Duniya Vijay: ದುನಿಯಾ ವಿಜಯ್‌ ಈ ನಿರ್ಧಾರಕ್ಕೆ ತಲೆಬಾಗ್ತಾರಾ ಅಭಿಮಾನಿಗಳು? ಹೀಗಿದೆ ನಟನ ವಿಶೇಷ ಮನವಿ
ಕನ್ನಡ ಸುದ್ದಿ  /  ಮನರಂಜನೆ  /  Duniya Vijay: ದುನಿಯಾ ವಿಜಯ್‌ ಈ ನಿರ್ಧಾರಕ್ಕೆ ತಲೆಬಾಗ್ತಾರಾ ಅಭಿಮಾನಿಗಳು? ಹೀಗಿದೆ ನಟನ ವಿಶೇಷ ಮನವಿ

Duniya Vijay: ದುನಿಯಾ ವಿಜಯ್‌ ಈ ನಿರ್ಧಾರಕ್ಕೆ ತಲೆಬಾಗ್ತಾರಾ ಅಭಿಮಾನಿಗಳು? ಹೀಗಿದೆ ನಟನ ವಿಶೇಷ ಮನವಿ

Duniya Vijay: ಇನ್ನೇನು ಜನವರಿ 20ರಂದು 51ನೇ ವರ್ಷಕ್ಕೆ ‌ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಕಾಲಿಡಲಿದ್ದಾರೆ. ಆದರೆ, ಈ ಸಲದ ಸಂಭ್ರಮದಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಮುಂಚಿತವಾಗಿಯೇ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು, ವಿಶೇಷ ಮನವಿ ಮಾಡಿದ್ದಾರೆ.

ಅಭಿಮಾನಿಗಳಿಗೆ ಮನವಿ ಮಾಡಿದ ದುನಿಯಾ ವಿಜಯ್
ಅಭಿಮಾನಿಗಳಿಗೆ ಮನವಿ ಮಾಡಿದ ದುನಿಯಾ ವಿಜಯ್

Duniya Vijay Birthday: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌, ಭೀಮ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸಲಗ ಮತ್ತು ಭೀಮ ಎರಡೂ ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳುವ ಮೂಲಕ ಯಶಸ್ವಿ ನಟ ಮಾತ್ರವಲ್ಲದೆ, ನಿರ್ದೇಶಕನಾಗಿಯೂ ಸೈ ಎನಿಸಿಕೊಂಡರು ದುನಿಯಾ ವಿಜಯ್.‌ ಇದೀಗ ಇದೇ ನಟ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಇನ್ನೇನು ಜನವರಿ 20ರಂದು 51ನೇ ವರ್ಷಕ್ಕೆ ವಿಜಯ್‌ ಕುಮಾರ್‌ ಕಾಲಿಡಲಿದ್ದಾರೆ. ಆದರೆ, ಈ ಸಂಭ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಮುಂಚಿತವಾಗಿಯೇ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಬರ್ತ್‌ಡೇ ಎಂದರೆ ಅಭಿಮಾನಿಗಳಿಗೂ ಹಬ್ಬ. ಇತ್ತ ಅನ್ನ ಹಾಕಿದ ಅಭಿಮಾನಿಗಳ ಜತೆ ಬರ್ತ್‌ಡೇ ಆಚರಣೆ ಮಾಡಿಕೊಳ್ಳಬೇಕು ಎಂಬುದು ಕಲಾವಿದರ ಆಸೆಯೂ ಹೌದು. ಆದರೆ, ಇದೇ ಬರ್ತ್‌ಡೇ ನೆಪದಲ್ಲಿ ಇತ್ತೀಚೆಗಷ್ಟೇ ಒಂದಷ್ಟು ಅವಘಡಗಳಾದ ಉದಾಹರಣೆಗಳಿವೆ. ಕಳೆದ ವರ್ಷ ನಟ ಯಶ್‌ ಬರ್ತ್‌ಡೇ ಸಮಯದಲ್ಲಿ ಅಭಿಮಾನಿಯೊಬ್ಬ ಪ್ರಾಣ ಕಳೆದುಕೊಂಡಿದ್ದ. ಇದರಿಂದ ಎಚ್ಚೆತ್ತ ಕೆಲವರು ಬರ್ತ್‌ಡೇ ಆಚರಣೆಗೆ ಬ್ರೇಕ್‌ ಹಾಕಿದ್ದರು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಹ ಜನ್ಮದಿನದ ಆಚರಣೆಯಿಂದ ಹಿಂದೆ ಸರಿದಿದ್ದರು. ಈಗ ಅದೇ ಕೆಲಸವನ್ನು ದುನಿಯಾ ವಿಜಯ್ ಮುಂದುವರಿಸಿದ್ದಾರೆ.

ಬರ್ತ್‌ಡೇಗೆ VK29 ಫಸ್ಟ್‌ ಲುಕ್‌

ನಟ ದುನಿಯಾ ವಿಜಯ್‌ ಪ್ರತಿ ವರ್ಷ ತಮ್ಮ ಬರ್ತ್‌ಡೇಯನ್ನು ಅಪ್ಪ ಅಮ್ಮನ ಸಮಾಧಿ ಬಳಿ ಆಚರಿಸಿಕೊಳ್ಳುತ್ತಾರೆ. ಕಳೆದ ವರ್ಷ ತಮ್ಮ ಅಭಿಮಾನಿಗಳ ಜತೆಗೆ ಆಚರಣೆ ಮಾಡಿಕೊಂಡಿದ್ದ ವಿಜಯ್‌, ಈ ಸಲ ಸಿನಿಮಾ ಶೂಟಿಂಗ್‌ ನಿಮಿತ್ತ ಬರ್ತ್‌ಡೇ ಆಚರಣೆಯಿಂದ ದೂರ ಉಳಿದಿದ್ದಾರೆ. ಈ ಸಂಬಂಧ ಪೋಸ್ಟ್‌ ಹಂಚಿಕೊಂಡ ವಿಜಯ್‌, "ನನ್ನ ಹುಟ್ಟುಹಬ್ಬದ ದಿನದಂದು ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿರುವ VK29 ಚಿತ್ರೀಕರಣದಲ್ಲಿರುತ್ತೇನೆ.‌ ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ VK 29 ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ" ಎಂದಿದ್ದಾರೆ.

ನನ್ನ ಪ್ರೀತಿಯ ಅಭಿಮಾನಿಗಳೇ....

ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ ,ಊರಿನ ಹಬ್ಬವನ್ನಾಗಿ ನೀವುಗಳು ಅಂದರೆ ನನ್ನ ಅಭಿಮಾನಿಗಳು ಆಚರಣೆ ಮಾಡ್ತಾ ಇದ್ರಿ. ಈ ಬಾರಿಯೂ ನಿಮ್ಮ ಜತೆ ನಾನು ಹುಟ್ಟು ಹಬ್ಬವನ್ನು ಆಚರಿಸಬೇಕು ಎಂಬ ಆಸೆ ಇತ್ತು ಆದರೆ ಕೆಲಸ ಎಂಬ ಜವಬ್ದಾರಿ ನನ್ನ ಬೆನ್ನೆರಿದೆ. ತಾವೆಲ್ಲರೂ ನಾನು ಮಾಡುವ ಕೆಲಸಕ್ಕೆ ನನ್ನ ಜತೆ ನಿಂತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೀರ. ಪ್ರತಿ ಬಾರಿಯಂತೆ ಈ ಬಾರಿ ನಾನು ಹುಟ್ಟುಹಬ್ಬದ ದಿನ ನನ್ನ ತಾಯಿ, ತಂದೆ ಸಮಾಧಿ ಬಳಿ ಸಿಗುವುದಿಲ್ಲ.ಅಂದು ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿರುವ VK29 ಚಿತ್ರೀಕರಣದಲ್ಲಿರುತ್ತೇನೆ.‌ ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ VK 29 ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ.

ವಿಶೇಷ ಮನವಿ: ಶನಿವಾರ ಭಾನುವಾರ ನಾನೂ ಊರಲ್ಲಿ ಇರುವುದಿಲ್ಲ.. ದಯವಿಟ್ಟು ಯಾರೂ ಕೂಡ ಮನೆ ಬಳಿ ಬಂದು ಕಾಯಬೇಡಿ. ಧನ್ಯವಾದಗಳು

ಹಿಟ್‌ ನಿರ್ದೇಶಕನ ಜತೆ ವಿಜಿ ಸಿನಿಮಾ

ಈಗಾಗಲೇ ಸ್ಯಾಂಡಲ್‌ವುಡ್‌ ನಟ ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್‌ಮನ್ ಸಿನಿಮಾ ಶರಣ್ ಜತೆಗಿನ ಗುರುಶಿಷ್ಯರು ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಜಡೇಶ್‌ ಹಂಪಿ, ಕಾಟೇರ್‌ ಚಿತ್ರಕ್ಕೆ ಅದ್ಭುತ ಕಥೆ ಒದಗಿಸಿದ್ದರು. ಅದಾದ ಮೇಲೆ ಈಗ ದುನಿಯಾ ವಿಜಯ್‌ಗೆ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಎಂಬ ಟ್ಯಾಗ್‌ಲೈನ್‌ ಮೂಲಕ ಫಸ್ಟ್‌ ಪೋಸ್ಟರ್‌ ಈ ಹಿಂದೆ ಬಿಡುಗಡೆ ಆಗಿತ್ತು. ಈಗ ಇದೇ ಚಿತ್ರದ ಫಸ್ಟ್‌ ಲುಕ್‌ ಆಗಮನಕ್ಕೆ ದಿನಗಣನೆ ಆರಂಭವಾಗಿದೆ.

Whats_app_banner