Tanisha Kuppanda Marriage: ತನಿಷಾ ಕುಪ್ಪಂಡ ಮದುವೆ ಯಾವಾಗ? ಫ್ಯಾನ್ಸ್ ಪದೇಪದೇ ಕೇಳೋ ಪ್ರಶ್ನೆಗೆ ಉತ್ತರಿಸಿದ್ರು ನೋಡಿ ಕೋಣ ನಟಿ
Tanisha Kuppanda Marriage: ಕನ್ನಡ ಸಿನಿಮಾ ನಟಿ, ಬಿಗ್‌ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿ ತನಿಷಾ ಕುಪ್ಪಂಡ ಅವರು ಅಭಿಮಾನಿಗಳು ಪದೇಪದೇ ಕೇಳುವ ಪ್ರಶ್ನೆಗಳಿಗೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರಿಸಿದ್ದಾರೆ. ವಿಶೇಷವಾಗಿ ತನಿಷಾ ಕುಪ್ಪಂಡ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

Tanisha Kuppanda Marriage: ಬಿಗ್‌ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿ ತನಿಷಾ ಕುಪ್ಪಂಡ ಅವರು ಅಭಿಮಾನಿಗಳ ವಿವಿಧ ಪ್ರಶ್ನೆಗಳಿಗೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರಿಸಿದ್ದಾರೆ. ವಿಶೇಷವಾಗಿ ತನ್ನ ಮದುವೆಗೆ ಸಂಬಂಧಪಟ್ಟ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಭಿಮಾನಿಗಳು ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಕನ್ನಡ ನಟಿ ಉತ್ತರಿಸಿದ್ದಾರೆ. ಹೆಚ್ಚು ಜನರು ಮತ್ತೆಮತ್ತೆ ಕೇಳುವ ಪ್ರಶ್ನೆಗಳಿಗೆ ತನ್ನ ಚಾನೆಲ್‌ನಲ್ಲಿ ಉತ್ತರಿಸಿದ್ದಾರೆ.
ಅಭಿಮಾನಿ ಪ್ರಶ್ನೆ: ನಿಮ್ಮನ್ನು ಯಾವಾಗ ಭೇಟಿಯಾಗಬಹುದು?
ಎಲ್ಲರನ್ನೂ ಭೇಟಿಯಾಗಲು ಕಷ್ಟವಾಗಬಹುದು. ನನ್ನನ್ನು ಕುಪ್ಪಂಡ ಸ್ಟೋರ್‌ನಲ್ಲಿ ಭೇಟಿಯಾಗಬಹುದು. ಅಲ್ಲಿ ನಾನು ಬಹುತೇಕ ಇರುವೆ. ನಾನು ಯಾರನ್ನೂ ನೇರವಾಗಿ ಭೇಟಿಯಾಗುವುದಿಲ್ಲ. ನಿಮಗೆ ಯಾರಾದರೂ ಮ್ಯೂಚುಯಲ್ ಇದ್ರೆ ಅವರ ಮೂಲಕ ಭೇಟಿಯಾಗಬಹುದು. ಯಾವುದಾದರೂ ಕಾರ್ಯಕ್ರಮಗಳಲ್ಲಿ ಭೇಟಿಯಾಗಬಹುದು. ಶೂಂಟಿಂಗ್ ಸಮಯದಲ್ಲಿಯೂ ಭೇಟಿಯಾದರೆ ಮಾತನಾಡುವೆ.
ತನಿಷಾ ಕುಪ್ಪಂಡ ಮದುವೆ ಯಾವಾಗ?
ನನ್ನನ್ನು ಬಹುತೇಕ ಕಡೆಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆ "ಅಕ್ಕಾ ನಿಮ್ಮ ಮದುವೆ ಯಾವಾಗ?" ಈ ಪ್ರಶ್ನೆಗೂ ಉತ್ತರಿಸುವೆ. ಮೊದಲಿಗೆ ನೀವು ನನಗೆ ಒಳ್ಳೆ ಹುಡುಗನ ಹುಡುಕಿಕೊಡಿ. ಆಮೇಲೆ ನೋಡುವ ಎಂದು ತನಿಷಾ ಕುಪ್ಪಂಡ ತಮಾಷೆ ಮಾಡಿದ್ದಾರೆ. "ಮದುವೆ ಬಗ್ಗೆ ನನಗೆ ಅವಸರವಿಲ್ಲ. ಅಂದರೆ, ಈಗಲೇ ಆಗಿಬಿಡಬೇಕು. ನಾಳೆಯೇ ಆಗಿಬಿಡಬೇಕು ಎಂದಿಲ್ಲ. ಸಮಯ ಬಂದಾಗ ಎಲ್ಲವೂ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ದುಡ್ಡಿನ ಹಿಂದೆ ಯಾವ ರೀತಿ ಹೋಗಬಾರದೋ ಅದೇ ರೀತಿ ಮದುವೆ ಹಿಂದೆಯೂ ಹೋಗಬಾರದು. ಏಕೆಂದರೆ ಮದುವೆ ದೂರ ಸರಿಯಬಹುದು. ನನ್ನ ಅಪ್ಪ ಅಮ್ಮನೂ ಕೇಳ್ತಾ ಇರ್ತಾರೆ. ಕರಿಯರ್ ಚೆನ್ನಾಗಿ ಹೋಗ್ತಾ ಇದೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಅಂದುಕೊಂಡಿರುವ ಹೆಣ್ಣುಮಗಳು ನಾನು. ಅದಕ್ಕೆ ಬೇಕಾದ ಪ್ರಯತ್ನ ಮಾಡುತ್ತಿರುವೆ. ನೋಡುವ... ಸಮಯ ಬಂದಾಗ ಮದುವೆ ಆಗುತ್ತದೆ. ಆಗ ನೋಡೋಣ" ಎಂದು ತನ್ನ ಮದುವೆ ಪ್ರಶ್ನೆಗೆ ತನಿಷಾ ಕುಪ್ಪಂಡ ಜಾಣತನದಿಂದ ಉತ್ತರಿಸಿದ್ದಾರೆ.
ತನಿಷಾ ಕುಪ್ಪಂಡ ನಟಿಸಿರುವ ಕೋಣ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ?
ಕೋಣವು ನಮ್ಮ ಕುಪ್ಪಂಡ ಪೊಡಕ್ಷನ್‌ನಿಂದ ಬರುತ್ತಿರುವ ಸಿನಿಮಾ. ನಾವು ಸಾಕಷ್ಟು ಕಷ್ಟಪಟ್ಟು, ಸಾಕಷ್ಟು ಹಣ ಹಾಕಿ ಮಾಡುತ್ತಿರುವ ಸಿನಿಮಾ. ನಮ್ಮ ಕೋಮಲ್ ಸರ್ ಸಿಕ್ಕಾಪಟ್ಟೆ ಚೆನ್ನಾಗಿ ಮಾಡಿದ್ದಾರೆ. ನಾನು ಕೂಡ ಚೆನ್ನಾಗಿ ಮಾಡಿದ್ದೇನೆ ಎಂದುಕೊಂಡಿದ್ದೇನೆ. ಸದ್ಯ ರಿಲೀಸ್ ಡೇಟ್ ನಿಗದಿಪಡಿಸಿಲ್ಲ. ಸದ್ಯ ಶೂಟಿಂಗ್ ಕಂಪ್ಲಿಟ್ ಆಗಿದೆ. ಎಡಿಟಿಂಗ್, ಡಬ್ಬಿಂಗ್‌ನಂತಹ ಕೆಲಸಗಳು ಬಾಕಿ ಇವೆ. ತುಂಬಾ ಪ್ರೊಸೆಸ್ ಬಾಕಿ ಇವೆ. ನಾನು ಆದಷ್ಟು ಬೇಗ ಡೇಟ್ ಅನೌನ್ಸ್ ಮಾಡ್ತಿನಿ. ಅಂದುಕೊಂಡಂತೆ ಎಲ್ಲವೂ ಆದ್ರೆ ಜೂನ್ ಅಥವಾ ಜುಲೈನಲ್ಲಿ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಬಹುದು.
ಬಿಗ್‌ಬಾಸ್‌ನಿಂದ ಹೊರಬಂದಾಗ ಎಷ್ಟು ತೂಕ ಕಳೆದುಕೊಂಡಿರಿ?
ಅಭಿಮಾನಿಯೊಬ್ಬರ ಈ ಪ್ರಶ್ನೆಗೂ ತನಿಷಾ ಉತ್ತರಿಸಿದ್ದಾರೆ. "ನಾನು ಬಿಗ್‌ಬಾಸ್‌ನಿಂದ ಹೊರಬಂದಾಗ ಎಂಟರಿಂದ ಒಂಬತ್ತು ಕೆಜಿ ತೂಕ ಕಳೆದುಕೊಂಡಿದ್ದೆ. ಕೊನೆಗೆ ಮನೆಯಿಂದ ಫುಡ್ ಬಂದ ಬಳಿಕ ಸ್ವಲ್ಪ ಸರಿಯಾದೆ. ಆಲ್‌ಮೋಸ್ಟ್ ಹತ್ತು ಕೆಜಿ ತೂಕ ಕಳೆದುಕೊಂಡಿರುವೆ" ಎಂದು ತನಿಷಾ ಕುಪ್ಪಂಡ ಉತ್ತರಿಸಿದ್ದಾರೆ.
