Gajarama Movie: ರಾಜವರ್ಧನ್‌ ‘ಗಜರಾಮ’ ಚಿತ್ರದಲ್ಲಿ ಸಾರಾಯಿ ಶಾಂತಮ್ಮಳಾಗಿ ಕುಣಿದ ರಾಗಿಣಿ ದ್ವಿವೇದಿ
ಕನ್ನಡ ಸುದ್ದಿ  /  ಮನರಂಜನೆ  /  Gajarama Movie: ರಾಜವರ್ಧನ್‌ ‘ಗಜರಾಮ’ ಚಿತ್ರದಲ್ಲಿ ಸಾರಾಯಿ ಶಾಂತಮ್ಮಳಾಗಿ ಕುಣಿದ ರಾಗಿಣಿ ದ್ವಿವೇದಿ

Gajarama Movie: ರಾಜವರ್ಧನ್‌ ‘ಗಜರಾಮ’ ಚಿತ್ರದಲ್ಲಿ ಸಾರಾಯಿ ಶಾಂತಮ್ಮಳಾಗಿ ಕುಣಿದ ರಾಗಿಣಿ ದ್ವಿವೇದಿ

Gajarama Movie Song: ರಾಜವರ್ಧನ್‌ ನಟನೆಯ ಗಜರಾಮ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಸಾರಾಯಿ ಶಾಂತಮ್ಮ.. ಎಂದು ಶುರುವಾಗುವ ಈ ಹಾಡಿನಲ್ಲಿ ಶಾಂತಮ್ಮಳಾಗಿ ರಾಗಿಣಿ ದ್ವಿವೇದಿ ಕುಣಿದಿದ್ದಾರೆ.

ಗಜರಾಮ ಚಿತ್ರದ ಹಾಡು ಬಿಡುಗಡೆ
ಗಜರಾಮ ಚಿತ್ರದ ಹಾಡು ಬಿಡುಗಡೆ

Saaraayi Shaantamma Lyrical Song: ಸ್ಯಾಂಡಲ್‌ವುಡ್‌ ಕಂಡ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈಗಾಗಲೇ 'ಬಿಚ್ಚುಗತ್ತಿ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ತಮ್ಮ ಸಾಮರ್ಥ್ಯ ಎಂಥದ್ದು ಎಂಬುದನ್ನು ತೋರಿಸಿದ್ದಾರೆ. 'ಹಿರಣ್ಯ' ಅನ್ನೋ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಇದೇ ರಾಜವರ್ಧನ್‌ ಇದೀಗ, ಗಜರಾಮ ಸಿನಿಮಾವನ್ನು ಚಿತ್ರಮಂದಿರದಕ್ಕೆ ತರುವ ಉಮೇದಿನಲ್ಲಿದ್ದಾರೆ.

ಅಂದರೆ, ಟೈಟಲ್ ಹಾಗೂ ಒಂದಷ್ಟು ಝಲಕ್ ಮೂಲಕ ಕುತೂಹಲ ಹೆಚ್ಚಿಸಿರುವ ಗಜರಾಮ ಸಿನಿಮಾದ ಸ್ಪೆಷಲ್ ಹಾಡಿಂದು ಇದೀಗ ರಿಲೀಸ್ ಆಗಿದೆ. ಮೇಕಿಂಗ್ ಹಂತದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಸಾರಾಯಿ ಶಾಂತಮ್ಮ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

ಹಾಡಿನ ಬಗ್ಗೆ ರಾಜವರ್ಧನ್‌ ಮಾತು

ಹಾಡಿನ ಬಗ್ಗೆ ಮಾತನಾಡಿದ ರಾಜವರ್ಧನ್, ಈ ಹಾಡಿಗಾಗಿ ತುಂಬಾ ಕಾಯುತ್ತಿದ್ದೇವು. ವಿಡಿಯೋ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ. ಗಜರಾಮ ಸಿನಿಮಾ ಒಂದು ಕಡೆಯಾದರೆ, ಈ ಸಾಂಗ್ ಒಂದು ಕಡೆ. ಈ ಹಾಡಿಗೆ ಸಾಕಷ್ಟು ಖರ್ಚಾಗಿದೆ. ಸಾಮಾನ್ಯವಾಗಿ ಈ ರೀತಿ ಹಾಡನ್ನು ಮಾಡಲು ಕಷ್ಟ ಆಗುತ್ತದೆ. ಸಾಂಗ್ ತುಂಬಾ ಅದ್ಭುತವಾಗಿ ಬಂದಿದೆ. ಚಿನ್ಮಯಿ ಸರ್ ಒಳ್ಳೆ ಲಿರಿಕ್ಸ್ ಬರೆದುಕೊಟ್ಟರು. ಧನು ಮಾಸ್ಟರ್ ಅದ್ಭುತ ಕೊರಿಯೋಗ್ರಫಿ ಮಾಡಿದ್ದಾರೆ. ನಿರ್ದೇಶಕರು ಸಿನಿಮಾಗಾಗಿ ಸಾಕಷ್ಟು ದುಡಿದಿದ್ದಾರೆ" ಎಂದರು.

ನಟಿ ರಾಗಿಣಿ ಹೇಳುವುದೇನು?

ನಟಿ ರಾಗಿಣಿ ಮಾತನಾಡಿ, ಹಬ್ಬದ ದಿನ ಸಂಭ್ರಮ ಇರಬೇಕೆಂದು ತೀರ್ಮಾನ ಮಾಡಿದ್ದೇವೆ. ತುಂಬಾ ಖುಷಿಯಾಗುತ್ತಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಖುಷಿ ಇದೆ. 1 ವರ್ಷದಿಂದ ಈ ಚಿತ್ರದಲ್ಲಿ ಜರ್ನಿ ಮಾಡಿಕೊಂಡು ಬರುತ್ತಿದ್ದೇವೆ. ಮನೋಮೂರ್ತಿ ಸರ್ ಇಷ್ಟು ಒಳ್ಳೆ ಮ್ಯೂಸಿಕ್ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಈ ಹಾಡು ಕೇಳಿ ಎಲ್ಲರಿಗೂ ಒಂದೊಳ್ಳೆ ಪಾಸಿಟಿವ್ ಬಂದಿದೆ ಎಂದುಕೊಳ್ಳುತ್ತೇನೆ ಎಂದರು.

ಗಜರಾಮ ಸಿನಿಮಾದ ಸಾರಾಯಿ ಶಾಂತಮ್ಮ ಹಾಡಿಗೆ ಚಿನ್ಮಯ್ ಭಾವಿಕೆರೆ ಸಾಹಿತ್ಯ ಬರೆದಿದ್ದು, ಗಾಯಕಿ ಮಂಗ್ಲಿ ಹಾಗೂ ಕುನಾಲ್ ಗಾಂಜಾವಾಲಾ ಧ್ವನಿಯಾಗಿದ್ದಾರೆ. ಮನೋಮೂರ್ತಿ ರಾಕಿಂಗ್ ಮ್ಯೂಸಿಕ್, ರಾಜವರ್ಧನ್ ಹಾಗೂ ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಭರ್ಜರಿ ಕುಣಿತ ಹಾಡಿನ ತೂಕ ಹೆಚ್ಚಿಸಿದೆ. ಈ ಸಿನಿಮಾವನ್ನು ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ. ನಿರ್ದೇಶನ ಮಾಡಿದ್ದಾರೆ. ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ಗೆ ಜೋಡಿಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್‌ ನಟಿಸಿದರೆ, ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಡಿಸೆಂಬರ್‌ 27ಕ್ಕೆ ಸಿನಿಮಾ ಬಿಡುಗಡೆ

ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ. 'ಬಾಂಡ್ ರವಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ 'ಗಜರಾಮ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಡಿಸೆಂಬರ್ 27ಕ್ಕೆ ರಾಜಾದ್ಯಂತ ಗಜರಾಮ ಸಿನಿಮಾ ಬಿಡುಗಡೆಯಾಗಲಿದೆ.

Whats_app_banner