ಮಗಳಿಗಾಗಿ ಮತ್ತೆ ನಿರ್ದೇಶಕನ ಕ್ಯಾಪ್‌ ತೊಟ್ಟ ಅರ್ಜುನ್‌ ಸರ್ಜಾ, ಸೀತಾ ಪಯಣ ಚಿತ್ರಕ್ಕೆ 'ಹಂಟರ್‌' ಹೀರೋ
ಕನ್ನಡ ಸುದ್ದಿ  /  ಮನರಂಜನೆ  /  ಮಗಳಿಗಾಗಿ ಮತ್ತೆ ನಿರ್ದೇಶಕನ ಕ್ಯಾಪ್‌ ತೊಟ್ಟ ಅರ್ಜುನ್‌ ಸರ್ಜಾ, ಸೀತಾ ಪಯಣ ಚಿತ್ರಕ್ಕೆ 'ಹಂಟರ್‌' ಹೀರೋ

ಮಗಳಿಗಾಗಿ ಮತ್ತೆ ನಿರ್ದೇಶಕನ ಕ್ಯಾಪ್‌ ತೊಟ್ಟ ಅರ್ಜುನ್‌ ಸರ್ಜಾ, ಸೀತಾ ಪಯಣ ಚಿತ್ರಕ್ಕೆ 'ಹಂಟರ್‌' ಹೀರೋ

ಅರ್ಜುನ್‌ ಸರ್ಜಾ ತನ್ನ ನಿರ್ದೇಶನದ ಮುಂದಿನ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಕನ್ನಡದಲ್ಲಿ ಸೀತಾಪಯಣ ಹೆಸರಲ್ಲಿ, ತೆಲುಗು, ತಮಿಳಿನಲ್ಲಿ ಸೀತಾಪಯಣಂ ಹೆಸರಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಮಗಳು ಐಶ್ವರ್ಯಾ ನಾಯಕಿ, ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ನಾಯಕರಾಗಿದ್ದಾರೆ.

ಮಗಳಿಗಾಗಿ ಮತ್ತೆ ನಿರ್ದೇಶಕನ ಕ್ಯಾಪ್‌ ತೊಟ್ಟ ಅರ್ಜುನ್‌ ಸರ್ಜಾ; ಸೀತಾ ಪಯಣ ಚಿತ್ರದ ವಿವರ
ಮಗಳಿಗಾಗಿ ಮತ್ತೆ ನಿರ್ದೇಶಕನ ಕ್ಯಾಪ್‌ ತೊಟ್ಟ ಅರ್ಜುನ್‌ ಸರ್ಜಾ; ಸೀತಾ ಪಯಣ ಚಿತ್ರದ ವಿವರ

ನಟ-ಸಿನಿಮಾ ನಿರ್ದೇಶಕ ಅರ್ಜುನ್‌ ಸರ್ಜಾ ಕಥೆಬರೆದ ಸಿನಿಮಾ "ಮಾರ್ಟಿನ್‌" ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇದೀಗ ಇವರು ನಿರ್ದೇಶಕನ ಕ್ಯಾಪ್‌ ತೊಡುತ್ತಿದ್ದಾರೆ. ಈ ಬಾರಿ ತನ್ನ ಮಗಳು ಐಶ್ವರ್ಯಾ ನಾಯಕಿಯಾಗಿರುವ "ಸೀತಾ ಪಯಣಮ್" (ಕನ್ನಡದಲ್ಲಿ ಸೀತಾ ಪಯಣ) ಚಿತ್ರದ ಕುರಿತು ಘೋಷಿಸಿದ್ದಾರೆ. ಇದು ಇವರ ಅರ್ಜುನ್‌ ಎಂಬ ಹೋಮ್‌ ಪ್ರೊಡಕ್ಷನ್‌ನಲ್ಲೇ ತಯಾರಾಗಲಿದೆ. ಅಂದಹಾಗೆ, ಈ ಚಿತ್ರಕ್ಕೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ನಾಯಕ ನಟರಾಗಿ ಆಯ್ಕೆಯಾಗಿದ್ದಾರೆ.

ಈ ಸಿನಿಮಾ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಈ ಚಿತ್ರ ಸೀತಾ ಪಯಣ ಎಂದಿರಲಿದೆ. ತಮಿಳು, ತೆಲುಗಿನಲ್ಲಿ ಸೀತಾ ಪಯಣಮ್‌ ಎಂದು ಇರಲಿದೆ.

ಸೀತಾ ಪಯಣ ಚಿತ್ರವು ಭಾವನಾತ್ಮಕ ಪ್ರೇಮಕಥೆ ಹೊಂದಿರುವ ಸೂಚನೆಯಿದೆ. ಅರ್ಜುನ್‌ ಸರ್ಜಾ ಅಧಿಕೃತವಾಗಿ ನಾಯಕ, ನಾಯಕಿ ಮತ್ತು ಇತರೆ ಕಲಾವಿದರ ಮಾಹಿತಿ ನೀಡಿಲ್ಲ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಚಿತ್ರಕ್ಕೆ ನಿರಂಜನ್‌ ಸುಧೀಂದ್ರ ನಾಯಕ ಎಂದು ಸುದ್ದಿ ಹರಿದಾಡಿದೆ. ಇವರಿಗೆ ನಾಯಕಿಯಾಗಿ ಅರ್ಜುನ್‌ ಮಗಳು ಐಶ್ವರ್ಯಾ ನಟಿಸಲಿದ್ದಾರೆ.

ಶೂಟಿಂಗ್‌ ಮುಕ್ತಾಯ, ಶೀಘ್ರದಲ್ಲಿ ಬಿಡುಗಡೆ?

ಕೆಲವು ಮೂಲಗಳ ಪ್ರಕಾರ ಸೀತಾ ಪಯಣ ಸಿನಿಮಾದ ನಿರ್ಮಾಣ ಈಗಾಗಲೇ ಮುಗಿದಿದೆ. ಶೀಘ್ರದಲ್ಲಿ ಚಿತ್ರದ ಪ್ರಚಾರವನ್ನು ಚಿತ್ರತಂಡ ಆರಂಭಿಸಲಿದೆ. ಚಿತ್ರ ಬಿಡುಗಡೆಯ ಕುರಿತು ಅರ್ಜುನ್‌ ಸರ್ಜಾ ಅವರು ಸದ್ಯದಲ್ಲಿಯೇ ತಿಳಿಸುವ ಸೂಚನೆಯಿದೆ. ಈ ಸಿನಿಮಾ ಕೇವಲ ಲವ್‌ಸ್ಟೋರಿಯದ್ದಲ್ಲ ಇದರಲ್ಲಿ ಕಾಮಿಡಿ, ಸಾಹಸವೂ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಅರ್ಜುನ್‌ ಸರ್ಜಾ ಪ್ರೇಮಬರಹ ಎಂಬ ಕನ್ನಡ-ತಮಿಳು ಭಾಷೆಯ ಚಿತ್ರಕ್ಕೆ ಆಕ್ಷನ್‌ಕಟ್‌ ಹೇಳಿದ್ದರು. ಅಲ್ಲಿ ಚಂದನ್‌ ಜತೆ ಐಶ್ವರ್ಯಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಇವರಿಬ್ಬರು ಜರ್ನಲಿಸ್ಟ್‌ ಪಾತ್ರದಲ್ಲಿ ಮಿಂಚಿದ್ದರು. ಅರ್ಜುನ್‌ ಸರ್ಜಾ ಅವರು ಜೈಹಿಂದ್‌ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ನಿರಂಜನ್‌ ಸುಧೀಂದ್ರ ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸೆಕೆಂಡ್‌ ಹಾಫ್‌, ನಮ್ಮ ಹುಡುಗರು ಚಿತ್ರಗಳ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಂಟರ್‌, ಸೂಪರ್‌ಸ್ಟಾರ್‌, ಸೀತಾಪಯಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Whats_app_banner