Anamadheya Ashok Kumar: ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದಲ್ಲಿ ಪತ್ರಕರ್ತನಾದ ನಟ ಕಿಶೋರ್ ಕುಮಾರ್
ಕನ್ನಡ ಸುದ್ದಿ  /  ಮನರಂಜನೆ  /  Anamadheya Ashok Kumar: ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದಲ್ಲಿ ಪತ್ರಕರ್ತನಾದ ನಟ ಕಿಶೋರ್ ಕುಮಾರ್

Anamadheya Ashok Kumar: ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದಲ್ಲಿ ಪತ್ರಕರ್ತನಾದ ನಟ ಕಿಶೋರ್ ಕುಮಾರ್

Anamadheya Ashok Kumar: ಬಹುಭಾಷಾ ನಟ ಕಿಶೋರ್‌ ಕುಮಾರ್‌ ಮತ್ತು ಹರ್ಷಿಲ್‌ ಕೌಶಿಕ್‌ ನಟಿಸಿರುವ ಅನಾಮಧೇಯ ಅಶೋಕ್‌ ಕುಮಾರ್‌ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಆಗಿದೆ. ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಬರಲಿರುವ ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ನಟ ಕಿಶೋರ್‌ ಕಾಣಿಸಿಕೊಂಡಿದ್ದಾರೆ.

‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದಲ್ಲಿ ಪತ್ರಕರ್ತನಾದ ನಟ ಕಿಶೋರ್ ಕುಮಾರ್
‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದಲ್ಲಿ ಪತ್ರಕರ್ತನಾದ ನಟ ಕಿಶೋರ್ ಕುಮಾರ್

Anamadheya Ashok Kumar: ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ಗುರುತಿಸಿಕೊಂಡ ಕೆಲವೇ ಕೆಲವು ಕಲಾವಿದರಲ್ಲಿ ಕನ್ನಡದ ಕಿಶೋರ್‌ ಕುಮಾರ್‌ ಸಹ ಒಬ್ಬರು. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಮತ್ತು ನಟನೆ ವಿಚಾರದಲ್ಲಿ ವಿಭಿನ್ನ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವ ಕಿಶೋರ್‌ ಕುಮಾರ್‌, ಈಗ ‘ಅನಾಮಧೇಯ ಅಶೋಕ್ ಕುಮಾರ್’ ಹೆಸರಿನ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಪತ್ರಕರ್ತನ ಪಾತ್ರ.

ಈ ಹಿಂದೆ ಆಚಾರ್ & ಕೋ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸಾಗರ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಕ್ತಾಯವಾಗಿದ್ದು, ಇನ್ನೇನು ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಇಂತಿಪ್ಪ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಿಂದ ಈಗ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಆಗಿದೆ.

ಪತ್ರಕರ್ತನ ಪಾತ್ರದಲ್ಲಿ ಕಿಶೋರ್‌ ಕುಮಾರ್

‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರಕ್ಕೆ ನಿರ್ದೇಶಕ ಸಾಗರ್ ಕುಮಾರ್ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನು ಬೆನ್ನಿ ಥಾಮಸ್ ಹಾಗೂ ಸಾಗರ್ ಕುಮಾರ್ ಬರೆದಿದ್ದಾರೆ. ಮೂಲತಃ ಐಟಿ ಉದ್ಯೋಗಿಯಾಗಿರುವ ಸಾಗರ್ ಕುಮಾರ್ ಅವರಿಗೆ‌ ಇದು ಚೊಚ್ಚಲ ನಿರ್ದೇಶನದ ಚಿತ್ರ. ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಹರ್ಷಿಲ್ ಕೌಶಿಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಕಾಂತರಾಜ್ ಕಡ್ಡಿಪುಡಿ, ಸುಧೀಂದ್ರನ್ ನಾಯರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರದ ತಮ್ಮ ಪಾತ್ರದ ಕುರಿತು ಕಿಶೋರ್ ಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ‌. "ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ವಿಭಿನ್ನವಾಗಿದೆ" ಎನ್ನುವ ನಟ ಹರ್ಷಿಲ್ ಕೌಶಿಕ್, ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಇನ್ನೆರಡು ಚಿತ್ರಗಳ ಚಿತ್ರೀಕರಣವೂ ನಡೆಯುತ್ತಿದೆ ಎಂದಿದ್ದಾರೆ ಕೌಶಿಕ್.‌

ನಿರ್ಮಾಣದಲ್ಲೂ ಪಾಲು

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅಜಾದ್ ಸಂಗೀತ ಸಂಯೋಜಿಸಿದ್ದಾರೆ. ಸುನೀಲ್ ಹೊನಳ್ಳಿ ಛಾಯಾಗ್ರಹಣ ಹಾಗೂ ಮತ್ತು ಕೆ. ಯೇಸು ಅವರ ಸಂಕಲನ ಬಹು ನಿರೀಕ್ಷಿತ ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರಕ್ಕಿದೆ. ಎಸ್‌ಕೆಎನ್ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಲಾ ಕುಮಾರ್ ಹಾಗೂ ರಮ್ಯ ಸಾಗರ್ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.