ರಾಜ್‌ಕುಮಾರ್ ಹಾಡಿಗೆ ಮರುಳಾದ ಅಮೃತಧಾರೆ ನಟಿ; ಛಾಯಾ ಸಿಂಗ್‌ರನ್ನು ಗುಲಾಬಿ ಹೂವಿಗೆ ಹೋಲಿಸಿದ ಅಭಿಮಾನಿಗಳು
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರದಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದಿರುವ ನಟಿ ಛಾಯಾ ಸಿಂಗ್‌ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಛಾಯಾ ಸಿಂಗ್ ಗುಲಾಬಿ ಬಣ್ಣದ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್ ಮಧುರ ಕಂಠದಲ್ಲಿ ಮೂಡಿಬಂದ ಓ ಗುಲಾಬಿಯೇ ಹಾಡಿಗೆ ಛಾಯಾ ಸಿಂಗ್ ರೀಲ್ಸ್ ಕೂಡ ಮಾಡಿದ್ದಾರೆ.

ಅಮೃತಧಾರೆ ನಟಿ ಛಾಯಾ ಸಿಂಗ್ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗುಲಾಬಿ ಬಣ್ದದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಇವರ ಫೋಟೋಗಳಿಗ ಅಭಿಮಾನಿಗಳು ವೈವಿಧ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಇದೇ ಸಮಯದಲ್ಲಿ ರೀಲ್ಸ್ ಹಂಚಿಕೊಂಡಿದ್ದಾರೆ. ರಾಜ್ ಕುಮಾರ್ ಹಾಡಿರುವ ಓಂ ಸಿನಿಮಾದ ಸಿನಿಮಾದ ಓ ಗುಲಾಬಿಯೇ ಹಾಡಿಗೆ ಇವರು ರೀಲ್ಸ್ ಮಾಡಿದ್ದಾರೆ. ಅಪ್ಪಾಜಿಯ ಧ್ವನಿಯನ್ನ ಪ್ರೀತಿಸಿ ಈ ರೀಲ್ಸ್ ಮಾಡಿದ್ದೇನೆ ಎಂದು ಡಾ. ರಾಜ್ ಕುಮಾರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಓ ಗುಲಾಬಿಯೇ ಹಾಡಿಗೆ ಗುಲಾಬಿ ಬಣ್ಣದ ಸೀರೆಯುಟ್ಟ ನಟಿ ಛಾಯಾ ಸಿಂಗ್ ಹೆಜ್ಜೆ ರೀಲ್ಸ್ ಮಾಡಿದ್ದಾರೆ. "ಮೇಡಂ ನೀವೇ ಗುಲಾಬಿ ಹೂವು" "ನೀವು ಪಿಂಕ್ ಬಣ್ಣದ ಕ್ಯೂಟ್ ಗುಲಾಬಿ" "ನೀವು ಸುಂದರವಾದ ಗುಲಾಬಿ" "ಗುಲಾಬಿಯೇ ನಾಚುವ ಅಂದ ನಿಮ್ಮದು", "ಈ ಗುಲಾಬಿ ನೋಡೋಕೆ ಎರಡು ಕಣ್ಣು ಸಾಲದು, ಓ ಗುಲಾಬಿ ಸುಂದರ ಗುಲಾಬಿ , ಈ ಗುಲಾಬಿ ನೋಡಿ ಆದ್ರೆ ದೃಷ್ಟಿ ಹಾಕಬೇಡಿ" ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಛಾಯಾ ಸಿಂಗ್ ಲವ್ ಸ್ಟೋರಿ
ನಟಿ ಛಾಯಾ ಸಿಂಗ್ ಮತ್ತು ಕೃಷ್ಣಾ ಅವರದ್ದು ಲವ್ ಸ್ಟೋರಿ. ಇವರಿಬ್ಬರು 2010 ರಲ್ಲಿ ಬಿಡುಗಡೆಯಾಗಿದ್ದ ಅನಂತಪುರಥು ವೀಡು ಎಂಬ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ಛಾಯಾ ಸಿಂಗ್ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಕೃಷ್ಣಾ ಅವರು ವಿಲನ್ ಆಗಿದ್ದರು. ಮೂಲತಃ ಕೃಷ್ಣ ಅವರು ದೆಹಲಿಯವರು. ಛಾಯಾ ಸಿಂಗ್ ನಮ್ಮ ಬೆಂಗಳೂರಿನಲ್ಲಿ ಬೆಳೆದವರು. ಅನಂತಪುರಥು ವೀಡು ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ಇವರಿಬ್ಬರು ಆರಂಭದಲ್ಲಿ ಪರಸ್ಪರ ಮಾತನಾಡುತ್ತ ಇರಲಿಲ್ಲ. ಕೃಷ್ಣ ಸೆಟ್‌ನಲ್ಲಿ ಪುಸ್ತಕ ಓದುವುದನ್ನು ಛಾಯಾ ಗಮನಿಸಿದ್ದರು. ಇವರು ಪುಸ್ತಕ ಕೇಳಿದರು. ಹೀಗೆ ಮೊದಲ ಮಾತು ಆರಂಭವಾಗಿತ್ತು. ಸ್ನೇಹ ಪ್ರೇಮವಾಗಿ ಇವರಿಬ್ಬರ ಮದುವೆ 2012ರಲ್ಲಿ ನಡೆದಿತ್ತು. ಕೃಷ್ಣ ಅವರು ಆ ಸಮಯದಲ್ಲಿಯೇ ನಟನೆಯಲ್ಲಿ ಜನಪ್ರಿಯತೆ ಪಡೆದಿದ್ದರು. ದೈವಮಗಲ್ ಎಂಬ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ರನ್, ನಯಗಿ, ಸೆಲ್ವಿ ಸಹನ, ಅರುವಿ ಹೀಗೆ ಹಲವು ಸೀರಿಯಲ್‌ಗಳಲ್ಲಿ ಇವರು ನಟಿಸಿದ್ದಾರೆ.
ಓ ಗುಲಾಬಿಯೇ ಹಾಡಿನ ಕನ್ನಡ ಲಿರಿಕ್ಸ್
ಓ ಗುಲಾಬಿಯೇ... ಓ ಹೊ ಗುಲಾಬಿಯೇ....
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓ ಓ
ಮುಳ್ಳಿoದ ಬಾಳಂದ ಕೆಡಿಸೋದು ನ್ಯಾಯವೇ ಓ ಓ
ಓ ಗುಲಾಬಿಯೇ... ಓ ಹೊ ಗುಲಾಬಿಯೇ....
ದ್ವೇಷವಾ ಸಾಧಿಸೆ ಪ್ರೇಮದ ಅಸ್ತ್ರವೇ
ಸೇಡಿನ ಹಾಡಿಗೆ ಹಾಡಿನ ಧಾಟಿಗೆ
ವಿನಯದ ತಾಳವೇ ಭಾವಕೆ ವಿಷದ ಲೇಪವೇ
ಹೆಣ್ಣು ಒಂದು ಮಾಯೆಯ ರೂಪ ಎಂಬಾ ಮಾತಿದೆ
ಹೆಣ್ಣು ಕ್ಷಮಿಸೋ ಭೂಮಿಯ ರೂಪ ಎಂದು ಹೇಳಿದೆ
ಯಾವುದು ಯಾವುದು ನಿನಗೆ ಹೋಲುವುದಾವುದು
ಯಾವುದು ಯಾವುದು ನಿನಗೆ ಹೋಲುವುದಾವುದು
ಓ ಗುಲಾಬಿಯೇ... ಓ ಹೊ ಗುಲಾಬಿಯೇ....
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓ ಓ
ಮುಳ್ಳಿoದ ಬಾಳಂದ ಕೆಡಿಸೋದು ನ್ಯಾಯವೇ ಓ ಓ
ಓ ಗುಲಾಬಿಯೇ... ಓ ಹೊ ಗುಲಾಬಿಯೇ....
ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸು
ನೊಂದಿರೋ ಮನಸಿಗೆ ಬೆಂದಿರೊ ಕನಸಿಗೆ
ಮಮತೆಯ ಚಿಮುಕಿಸು ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ ಒಲ್ಲೆ ಎಂದು ಹೇಳುವೆ
ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
ಓ ಗುಲಾಬಿಯೇ... ಓ ಹೊ ಗುಲಾಬಿಯೇ....
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓ ಓ
ಮುಳ್ಳಿoದ ಬಾಳಂದ ಕೆಡಿಸೋದು ನ್ಯಾಯವೇ
ಓ ಗುಲಾಬಿಯೇ... ಓ ಹೊ ಗುಲಾಬಿಯೇ....

ವಿಭಾಗ