ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್; ಅಭಿಮಾನಿಗಳಿಗೆ ಹೋಳಿಗೆ ಊಟ
ಕನ್ನಡ ಸುದ್ದಿ  /  ಮನರಂಜನೆ  /  ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್; ಅಭಿಮಾನಿಗಳಿಗೆ ಹೋಳಿಗೆ ಊಟ

ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್; ಅಭಿಮಾನಿಗಳಿಗೆ ಹೋಳಿಗೆ ಊಟ

ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್ ಅಭಿಮಾನಿಗಳನ್ನು ಪ್ರೀತಿಯಿಂದ ಕರೆದಿದ್ದಾರೆ. ಡಾಲಿ ಆಮಂತ್ರಣ ಸ್ವೀಕರಿಸಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್
ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟ ಡಾಲಿ ಧನಂಜಯ, ತಮ್ಮ ವಿವಾಹದ ಲಗ್ನಪತ್ರಿಕೆಯನ್ನು ಕೈ ಬರಹದಲ್ಲೇ ಬರೆದು ನೀಡುವ ಮೂಲಕ ಎಲ್ಲರನ್ನ ಆತ್ಮೀಯವಾಗಿ ಆಮಂತ್ರಿಸಿದ್ದರು. ಸ್ಯಾಂಡಲ್‌ವುಡ್‌ ಸ್ಟಾರ್‍‌ಗಳಿಗೆ ಆಮಂತ್ರಣ ನೀಡಿದ್ದರು. ಆದರೆ ಈಗ ಅಭಿಮಾನಿಗಳಿಗೆ ವಿಶೇಷ ಆಮಂತ್ರಣ ನೀಡಿದ್ದಾರೆ. ವಿಶೇಷ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳನ್ನೂ ತಮ್ಮ ಮದುವೆಗೆ ಆಮಂತ್ರಿಸಿದ್ದಾರೆ. ಮಿಸ್ ಮಾಡ್ದೆ ಎಲ್ಲರೂ ಬಂದು ಆಶೀರ್ವಾದ ಮಾಡಿ, ಹೋಳಿಗೆ ಊಟ ಮಾಡಿಕೊಂಡು ಹೋಗಿ ಅಭಿಮಾನಿಗಳಿಗೆ ಒಂದು ಸ್ಪೆಷಲ್ ಆಮಂತ್ರಣ ಎಂದು ಬರೆದು, ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ “ವಿದ್ಯಾಪತಿ” ದ್ವಾರದ ಮೂಲಕ ಪ್ರವೇಶ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ವಿಡಿಯೋ ಆಮಂತ್ರಣದಲ್ಲೇನಿದೆ?

ಡಾಲಿ ಧನಂಜಯ್ ಬ್ಯಾಚುಲರ್ ಆಗಿದ್ದಾಗ ಅವರ ಜೀವನ ಬೇರೆಯದೇ ರೀತಿ ಇತ್ತು, ಅವರ ಗೆಳೆಯರು ಮದುವೆ ವಿಷಯ ಬಂದಾಗ ಯಾವ ರೀತಿ ಮಾತಾಡ್ತಾ ಇದ್ರು? ಇನ್ನು ನೆಂಟರಿಷ್ಟರು ಮದುವೆ ವಿಚಾರವನ್ನು ಹೇಗೆಲ್ಲಾ ಕೇಳ್ತಾ ಇದ್ರು?, ಅವರ ಅಪ್ಪ, ಅಮ್ಮ ಮೊಮ್ಮಗುವನ್ನು ಯಾವಾಗ ಕೊಡ್ತೀಯಾ? ಮದುವೆ ಯಾವಾಗ ಮಾಡೋದು ಎಂಬ ಪ್ರಶ್ನೆಗೆ ಉತ್ತರಿಸದೇ ಡಾಲಿ ದಿನಕಳೆದಿದ್ದರು ಎಂಬ ವಿಚಾರವನ್ನು ಹಾಗೂ ಎಲ್ಲ ಯುವಕರ ವಾಸ್ತವವನ್ನು ಇಷ್ಟುಕೊಂಡು ವಿಡಿಯೋ ಆಮಂತ್ರಣ ಮಾಡಿದ್ದಾರೆ. ಹತ್ತಾರು ಹುಡುಗಿಯರ ಜಾತಕ ಮನೆಗೆ ಬಂದ್ರೂ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಡಾಲಿ ಧನಂಜಯ್ ಮನಸಲ್ಲಿ ಇದ್ದವರೇ ಬೇರೆ.. ಅವರೇ ಈ "ಡಾಕ್ಟರಮ್ಮ" ಎಂದು ಹೇಳುತ್ತಾ, ತಮ್ಮ ಭಾವಿ ಪತ್ನಿ ಧನ್ಯತಾಗೆ ಸ್ಥೆತಸ್ಕೋಪ್ ರಿಂಗ್ ತೊಡಿಸಿ ಡಾಲಿ ತಮ್ಮ ಅಭಿಮಾನಿಗಳಿಗೆ ಅವರನ್ನು ಪರಿಚಯಿಸಿ ಆಮಂತ್ರಿಸಿದ್ದಾರೆ.

ವಿವಾಹವು ಫೆಬ್ರವರಿ 16, 2025 ರಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ ಸಮಾರಂಭ ಮತ್ತು ಸಂಜೆ ಆರತಕ್ಷತೆ ನಡೆಯಲಿದೆ. ಅಭಿಮಾನಿಗಳಿಗೆ “ವಿದ್ಯಾಪತಿ” ದ್ವಾರದ ಮೂಲಕ ಪ್ರವೇಶವಿದೆ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಆಮಂತ್ರಣ ಸ್ವೀಕರಿಸಿ ತುಂಬಾ ಖುಷಿಯಲ್ಲಿದ್ದಾರೆ. ಕೊನೆಗೂ ನೀವು ಅಭಿಮಾನಿಗಳನ್ನು ನೆನಪಿನಲ್ಲಿಟ್ಟುಕೊಂಡು ಆಮಂತ್ರಿಸಿದಿರಿ ಖುಷಿಯಾಯ್ತು ಎಂದು ಹೇಳಿದವರಿದ್ದಾರೆ. ಸಾಕಷ್ಟು ಜನ ಖುಷಿಯಿಂದ ಈಗಲೇ ಶುಭಾಶಯ ತಿಳಿಸಿದ್ದಾರೆ.

ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್
ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್

ಇದೀಗ ಕನ್ನಡ ಚಿತ್ರರಂಗದ ಹಲವು ನಟ-ನಟಿಯರಿಗೆ ಲಗ್ನಪತ್ರಿಕೆ ನೀಡುವ ಮೂಲಕ ಮದುವೆಗೆ ಆಹ್ವಾನಿಸಿದ್ದ ಡಾಲಿ ಅಭಿಮಾನಗಳನ್ನು ವಿಶೇಷ ರೀತಿಯಲ್ಲಿ ಆಹ್ವಾನಿಸಿದ್ದಕ್ಕೆ ಸಾಕಷ್ಟು ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

Whats_app_banner