ಇವೆಲ್ಲ ಡೈವರ್ಷನ್‌ ಟೆಕ್ನಿಕ್‌ ಅಷ್ಟೇ, ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕೆ ಆಗಲ್ಲ! ನಟ ಕಿಶೋರ್‌
ಕನ್ನಡ ಸುದ್ದಿ  /  ಮನರಂಜನೆ  /  ಇವೆಲ್ಲ ಡೈವರ್ಷನ್‌ ಟೆಕ್ನಿಕ್‌ ಅಷ್ಟೇ, ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕೆ ಆಗಲ್ಲ! ನಟ ಕಿಶೋರ್‌

ಇವೆಲ್ಲ ಡೈವರ್ಷನ್‌ ಟೆಕ್ನಿಕ್‌ ಅಷ್ಟೇ, ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕೆ ಆಗಲ್ಲ! ನಟ ಕಿಶೋರ್‌

ಬಹುಭಾಷಾ ನಟ ಕಿಶೋರ್‌ ಕುಮಾರ್‌ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. 'ಈಗಿನ ಸರ್ಕಾರಗಳು ಸಂವಿಧಾನದಲ್ಲಿ ಬದಲಾವಣೆ ಮಾಡುತ್ತಿವೆಯೇ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

 ಸಂವಿಧಾನ ಬದಲಾವಣೆ ಅಸಾಧ್ಯ ಎಂದ ನಟ ಕಿಶೋರ್‌ ಕುಮಾರ್
ಸಂವಿಧಾನ ಬದಲಾವಣೆ ಅಸಾಧ್ಯ ಎಂದ ನಟ ಕಿಶೋರ್‌ ಕುಮಾರ್

Actor Kishore Kumar About Constitution: ನಟ ಕಿಶೋರ್‌ ಸಂವಿಧಾನದ ಬದಲಾವಣೆ ಯಾರಿಂದಲೂ ಸಾಧ್ಯ ಇಲ್ಲ ಎನ್ನುವ ಮೂಲಕ ಮೋದಿ ಸರ್ಕಾರದ ವಿರುದ್ಧ ಮತ್ತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಮುಂಬರುವ ಹೊಸ ಸಿನಿಮಾ, ‘ಅನಾಮಧೇಯ ಅಶೋಕಕುಮಾರ್‌’ ಚಿತ್ರದ ಸುದ್ದಿಗೋಷ್ಠಿಯ ಬಳಿಕ ಸಂದರ್ಶದಲ್ಲಿ ಮಾತನಾಡಿದ ಅವರು, ‘ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕೆ ಆಗಲ್ಲ' ಎಂದಿದ್ದಾರೆ. ಇಲ್ಲಿದೆ ಕಿಶೋರ್‌ ಅವರ ಪೂರ್ತಿ ಮಾತು.

ನಟ ಕಿಶೋರ್‌ ಹೇಳಿದ್ದೇನು?

"ಮನುವಾದವನ್ನು ಮೊದಲಿಂದಲೂ ಇವರು ಸಪೋರ್ಟ್‌ ಮಾಡಿಕೊಂಡೇ ಬಂದವರು. ಇದು ಎಲ್ಲಿಯವರೆಗೂ ಹೋಗುತ್ತೆ. ಹಿಂದೂ ರಾಷ್ಟ್ರ ಅಂತ ಮಾಡ್ತಾರೆ. ಮುಸ್ಲಿಮರು ಏನಾಗ್ತಾರೆ? ಅವರ ವಿರುದ್ಧ ಹೊಡೆದಾಡಿಕೊಂಡೇ ಬಿದ್ದಿರಬೇಕು. ಅದರಿಂದ ಯಾರಿಗಾದರೂ ಕೆಲಸ ಸಿಗುತ್ತಾ? ಕೆಲಸ ಸಿಗೋದು ಯಾರಿಗೆ ಎಂದರೆ, ಕೋಮು ದಂಗೆ ಮಾಡುವವರಿಗೆ, ಮಸೀದಿ ಮುಂದೆ ಡಿಜೆ ಮ್ಯೂಸಿಕ್‌ ಹಾಕಿಕೊಂಡು ಡಾನ್ಸ್‌ ಮಾಡುವಂಥವರಿಗೆ. ಒಬ್ಬರನ್ನೊಬ್ಬರು ಕೊಲ್ಲುವವರಿಗೆ. ಮಿಕ್ಕವರಿಗೆ ಏನು ಸಿಗುತ್ತೆ. ಇವರ ಬದಲಾವಣೆಯಿಂದ ಏನು ಒಳ್ಳೆಯದಾಗುತ್ತೆ. ಒಳ್ಳೆಯದಾಗುತ್ತೆ ಎಂದಾದರೆ, ಖಂಡಿತ ಮಾಡಬಹುದು" ಎಂದಿದ್ದಾರೆ.

ಇವ್ರಪ್ಪ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ..

"ಇವರು ಬರೀ ಹೇಳುವುದರಿಂದ ಏನೂ ಒಳ್ಳೆಯದು ಆಗಲ್ಲ. ಹೊಸ ಸಂವಿಧಾನ ತರ್ತೀವಿ ಅಂತಿದ್ದಾರೆ. ಹಾಗಾದರೆ ಮನುಸ್ಮೃತಿಯಲ್ಲಿ ಏನಿತ್ತು? ಅದು ಯಾರಿಗೂ ಗೊತ್ತಿಲ್ಲ. ಅವರಿಗೇ ಸುಮಾರು ಜನಕ್ಕೆ ಇದು ಗೊತ್ತಿಲ್ಲ. ಯುಸಿಜಿ ತಂದ್ರಲ್ಲ ಅದರ ಬಗ್ಗೆಯೇ ಅವರಿಲ್ಲಿಯೇ ಕೆಲವರಿಗೆ ಗೊತ್ತಿಲ್ಲ. ತಮಿಳಲ್ಲಿ ಬೋಚಾಂಡಿ ಕಾಟರ್‌ ಅನ್ನೋ ಮಾತಿದೆ. ಅಲ್ಲಿ ಏನೂ ಕಾಣ್ತಿರಲ್ಲ, ಆದರೂ ಏನೋ ಇದೆ ಏನೋ ಇದೆ ಅನ್ನೋ ಹಾಗೆ. ಅಲ್ಲಿ ಏನೂ ಇರಲ್ಲ. ಸುಮ್ಮನೆ ಇವೆಲ್ಲ ಡೈವರ್ಷನ್‌ ಟೆಕ್ನಿಕ್‌ ಅಷ್ಟೇ. ಇವ್ರಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡೋಕೆ ಸಾಧ್ಯವಿಲ್ಲ".

"ಭಾರತದ ಜನಗಳ ಪ್ರಜ್ಞೆ ಅಷ್ಟೊಂದು ಹಾಳಾಗಿಲ್ಲ. ಇವರು ಏನೇ ಮಾಡಿದರೂ ಅದು ಒಂದು ಸೀಮಿತ ವರ್ಗಕ್ಕೆ ಮಾತ್ರ ಇದೆ. ಯಾರು ತಮ್ಮನ್ನು ತಾವು ಮೇಲ್ವರ್ಗ ಅಂದುಕೊಂಡಿದ್ರೋ, ಆ ಮೇಲ್ವರ್ಗವೇ ನಮ್ಮ ಐಡೆಂಟಿಟಿ ಎಂದು ಬದುಕುವವರಿಗೆ ಮಾತ್ರ ಇವೆಲ್ಲ ನೇರವಾಗಿ ತಲುಪುತ್ತವೆ. ಮಿಕ್ಕಿದವರೆಲ್ಲ ಮ್ಯಾನಿಪುಲೇಟೆಡ್ ಅಷ್ಟೇ. ಅವರಿಗೆ ಯಾವಾಗ ಸತ್ಯ ಗೊತ್ತಾಗುತ್ತೋ ಆಗ ತಿರುಗಿ ಬೀಳ್ತಾರೆ. ಧರ್ಮ ಅಂದ್ರೆ ಏನು, ಅರ್ಧಮದ ವಿರುದ್ಧದ ಪದ ಅಲ್ವಾ. ಅಧರ್ಮ ಅಂದ್ರೆ ಏನು ಕೆಟ್ಟ ಕೆಲಸ. ಧರ್ಮ ಅಂದ್ರೆ ಒಳ್ಳೆಯ ಕೆಲಸ ಅಷ್ಟೇ. ಹಿಂದೂ ಮುಸ್ಲಿಂ..‌ ಯಾವುದೇ ಇರಲಿ ಧರ್ಮಾಂಧತೆ ಎಲ್ಲಿದ್ದರೂ ಡೇಂಜರ್" ಎಂಬುದು ಕಿಶೋರ್‌ ಮಾತು.

"ಇವರಿಗೂ ಮುಸ್ಲಿಂ ಆತಂಕವಾದಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲ. ಅವರೂ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುತ್ತಿದ್ದಾರೆ, ಇವರೂ ಅದನ್ನೇ ಮಾಡುತ್ತಿದ್ದಾರೆ. ಪ್ರಧಾನಿ ಇರಲಿ, ಸಿಎಂ ಆಗಿರಲಿ.. ಅವನು ಧರ್ಮದ ಆಧಾರದ ಮೇಲೆ ಜನರನ್ನು ಎರಡು ಭಾಗ ಮಾಡುತ್ತಿದ್ದಾನೆ ಎಂದರೆ, ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾನೆ ಎಂದರ್ಥ. ಆಗಾಗಿ ಅಂಥವರನ್ನು ಧಾರ್ಮಿಕ ಆತಂಕವಾದಿ ಎನ್ನಬಹುದು" ಎಂದು ಕಿಶೋರ್‌ ಹೇಳಿಕೆ ನೀಡಿದ್ದಾರೆ.

ಪ್ರಕಾಶ್‌ ರಾಜ್‌ ಮಾತಿಗೆ ಪ್ರತಿಕ್ರಿಯೆ

ಗಂಗೆಯಲ್ಲಿ ಮಿಂದೆದ್ದ ಪ್ರಕಾಶ್‌ ರಾಜ್‌ ಅವರ AI ಫೋಟೋವೊಂದು ಇತ್ತೀಚೆಗಷ್ಟೇ ವೈರಲ್‌ ಆಗಿತ್ತು. ಫೋಟೋ ಹಂಚಿಕೊಂಡ ಸಂಬರ್ಗಿ ವಿರುದ್ಧ ಪ್ರಕಾಶ್‌ ರಾಜ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಕಿಶೋರ್, ಗಂಗೆಯಲ್ಲಿ ಮುಳುಗಿದರೆ ಪಾಪ ಕಳೆದು ಹೋಗುತ್ತಾ? ಪಾಪ ಕರಗಬೇಕಾದರೆ ಮೊದಲು ಪಾಪ ಮಾಡಬಾರದು. ಪಾಪಿಗಳಿಗೆ ಪಾಪ ಗಂಗೆ ಏನ್ಮಾಡ್ತಾಳೆ. ಗಂಗೆ ಒಂದು ಜೀವನದಿ. ಜಲ, ಪ್ರಕೃತಿ.. ಒಂದು ಶಕ್ತಿ ಅದು. ಅದನ್ನೂ ನೀವು ಮ್ಯಾನಿಪ್ಯೂಲೆಟ್‌ ಮಾಡಿ, ಮಿಸ್‌ಯೂಸ್‌ ಮಾಡಿಕೊಂಡು ಕೂತುಕೊಂಡಿದ್ದರೆ, ಅದರಿಂದ ಏನೂ ಆಗಲ್ಲ.ಜನ ತುಂಬ ದಿನ ಮುಠ್ಠಾಳರಾಗಿ ಇರಲ್ಲ. ಅಧಿಕಾರ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ಇದೆಲ್ಲ ನಡೆಯುತ್ತೆ ಅಷ್ಟೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Whats_app_banner