ದರ್ಶನ್‌ ಬಗ್ಗೆ ಮಾತನಾಡದ ತಾರೆಯರು, ಟ್ರೋಲ್‌ ಮಾಡಿ ಗೊಳ್ಳೆಂದು ನಕ್ಕ ನೆಟ್ಟಿಗರು; VIDEO ನೋಡಿ, ನಕ್ಕುಬಿಡಿ
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಬಗ್ಗೆ ಮಾತನಾಡದ ತಾರೆಯರು, ಟ್ರೋಲ್‌ ಮಾಡಿ ಗೊಳ್ಳೆಂದು ನಕ್ಕ ನೆಟ್ಟಿಗರು; Video ನೋಡಿ, ನಕ್ಕುಬಿಡಿ

ದರ್ಶನ್‌ ಬಗ್ಗೆ ಮಾತನಾಡದ ತಾರೆಯರು, ಟ್ರೋಲ್‌ ಮಾಡಿ ಗೊಳ್ಳೆಂದು ನಕ್ಕ ನೆಟ್ಟಿಗರು; VIDEO ನೋಡಿ, ನಕ್ಕುಬಿಡಿ

ನಟ ದರ್ಶನ್‌ ಕೊಲೆ ಆರೋಪದಡಿ ಬಂಧನವಾಗುತ್ತಿದ್ದಂತೆ, ಅವರ ಜತೆಗಿನ ಆಪ್ತರೇ ಈ ವರೆಗೂ ಮಾತನಾಡಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆಯಾದರೂ ಸದ್ಯ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಕೆಲವು ನಟ, ನಟಿಯರು ಮಾಧ್ಯಮದ ಮುಂದೆ ಎದುರಾದರೂ ದರ್ಶನ್‌ ಬಗ್ಗೆ ಕೇಳಿದ್ದಕ್ಕೆ, ಮಾತು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ದರ್ಶನ್‌ ಬಗ್ಗೆ ಮಾತನಾಡದ ತಾರೆಯರು, ಟ್ರೋಲ್‌ ಮಾಡಿ ಗೊಳ್ಳೆಂದು ನಕ್ಕ ನೆಟ್ಟಿಗರು; VIDEO ನೋಡಿ, ನಕ್ಕುಬಿಡಿ
ದರ್ಶನ್‌ ಬಗ್ಗೆ ಮಾತನಾಡದ ತಾರೆಯರು, ಟ್ರೋಲ್‌ ಮಾಡಿ ಗೊಳ್ಳೆಂದು ನಕ್ಕ ನೆಟ್ಟಿಗರು; VIDEO ನೋಡಿ, ನಕ್ಕುಬಿಡಿ

Darshan thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕೊನೇ ಹಂತ ತಲುಪಿದೆ. ಕೊಲೆ ಆರೋಪವನ್ನು ಮುಚ್ಚಿ ಹಾಕಲು 70 ಲಕ್ಷ ಹಣ ಬಳಕೆ ಮಾಡಿದ ಹೊಸ ಆರೋಪ ಇದೀಗ ಮುನ್ನೆಲೆಗೆ ಬಂದಿದೆ. ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಅದರ ಮೂಲಕ್ಕೆ ಕೈ ಹಾಕಿದ್ದಾರೆ ಖಾಕಿ ಪಡೆ. ಅದರಂತೆ ಈಗಾಗಲೇ ದೊಡ್ಡ ಮೊತ್ತವನ್ನೇ ಪೊಲೀಸ್‌ ತಂಡ ಜಪ್ತಿ ಮಾಡಿದ್ದು, ಆದಾಯ ತೆರಿಗೆ ಇಲಾಖೆಗೂ ಈ ವಹಿವಾಟಿನ ಬಗ್ಗೆ ದೂರು ರವಾನೆಯಾಗಿದೆ.

ಪ್ರಕರಣ ಸಾಗಿ ಬಂದ ಹಾದಿ..

ಈವರೆಗೂ ಪ್ರಕರಣದ ತನಿಖೆ ನಡೆದು ಬಂದ ದಾರಿಯನ್ನು ನೋಡುವುದಾದರೆ, ಒಟ್ಟು 28 ಸ್ಥಳಗಳಲ್ಲಿ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ 139 ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. 70 ಲಕ್ಷ ಹಣವನ್ನು ಬಂಧಿತ ಆರೋಪಿಗಳಿಂದ ಜಪ್ತಿ ಮಾಡಲಾಗಿದೆ. ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾದ ಒಟ್ಟು 17 ಆರೋಪಿಗಳನ್ನೂ ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯದ ವಲಯದ ನಾಲ್ಕು ಪೊಲೀಸ್‌ ಕಸ್ಟಡಿಯಲ್ಲಿ ಬಂಧಿತರನ್ನು ಇರಿಸಿ ವಿಚಾರಣೆ ಮಾಡಲಾಗಿತ್ತು. ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದಯ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಪವಿತ್ರಾ ಗೌಡಗೆ ಕೈದಿ ನಂಬರ್‌ 6024

ಸದ್ಯ ಗುರುವಾರ ರಾತ್ರಿಯೇ ದರ್ಶನ್‌, ಪವಿತ್ರಾಗೌಡ ಸೇರಿ ಎಲ್ಲ 17 ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ. ಪವಿತ್ರಾಗೆ ವಿಚಾರಣಾಧೀನ ಕೈದಿಯಾಗಿ 6024 ನಂಬರ್‌ ನೀಡಲಾಗಿದೆ. ಸೆಲೆಬ್ರಿಟಿಗಳು ಅನ್ನೋ ಕಾರಣಕ್ಕೆ ಯಾವುದೇ ವಿಶೇಷ ಸೌಲಭ್ಯಗಳನ್ನು ಇವರಿಗೆ ನೀಡಿಲ್ಲ. ಜೈಲಲ್ಲಿನ ಸಾಮಾನ್ಯರಿಗೆ ಏನೆಲ್ಲ ಸಿಗುತ್ತದೆಯೋ ಅದೇ ಸೌಲಭ್ಯಗಳು ಇವರಿಗೂ ನೀಡಲಾಗಿದೆ. ಹೀಗೆ ಜೈಲು ಸೇರುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಅವರ ಅಭಿಮಾನಿಗಳು ಅವರ ಆಗಮನಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವರು ಟ್ರೋಲ್‌ ಮಾಡುವ ಕೆಲಸಕ್ಕೂ ಇಳಿದಿದ್ದಾರೆ.

ದರ್ಶನ್‌ ಬಗ್ಗೆ ತುಟಿ ಬಿಚ್ಚದ ಸೆಲೆಬ್ರಿಟಿಗಳು

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಕೊಲೆ ಆರೋಪದಡಿ ಬಂಧನವಾಗುತ್ತಿದ್ದಂತೆ, ಅವರ ಜತೆಗಿನ ಆಪ್ತರೇ ಈ ವರೆಗೂ ಮಾತನಾಡಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆಯಾದರೂ ಸದ್ಯ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಕೆಲವು ನಟ, ನಟಿಯರು ಮಾಧ್ಯಮದ ಮುಂದೆ ಎದುರಾದರೂ ದರ್ಶನ್‌ ಬಗ್ಗೆ ಕೇಳಿದ್ದಕ್ಕೆ, ಮಾತು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

  • ಕೋಟಿ ಸಿನಿಮಾ ಪ್ರಚಾರದ ವೇಳೆ ನಟ ಧನಂಜಯ್‌ಗೂ ಇದೇ ಪ್ರಶ್ನೆ ಎದುರಾಗಿತ್ತು. ಆಗ "ಸಿನಿಮಾ ಬಗ್ಗೆ ಮಾತ್ರ ಕೇಳಿ, ಹೇಳ್ತಿನಿ. ನಾನು ಇಲ್ಲಿ ನನ್ನ ಸಿನಿಮಾ ಬಗ್ಗೆ ಮಾತನಾಡಲು ಬಂದಿದ್ದೇನೆ" ಎಂದು ಹೇಳಿ ಜಾರಿಕೊಂಡಿದ್ದರು.
  • ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಟೇರ ನಟಿ ಆರಾಧನಾ ರಾಮ್‌ ಸಹ ದರ್ಶನ್‌ ಬಗ್ಗೆ ಮಾತನಾಡಿಲ್ಲ. "ಇವತ್ತು ಯೋಗ ದಿನ ಇದೆ. ಅದರ ಬಗ್ಗೆ ಪ್ರಶ್ನೆಗಳಿದ್ದರೆ ಕೇಳಿ, ಆ ಬಗ್ಗೆ ಮಾತನಾಡುವೆ" ಎಂದು ಅವರೂ ನುಣುಚಿಕೊಂಡಿದ್ದಾರೆ.
  • ಅದೇ ನಟಿ ಶ್ರೀಲೀಲಾಗೂ ಬಳ್ಳಾರಿಯಲ್ಲಿ ದರ್ಶನ್ ಬಗ್ಗೆಯೇ ಮಾಧ್ಯಮಗಳಿಂದ ಪ್ರಶ್ನೆ ಎದುರಾಗಿದೆ. ಯೋಗ ಬಗ್ಗೆ ಮಾತ್ರ ಕೇಳಿ. ಅದರ ಬಗ್ಗೆ ಮಾತ್ರ ನಾನು ಉತ್ತರಿಸುವೆ.
  • ನೆನಪಿರಲಿ ಪ್ರೇಮ್‌ ಸಹ ಕಳೆದ ಎರಡು ದಿನಗಳ ಹಿಂದಷ್ಟೇ ಮಾಧ್ಯಮಗಳ ಮುಂದೆ ಬಂದಿದ್ದರು. ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ದರ್ಶನ್‌ ಬಗ್ಗೆ ಏನನ್ನೂ ಮಾತನಾಡಲಿಲ್ಲ.
  • ನಟಿ ಅನುಪ್ರಭಾಕರ್‌ಗೆ ದರ್ಶನ್‌ ವಿಚಾರ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಎನ್ನುತ್ತಿದ್ದಂತೆ, ಥ್ಯಾಂಕ್ಯು ಎಂದು ಹೇಳಿ ನಿಲ್ಲದೆ ಹೊರಟೇ ಹೋದರು.
  • ನಟ ಶರಣ್‌ ಸಹ ಒಂದೇ ಒಂದು ಸೆಕೆಂಡ್‌ ಸಹ ನಿಲ್ಲದೆ, ಮಾಧ್ಯಮಗಳನ್ನು ಕೈಬಿಟ್ಟು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರಟರು.

ಹೀಗೆ ದರ್ಶನ್‌ ಬಗ್ಗೆ ಮಾತನಾಡದ ಸೆಲೆಬ್ರಿಟಿಗಳ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಒಟ್ಟು ಗೂಡಿಸಿ ಟ್ರೋಲ್‌ ಮಾಡಲಾಗುತ್ತಿದೆ. ದರ್ಶನ್‌ ಪರಿಸ್ಥಿತಿ ಹೀಗಾಗಬಾರದಿತ್ತು ಎಂದು ಕಾಮೆಂಟ್‌ಗಳೂ ಹರಿದು ಬರುತ್ತಿವೆ.