ಆರಂಭದಲ್ಲಿ ನಾನು ನಟಿಸಲು ಒಪ್ಪಿರಲಿಲ್ಲ... ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್‌ ಹೀಗಂದ್ರು
ಕನ್ನಡ ಸುದ್ದಿ  /  ಮನರಂಜನೆ  /  ಆರಂಭದಲ್ಲಿ ನಾನು ನಟಿಸಲು ಒಪ್ಪಿರಲಿಲ್ಲ... ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್‌ ಹೀಗಂದ್ರು

ಆರಂಭದಲ್ಲಿ ನಾನು ನಟಿಸಲು ಒಪ್ಪಿರಲಿಲ್ಲ... ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್‌ ಹೀಗಂದ್ರು

ಕನ್ನಡ ನಟಿ ಚೈತ್ರಾ ಜೆ ಆಚಾರ್‌ ಅವರು ಮಾರ್ಮನಿ ಸಿನಿಮಾದ ಶೂಟಿಂಗ್‌ ಜತೆಗೆ ತಮಿಳು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್‌ ಸಾಕಷ್ಟು ವಿವರ ನೀಡಿದ್ದಾರೆ. ಆರಂಭದಲ್ಲಿ ಇವರು ಈ ಸಿನಿಮಾದಲ್ಲಿ ನಟಿಸೋದಿಲ್ಲ ಎಂದಿದ್ರಂತೆ.

ಆರಂಭದಲ್ಲಿ ನಾನು ನಟಿಸಲು ಒಪ್ಪಿರಲಿಲ್ಲ... ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್‌ ಹೀಗಂದ್ರು
ಆರಂಭದಲ್ಲಿ ನಾನು ನಟಿಸಲು ಒಪ್ಪಿರಲಿಲ್ಲ... ಮಾರ್ನಮಿ ಸಿನಿಮಾದ ಕುರಿತು ಚೈತ್ರಾ ಜೆ ಆಚಾರ್‌ ಹೀಗಂದ್ರು

2024ರ ಬ್ಲಿಂಕ್‌ ಬಳಿಕ ನಟಿ ಚೈತ್ರಾ ಜೆ ಆಚಾರ್‌ ನಟನೆಯ ಯಾವುದೇ ಸಿನಿಮಾವು ಬಿಡುಗಡೆಯಾಗಿಲ್ಲ. ಆದರೆ, ಇವರು ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬಿಝಿಯಾಗಿದ್ದಾರೆ. ಚೈತ್ರಾ ನಟನೆಯ ಕೆಲವೊಂದು ಸಿನಿಮಾಗಳು ಶೀಘ್ರದಲ್ಲಿ ಬಿಡುಗಡೆಯಾಗಲಿವೆ. ತಮಿಳು ಚಿತ್ರರಂಗದಲ್ಲಿಯೂ ಚೈತ್ರಾ ಬಿಝಿಯಾಗಿದ್ದಾರೆ. ಜುಲೈ 4,2025ರಂದು ಸಿದ್ಧಾರ್ಥ್‌ ಜತೆಗೆ ನಟಿಸಿರುವ 3ಬಿಎಚ್‌ಕೆ ಸಿನಿಮಾ ರಿಲೀಸ್‌ ಆಗಲಿದೆ. ಈ ಸಿನಿಮಾದ ಮೂಲಕ ಅಧಿಕೃತವಾಗಿ ತಮಿಳಿಗೆ ಎಂಟ್ರಿ ನೀಡಲಿದ್ದಾರೆ. ಇದರೊಂದಿಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾವು ತಮಿಳಿಗೆ ಡಬ್‌ ಆಗಿ ರಿಲೀಸ್‌ ಆಗಲಿದೆ. ಇದರೊಂದಿಗೆ ಇನ್ನೊಂದು ತಮಿಳು ಸಿನಿಮಾ "ಮೈ ಲಾರ್ಡ್‌" ಕೂಡ ಬಿಡುಗಡೆಗೆ ಸಿದ್ಧವಾಗಿದೆ ಎಂದು ಒಟಿಟಿಪ್ಲೇ ಜತೆಗಿನ ಸಂದರ್ಶನದಲ್ಲಿ ಚೈತ್ರಾ ಜೆ ಆಚಾರ್‌ ಹೇಳಿದ್ದಾರೆ.

ಮಾರ್ನಮಿ ಸಿನಿಮಾದ ಅಪ್‌ಡೇಟ್‌

ಕರ್ನಾಟಕದಲ್ಲಿ ಕನ್ನಡದಲ್ಲಿ ಮಾರ್ನಮಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಿತ್ವಿಕ್‌ ಮಠದ್‌ ಜತೆ ನಟಿಸುತ್ತಿದ್ದಾರೆ. ಈ ನಟ ಅನುರೂಪ, ಗಿಣಿರಾಮ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. "ಮಾರ್ನಮಿಯಲ್ಲಿ ನಾನು ದೀಕ್ಷಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ರಿಷಿತ್‌ ಶೆಟ್ಟಿ ನಿರ್ದೇಶನದ ಸಿನಿಮಾ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಈ ಸಿನಿಮಾದ ನನ್ನ ಫಸ್ಟ್‌ ಲುಕ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಮಂಗಳೂರಿನವರು ದಸರಾಕ್ಕೆ ಮಾರ್ನಮಿ ಎಂದು ಹೇಳುತ್ತಾರೆ. ಇದರಲ್ಲಿ ಕರಾವಳಿಯ ಕಥೆ ಇರಲಿದೆ. ಗ್ಯಾಂಗ್‌ಸ್ಟಾರ್‌ ಸ್ಟೋರಿ ಇದೆ. ಇದರೊಂದಿಗೆ ಸಿನಿಮಾದ ನಡುವೆ ನವಿರಾದ ಪ್ರೇಮಕಥೆಯೂ ಇದೆ. ಈ ಪ್ರೇಮಕಥೆಯ ಸಂದರ್ಭದಲ್ಲಿ ನನ್ನ ಪಾತ್ರದ ಆಗಮನವಾಗುತ್ತದೆ" ಎಂದು ನಟಿ ಚೈತ್ರಾ ಜೆ ಆಚಾರ್‌ ಹೇಳಿದ್ದಾರೆ.

ಮಾರ್ನೆಮಿ ಸಿನಿಮಾದ ನಟ ರಿತ್ವಿಕ್‌ ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ಸೀರಿಯಲ್‌ ಮೂಲಕ ಫೇಮಸ್‌ ಎಂದು ಚೈತ್ರಾ ಅಭಿಪ್ರಾಯಪಟ್ಟಿದ್ದಾರೆ. "ಅವರು ಕಠಿಣ ಪರಿಶ್ರಮಿ. ಮಾರ್ನಮಿ ಸಿನಿಮಾದಲ್ಲಿ ಅವರ ನಟನೆಯಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ನನ್ನ ಪಾತ್ರವೂ ಇಂಟ್ರೆಸ್ಟಿಂಗ್‌ ಆಗಿದೆ. ದೀಕ್ಷಾಳ ಪಾತ್ರವನ್ನು ಅತ್ಯಂತ ಸುಂದರವಾಗಿ ಬರೆಯಲಾಗಿದೆ" ಎಂದು ಚೈತ್ರಾ ಹೇಳಿದ್ದಾರೆ.

ಆರಂಭದಲ್ಲಿ ನಾನು ಈ ಸಿನಿಮಾದಲ್ಲಿ ನಟಿಸಲು ಒಪ್ಪಿರಲಿಲ್ಲ ಎಂಬ ವಿವರವನ್ನೂ ಅವರು ನೀಡಿದ್ದಾರೆ. "ಮಾರ್ನಮಿ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿದಾಗ ನನಗೆ ಇಷ್ಟವಾಗಿತ್ತು. ಆದರೆ, ನಾನು ತಮಿಳು ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಝಿ ಇದ್ದೆ. ಸರಿಯಾದ ಡೇಟ್‌ಗಳು ಇರಲಿಲ್ಲ. ಈ ಸಮಯದಲ್ಲಿ ಅವರು ಬೇರೆ ನಟಿಯರನ್ನೂ ಹುಡುಕಿದ್ದಾರೆ. ಮತ್ತೆ ಇವರು ನನ್ನ ಬಳಿಗೆ ಬಂದು ಕೇಳಿದರು. ಅವರಿಗೆ ನಾನು ಈ ಸಿನಿಮಾ ತಂಡಕ್ಕೆ ಸೇರುವುದು ಇಷ್ಟವಿತ್ತು. ನನಗೆ ಇರುವ ಶೂಟಿಂಗ್‌ಗಳು ಮತ್ತು ಲಭ್ಯವಿರುವ ಸಮಯದ ಕುರಿತು ಅವರಿಗೆ ಮಾಹಿತಿ ನೀಡಿದೆ. ಅವರು ಒಪ್ಪಿಕೊಂಡ್ರು" ಎಂದು ನಟಿ ಚೈತ್ರಾ ಜೆ ಆಚಾರ್‌ ಹೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in