ಕನ್ನಡ ಸುದ್ದಿ  /  Entertainment  /  Sandalwod News Kaatera Director Tharun Sudhir Bought A New Bmw Car Darshan Drove Tharun's New Car Mnk

ನಿರ್ದೇಶಕ ತರುಣ್‌ ಸುಧೀರ್‌ ಮನೆಗೆ ಬಂತು ಹೊಸ BMW ಕಾರು; ಒಂದು ರೌಂಡ್‌ ಹೊಡದೇ ಬಿಟ್ರು ದರ್ಶನ್

ಕಾಟೇರ ಸಿನಿಮಾ ಮೂಲಕ ಯಶಸ್ಸು ಪಡೆದ ನಿರ್ದೇಶಕ ತರುಣ್‌ ಸುಧೀರ್‌, ಇದೀಗ ಹೊಸ ಕಾರ್‌ನ ಓನರ್‌ ಆಗಿದ್ದಾರೆ. ತಮ್ಮ ಮನೆಗೆ BMW ಕಾರ್‌ ಕೊಂಡೊಯ್ದಿದ್ದಾರೆ

ನಿರ್ದೇಶಕ ತರುಣ್‌ ಸುಧೀರ್‌ ಮನೆಗೆ ಬಂತು ಹೊಸ BMW ಕಾರು; ಒಂದು ರೌಂಡ್‌ ಹೊಡದೇ ಬಿಟ್ರು ದರ್ಶನ್
ನಿರ್ದೇಶಕ ತರುಣ್‌ ಸುಧೀರ್‌ ಮನೆಗೆ ಬಂತು ಹೊಸ BMW ಕಾರು; ಒಂದು ರೌಂಡ್‌ ಹೊಡದೇ ಬಿಟ್ರು ದರ್ಶನ್

Tharun sudhir: ಬಾಕ್ಸ್‌ ಆಫೀಸ್‌ನಲ್ಲಿ ಕಾಟೇರ ಸಿನಿಮಾ ಸೂಪರ್‌ ಹಿಟ್‌ ಆಗಿದೆ. 200 ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಅದಾದ ಬಳಿಕ ಒಟಿಟಿಯಲ್ಲೂ ಹವಾ ಎಬ್ಬಿಸಿ, ಇನ್ನೇನು ಕಿರುತೆರೆಯಲ್ಲೂ ಸಿನಿಮಾ ಪ್ರಸಾರ ಕಾಣಲಿದೆ. ಈಗ ಇದೇ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಹೊಸ ಕಾರ್‌ ಖರೀದಿಸಿದ್ದಾರೆ. ದುಬಾರಿ ಬಜೆಟ್‌ನ BMW X1 ಮಾಡೆಲ್‌ ಕಾರು ಇದಾಗಿದ್ದು, ಅಮ್ಮನ ಕೈಯಿಂದ ಅನಾವರಣಗೊಂಡರೆ, ನಟ ದರ್ಶನ್‌ ಹೊಸ ಕಾರನ್ನು ಓಡಿಸಿ ಶುಭ ಕೋರಿದ್ದಾರೆ. 

ಹೌದು, ಕಾಟೇರ ಸಿನಿಮಾ ಮೂಲಕ ಯಶಸ್ಸು ಪಡೆದ ನಿರ್ದೇಶಕ ತರುಣ್‌ ಸುಧೀರ್‌, ಇದೀಗ ಹೊಸ ಕಾರ್‌ನ ಓನರ್‌ ಆಗಿದ್ದಾರೆ. ತಮ್ಮ ಮನೆಗೆ BMW ಕಾರ್‌ ಕೊಂಡೊಯ್ದಿದ್ದಾರೆ. ಕಾರ್‌ ಶೋರೂಮ್‌ಗೆ ಅಮ್ಮನ ಜತೆ ಬಂದ ತರುಣ್‌, ಅಮ್ಮನ ಕೈಯಿಂದಲೇ ಕಾರ್‌ನ ಅನಾವರಣ ಮಾಡಿಸಿದ್ದಾರೆ. ಇದಷ್ಟೇ ಅಲ್ಲ ಇದೇ ಕಾರನ್ನು ಅಣ್ಣ ದರ್ಶನ್‌ ಅವರಿಗೂ ತೋರಿಸಿದ್ದಾರೆ. ಬಳಿಕ ಅವರ ಕಡೆಯಿಂದಲೂ ಒಂದು ರೌಂಡ್‌ ಕಾರ್‌ ಹೊಡೆಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಬೆಂಗಳೂರಿನ ಮೋಹನ್‌ ಬಿ ಕೆರೆಯಲ್ಲಿ ಡೆವಿಲ್‌ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ನಟ ದರ್ಶನ್‌ ಅವರ ಕೈಗೆ ನೋವಾಗಿದೆ. ಆ ನೋವಿನಲ್ಲಿಯೇ ಡೆವಿಲ್‌ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರವರು. ಅದೇ ಶೂಟಿಂಗ್‌ ಸ್ಥಳಕ್ಕೆ ತೆರಳಿದ ತರುಣ್‌ ಸುಧೀರ್‌, ದರ್ಶನ್‌ ಅವರಿಗೂ ಕಾರ್‌ ತೋರಿಸಿದ್ದಾರೆ. ಅಷ್ಟೇ ಅಲ್ಲ ಕೈ ನೋವಿನ ನಡುವೆಯೂ ಅಲ್ಲಿಯೇ ಒಂದು ರೌಂಡ್‌ ಕಾರ್‌ ಓಡಿಸಿದ್ದಾರೆ ದರ್ಶನ್.‌ ಈ ವಿಡಿಯೋನ್ನು ಸ್ವತಃ ತರುಣ್‌ ಸುಧೀರ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ಮಹಾನಟಿ ಶೋ ಶುರುವಾಗಿದೆ. ಈ ಶೋಗೆ ರಮೇಶ್‌ ಅರವಿಂದ್‌, ಪ್ರೇಮಾ, ನಿಶ್ವಿಕಾ ನಾಯ್ಡು ಜತೆಗೆ ತರುಣ್‌ ಸುಧೀರ್‌ ಸಹ ಈ ಶೋನ ತೀರ್ಪುಗಾರರಾಗಿದ್ದಾರೆ. ನಾಡಿನ ಯುವ ಮಹಿಳಾಮಣಿಯರನ್ನು ಈ ಶೋ ಮೂಲಕ ಮಹಾನಟಿ ಮಾಡಹೊರಟಿದೆ ಜೀ ಕನ್ನಡ. ಈಗಾಗಲೇ ಕಳೆದ ವಾರ ಈ ಶೋ ಶುರುವಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಂದ ಯುವತಿಯರು, ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೂ ತೋರಿಸಲು ಸಜ್ಜಾಗಿದ್ದಾರೆ. 

ಅದೇ ರೀತಿ ಕಾಟೇರ ಬಳಿಕ ದರ್ಶನ್‌ ಅವರ ಮತ್ತೊಂದು ಸಿನಿಮಾ ನಿರ್ದೇಶಕನಕ್ಕೆ ಇಳಿದಿದ್ದಾರೆ ತರುಣ್‌ ಸುಧೀರ್. ‌ವೀರ ಸಿಂಧೂರ ಲಕ್ಷ್ಮಣ ಸಿನಿಮಾದಲ್ಲಿ ಈ ಜೋಡಿ ಒಂದಾಗುತ್ತಿದೆ. ಶೈಲಜಾ ನಾಗ್‌ ಈ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.