Dhananjay Wedding: ಅದ್ಧೂರಿ ಮದುವೆ ಬಳಿಕ ಧನಂಜಯ್‌- ಧನ್ಯತಾ ಜೋಡಿ ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕನ್ನಡ ಸುದ್ದಿ  /  ಮನರಂಜನೆ  /  Dhananjay Wedding: ಅದ್ಧೂರಿ ಮದುವೆ ಬಳಿಕ ಧನಂಜಯ್‌- ಧನ್ಯತಾ ಜೋಡಿ ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು

Dhananjay Wedding: ಅದ್ಧೂರಿ ಮದುವೆ ಬಳಿಕ ಧನಂಜಯ್‌- ಧನ್ಯತಾ ಜೋಡಿ ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು

ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ ಮುಗಿಸಿಕೊಂಡ ನಟ ಧನಂಜಯ್‌ ಮತ್ತು ಧನ್ಯತಾ ಜೋಡಿ, ಮದುವೆ ಬಳಿಕ ಮೊದಲ ಸಲ ಮಾಧ್ಯಮದ ಜತೆ ಮಾತನಾಡಿದ್ದಾರೆ. ಹರಸಿ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಮದುವೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಧನಂಜಯ್‌- ಧನ್ಯತಾ ಜೋಡಿ
ಮದುವೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಧನಂಜಯ್‌- ಧನ್ಯತಾ ಜೋಡಿ

Dhananjay Wedding: ಸ್ಯಾಂಡಲ್‌ವುಡ್‌ ನಟ ಧನಂಜಯ್‌- ಧನ್ಯತಾ ಜೋಡಿ ಇಂದು (ಫೆ. 16) ಮೈಸೂರಿನ ವಸ್ತು ಸಂಗ್ರಹಾಲಯದ ಆವರಣದಲ್ಲಿ ಗ್ರ್ಯಾಂಡ್‌ ಆಗಿಯೇ ಮದುವೆಯಾಗಿದ್ದಾರೆ. ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಜತೆಗೆ ರಾಜಕೀಯ ಗಣ್ಯರು ಮತ್ತು ಮಠಾಧೀಶರು ಆಗಮಿಸಿ ನವ ಜೋಡಿಗೆ ಶುಭಕೋರಿದ್ದಾರೆ. ಮದುವೆ ಬಳಿಕ ಮಾಧ್ಯಮದ ಮುಂದೆ ಬಂದ ನವಜೋಡಿ ಧನಂಜಯ್‌ ಮತ್ತು ಧನ್ಯತಾ, ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಚಿತ್ರರಂಗ ನನ್ನ ಕುಟುಂಬ ಎಂದ ಧನಂಜಯ್

ಮದುವೆ ನಾವಂದುಕೊಂಡಿದ್ದಕ್ಕಿಂತ ಚನ್ನಾಗಿ ಆಗಿದೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದ ಧನಂಜಯ್‌, "ಕನ್ನಡ ಚಿತ್ರರಂಗ ನನ್ನ ಕುಟುಂಬವಿದ್ದ ಹಾಗೆ. ನನ್ನ ಪ್ರಾರಂಭದ ದಿನಗಳಿಂದಲೂ ನನ್ನ ಕೈ ಹಿಡಿದಿದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇದೆ. ನಾನು ಕೂಡ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.

"ನಾವು ಎಲ್ಲವನ್ನೂ ಗೌರವಿಸಬೇಕು. ಆಸ್ತಿಕತೆ ನಾಸ್ತಿಕತೆ ಬಗ್ಗೆಯೂ ಇದೆ. ನನ್ನ ಬಾಲ್ಯದ ದಿನಗಳಿಂದಲೂ ನಮ್ಮೂರ ಜಾತ್ರೇಲಿ ಭಾಗಿಯಾಗಿದ್ದೇನೆ. ಇದೆಲ್ಲವೂ ನಮ್ಮೂರಲ್ಲಿ ನಡೆಯುತ್ತಿರುವ ಜಾತ್ರೆಯ ಬಗ್ಗೆ ತಿಳಿಸುತ್ತದೆ. ವಿಜ್ಞಾನವು ಬೇಕು, ನಂಬಿಕೆಯೂ ಬೇಕು. ನನ್ನ ಹೆಂಡತಿ ವಿಜ್ಞಾನದಲ್ಲಿದ್ದಾರೆ. ನಮ್ಮ ತಾಯಿ ಆಸ್ಪತ್ರೆಯ ಒಳಕ್ಕೆ ಹೋಗುವ ಮುನ್ನ ದೇವರಿಗೆ ಕೈ ಮುಗಿಯುತ್ತಾರೆ. ನನ್ನ ತಾಯಿಯ ನಂಬಿಕೆಯನ್ನು ನಾನು ಗೌರವಿಸಬೇಕು" ಎಂದಿದ್ದಾರೆ ಧನಂಜಯ್.

"ಮದುವೆ ಬಳಿಕ ಸ್ವಲ್ಪ ವಿರಾಮ ಇದ್ದೇ ಇರುತ್ತದೆ. ನಂತರ ಅವರವರು ಅವರ ವೃತ್ತಿ ಮಾಡ್ತಾರೆ. ನಾನು ಚಿತ್ರ ರಂಗದಲ್ಲಿ ಭಾಗಿಯಾಗುತ್ತೇನೆ. ಧನ್ಯ ಅವರ ವೈದ್ಯ ವೃತ್ತಿಯಲ್ಲಿ ಮುಂದುವರಿಯುತ್ತಾರೆ ಎಂದು ಮದುವೆಯಾದ ಬಳಿಕ ನಟ ಡಾಲಿ ಧನಂಜಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಧನ್ಯತಾ ಹೇಳುವುದೇನು?

ಇನ್ನು ಮದುವೆ ಬಳಿಕ ಮಾತನಾಡಿದ ಧನ್ಯತಾ, ಅಭಿಮಾನಿಗಳ ಪ್ರೀತಿಗೆ ಮಾತೇ ಬರುತ್ತಿಲ್ಲ. ಅಭಿಮಾನಿಗಳ ಪ್ರೀತಿ ಕಂಡು ನಾನು ತುಂಬಾ ಭಾವುಕವಾದೆ. ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಕುಟುಂಬ ಅವರ ಕುಟುಂಬ ಎರಡೂ ಒಂದೆ. ಇಬ್ಬರು ತುಂಬಾ ಅನ್ಯೋನ್ಯತೆಯಿಂದ ಇರುತ್ತೇವೆ. ಎಲ್ಲವೂ ಚನ್ನಾಗಿ ಆಗಿದೆ" ಎಂದಿದ್ದಾರೆ ಧನ್ಯತಾ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner