾರ್‌ ಕೂಡ ಕಾಮೆಂಟ್‌ ಮಾಡಿದ್ದಾರೆ. "ಕೂದಲಿನ ವ್ಯತ್ಯಾಸ.." ಎಂದು ಅವರು ಕಾಮೆಂಟ್‌ ಮಾಡಿದ್ದಾರೆ. ಅವರ ಕಾಮೆಂಟ್‌ಗೆ "ಕೆನ್ನೆಯ ಮೇಲೆ ಮಚ್ಚೆ ನೋಡಿ" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.