ಕನ್ನಡ ಸುದ್ದಿ  /  Entertainment  /  Sandalwood Actor Loose Mada Yogi 50th Movie Title Issue Actor Shivarajkumar Reacts To Rosy Movie Title Controversy Mnk

Shivarajkumar: ಹೇ ಹೋಗಮ್ಮ, ರೋಜಿ ಶೀರ್ಷಿಕೆ ಇಟ್ಕೊಂಡೇ ಸಿನಿಮಾ ಮಾಡ್ಹೋಗು; ಯೋಗಿಗೆ ಸಿಕ್ತು ಶಿವಣ್ಣನ ಭರವಸೆ, ಆದ್ರೆ ತಂಡದ ನಿಲುವೇನು?

ಲೂಸ್‌ ಮಾದ ಯೋಗಿ ನಟಿಸಲಿರುವ 50ನೇ ಸಿನಿಮಾ ರೋಜಿ (Rosy) ಶೀರ್ಷಿಕೆ ವಿವಾದಕ್ಕೆ ಶಿವರಾಜ್‌ಕುಮಾರ್ (Shivarajkumar) ಎಂಟ್ರಿಯಾಗಿದ್ದಾರೆ. ಈ ಬೆಳವಣಿಗೆಯಿಂದ ಭರವಸೆಯೂ ಮೂಡಿದೆ ಎಂದಿದ್ದಾರೆ ಯೋಗಿ.

ಹೇ ಹೋಗಮ್ಮ, ರೋಜಿ ಶೀರ್ಷಿಕೆ ಇಟ್ಕೊಂಡೇ ಸಿನಿಮಾ ಮಾಡ್ಹೋಗು; ಯೋಗಿಗೆ ಶಿವಣ್ಣನ ಭರವಸೆ, ತಂಡದ ನಿಲುವೇನು?
ಹೇ ಹೋಗಮ್ಮ, ರೋಜಿ ಶೀರ್ಷಿಕೆ ಇಟ್ಕೊಂಡೇ ಸಿನಿಮಾ ಮಾಡ್ಹೋಗು; ಯೋಗಿಗೆ ಶಿವಣ್ಣನ ಭರವಸೆ, ತಂಡದ ನಿಲುವೇನು?

Shivarajkumar: ಸ್ಯಾಂಡಲ್‌ವುಡ್‌ ನಟ ಲೂಸ್‌ ಮಾದ ಯೋಗಿ (Loose Mada Yogesh) ಅವರ 50ನೇ ಸಿನಿಮಾ ‘ರೋಜಿ‘ (Rosy) ಶೀರ್ಷಿಕೆ ವಿಚಾರವಾಗಿ ಕಳೆದ ಮೂರು ದಿನಗಳಿಂದ ಸುದ್ದಿಯಲ್ಲಿದೆ. ಈಗಷ್ಟೇ ಮುಹೂರ್ತ ಮುಗಿಸಿಕೊಂಡಿರುವ ಈ ಸಿನಿಮಾಕ್ಕೆ ಶೀರ್ಷಿಕೆ ನಮ್ಮದು ಎಂದು ನಿರ್ಮಾಪಕ ರಮೇಶ್‌ ರೆಡ್ಡಿ (ramesh Reddy) ತಡೆಯಾಜ್ಞೆ ತಂದಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೂ ಆದೇಶ ಹೊರಬಿದ್ದಿತ್ತು. ಈಗ ಯೋಗಿಯ ಬೆಂಬಲಕ್ಕೆ ಶಿವರಾಜ್‌ಕುಮಾರ್‌ (Shivarajkumar) ನಿಂತಿದ್ದಾರೆ.

ಡಾಲಿ ಧನಂಜಯ್‌ ಆಗಮಿಸಿ ಯೋಗಿಯ ‘ರೋಜಿ‘ ಚಿತ್ರಕ್ಕೆ ಕ್ಲಾಪ್‌ ಮಾಡಿ ಆಲ್‌ ದಿ ಬೆಸ್ಟ್‌ ಹೇಳಿ ಹೋಗಿದ್ದರು. ಇತ್ತ ಸಿನಿಮಾ ಕೆಲಸಗಳಿಗೂ ತಂಡ ಚಾಲನೆ ನೀಡಿತ್ತು. ಹೀಗಿರುವಾಗಲೇ ಸೂರಜ್‌ ಪ್ರೊಡಕ್ಷನ್ಸ್‌ನ ರಮೇಶ್‌ ರೆಡ್ಡಿ, ಆ ಶೀರ್ಷಿಕೆ ಬಳಸಿಕೊಳ್ಳದಂತೆ ತಡೆ ತಂದಿದ್ದರು. ಇದೀಗ ಶಿವಣ್ಣ ಆ ಶೀರ್ಷಿಕೆ ಬಳಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಯೋಗಿ ಹೇಳಿಕೊಂಡಿದ್ದಾರೆ. ಇನ್ನೇನು ಆ ಸಿನಿಮಾ ತಂಡದ ನಿಲುವೇನು ಎಂಬುದಷ್ಟೇ ಅಧಿಕೃತವಾಗಬೇಕಿದೆ.

ಯೋಗಿಗೆ ಶಿವಣ್ಣ ಹೇಳಿದ್ದೇನು?

"ಶಿವಣ್ಣನನ್ನು ಭೇಟಿ ಮಾಡಿದ್ದೆ. ಇದು ನನ್ನ 50ನೇ ಸಿನಿಮಾ. ಟೈಟಲ್‌ ಸಮಸ್ಯೆ ಆಗಿದೆ. ನಿಮ್ಮಿಂದ ಸಹಾಯ ಬೇಕಿತ್ತು. ನಮಗೆ ಟೈಟಲ್‌ ಬಿಟ್ಟು ಕೊಡಿ ಎಂದೆ. ಈಗಾಗಲೇ ಶೀರ್ಷಿಕೆ ಪೋಸ್ಟರ್‌ ರಿಲೀಸ್‌ ಆಗಿದೆ. ಒಳ್ಳೆ ರೆಸ್ಪಾನ್ಸ್‌ ಸಿಕ್ಕಿದೆ ಎಂದೆ. ಒಂದೇ ಒಂದು ಕ್ಷಣ ಯೋಚಿಸದೇ, ಹೇ ಹೋಗಮ್ಮ, ಮಾಡ್ಕೋ ಹೋಗಿ, ನಾನು ಅವರ ಜೊತೆ ಮಾತಾಡ್ತಿನಿ ಎಂದರು. ಅದು ಅವರ ದೊಡ್ಡ ಗುಣ. ಹಾಗಾಗಿ ಇದೀಗ ನಾವು ಮುಂದುವರಿದ್ದೇವೆ. ಇದಕ್ಕೆ ತಂಡದ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನೋಡಬೇಕು" ಎಂದಿದ್ದಾರೆ.

ರೋಸಿ 45 ಶೀರ್ಷಿಕೆ ನಮ್ಮದು..

ಉಪ್ಪು ಹುಳಿ ಖಾರ, ಗಾಳಿಪಟ ಸೇರಿ ಚಂದನವನದಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ರಮೇಶ್‌ ರೆಡ್ಡಿ ಇದೀಗ ‘ರೋಸಿ 45‘ ಶೀರ್ಷಿಕೆ ನಮ್ಮದು ಎಂದು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಈ ಹಿಂದೆಯೇ ವಾಣಿಜ್ಯ ಮಂಡಳಿಯಲ್ಲಿ ಈ ಶೀರ್ಷಿಕೆಯನ್ನು ನೋಂದಾಯಿಸಲಾಗಿತ್ತು. ಇದೀಗ ವಾಣಿಜ್ಯ ಮಂಡಳಿಯೂ ರಮೇಶ್‌ ರೆಡ್ಡಿ ಅವರ ಬೆನ್ನಿಗೆ ನಿಂತಿದ್ದು, ಮೊದಲು ಶೀರ್ಷಿಕೆ ನೋಂದಾಯಿಸಿದವರಿಗೆ ಟೈಟಲ್‌ ಪಡೆಯುವ ಹಕ್ಕಿದೆ ಎಂದಿತ್ತು.

ಅರ್ಜುನ್‌ ಜನ್ಯ ನಿರ್ದೇಶಿಸಲಿರುವ ಸಿನಿಮಾ..

ಅಂದಹಾಗೆ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ರೋಸಿ 45 ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ನಿರ್ದೇಶನ ಮಾಡಲಿದ್ದಾರೆ. ಶಿವರಾಜ್‌ಕುಮಾರ್‌ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಲಿದ್ದಾರೆ. ಇನ್ನೇನು ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಇದೀಗ ಶೂನ್ಯ ನಿರ್ದೇಶನದಲ್ಲಿಯೂ ಅದೇ ಹೆಸರಿನ ಸಿನಿಮಾ ಸೆಟ್ಟೇರಿದ್ದು, ಈ ಕೂಡಲೇ ಶೀರ್ಷಿಕೆ ಕೈ ಬಿಡುವಂತೆ ಹೇಳಿದೆ. ಅಷ್ಟೇ ಅಲ್ಲ ಇನ್ನು‌ ಮುಂದೆ ಯಾರು ಕೂಡ ರೋಸಿ ಶೀರ್ಷಿಕೆ ಬಳಸುವ ಹಾಗಿಲ್ಲ. ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್‌ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ.

IPL_Entry_Point