Krishnam Pranaya Sakhi TRP: ಚಿತ್ರಮಂದಿರ, ಒಟಿಟಿ ಬಳಿಕ ಟಿವಿಯಲ್ಲೂ ಕೃಷ್ಣಂ ಪ್ರಣಯ ಸಖಿ ಕಮಾಲ್; ಟಿಆರ್‌ಪಿಯಲ್ಲಿ ಗಣೇಶ್‌ ಸಿನಿಮಾ ಮುಂದಡಿ
ಕನ್ನಡ ಸುದ್ದಿ  /  ಮನರಂಜನೆ  /  Krishnam Pranaya Sakhi Trp: ಚಿತ್ರಮಂದಿರ, ಒಟಿಟಿ ಬಳಿಕ ಟಿವಿಯಲ್ಲೂ ಕೃಷ್ಣಂ ಪ್ರಣಯ ಸಖಿ ಕಮಾಲ್; ಟಿಆರ್‌ಪಿಯಲ್ಲಿ ಗಣೇಶ್‌ ಸಿನಿಮಾ ಮುಂದಡಿ

Krishnam Pranaya Sakhi TRP: ಚಿತ್ರಮಂದಿರ, ಒಟಿಟಿ ಬಳಿಕ ಟಿವಿಯಲ್ಲೂ ಕೃಷ್ಣಂ ಪ್ರಣಯ ಸಖಿ ಕಮಾಲ್; ಟಿಆರ್‌ಪಿಯಲ್ಲಿ ಗಣೇಶ್‌ ಸಿನಿಮಾ ಮುಂದಡಿ

Krishnam Pranaya Sakhi TRP: ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಶತದಿನೋತ್ಸವ ಆಚರಿಸಿಕೊಂಡ ಕೃಷ್ಣಂ ಪ್ರಣಯ ಸಖಿ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಆಗಿತ್ತು. ಈಗ ಇದೇ ಚಿತ್ರಕ್ಕೆ ಅಂದು ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ.

ಕಿರುತೆರೆಯಲ್ಲಿ ಪ್ರಸಾರವಾದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಳ್ಳೆಯ ಟಿಆರ್‌ಪಿ ನಂಬರ್‌ ಪಡೆದುಕೊಂಡಿದೆ.
ಕಿರುತೆರೆಯಲ್ಲಿ ಪ್ರಸಾರವಾದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಳ್ಳೆಯ ಟಿಆರ್‌ಪಿ ನಂಬರ್‌ ಪಡೆದುಕೊಂಡಿದೆ.

Krishnam Pranaya Sakhi TRP: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿದ, ಕಳೆದ ವರ್ಷದ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟಿಗೆ ಸೇರಿದ ಕೃಷ್ಣಂ ಪ್ರಣಯ ಸಖಿ ಸಿನಿಮಾ, ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡಿದೆ. ಕಲೆಕ್ಷನ್‌ ವಿಚಾರದಲ್ಲಿಯೂ ಒಳ್ಳೆಯ ಗಳಿಕೆ ಕಂಡ ಈ ಸಿನಿಮಾ, ನವೆಂಬರ್‌ ಅಂತ್ಯಕ್ಕೆ ಒಟಿಟಿ ಅಂಗಳ ತಲುಪಿತ್ತು. ಸುದೀರ್ಘ 107 ದಿನಗಳ ಬಳಿಕವೇ ಈ ಸಿನಿಮಾ ಸನ್‌ ನೆಕ್ಸ್ಟ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಿತ್ತು. ಅಲ್ಲಿಂದ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಕಿರುತೆರೆಯಲ್ಲಿಯೂ ಈ ಸಿನಿಮಾ ಪ್ರಸಾರ ಕಂಡು, ಟಿಆರ್‌ಪಿಯಲ್ಲಿಯೂ ಒಳ್ಳೆಯ ನಂಬರ್‌ ಪಡೆದಿದೆ.

ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕೃಷ್ಣಂ ಪ್ರಣಯ ಸಖಿ ಸಿನಿಮಾ, ನೋಡುಗರಿಂದ ಪಾಸಿಟಿವ್‌ ಪ್ರತಿಕ್ರಿಯೆ ಪಡೆದುಕೊಂಡು, ವಿಮರ್ಶೆ ದೃಷ್ಟಿಯಿಂದಲೂ ಮೆಚ್ಚುಗೆ ಪಡೆದಿತ್ತು. ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದು, ಗೋಲ್ಡನ್‌ ಸ್ಟಾರ್‌ ಗಣೇಶ್‌ಗೂ ಈ ಸಿನಿಮಾ ಯಶಸ್ಸು ತಂದುಕೊಟ್ಟಿದ್ದು ಒಂದೆಡೆಯಾದರೆ, ನಿರ್ದೇಶಕ ಶ್ರೀನಿವಾಸ್‌ ರಾಜು ಸಹ ಈ ಸಿನಿಮಾ ಮೂಲಕ ಗೆಲುವಿನ ನಗೆ ಬೀರಿದ್ದರು. ಈಗ ಇದೇ ಸಿನಿಮಾ ಚಿತ್ರಮಂದಿರದ ಬಳಿಕ ಒಟಿಟಿ, ಒಟಿಟಿ ಬಳಿಕ ಕನ್ನಡ ಕಿರುತೆರೆಯಲ್ಲಿಯೂ ಕಮಾಲ್‌ ಮಾಡಿದೆ.

ಕಿರುತೆರೆ ಪ್ರೇಕ್ಷಕರ ಮನಗೆದ್ದ ಫ್ಯಾಮಿಲಿ ಎಂಟರ್ಟೈನರ್‌

ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸಿರುವ ಈ ಕೃಷ್ಣಂ ಪ್ರಣಯ ಸಖಿ ಸಿನಿಮಾ, ಜನವರಿ 12ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉದಯ ವಾಹಿನಿಯನ್ನು ಸಂಜೆ 6 ಗಂಟೆಗೆ ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಆಗಿತ್ತು. ಅದರಂತೆ, ಈಗ ಎರಡನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಟಿಆರ್‌ಪಿಯಲ್ಲಿ ಒಳ್ಳೆಯ ನಂಬರ್‌ ಪಡೆದುಕೊಂಡಿದೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಈ ಸಿನಿಮಾ. 7.10 ಟಿಆರ್‌ಪಿ ಪಡೆದು ಹೊಸ ದಾಖಲೆ ಬರೆದಿದೆ ಕೃಷ್ಣಂ ಪ್ರಣಯ ಸಖಿ.

ಬಹುತಾರಾಗಣದ ಸಿನಿಮಾ

ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದ ಹಾಡಿನ ಮೂಲಕವೇ ಈ ಸಿನಿಮಾ ಹಿಟ್‌ ಪಟ್ಟ ಪಡೆದುಕೊಂಡಿದೆ. ವೆಂಕಟ್‌ ರಾಮ್‌ ಪ್ರಸಾದ್‌ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಸಂಕಲನ, ವಿಜ್‌ ಈಶ್ವರ್‌ ಸಂಭಾಷಣೆ, ಮೋಹನ್‌ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಶಶಿಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಶ್ರುತಿ ಸೇರಿ ಹಲವರು ನಟಿಸಿದ್ದಾರೆ.

Whats_app_banner