ದರ್ಶನ್ ಈಗಾಗಲೇ ಸತ್ತೋದ, ಶಿವರಾಜ್‌ಕುಮಾರ್ ಇನ್ನೇನು ಕೆಲವೇ ವರ್ಷ! ವೈರಲ್ ಆಯ್ತು ಮಡೆನೂರು ಮನು ಆಡಿಯೋ
ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‌ವೊಂದನ್ನು ಸಂತ್ರಸ್ತ ಮಹಿಳೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಆಡಿಯೋದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಬಗ್ಗೆ ಮನು ಬಾಯಿ ಬಿಚ್ಚಿದ್ದಾರೆ.

ಸಿನಿಮಾ ಬಿಡುಗಡೆಗೆ ಸನಿಹ ಇದೆ ಎನ್ನುತ್ತಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಎಕ್ಸ್‌ಪೋಸ್ ಆದವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು. ಅತ್ಯಾಚಾರ ಆರೋಪವೂ ಇದೇ ನಟನ ವಿರುದ್ಧ ಕೇಳಿಬಂತು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಜೈಲೂ ಸೇರಬೇಕಾಯಿತು ಮನು. ಇಷ್ಟೆಲ್ಲ ಏರಿಳಿತಗಳ ನಡುವೆಯೇ ಇದೀಗ ಅಚ್ಚರಿಯ ರೀತಿಯ ಮಡೆನೂರು ಮನು ಅವರದ್ದೇ ಎನ್ನಲಾಗಿರುವ ಆಡಿಯೋವೊಂದು ಹೊಸ ಸಂಚಲನಕ್ಕೆ ಕಾರಣವಾಗಿದೆ.
ಮದ್ಯ ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಮನು ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ದೂರಿನ ಅಡಿಯಲ್ಲಿ ಮನು ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದ ತನಿಖೆಯಲ್ಲಿರುವಾಗಲೇ, ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‌ವೊಂದನ್ನು ಸಂತ್ರಸ್ತ ಮಹಿಳೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಆಡಿಯೋದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಬಗ್ಗೆ ಮನು ಬಾಯಿ ಬಿಚ್ಚಿದ್ದಾರೆ.
ಏನಿದೆ ಆಡಿಯೋ ಕ್ಲಿಪ್‌ನಲ್ಲಿ..?
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಆಡಿಯೋ ಕ್ಲಿಪ್‌ನಲ್ಲಿ ಸ್ಯಾಂಡಲ್‌ವುಡ್‌ನ ಘಟಾನುಘಟಿ ನಟರ ಬಗ್ಗೆ ಮಡೆನೂರು ಮನು ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಆಡಿಯೋದಲ್ಲಿ "ಶಿವರಾಜ್‌ಕುಮಾರ್ ಇನ್ನೊಂದು ಆರು ವರ್ಷದಲ್ಲಿ ಸತ್ತೋಗ್ತಾನೆರೀ ನನ್ಗ ಗೊತ್ತು. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ. ದರ್ಶನ್ ಸತ್ತೋದ. ದರ್ಶನ್‌ಗೆ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತೆ. ಆದರೆ ಸಿನಿಮಾ ಮಾಡಲ್ಲ. ಅವರ ಮೂರು ಜನರ ಮಧ್ಯೆ ಕಾಂಪಿಟೇಷನ್ ಕೊಡೋಕೆ ಬಂದಿರೋ ಗಂಡುಗಲಿ ರೀ ನಾನು" ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಅಷ್ಟಕ್ಕೂ ಈ ಆಡಿಯೋದಲ್ಲಿರುವುದು ಮಡೆನೂರು ಮನು ಅವರದ್ದೇ ಧ್ವನಿಯೇ? ಅಥವಾ ಯಾರಾದರೂ ಅವರ ಧ್ವನಿಯನ್ನು ನಕಲು ಮಾಡಿ ಈ ಆರೋಪ ಹೊರಿಸಿದ್ದಾರಾ? ಕುಡಿದ ಮತ್ತಿನಲ್ಲಿ ಅವರಾಡಿದ ಮಾತನ್ನು ಯಾರೋ ರೆಕಾರ್ಡ್ ಮಾಡಿ, ಇದೀಗ ಹರಿಬಿಡಲಾಗಿದೆಯೇ? ಇದ್ಯಾವುದಕ್ಕೂ ಸದ್ಯ ಸ್ಪಷ್ಟ ಉತ್ತರವಿಲ್ಲ. ಇದು ಮಡೆನೂರು ಮನು ಅವರದ್ದೇ ಧ್ವನಿ ಎಂಬುದಕ್ಕೂ ಉತ್ತರವಿಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮನು ವಿರುದ್ಧ ದರ್ಶನ್, ಶಿವಣ್ಣ, ಧ್ರುವ ಸರ್ಜಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಸಂತ್ರಸ್ತೆ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್..
ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‌ಅನ್ನು ಶೇರ್ ಮಾಡಿದ್ದೇ ತಡ, ಸಂತ್ರಸ್ತೆಯ ವಿರುದ್ಧ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. "ಈ ಆಡಿಯೋ ನೀನೇ ಮಾಡಿಸಿದ್ದು" ಎಂದು ಕೆಲವರು ಹೇಳಿದರೆ, ಇನ್ನು ಕೆಲವರು "ಇದು ಮನು ಅವರ ವಾಯ್ಸ್ ಅಲ್ಲ" ಎನ್ನುತ್ತಿದ್ದಾರೆ. "ಇದು ಪಕ್ಕಾ ಮಿಮಿಕ್ರಿ. ಇದು ಮನು ವಾಯ್ಸ್ ಅಲ್ಲ ಅನ್ಸುತ್ತೆ" ಎಂದರೆ, "ನಿನ್ನ ಜೀವನ ನೀನೇ ಹಾಳು ಮಾಡಿಕೊಂಡ್ಯಲ್ಲೋ ಮನು" ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.
ಮೇ 23ಕ್ಕೆ ಬಂದ ʻಕುಲದಲ್ಲಿ ಕೀಳ್ಯಾವುದೋʼ
ಇನ್ನು ಕಳೆದ ಎರಡು ದಿನಗಳ ಹಿಂದಷ್ಟೇ ʻಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ತೆರೆಗೆ ಬಂದಿದೆ. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾವನ್ನು ಕೆ ರಾಮ್ ನಾರಾಯಣ್ ನಿರ್ದೇಶನ ಮಾಡಿದ್ದಾರೆ. ಮಡೆನೂರು ಮನು ನಾಯಕನಾಗಿ ನಟಿಸಿದರೆ, ʻರಾಮಾಚಾರಿʼ ಸೀರಿಯಲ್ ಮೂಲಕ ಮನೆ ಮಾತಾದ ಮೌನಾ ಗುಡ್ಡೆಮನೆ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಚಿತ್ರಕ್ಕೆ ಕಥೆ ಬರೆದಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಗೂ ರಾಮ್ ನಾರಾಯಣ್ ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮನು ಛಾಯಾಗ್ರಹಣ, ದೀಪಕ್ ಸಂಕಲನ, ವಿನೋದ್, ಮಾಸ್ ಮಾದ, ನರಸಿಂಹ ಸಾಹಸ ನಿರ್ದೇಶನ ಹಾಗೂ ಅನಿಲ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.