ಸಿಂಹದ ಮರಿಯಂತೆ ಡ್ಯಾನ್ಸ್‌ ಮಾಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌; ಶಿವಣ್ಣ ಈಸ್‌ ಬ್ಯಾಕ್‌ ಅಂದ್ರು ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಸಿಂಹದ ಮರಿಯಂತೆ ಡ್ಯಾನ್ಸ್‌ ಮಾಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌; ಶಿವಣ್ಣ ಈಸ್‌ ಬ್ಯಾಕ್‌ ಅಂದ್ರು ಫ್ಯಾನ್ಸ್‌

ಸಿಂಹದ ಮರಿಯಂತೆ ಡ್ಯಾನ್ಸ್‌ ಮಾಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌; ಶಿವಣ್ಣ ಈಸ್‌ ಬ್ಯಾಕ್‌ ಅಂದ್ರು ಫ್ಯಾನ್ಸ್‌

ಜೀ ಕನ್ನಡ ವಾಹಿನಿಯು ಸರಿಗಮಪ ಶೋನ ಪ್ರೊಮೊ ಹಂಚಿಕೊಂಡಿದೆ. ಅದರಲ್ಲಿ ಶಿವಣ್ಣ ಡ್ಯಾನ್ಸ್‌ ಮಾಡುವ, ಹಾಡು ಹಾಡುವ ಝಲಕ್‌ ತೋರಿಸಲಾಗಿದೆ. ಸರಿಗಮಪ ವೇದಿಕೆಗೆ ಬಂತು ಎನರ್ಜಿಯ ಹಿಮಾಲಯ; ಕರುನಾಡ ಚಕ್ರವರ್ತಿ ಶಿವಣ್ಣ ಅವರ ಗಾನ ವಿಸ್ಮಯ! ಎಂಬ ಶೀರ್ಷಿಕೆಯಡಿ ಹಂಚಿಕೊಂಡ ಪ್ರೊಮೊ‌ ನೋಡಿ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಖುಷಿಗೊಂಡಿದ್ದಾರೆ.

ಸಿಂಹದ ಮರಿಯಂತೆ ಡ್ಯಾನ್ಸ್‌ ಮಾಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌
ಸಿಂಹದ ಮರಿಯಂತೆ ಡ್ಯಾನ್ಸ್‌ ಮಾಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌

ಜೀ ಕನ್ನಡ ವಾಹಿನಿಯು ಸರಿಗಮಪ ಶೋನ ಪ್ರೊಮೊ ಹಂಚಿಕೊಂಡಿದೆ. ಅದರಲ್ಲಿ ಶಿವಣ್ಣ ಡ್ಯಾನ್ಸ್‌ ಮಾಡುವ, ಹಾಡು ಹಾಡುವ ಝಲಕ್‌ ತೋರಿಸಲಾಗಿದೆ. ಸರಿಗಮಪ ವೇದಿಕೆಗೆ ಬಂತು ಎನರ್ಜಿಯ ಹಿಮಾಲಯ; ಕರುನಾಡ ಚಕ್ರವರ್ತಿ ಶಿವಣ್ಣ ಅವರ ಗಾನ ವಿಸ್ಮಯ! ಎಂಬ ಶೀರ್ಷಿಕೆಯಡಿ ಹಂಚಿಕೊಂಡ ಪ್ರೊಮೊ‌ ನೋಡಿ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್‌ ಬಂದ ಬಳಿಕ ಅಭಿಮಾನಿಗಳು ಶಿವಣ್ಣನ ಎನರ್ಜಿ ತುಂಬಿದ ಪರ್ಫಾಮೆನ್ಸ್‌ ನೋಡುತ್ತಿದ್ದಾರೆ. ಈ ಖುಷಿಯಲ್ಲಿ "ಶಿವಣ್ಣ ಈಸ್‌ ಬ್ಯಾಕ್‌" ಎಂದು ಖುಷಿಪಡುತ್ತಿದ್ದಾರೆ.

ಸರಿಗಮಪ ವೇದಿಕೆಗೆ ಶಿವರಾಜ್‌ ಕುಮಾರ್‌ ಮಗಳು ನಿವೇದಿತಾ ಕೂಡ ಆಗಮಿಸಿದ್ದಾರೆ. ಫೈರ್‌ ಫ್ಲೈ ಸಿನಿಮಾದ ಪ್ರೊಮೊಷನ್‌ಗಾಗಿ ಇವರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ತನ್ನ ಮಗಳಿಗೆ ಪ್ರೀತಿಯ ಹೂಮುತ್ತೊಂದನ್ನು ನೀಡಿದ್ದಾರೆ. ಶಿವರಾಜ್‌ ಕುಮಾರ್‌ ಎನರ್ಜಿ ತುಂಬಿ ಹಾಡಿರುವ ದೃಶ್ಯವೂ ಪ್ರೊಮೊದಲ್ಲಿ ಕಾಣಿಸಿದೆ. ಪುಟ್ಟ ಗಾಯಕರ ಧ್ವನಿಯನ್ನು ಮೆಚ್ಚಿ ಶಿವಣ್ಣ ಶಹಬ್ಬಾಸ್‌ ಕೂಡ ಹೇಳಿದ್ದಾರೆ. ಒಟ್ಟಾರೆ, ಈ ವಾರದ ಸರಿಗಮಪ ವೇದಿಕೆಯಲ್ಲಿ ಶಿವರಾಜ್ಯೋತ್ಸವದ ಸಂಭ್ರಮ ತುಂಬಿರಲಿದೆ.

ಈ ಪ್ರೊಮೊಗೆ ಕಿರುತೆರೆ ವೀಕ್ಷಕರು ಮತ್ತು ಶಿವಣ್ಣನ ಅಭಿಮಾನಿಗಳು ಖುಷಿಗೊಂಡಿದ್ದಾರೆ. "ಸೂಪರ್ ಡಾರ್ಲಿಂಗ್ ಶಿವಣ್ಣ. ನೀವು 100 ವರ್ಷ ತುಂಬಾ ಚೆನ್ನಾಗಿರಿ. ಯಾರ್ ಏನೇ ಕೆಟ್ಟದ್ ಅನ್ಕೊಂಡ್ರುಏ ಥು ಅನ್ಕೊಂಡ್ ಹೋಗ್ತಾಯಿರಿ", "ಪ್ರೀತ್ಸೆ ಮೂವಿ ಲಿ ಇನ್ನು ತುಂಬ ಒಳ್ಳೆ ಸಾಂಗ್ಸ್ ಇವೆ. Bt evry ಸೀಸನ್ ಲಿ ಒಂದೇ ಸಾಂಗ್.. ಈ ನಯನವು ಸೈ... ಅಂತ." "ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ಶಿವಣ್ಣ", "ನಮ್ಮ ಶಿವಣ್ಣ ಸೂಪರ್ ಲವ್ ಯು ಅಣ್ಣ" , "ನೂರಾರು ವರ್ಷಗಳ ಕಾಲ ನೀವು ಇರಬೇಕು ಶಿವಣ್ಣ" ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

"ಡಾ.‌ಅಪ್ಪಾಜಿಯವರ 200 ಚಿತ್ರಗಳನ್ನೂ ಮೀರಿ‌ ಮುಂದುವರೆಯಿರಿ, ಶಿವಣ್ಣ ಸರ್ ‌‌‌ಶುಭವಾಗಲಿ", "ಸರಿಗಮಪ ಈ ಎಪಿಸೋಡ್ ಕುತೂಹಲ ಮೂಡಿಸುತ್ತದೆ, ನೋಡಲೆಂದು ಮನಸು ಕಾತರಿಸುತ್ತಿದೆ. ಶ್ರೀಯುತ ಶಿವರಾಜ್ ಕುಮಾರ್‌ವರ ಚೇತರಿಕೆ ಮತ್ತು ಹರ್ಷೋಲ್ಲಾಸ ಕಂಡು ಸಂತಸವಾಯಿತು", "ತುಂಬಾ ಖುಷಿ ಶಿವಣ್ಣ. ಖುಷಿಯಾಗಿ ಕಣ್ಣೀರು ಬಂತು", "ಯಪ್ಪಾ ಇವ್ರ ಎನರ್ಜಿ ಏನಪ್ಪಾ ಇದು ದೇವ್ರೇ", "ಬಾಸ್ ಇಸ್ ಬ್ಯಾಕ್ ದೇವ್ರು", "ಸಿಂಹದ ಮರಿ", "ನಮ್ ಶಿವಣ್ಣ ಅಂದ್ರೆ ಎನರ್ಜಿ ಬೂಸ್ಟ್ ತರ ಅವರು ನೂರು ವರ್ಷ ಸುಖವಾಗಿರಲಿ", "ನಮ್ಮ ಸಿಂಹದ ಮರಿ ಶಿವಣ್ಣʼ, " ಎಂದೆಲ್ಲ ಅಭಿಮಾನಿಗಳು ಶಿವಣ್ಣನ ಗುಣಗಾನ ಮಾಡಿದ್ದಾರೆ.

ನಿವೇದಿತ ಶಿವರಾಜ್‌ ಕುಮಾರ್‌ ನಿರ್ಮಾಣದ ಫೈರ್‌ಫ್ಲೈ ಸಿನಿಮಾ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಪುನೀತ್ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಯಾಬಜಾರ್’ ಚಿತ್ರದಲ್ಲಿ ವಂಶಿ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದರು. ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಈಗ ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಚಿತ್ರತಂಡವು ಫೈರ್‌ ಫ್ಲೈ ಸಿನಿಮಾದ ಪ್ರೊಮೊಷನ್‌ನಲ್ಲಿ ನಿರತವಾಗಿದೆ. ಏಪ್ರಿಲ್‌ 24ರಂದು ಚಿತ್ರಮಂದಿರಗಳಲ್ಲಿ ಫೈರ್‌ ಫ್ಲೈ ರಿಲೀಸ್‌ ಆಗಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner