ನಾವು ಕಲಾವಿದರಷ್ಟೇ, ದೇವರಲ್ಲ; ಜೈ ಡಿ ಬಾಸ್‌ ಎಂದು ಕೂಗಿದ ದರ್ಶನ್‌ ಅಭಿಮಾನಿಯ ವಿರುದ್ಧ ತಿರುಗಿ ಬಿದ್ದ ಪ್ರಥಮ್‌
ಕನ್ನಡ ಸುದ್ದಿ  /  ಮನರಂಜನೆ  /  ನಾವು ಕಲಾವಿದರಷ್ಟೇ, ದೇವರಲ್ಲ; ಜೈ ಡಿ ಬಾಸ್‌ ಎಂದು ಕೂಗಿದ ದರ್ಶನ್‌ ಅಭಿಮಾನಿಯ ವಿರುದ್ಧ ತಿರುಗಿ ಬಿದ್ದ ಪ್ರಥಮ್‌

ನಾವು ಕಲಾವಿದರಷ್ಟೇ, ದೇವರಲ್ಲ; ಜೈ ಡಿ ಬಾಸ್‌ ಎಂದು ಕೂಗಿದ ದರ್ಶನ್‌ ಅಭಿಮಾನಿಯ ವಿರುದ್ಧ ತಿರುಗಿ ಬಿದ್ದ ಪ್ರಥಮ್‌

ಮೈಸೂರಿನಲ್ಲಿ ಧನಂಜಯ್‌ ಆರತಕ್ಷತೆ ಸಂದರ್ಭದಲ್ಲಿ, ಮಾಧ್ಯಮಗಳ ಜತೆ ಮಾತನಾಡುವ ವೇಳೆ ನಟ ದರ್ಶನ್‌ ಅಭಿಮಾನಿ “ಜೈ ಡಿ ಬಾಸ್‌” ಎಂದಿದ್ದೇ ತಡ, ನಟ ಪ್ರಥಮ್‌ (Olle Hudga Pratham) ಕೊಂಚ ಗರಂ ಆಗಿ ಮಾತನಾಡಿದ್ದಾರೆ. ಇಲ್ಲಿ ಯಾರು ಯಾರಿಗೂ ಬಾಸ್‌ ಅಲ್ಲ ಎಂದಿದ್ದಾರೆ.

ನಾವು ಕಲಾವಿದರಷ್ಟೇ, ದೇವರಲ್ಲ; ಜೈ ಡಿ ಬಾಸ್‌ ಎಂದು ಕೂಗಿದ ದರ್ಶನ್‌ ಅಭಿಮಾನಿಯ ವಿರುದ್ಧ ತಿರುಗಿ ಬಿದ್ದ ಪ್ರಥಮ್‌
ನಾವು ಕಲಾವಿದರಷ್ಟೇ, ದೇವರಲ್ಲ; ಜೈ ಡಿ ಬಾಸ್‌ ಎಂದು ಕೂಗಿದ ದರ್ಶನ್‌ ಅಭಿಮಾನಿಯ ವಿರುದ್ಧ ತಿರುಗಿ ಬಿದ್ದ ಪ್ರಥಮ್‌

Actor Pratham on Darshan: ನಟ ದರ್ಶನ್‌ ಅವರ ಅಭಿಮಾನಿಗಳಿಗೂ, ನಟ ಪ್ರಥಮ್‌ಗೂ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸಣ್ಣಪುಟ್ಟ ವಾರ್‌ಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆ ದರ್ಶನ್‌ ಸಹಿತ ಅವರ ಅಭಿಮಾನಿಗಳ ಬಗ್ಗೆಯೂ ಪ್ರಥಮ್‌, ನೇರಾನೇರ ಮಾತನಾಡಿದ ಉದಾಹರಣೆಗಳೂ ಇವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌ ಆಗುತ್ತಿದ್ದಂತೆ, ಪ್ರಥಮ್‌ ನೀಡಿದ್ದ ಹೇಳಿಕೆ ದರ್ಶನ್‌ ಅಭಿಮಾನಿಗಳನ್ನು ಕೆರಳಿಸಿತ್ತು. ಪೊಲೀಸ್‌ ಠಾಣೆ ಮೆಟ್ಟಿಲೂ ಏರಿತ್ತು. ಇದೀಗ ಧನಂಜಯ್‌ ಮದುವೆ ಆರತಕ್ಷತೆಗೆ ಬಂದಾಗಲೂ ದರ್ಶನ್‌ ಅಭಿಮಾನಿಯನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ ಪ್ರಥಮ್.

ಅಷ್ಟಕ್ಕೂ ಆಗಿದ್ದೇನು? ಆರತಕ್ಷತೆ ಮುಗಿಸಿಕೊಂಡು ಮಾಧ್ಯಮಗಳ ಬಳಿ ಬಂದ ಒಳ್ಳೆ ಹುಡುಗ ಪ್ರಥಮ್‌, "ಜೈ ಡಿ ಬಾಸ್‌" ಎಂದು ಅಲ್ಲಿದ್ದ ದರ್ಶನ್‌ ಅಭಿಮಾನಿಯೊಬ್ಬರು ಘೋಷಣೆ ಕೂಗಿದ್ದಾರೆ. ಇಷ್ಟಕ್ಕೆ ಕೊಂಚ ಗರಂ ಆದ ಪ್ರಥಮ್‌, "ಅಣ್ಣ ನನಗೆ ನೀನು ಬಾಸ್‌, ನೋಡಿ ಅವನಿಗೆ ಮುಖ ತೋರಿಸೋಕು ಆಗ್ತಿಲ್ಲ. ಅವರ ಅಪ್ಪ ಇವನಿಗೆ ಬಾಸ್‌ ಆಗಬೇಕು. ಪಾಪ ಪೆದ್ದ ಕುಡಿದುಬಿಟ್ಟಿದ್ದಾನೆ. ನೀವೆಲ್ಲರೂ ಕನ್ನಡಿಗರು. ನನಗೆ ನೀವು ಬಾಸ್.‌ ನೀನು ನನಗೆ ಬಾಸ್‌ ಕಣೋ. ನೀನು ನೋಡಿದರೆ ನಾನು ನಟ. ನಿನಗೆ ನಿಮ್ಮ ಅಪ್ಪ ಅವ್ವ ಬಾಸ್‌ ಆಗಬೇಕು. ಇಲ್ಲಿ ಯಾವ ಮಗನಿಗೆ ನಿಮ್ಮ ಅಪ್ಪ ಅವ್ವ ಬಾಸ್‌ ಅಲ್ಲ ಬನ್ನಿ ಮುಂದೆ" ಎಂದು ಮಾತನಾಡಿದ್ದಾರೆ.

ಮುಂದುವರಿದು, "ಕರ್ನಾಟಕದಲ್ಲಿ ಕನ್ನಡ ಬಾಸ್.‌ ನೀವೆಲ್ಲ ಕನ್ನಡಿಗರಾಗಿದ್ದರೆ, ನೀವೆಲ್ಲರೂ ನನಗೆ ಬಾಸ್‌. ಕನ್ನಡಿಗರಲ್ಲದ ಬೆರೆಕೆಗಳಿದ್ದರೆ ನೀವ್ಯಾರೂ ನನಗೆ ಬಾಸ್‌ ಅಲ್ಲ. ಯಾರಿದ್ದೀರಾ ಬೆರೆಕೆಗಳಿಲ್ಲಿ? ಯಾರಿಲ್ಲ ತಾನೇ? ನೀವೆಲ್ಲರೂ ಕನ್ನಡಿಗರೂ ತಾನೇ? ಹಾಗಾದ್ರೆ ನೀವೆಲ್ಲರೂ ನನಗೆ ಬಾಸ್‌. ಕಲಾವಿದರು ಬಂದ್ರೆ, ಹಾಯ್‌ ಪ್ರಥಮ್‌ ಚೆನ್ನಾಗಿದ್ದೀರಾ ಅನ್ನಿ ಸಾಕು. ಪ್ರಥಮ್‌ನನ್ನೇ ದೇವರು ಮಾಡಬೇಡಿ. ನಾವೆಲ್ಲ ಸೊನ್ನೆಯಿಂದ ಬಂದಿರೋದು. ನೀವು ನಮ್ಮನ್ನ ತೆರೆಮೇಲೆ ನೋಡಿದ್ರೆ ಮಾತ್ರ ನಮಗೆ ಮರ್ಯಾದೆ. ನಿಮ್ಮಿಂದ ಅನ್ನ ತಿಂತೀವಿ. ಯಾವ ಸ್ಟಾರ್‌ನ್ನೂ ದೇವರು ಮಾಡಬೇಡಿ. ನಾವೆಲ್ಲರೂ ಸೊನ್ನೆ. ಇದನ್ನು ತಲೆಯಲ್ಲಿ ಇಟ್ಟುಕೊಳ್ಳಿ" ಎಂದಿದ್ದಾರೆ ಪ್ರಥಮ್.‌

ಮೈಸೂರಲ್ಲಿ ತಾರೆಯರ ಸಂಭ್ರಮ

ಧನಂಜಯ್-‌ ಧನ್ಯತಾ ಮದುವೆ ನಿಮಿತ್ತ ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ, ರಾಜಕೀಯ ವಲಯದ ಸಾಕಷ್ಟು ಆಪ್ತರು ಮೈಸೂರಿಗೆ ಆಗಮಿಸಿ ನವ ಜೋಡಿಗೆ ಶುಭ ಕೋರಿದ್ದಾರೆ. ಸರಿಸುಮಾರು 35 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ಸಾಧ್ಯತೆ ಇದೆ ಎಂದು ಈ ಹಿಂದೆ ಸುದ್ಧಿಗೋಷ್ಠಿಯಲ್ಲಿ ಧನಂಜಯ್ ಹೇಳಿದ್ದರು. ಅದರಂತೆ ಮೈಸೂರಿನ ಚಾಮುಂಡಿ ದೇವಸ್ಥಾನದ ಥೀಮ್‌ನಲ್ಲಿಯೇ ಮದುವೆ ಮಂಟಪ ಸಿದ್ಧಪಡಿಸಲಾಗಿದೆ. ವಿಶಾಲವಾದ ಮೈದಾನದಲ್ಲಿಯೇ ಸಾವಿರಾರು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಶನಿವಾರ ಅದ್ಧೂರಿಯಾಗಿ ಆರತಕ್ಷತೆ ನೆರವೇರಿದ್ದು, ಇಂದು (ಫೆ. 16) ವಿವಾಹ ಕಾರ್ಯ ನೆರವೇರಲಿದೆ.

ಇಂದು ದರ್ಶನ್‌ ಬರ್ತ್‌ಡೇ..

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಇಂದು (ಫೆ. 16) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದ ಬರ್ತ್‌ಡೇ ದಿನ ತಮ್ಮ ಅಭಿಮಾನಿಗಳ ಜತೆಗೆ ಆಚರಿಸಿಕೊಳ್ಳುವ ದರ್ಶನ್‌, ಈ ಸಲ ಬರ್ತ್‌ಡೇಗೆ ಬ್ರೇಕ್‌ ಹಾಕಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ವಿಡಿಯೋ ಪೋಸ್ಟ್‌ ಹಂಚಿಕೊಂಡಿದ್ದ ದರ್ಶನ್‌, “ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ” ಎಂದಿದ್ದರು. ಇತ್ತ ಬರ್ತ್‌ಡೇ ಪ್ರಯುಕ್ತ ಡೆವಿಲ್‌ ಸಿನಿಮಾದಿಂದ ಟೀಸರ್‌ ಬಿಡುಗಡೆ ಆಗಲಿದೆ.  

 

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner