Prema on second Marriage: ನಾನು ಮದುವೆಯಾದ್ರೆ ಎಲ್ಲರಿಗೂ ತಿಳಿಯುತ್ತೆ..ಓಡಿ ಹೋಗಿಯಂತೂ ಮದುವೆ ಆಗುವುದಿಲ್ಲ..ಪ್ರೇಮಾ ಸ್ಪಷ್ಟನೆ
ಕನ್ನಡ ಸುದ್ದಿ  /  ಮನರಂಜನೆ  /  Prema On Second Marriage: ನಾನು ಮದುವೆಯಾದ್ರೆ ಎಲ್ಲರಿಗೂ ತಿಳಿಯುತ್ತೆ..ಓಡಿ ಹೋಗಿಯಂತೂ ಮದುವೆ ಆಗುವುದಿಲ್ಲ..ಪ್ರೇಮಾ ಸ್ಪಷ್ಟನೆ

Prema on second Marriage: ನಾನು ಮದುವೆಯಾದ್ರೆ ಎಲ್ಲರಿಗೂ ತಿಳಿಯುತ್ತೆ..ಓಡಿ ಹೋಗಿಯಂತೂ ಮದುವೆ ಆಗುವುದಿಲ್ಲ..ಪ್ರೇಮಾ ಸ್ಪಷ್ಟನೆ

ಜೀವನಕ್ಕೆ ಮದುವೆ ಕೂಡಾ ಬೇಕು. ಆದರೆ ಅದಕ್ಕೆ ಕಂಕಣ ಭಾಗ್ಯ ಬೇಕು. ನಾನೇನು ಓಡಿ ಹೋಗಿ ಮದುವೆಯಾಗುವುದಿಲ್ಲ. ಅಂತದ್ದೇನೂ ನಾನು ಮಾಡಿಲ್ಲ. ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರು ಇದೆ. ನಾನು ಮದುವೆ ಆದರೆ ನಿಮ್ಮೆಲ್ಲರಿಗೂ ತಿಳಿಯುತ್ತೆ. ನಿಮ್ಮೆಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ.

ಸ್ಯಾಂಡಲ್‌ವುಡ್‌ ನಟಿ ಪ್ರೇಮಾ
ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ( PC: ncprema Instagram)

ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎಂಬ ಮಾತು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರೇಮಾ 2016ರಲ್ಲಿ ಜೀವನ್‌ ಅಪ್ಪಚ್ಚು‌ ಅವರಿಂದ ಡಿವೋರ್ಸ್‌ ಪಡೆದಿದ್ದರು. ಅವರು ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಮಾತು ಇತ್ತೀಚೆಗೆ ಕೇಳಿಬಂದಿತ್ತು.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೇಮಾ, ''ತಮ್ಮ ಎರಡನೇ ಮದುವೆ ವಿಚಾರವನ್ನು ಅಲ್ಲಗಳೆದಿದ್ದಾರೆ. ನಾವು ನಾನಾ ಕಾರಣಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ. ಆದರೆ ನೀವೆಲ್ಲರೂ ನಾನು ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದೀರಿ. ಇದರಿಂದ ನನಗೆ ಬೇಸರವಾಗಿದೆ. ನಾನು ಬಹಳ ದಿನಗಳಿಂದ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಆತ್ಮೀಯರೊಬ್ಬರ ಮದುವೆಗೆ ಆ ಜಾಗಕ್ಕೆ ಹೋಗಿದ್ದರಿಂದ ಹತ್ತಿರದಲ್ಲಿದ್ದ ದೇವಸ್ಥಾನಕ್ಕೆ ಭೇಟಿ ನೀಡಿ ದೇವ್ ದರ್ಶನ ಪಡೆದೆ. ಆದರೆ ಅಲ್ಲಿ ನಾನು ಮದುವೆ ಬಗ್ಗೆ ಯಾವ ಪ್ರಸ್ತಾಪ ಕೂಡಾ ಮಾಡಿಲ್ಲ. ಆ ವಿಡಿಯೋ ಇದ್ದರೆ ಮತ್ತೊಮ್ಮೆ ಗಮನಿಸಿ. ನಾನು ಕಲಾವಿದೆಯಾಗಿ ಇಲ್ಲಿ ಬಂದಿದ್ದೇನೆ. ನಾನು ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ. ದಯವಿಟ್ಟು ಜನರಿಗೆ ಒಂದೊಳ್ಳೆ ಸಂದೇಶ ಕೊಡಿ. ಮದುವೆ ಒಂದೇ ಜೀವನ ಅಲ್ಲ.''

''ಜೀವನಕ್ಕೆ ಮದುವೆ ಕೂಡಾ ಬೇಕು. ಆದರೆ ಅದಕ್ಕೆ ಕಂಕಣ ಭಾಗ್ಯ ಬೇಕು. ನಾನೇನು ಓಡಿ ಹೋಗಿ ಮದುವೆಯಾಗುವುದಿಲ್ಲ. ಅಂತದ್ದೇನೂ ನಾನು ಮಾಡಿಲ್ಲ. ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರು ಇದೆ. ನಾನು ಮದುವೆ ಆದರೆ ನಿಮ್ಮೆಲ್ಲರಿಗೂ ತಿಳಿಯುತ್ತೆ. ನಿಮ್ಮೆಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಜನರು ನನಗೆ ಪ್ರೀತಿ ನೀಡಿ ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಇಂದು ಮುಂದೆಯೂ ಬೆಳೆಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಕೆಲವೊಂದು ಮಾಧ್ಯಮಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿವೆ. ಇದು ಹೆಣ್ಣುಮಕ್ಕಳ ವೈಯ್ತಕ್ತಿಕ ವಿಚಾರ. ಚಿತ್ರರಂಗದಲ್ಲಿ ಸಾಕಷ್ಟು ಅಡೆ ತಡೆಗಳು ಎದುರಾಗಿವೆ. ಆದರೆ ಅವೆಲ್ಲದಕ್ಕೂ ನಾನು ಜಗ್ಗಿಲ್ಲ, ಮುಂದೆ ಜಗ್ಗುವುದೂ ಇಲ್ಲ'' ಎಂದು ಪ್ರೇಮಾ, ತಮ್ಮ ಎರಡನೇ ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿರುವ ನಟಿ ಪ್ರೇಮ, ಕೆಲವು ವರ್ಷಗಳಿಂದ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಆಗೊಂದು ಈಗೊಂದು ಸಿನಿಮಾ ಮಾಡುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ 'ವೆಡ್ಡಿಂಗ್‌ ಗಿಫ್ಟ್‌' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ನಂತರ ಪ್ರೇಮಾ ಬೇರೆ ಚಿತ್ರದಲ್ಲಿ ನಟಿಸಿಲ್ಲ. ಈ ನಡುವೆ ಕೌಟುಂಬಿಕ ಸಮಸ್ಯೆಯಲ್ಲಿಯೂ ಪ್ರೇಮ ಸಿಲುಕಿದ್ದಾರೆ. ಅದೆಲ್ಲದರ ಪರಿಹಾರಕ್ಕಾಗಿಯೇ ಕುಟುಂಬಸಹಿತ ದೈವಸ್ಥಾನಕ್ಕೆ ತೆರಳಿ ಬಂದಿದ್ದಾರೆ. ಎರಡನೇ ಮದುವೆ ಆಗುತ್ತಿರುವ ವಿಚಾರವನ್ನೂ ದೇವರ ಮುಂದಿಟ್ಟಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗಷ್ಟೇ ಪ್ರೇಮಾ ತಮ್ಮ ಸಹೋದರ ಅಯ್ಯಪ್ಪ, ಅವರ ಪತ್ನಿ ಅನು ಅಯ್ಯಪ್ಪ, ರಾಧಿಕಾ ಭಟ್‌ ಹಾಗೂ ಇನ್ನಿತರರೊಂದಿಗೆ ಕಾಪುವಿನಲ್ಲಿರುವ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾರಣಿಕ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದ್ದರು.

Whats_app_banner