ವಯಸ್ಸು 40 ದಾಟಿದ್ರು ಅವಿವಾಹಿತೆಯರಾಗಿ ಉಳಿದಿರುವ 9 ಕನ್ನಡ ನಟಿಯರು; ರಮ್ಯಾಳಿಂದ ರೇಖಾ ವೇದವ್ಯಾಸ್‌ ತನಕ
ಕನ್ನಡ ಸುದ್ದಿ  /  ಮನರಂಜನೆ  /  ವಯಸ್ಸು 40 ದಾಟಿದ್ರು ಅವಿವಾಹಿತೆಯರಾಗಿ ಉಳಿದಿರುವ 9 ಕನ್ನಡ ನಟಿಯರು; ರಮ್ಯಾಳಿಂದ ರೇಖಾ ವೇದವ್ಯಾಸ್‌ ತನಕ

ವಯಸ್ಸು 40 ದಾಟಿದ್ರು ಅವಿವಾಹಿತೆಯರಾಗಿ ಉಳಿದಿರುವ 9 ಕನ್ನಡ ನಟಿಯರು; ರಮ್ಯಾಳಿಂದ ರೇಖಾ ವೇದವ್ಯಾಸ್‌ ತನಕ

ಕನ್ನಡದ ಹಲವು ನಟಿಯರು 40 ಪ್ಲಸ್‌ ವರ್ಷ ವಯಸ್ಸಾಗಿದ್ದರೂ ಇನ್ನೂ ಮದುವೆಯಾಗಿಲ್ಲ. ಅವರು ಸಿಂಗಲ್‌ ಆಗಿರಲು ವೈಯಕ್ತಿಕ ಕಾರಣಗಳು ಇರಬಹುದು. ಆರ್‌.ಟಿ. ರಮಾ, ವಿಜಯಲಕ್ಷ್ಮಿ, ಭಾವನಾ ರಾಮಣ್ಣ, ಪೂಜಾ, ದಿವ್ಯ ಸ್ಪಂದನಾ, ಸಿತಾರ, ರೇಖಾ ವೇದವ್ಯಾಸ್‌ ಸೇರಿದಂತೆ ಹಲವು ನಟಿಯರು ಇನ್ನೂ ವಿವಾಹವಾಗಿಲ್ಲ.

Unmarried Actresses: ವಯಸ್ಸು 40 ದಾಟಿದ್ರು ಅವಿವಾಹಿತೆಯರಾಗಿ ಉಳಿದಿರುವ 9 ಕನ್ನಡ ನಟಿಯರು
Unmarried Actresses: ವಯಸ್ಸು 40 ದಾಟಿದ್ರು ಅವಿವಾಹಿತೆಯರಾಗಿ ಉಳಿದಿರುವ 9 ಕನ್ನಡ ನಟಿಯರು

ಕನ್ನಡ ಚಿತ್ರರಂಗದ ಹಲವು ನಟಿಯರು ಇನ್ನೂ ವಿವಾಹ ಬಂಧನಕ್ಕೆ ಒಳಗಾಗಿಲ್ಲ. ಕೆಲವರಿಗೆ ಮದುವೆಯಾಗಲು ಮನಸ್ಸಿಲ್ಲ. ಇನ್ನು ಕೆಲವರ ಬದುಕಿನಲ್ಲಿ ಮದುವೆ ವಿಚಾರದಲ್ಲಿ ಕಹಿ ಘಟನೆಗಳು ನಡೆದಿರಬಹುದು. ಇನ್ನು ಕೆಲವರು ಸಿನಿಮಾವೇ ನಮ್ಮ ಗಂಡ ಎಂದುಕೊಂಡಿರಬಹುದು. ಇಷ್ಟಕ್ಕೂ ಮದುವೆಯ ಅಗತ್ಯವೇನಿದೆ ಎಂದು ಭಾವಿಸುವವರೂ ಇರಬಹುದು. ಕನ್ನಡದ ಹಲವು ನಟಿಯರು ಇನ್ನೂ ಮದುವೆಯಾಗಿಲ್ಲ. 40 ವರ್ಷ ವಯಸ್ಸು ದಾಟಿದರೂ ಮದುವೆಯಾಗದ ಕೆಲವು ನಟಿಯರ ವಿವರ ಪಡೆಯೋಣ ಬನ್ನಿ.

ಆರ್‌.ಟಿ. ರಮಾ

ಕನ್ನಡ ಧಾರಾವಾಹಿ "ಕನ್ನಡತಿ"ಯಲ್ಲಿ ನಟಿಸಿರುವ, ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ನಸ್ರುದ್ಧೀನ್‌ ಸಹಪಾಠಿಯಾಗಿದ್ದ ಆರ್‌.ಟಿ. ರಮಾ ಮದುವೆಯಾಗಿಲ್ಲ. ಇವರು ಗೆಜ್ಜೆ ಪೂಜೆ, ಶರಪಂಜರ, ಗೌರಿ, ಜೇಡರ ಬಲೆ, ನನ್ನ ಕರ್ತವ್ಯ, ಮಹಾಸತಿ ಅನುಸೂಯ, ಮಿಸ್‌ ಲೀಲಾವತಿ, ನಾ ಮೆಚ್ಚಿದ ಹುಡುಗ, ಸತಿ ಸುಕನ್ಯಾ, ಮನ ಮೆಚ್ಚಿದ ಮಡದಿ, ಬಾಲು ಬೆಳಗಿತು, ಪುನರ್ಜನ್ಮ, ಕಪ್ಪು ಬಿಳುಪು, ಅನುಗ್ರಹ, ಮುಗಿಯದ ಕಥೆ, ಭಲೇ ಅದೃಷ್ಟವೋ ಅದೃಷ್ಟ, ಸೋತು ಗೆದ್ದವಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಜಯಲಕ್ಷ್ಮಿ

ನಾಗಮಂಡಲ ಸಿನಿಮಾದಲ್ಲಿ ನಟಿಸಿದ್ದ ವಿಜಯಲಕ್ಷ್ಮಿ ಕೂಡ ಮದುವೆಯಾಗಿಲ್ಲ. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಅವರಿಗೂ ಸೃಜನ್‌ ಲೋಕೇಶ್‌ಗೂ ಎಂಗೇಜ್‌ಮೆಂಟ್‌ ಆಗಿತ್ತು. ಆದರೆ, ಎಂಗೇಜ್‌ಮೆಂಟ್‌ ನಂತರ ಇವರ ಸಂಬಂಧ ಮುಂದುವರೆಯಲಿಲ್ಲ.

ಭಾವನಾ ರಾಮಣ್ಣ

ಕನ್ನಡ ನಟಿ ಭಾವನಾ ರಾಮಣ್ಣ ಕೂಡ ಅವಿವಾಹಿತರಾಗಿಯೇ ಉಳಿದಿದ್ದಾರೆ. ಇವರು ವಿಷ್ಣುವರ್ಧನ್‌ ಮತ್ತು ಶ್ರೀನಗರ ಕಿಟ್ಟಿ ಮುಂತಾದ ನಟರ ಜತೆ ನಟಿಸಿದ್ದಾರೆ. ವಯಸ್ಸು 40 ದಾಟಿದರೂ ಇವರು ಮದುವೆಯಾಗಿಲ್ಲ.

ಪೂಜಾ

ಸೀತಾ ರಾಮಾ ಸೀರಿಯಲ್‌ನಲ್ಲಿ ನಟಿಸಿರುವ ಪೂಜಾ ಕೂಡ ಅವಿವಾಹಿತರಾಗಿದ್ದಾರೆ. ಇವರು ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಟನೆಯೊಂದಿಗೆ ಫ್ಯಾಷನ್‌ ಡಿಸೈನರ್‌ ಆಗಿಯೂ ವೃತ್ತಿ ಜೀವನ ನಡೆಸುತ್ತಾರೆ.

ದಿವ್ಯಾ ಸ್ಪಂದನಾ (ರಮ್ಯಾ)

ಮೋಹಕತಾರೆ ರಮ್ಯಾ ಕೂಡ ಅವಿವಾಹಿತೆಯಾಗಿಯೇ ಉಳಿದಿದ್ದಾರೆ. ರಾಹುಲ್‌ ಗಾಂಧಿ ಸೇರಿದಂತೆ ಹಲವರ ಜತೆ ಈಕೆಯ ಹೆಸರು ತಳಕು ಹಾಕಿಕೊಂಡಿತ್ತು. ಆದರೆ, ಯಾವುದೇ ಕಾಂಟ್ರವರ್ಸಿಗೂ ತಲೆಕೆಡಿಸಿಕೊಳ್ಳದೆ ಮದುವೆಯಾಗದೆಯೇ ಉಳಿದಿದ್ದಾರೆ.

ಸಿತಾರ

ಕನ್ನಡದಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಿತಾರ ಅವರು ಮದುವೆಯಾಗಿಲ್ಲ. ಇವರು ಡಾ. ವಿಷ್ಣುವರ್ಧನ್‌, ಶಶಿ ಕುಮಾರ್‌, ಅನಂತ್‌ ನಾಗ್‌ ಮುಂತಾದ ಕಲಾವಿದರ ಜತೆ ನಟಿಸಿದ್ದಾರೆ.

ರೇಖಾ ವೇದವ್ಯಾಸ್‌

ಚೆಲ್ಲಾಟ, ಹುಡುಗಾಟ, ಹುಚ್ಚ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ರೇಖಾ ವೇದವ್ಯಾಸ್‌ ಕೂಡ ಅವಿವಾಹಿತೆಯಾಗಿ ಉಳಿದಿದ್ದಾರೆ.

ಜೆನ್ನಿಫರ್‌ ಕೊತ್ವಾಲ್‌

ಕನ್ನಡ ನಟಿ ಜೆನ್ನಿಫರ್‌ ಕೊತ್ವಾಲ್‌ ಕೂಡ 40 ವರ್ಷ ವಯಸ್ಸು ದಾಟಿದರೂ ಮದುವೆಯಾಗಿಲ್ಲ. ಇವರು ಸೂಪರ್‌ಹಿಟ್‌ ಜೋಗಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಬಂಧನ, ಲವಕುಶ, ಮಸ್ತಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಧಿಕಾ ಗಾಂಧಿ

ಪೂಜಾ ಗಾಂಧಿ ತಂಗಿ ರಾಧಿಕಾ ಗಾಂಧಿ ಕೂಡ ಇನ್ನೂ ವಿವಾಹವಾಗಿಲ್ಲ. ಈಕೆ ಚಿಕ್ಕಮಗಳೂರು ಚಿಕ್ಕಮಲ್ಲಿಗೆ, ವೀರ, ಕಲಾಕಾರ್‌, ಶ್ರೀ ಹಿರಿಕಥೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner