ಮತ್ತೊಂದು ಯಡವಟ್ಟು ಮಾಡಿಕೊಂಡಿತಾ ಟಾಕ್ಸಿಕ್‌ ಚಿತ್ರತಂಡ? ಯಶ್ ಚಿತ್ರದ ಪ್ರಮುಖ ದೃಶ್ಯವೇ ಲೀಕ್‌! ‌
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೊಂದು ಯಡವಟ್ಟು ಮಾಡಿಕೊಂಡಿತಾ ಟಾಕ್ಸಿಕ್‌ ಚಿತ್ರತಂಡ? ಯಶ್ ಚಿತ್ರದ ಪ್ರಮುಖ ದೃಶ್ಯವೇ ಲೀಕ್‌! ‌

ಮತ್ತೊಂದು ಯಡವಟ್ಟು ಮಾಡಿಕೊಂಡಿತಾ ಟಾಕ್ಸಿಕ್‌ ಚಿತ್ರತಂಡ? ಯಶ್ ಚಿತ್ರದ ಪ್ರಮುಖ ದೃಶ್ಯವೇ ಲೀಕ್‌! ‌

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ವಿಡಿಯೋ ತುಣುಕೊಂದು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿ ಸಂಚಲನ ಮೂಡಿಸಿದೆ. ಶೂಟಿಂಗ್‌ ವೇಳೆ ಎಷ್ಟೇ ಕಾಳಜಿವಹಿಸಿದರೂ, ಕಿಡಿಗೇಡಿಗಳ ಈ ಕೆಲಸ ಸದ್ಯ ಚಿತ್ರತಂಡಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.

ಟಾಕ್ಸಿಕ್‌ ಚಿತ್ರದ ದೃಶ್ಯ
ಟಾಕ್ಸಿಕ್‌ ಚಿತ್ರದ ದೃಶ್ಯ

Toxic Movie Leaked Video: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸದ್ಯ ದೊಡ್ಡ ಮಟ್ಟದಲ್ಲಿ ಹೈಪ್‌ ಗಿಟ್ಟಿಸಿಕೊಂಡಿರುವ ಸಿನಿಮಾ. ಶೀರ್ಷಿಕೆ ಘೋಷಣೆ ಆದ ಬಳಿಕ, ಆ ಸಿನಿಮಾ ಮೇಲಿನ ನಿರೀಕ್ಷೆ ಮಗದಷ್ಟು ಹೆಚ್ಚಾಗಿದೆ. ಈಗಾಗಲೇ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾ, ಒಂದಲ್ಲ ಒಂದು ರೀತಿ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಶೂಟಿಂಗ್‌ ಸೆಟ್‌ನಲ್ಲಿ ಅರಣ್ಯ ನಾಶ ಆರೋಪವೂ ಇದೇ ತಂಡದ ವಿರುದ್ಧ ಕೇಳಿಬಂದಿತ್ತು. ಇದೀಗ ಚಿತ್ರೀಕರಣದ ಸಂದರ್ಭದಲ್ಲಿನ ಸಣ್ಣ ವಿಡಿಯೋ ತುಣುಕೊಂದು ಲೀಕ್‌ ಆಗಿದೆ.

ಚಿತ್ರದ ಸಣ್ಣ ಸಣ್ಣ ವಿಡಿಯೋಗಳು, ಫೋಟೋಗಳು ಲೀಕ್‌ ಆಗದಂತೆ ಸಿನಿಮಾ ತಂಡಗಳು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸುತ್ತವೆ. ಕೆಲವು ಕಡೆಗಳಿಗೆ ಫೋನ್‌ಗಳನ್ನು ನಿಷೇಧಿಸಲಾಗುತ್ತದೆ. ಇಷ್ಟಿದ್ದರೂ, ಅದ್ಯಾವ ಮಾಯೆಯಿಂದಾದರೂ ದೃಶ್ಯಗಳು ಲೀಕ್‌ ಆದ ಸಾಕಷ್ಟು ಉದಾಹರಣಗಳಿವೆ. ಇದೀಗ ಅಂಥದ್ದೇ ತಲೆಬಿಸಿ ಟಾಕ್ಸಿಕ್‌ ಸಿನಿಮಾ ತಂಡಕ್ಕೂ ಎದುರಾಗಿದೆ. ಪೋಸ್ಟರ್‌ನಲ್ಲಿನ ಗೆಟಪ್‌ ಹೋಲುವ ವಿಡಿಯೋ ಸದ್ಯ ಲೀಕ್‌ ಆಗಿದೆ. ಆ ವಿಡಿಯೋದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬನ ಭೇಟಿಗೆ ಯಶ್‌ ವೈಟ್‌ ಸೂಟ್‌, ತಲೆಗೆ ಹ್ಯಾಟ್‌ ಹಾಕಿ ಎಂಟ್ರಿಕೊಟ್ಟಿದ್ದಾರೆ.

ಟಾಕ್ಸಿಕ್‌ ಕೇವಲ ಪ್ಯಾನ್‌ ಇಂಡಿಯನ್‌ ಸಿನಿಮಾವಲ್ಲ. ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ಮಾಪಕರು, ನಿರ್ದೇಶಕರು ಶ್ರಮಿಸುತ್ತಿದ್ದಾರೆ. ದೊಡ್ಡ ದೊಡ್ಡ ಸೆಟ್‌ ಹಾಕಿ ಸಿನಿಮಾ ಶೂಟಿಂಗ್‌ನಲ್ಲಿಯೂ ನಿರತರಾಗಿದ್ದಾರೆ. ಹೀಗಿರುವಾಗಲೇ ಇದೇ ಟಾಕ್ಸಿಕ್‌ ಸಿನಿಮಾದ ಪ್ರಮುಖ ದೃಶ್ಯವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಮೇಕಿಂಗ್‌ ವಿಡಿಯೋಗಳು ಲೀಕ್‌ ಆಗದಂತೆ, ಚಿತ್ರತಂಡ ಎಷ್ಟೇ ಜಾಗ್ರತೆ ವಹಿಸಿದರೂ, ಕಿಡಿಗೇಡಿಗಳು ಮಾತ್ರ  ಮೇಕರ್ಸ್‌ಗೆ ತಲೆಬಿಸಿಯಾಗಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಟಾಕ್ಸಿಕ್‌ ಸಿನಿಮಾ ಬಹುಕೋಟಿ ವೆಚ್ಚದಲ್ಲಿ, ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಮಲಯಾಳಿ ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಸ್ಟಾರ್‌ ಕಲಾವಿದರ ದಂಡು ಈ ಸಿನಿಮಾದಲ್ಲಿದೆ. ಮುಂಬೈನಲ್ಲಿಯೂ ಒಂದಷ್ಟು ಭಾಗದ ಶೂಟಿಂಗ್‌ ಮಾಡಿಕೊಂಡಿರುವ ಈ ಸಿನಿಮಾ, ಬೆಂಗಳೂರಿನ ಎಚ್‌ಎಂಟಿ ಪ್ಯಾಕ್ಟರಿಯಲ್ಲಿಯೂ ಬೃಹತ್‌ ಸೆಟ್‌ಗಳನ್ನು ನಿರ್ಮಾಣ ಮಾಡಿದೆ.

ಜನವರಿ 8ಕ್ಕೆ ಸಿಗಬಹುದಾ ಟಾಕ್ಸಿಕ್‌ ಅಪ್‌ಡೇಟ್‌?

ಜನವರಿ 8ರಂದು ನಟ ಯಶ್‌ ಅವರ ಬರ್ತ್‌ಡೇ. ಈ ಸಲದ ಹುಟ್ಟುಹಬ್ಬಕ್ಕೂ ಅಭಿಮಾನಿಗಳ ಜತೆಗೆ ಯಶ್ ಇರುತ್ತಿಲ್ಲ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರವರು. “ಈ ಸಲದ ಬರ್ತ್‌ಡೇಗೆ ನಾನು ಊರಿನಲ್ಲಿ ಇರುವುದಿಲ್ಲ. ಸಿನಿಮಾ ಶೂಟಿಂಗ್‌ ನಿಮಿತ್ತ ಹೊರಗಿರಲಿದ್ದೇನೆ” ಎಂದು ಪೋಸ್ಟ್‌ ಮಾಡಿದ್ದಾರೆ. ಸದ್ಯ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ನಲ್ಲಿ ಯಶ್‌ ಬಿಜಿಯಾಗಿದ್ದು, ಇದೇ ಸಿನಿಮಾದಿಂದ ಯಶ್‌ ಬರ್ತ್‌ಡೇಗೆ ವಿಶೇಷ ಗಿಫ್ಟ್‌ ಸಿಗಲಿದೆಯೇ ಕಾದು ನೋಡಬೇಕು. ಕಳೆದ ವರ್ಷದ ಬರ್ತ್‌ಡೇಗೂ ಒಂದು ತಿಂಗಳು ಮುನ್ನವೇ ಟಾಕ್ಸಿಕ್‌ ಸಿನಿಮಾದ ಶೀರ್ಷಿಕೆ ಘೋಷಣೆ ಆಗಿತ್ತು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner