Sarigama Viji: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನ
ಕನ್ನಡ ಸುದ್ದಿ  /  ಮನರಂಜನೆ  /  Sarigama Viji: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನ

Sarigama Viji: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನ ಇಂದು (ಜನವರಿ 15) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಿಗಮ ವಿಜಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಹಿರಿಯ ನಟ ಸರಿಗಮ ವಿಜಿ ನಿಧನ
ಹಿರಿಯ ನಟ ಸರಿಗಮ ವಿಜಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಸರಿಗಮ ವಿಜಿ ನಿಧನರಾಗಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಸರಿಗಮ ವಿಜಿ ಯಶವಂತ ಪುರ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಜನವರಿ 15ರಂದು ಸರಿಗಮ ವಿಜಿ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಅವರು ಆಸ್ಪತ್ರೆಗೆ ಸೇರಿ ವಾರಗಳಾಗುತ್ತಾ ಬಂದಿತ್ತು. ಈ ಬಗ್ಗೆ ಅವರ ಮಗ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಸರಿಗಮ ವಿಜಿ ನಿಧನರಾಗಿದ್ದಾರೆ. ಕನ್ನಡದ ಹಾಸ್ಯ ನಟ ಹಾಗೂ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಸರಿಗಮ ವಿಜಿ ಕೊನೆಯುಸಿರೆಳೆದಿದ್ದಾರೆ.

ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ತಮ್ಮ ಜನವರಿ 15ರ ಬೆಳಿಗ್ಗೆ 9:45ಕ್ಕೆ ನಿಧನರಾಗಿದ್ದಾರೆ. ತಮ್ಮ 76ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಸರಿಗಮ ವಿಜಿ ಬದುಕಿನ ದಾರಿ

ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ ಇವರ ಮುಖ ಎಲ್ಲರಿಗೂ ಚಿರಪರಿಚಿತ. ಇವರ ಕಾಮಿಡಿಯನ್ನು ನೋಡಿ ನಕ್ಕವರು ಹಲವರಿದ್ದಾರೆ. ಹಳೆ ಕಾಲದ ಸಿನಿಮಾದಿಂದ ಹಿಡಿದು ಈ ಕಾಲದವರೆಗೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಜನರ ಮನ ಗೆದ್ದಿದ್ದರು.

ಹಲವು ಸಿನಿಮಾಗಳಲ್ಲಿ ನಟ ಸರಿಗಮ ವಿಜಿ ಅಭಿನಯಿಸಿದ್ದು, ತಮ್ಮ ಹಾಸ್ಯದಿಂದ ಎಲ್ಲರನ್ನೂ ನಕ್ಕು ನಲಿಸಿದ್ದಾರೆ. 1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಮಾಡುವ ಮೂಲಕ ಸಿನಿ ಲೋಕಕ್ಕೆ ಇವರು ಕಾಲಿಟ್ಟಿದ್ದರು. ತದ ನಂತರ ಅವಕಾಶಗಳು ಇವರನ್ನು ಹುಡುಕಿ ಬಂತು. ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಇನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಇವರು ನಟನೆ ಮಾಡಿದರು. ಇದರಿಂದಾಗಿ ಸಾಕಷ್ಟು ಜನರಿಗೆ ಇವರು ಪರಿಚಿತರು.

269 ಸಿನಿಮಾಗಳಲ್ಲಿ ಅಭಿನಯಿಸಿದ ನಟ ವಿಜಿ
ಹಿರಿತೆರೆಯಲ್ಲಿ ಮಾತ್ರವಲ್ಲ ಕೆಲ ಧಾರಾವಾಹಿಗಳಲ್ಲೂ ಇವರು ಅಭಿನಯಿಸಿದ್ದರು. ಇವರು 269 ಸಿನಿಮಾಗಳಲ್ಲಿ ನಟಿಸಿದ್ದರು, 80ಕ್ಕೂ ಹೆಚ್ಚು ಸಿನಿಮಾದಲ್ಲಿ ಇವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕನ್ನಡ ಚಿತ್ರರಂಗ ಹಾಗೂ ಮನರಂಜನಾ ವಿಭಾಗಗಕ್ಕೆ ಇವರು ನೀಡಿದ ಕೊಡುಗೆ ಅಪಾರ. ತೆರೆಯ ಮೇಲೆ ಮಾತ್ರವಲ್ಲದೇ ತೆರೆಯ ಹಿಂದೂ ಇವರು ಸಾಕಷ್ಟು ಕೊಡುಗೆ ನೀಡಿದ್ದಾರೆ.

Whats_app_banner