45 Kannada Movie: ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ಚಿತ್ರದ ಟೀಸರ್‌ ಯುಗಾದಿಗೆ ಬಿಡುಗಡೆ; ಸಿನಿಮಾ ರಿಲೀಸ್‌ ಯಾವಾಗ?
ಕನ್ನಡ ಸುದ್ದಿ  /  ಮನರಂಜನೆ  /  45 Kannada Movie: ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ಚಿತ್ರದ ಟೀಸರ್‌ ಯುಗಾದಿಗೆ ಬಿಡುಗಡೆ; ಸಿನಿಮಾ ರಿಲೀಸ್‌ ಯಾವಾಗ?

45 Kannada Movie: ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ಚಿತ್ರದ ಟೀಸರ್‌ ಯುಗಾದಿಗೆ ಬಿಡುಗಡೆ; ಸಿನಿಮಾ ರಿಲೀಸ್‌ ಯಾವಾಗ?

45 Kannada Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ 45 ಕನ್ನಡ ಸಿನಿಮಾದ ಟೀಸರ್‌ ಯುಗಾದಿ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದೆ.

ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ಚಿತ್ರದ ಟೀಸರ್‌ ಯುಗಾದಿಗೆ ಬಿಡುಗಡೆ
ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ಚಿತ್ರದ ಟೀಸರ್‌ ಯುಗಾದಿಗೆ ಬಿಡುಗಡೆ

ಬೆಂಗಳೂರು: ಈ ಯುಗಾದಿ ಹಬ್ಬದ ಸಮಯದಲ್ಲಿ ಕನ್ನಡ ಚಿತ್ರರಸಿಕರಿಗೆ ಶುಭ ಸುದ್ದಿಯೊಂದು ಇದೆ. ಅಂದು, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ 45 ಕನ್ನಡ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ.ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.

ಚಿತ್ರತಂಡವು ಇತ್ತೀಚಿಗೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯನ್ನು ಸಹ ವಿಭಿನ್ನವಾಗಿ ಮಾಡಲಾಗಿತ್ತು. ಆಗಸ್ಟ್ 15 ರಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮಾರ್ಚ್ 30, ವಸಂತ ಋತುವಿನ ಮೊದಲ ದಿನ, ಯುಗಾದಿ ಹಬ್ಬದ ಶುಭದಿನದ ಸಂಜೆ 6.45ಕ್ಕೆ "45" ಚಿತ್ರದ ಟೀಸರ್ ಅನಾವರಣವಾಗಲಿದೆ.

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರ ಅಭಿನಯ, ಸಂಗೀತ ನಿರ್ದೇಶನದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅರ್ಜುನ್ ಜನ್ಯರ ಮೊದಲ ನಿರ್ದೇಶನ ಹಾಗೂ ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ರಮೇಶ್ ರೆಡ್ಡಿ ಅವರ ನಿರ್ಮಾಣ‌ವಿರುವ ಈ ಚಿತ್ರದಲ್ಲಿ ಇಲ್ಲಿನ ನುರಿತ ತಂತ್ರಜ್ಞರ ಜತೆಗೆ ಹಾಲಿವುಡ್ ನ ಪ್ರಸಿದ್ದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ವಿಶೇಷಗಳನ್ನೊಳಗೊಂಡಿರುವ "45" ಚಿತ್ರದ ಟೀಸರ್ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಸಂಕ್ರಾಂತಿಯದು ಈ ಚಿತ್ರ ಹಾಡು ರಿಲೀಸ್‌ ಆಗಿತ್ತು. ಸಿನಿಮಾ ಬಿಡುಗಡೆ ದಿನವನ್ನೂ ಅಂದೇ ಘೋಷಿಸಲಾಗಿತ್ತು. ಅನಿಮೇಟೆಡ್‌ ಸಾಂಗ್‌ ಟೀಸರ್‌ ಮೂಲಕವೇ 45 ಸಿನಿಮಾದ ಕುರಿತು ಜನರಿಗೆ ಆಸಕ್ತಿ ಹೆಚ್ಚಾಗಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಸಲ 45 ಸಿನಿಮಾ ಮೂಲಕ ಮೊದಲ ಸಲ ಆಕ್ಷನ್‌‌‌‌ ಕಟ್‌ ಹೇಳುತ್ತಿದ್ದಾರೆ. ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಉಪೇಂದ್ರ ಮತ್ತು ರಾಜ್‌ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಉಮಾ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಇತ್ತೀಚೆಗೆ ರಿಲೀಸ್‌ ಆದ ವಿಶೇಷ ಅನಿಮೇಟೆಡ್‌ ಟೀಸರ್‌ನಲ್ಲಿ ವಿಶೇಷ ಸ್ಕೂಟರ್‌ ಏರಿ ಬರುವ ಶಿವರಾಜ್‌ ಕುಮಾರ್‌, ಅದೇ ಸ್ಕೂಟರ್‌ನಲ್ಲಿನ ಗನ್‌ನಿಂದಲೇ ಎದುರಾಳಿಗಳನ್ನು ಸೆದೆಬಡಿಯುವ ಚಿತ್ರಣವಿತ್ತು. ಈ ಟೀಸರ್‌ನಲ್ಲಿ ಬೆಟ್ಟವೊಂದು ಸಿಡಿದಾಗ ರಾಜ್‌ ಬಿ ಶೆಟ್ಟಿ, ಉಪೇಂದ್ರ, ಶಿವಣ್ಣನ ಮುಖ ಕಾಣಿಸಿತ್ತು.

45 ಸಿನಿಮಾ ತಂಡ ಪರಿಚಯ

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಈ ಸಿನಿಮಾಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ. ಕೆ ಎಂ ಪ್ರಕಾಶ್ ಎಡಿಟಿಂಗ್‌ , ಅನಿಲ್ ಕುಮಾರ್ ಸಂಭಾಷಣೆ, ಡಾ ಕೆ ರವಿವರ್ಮ, ಜಾಲಿ ಬಾಸ್ಟಿಯನ್, ಡಿಫರೆಂಟ್ ಡ್ಯಾನಿ, ಚೇತನ್ ಡಿಸೋಜಾ ಸಾಹಸವಿರಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner