ದಿ ಕಿಂಗ್‍ ಆಗಿ ಬಂದ ಶಿವರಾಜಕುಮಾರ್; ಮಗಳು ನಿವೇದಿತಾ ನಿರ್ಮಾಣದ ʻಫೈರ್ ಫ್ಲೈʼ ಚಿತ್ರದಲ್ಲೊಂದು ಅತಿಥಿ ಪಾತ್ರ
ಕನ್ನಡ ಸುದ್ದಿ  /  ಮನರಂಜನೆ  /  ದಿ ಕಿಂಗ್‍ ಆಗಿ ಬಂದ ಶಿವರಾಜಕುಮಾರ್; ಮಗಳು ನಿವೇದಿತಾ ನಿರ್ಮಾಣದ ʻಫೈರ್ ಫ್ಲೈʼ ಚಿತ್ರದಲ್ಲೊಂದು ಅತಿಥಿ ಪಾತ್ರ

ದಿ ಕಿಂಗ್‍ ಆಗಿ ಬಂದ ಶಿವರಾಜಕುಮಾರ್; ಮಗಳು ನಿವೇದಿತಾ ನಿರ್ಮಾಣದ ʻಫೈರ್ ಫ್ಲೈʼ ಚಿತ್ರದಲ್ಲೊಂದು ಅತಿಥಿ ಪಾತ್ರ

‘ಫೈರ್ ಫ್ಲೈ’ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವೀಸಸ್‍ ಸಂಸ್ಥೆಯಡಿ ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ ಧಾರಾವಾಹಿ ಮತ್ತು ವೆಬ್‍ ಸರಣಿಗಳನ್ನು ನಿರ್ಮಿಸಿದ್ದ ನಿವೇದಿತಾಗೆ ಇದು ಮೊದಲ ಚಿತ್ರ. ಈ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಿ ಕಿಂಗ್‍ ಆಗಿ ಬಂದ ಶಿವರಾಜಕುಮಾರ್; ʻಫೈರ್ ಫ್ಲೈʼ ಚಿತ್ರದಲ್ಲೊಂದು ಅತಿಥಿ ಪಾತ್ರ
ದಿ ಕಿಂಗ್‍ ಆಗಿ ಬಂದ ಶಿವರಾಜಕುಮಾರ್; ʻಫೈರ್ ಫ್ಲೈʼ ಚಿತ್ರದಲ್ಲೊಂದು ಅತಿಥಿ ಪಾತ್ರ

Shiva Rajkumar: ಮುಂದಿನ ವಾರ (ಏಪ್ರಿಲ್‍ 18) ಬಿಡುಗಡೆಯಾಗಲಿರುವ ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಚಿತ್ರದಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಅದರ ಮುಂದಿನ ವಾರ ಸಹ ಶಿವರಾಜಕುಮಾರ್ ಇನ್ನೊಂದು ಚಿತ್ರದ ಮೂಲಕ ಬರುತ್ತಿದ್ದಾರೆ. ಅದೇ ‘ಫೈರ್ ಫ್ಲೈ’.

‘ಫೈರ್ ಫ್ಲೈ’ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವೀಸಸ್‍ ಸಂಸ್ಥೆಯಡಿ ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ ಧಾರಾವಾಹಿ ಮತ್ತು ವೆಬ್‍ ಸರಣಿಗಳನ್ನು ನಿರ್ಮಿಸಿದ್ದ ನಿವೇದಿತಾಗೆ ಇದು ಮೊದಲ ಚಿತ್ರ. ಈ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವರಾಜಕುಮಾರ್ ಈ ಚಿತ್ರದಲ್ಲಿ ‘ದಿ ಕಿಂಗ್‍’ ಪಿಜ್ಜಾ ಡೆಲಿವರಿ ಮ್ಯಾನ್‍ ಆಗಿ ಕಾಣಿಸಿಕೊಂಡಿದ್ದು, ಕೈಯಲ್ಲಿ ಪಿಜ್ಜಾ ಬಾಕ್ಸ್ ಹಿಡಿದು ಸ್ಟೈಲಿಶ್‍ ಆಗಿ ಎಂಟ್ರಿ ಕೊಡುತ್ತಾರೆ. ಈ ಚಿತ್ರದಲ್ಲಿ ಅವರು ಎಷ್ಟು ಹೊತ್ತು ಇರುತ್ತಾರೆ? ಅವರ ಪಾತ್ರದ ಹೆಸರೇನು? ಚಿತ್ರಕ್ಕೆ ಯಾವ ರೀತಿ ಕೊಡುತ್ತಾರೆ? ಎಂಬ ವಿಷಯ ಸದ್ಯಕ್ಕೆ ಗೌಪ್ಯವಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಈ ಚಿತ್ರದ ಕುರಿತು ಕಳೆದ ವರ್ಷ ಮಾತನಾಡಿದ್ದ ಶಿವರಾಜಕುಮಾರ್,‍ ‘ಕಥೆ ಬಹಳ ಸರಳ ಮತ್ತು ವಿಭಿನ್ನವಾಗಿತ್ತು. ಪ್ರೇಕ್ಷಕರು ತಮ್ಮನ್ನು ತಾವು ನೋಡಿಕೊಳ್ಳಬಹುದು. ಪ್ರತಿಯೊಬ್ಬರಿಗೂ ಭರವಸೆ ತುಂಬುವ ಚಿತ್ರ. ನಿವೇದಿತಾ ತಾಂತ್ರಿಕವಾಗಿ ಚಿತ್ರದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾಳೆ. ಹಣಕ್ಕಾಗಿ ಅವರು ಚಿತ್ರ ಮಾಡಿಲ್ಲ. ಆಕೆಗೆ ಒಳ್ಳೆಯ ಟೇಸ್ಟ್ ಇದ್ದು, ಮುಂದೆ ಒಳ್ಳೆಯ ಚಿತ್ರಗಳನ್ನು ಮಾಡುತ್ತಾಳೆ ಎಂಬ ಭರವಸೆ ಇದೆ’ ಎಂದು ಹೇಳಿದ್ದರು.

‘ಫೈರ್‌ ಪ್ಲೈ’ ಚಿತ್ರವನ್ನು ವಂಶಿ ನಿರ್ದೇಶಿಸುವುದರ ಜೊತೆಗೆ, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ವಂಶಿ ಜೊತೆಗೆ ರಚನಾ ಇಂದರ್, ಸುಧಾರಾಣಿ. ಅಚ್ಯುತ್‍ ಕುಮಾರ್, ಶೀತಲ್‍ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ ಹಾಗೂ ರಘು ನಿಡುವಳ್ಳಿ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner