Director Guruprasad: ಇಬ್ಬರು ಪತ್ನಿಯರ ಸಮ್ಮುಖದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಿರ್ದೇಶಕ ಗುರುಪ್ರಸಾದ್‌ ಅಂತ್ಯಕ್ರಿಯೆ
ಕನ್ನಡ ಸುದ್ದಿ  /  ಮನರಂಜನೆ  /  Director Guruprasad: ಇಬ್ಬರು ಪತ್ನಿಯರ ಸಮ್ಮುಖದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಿರ್ದೇಶಕ ಗುರುಪ್ರಸಾದ್‌ ಅಂತ್ಯಕ್ರಿಯೆ

Director Guruprasad: ಇಬ್ಬರು ಪತ್ನಿಯರ ಸಮ್ಮುಖದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಿರ್ದೇಶಕ ಗುರುಪ್ರಸಾದ್‌ ಅಂತ್ಯಕ್ರಿಯೆ

Director Guruprasad funeral: ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ವಿದ್ಯುತ್‌ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ, ನಿರ್ದೇಶಕ ಗುರುಪ್ರಸಾದ್‌ ಅವರ ಅಂತ್ಯಕ್ರಿಯೆ ನೆರವೇರಿದೆ.

ಬ್ರಾಹ್ಮಣ ಸಂಪ್ರದಾಯದಂತೆ ನಿರ್ದೇಶಕ ನೆರವೇರಿದ ಗುರುಪ್ರಸಾದ್‌ ಅಂತ್ಯಕ್ರಿಯೆ
ಬ್ರಾಹ್ಮಣ ಸಂಪ್ರದಾಯದಂತೆ ನಿರ್ದೇಶಕ ನೆರವೇರಿದ ಗುರುಪ್ರಸಾದ್‌ ಅಂತ್ಯಕ್ರಿಯೆ

Director Guruprasad: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ನಟನೆ ಮತ್ತು ಬರವಣಿಗೆಯ ಮೂಲಕವೇ ಗಮನ ಸೆಳೆದಿದ್ದ ಗುರುಪ್ರಸಾದ್‌ ಪಂಚಭೂತಗಳಲ್ಲಿ ಲೀನರಾದರು. ಆರ್ಥಿಕ ಮುಗ್ಗಟ್ಟಿನಿಂದಾಗಿ ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕಿ, ಕಳೆದ ನಾಲ್ಕೈದು ದಿನಗಳ ಹಿಂದೆಯೇ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಅವರು ಇತ್ತೀಚಿನ ಕೆಲ ತಿಂಗಳಿಂದ ವಾಸವಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ತಿಂಗಳ ಹಿಂದೆಯೇ ಎರಡನೇ ಪತ್ನಿ ಸುಮಿತ್ರಾ ಅವರನ್ನು ತವರು ಮನೆಗೆ ಕಳಿಸಿದ್ದರು. ಅದಾದ ಬಳಿಕ ಆತ್ಮಹತ್ಯೆಯ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಈಗ ಮಾದನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಿಂದ ಶವವನ್ನು ಆಂಬ್ಯುಲೆನ್ಸ್‌ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಅಲ್ಲಿಂದ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಗಿದೆ. ಅಲ್ಲಿಂದ ವಿಲ್ಸನ್‌ ಗಾರ್ಡನ್‌ನಲ್ಲಿನ ವಿದ್ಯುತ್‌ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಗಿದೆ.

ಮೊದಲ ಪತ್ನಿ ಆರತಿ, ಎರಡನೇ ಪತ್ನಿ ಸುಮಿತ್ರಾ ಮತ್ತು ಗುರುಪ್ರಸಾದ್‌ ಸಹೋದರ ಸೇರಿ ಕೆಲವೇ ಕೆಲವು ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ನಿರ್ದೇಶಕ ಗುರುಪ್ರಸಾದ್‌ ಅವರ ಅಂತ್ಯಕ್ರಿಯೆಯಲ್ಲಿ ಸ್ಯಾಂಡಲ್‌ವುಡ್‌ ನಟರಾದ ಯೋಗರಾಜ್‌ ಭಟ್‌, ಡಾಲಿ ಧನಂಜಯ್‌, ದುನಿಯಾ ವಿಜಯ್‌, ನೀನಾಸಂ ಸತೀಶ್‌ ಸೇರಿ ಇನ್ನು ಕೆಲವರು ಭಾಗವಹಿಸಿದ್ದರು.

Whats_app_banner