ಪ್ರಜ್ವಲ್ ಅಭಿನಯದ ಹೊಸ ಚಿತ್ರ ‘ಕರಾವಳಿ’ ಟೀಸರ್ ಬಿಡುಗಡೆ; ಇದು ಕುರ್ಚಿಯಲ್ಲ ಪ್ರತಿಷ್ಠಿಯ ಪಿಚಾಚಿ - ಕಿವಿಗಪ್ಪಳಿಸುತ್ತದೆ ಈ ಒಂದು ಡೈಲಾಗ್
ನಟ ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾ ‘ಕಾರವಳಿ’ ಟೀಸರ್ ಬಿಡುಗಡೆಯಾಗಿದೆ. ಇದು ಕುರ್ಚಿಯಲ್ಲ ಪ್ರತಿಷ್ಠಿಯ ಪಿಚಾಚಿ ಎಂಬ ಡೈಲಾಗ್ ಸಂಚಲನ ಸೃಷ್ಟಿಸಿದೆ. ಇದು ನಟ ಅಥವಾ ನಟಿಯನ್ನು ಕೇಂದ್ರೀಕರಿಸಿಲ್ಲ, ಬದಲಾಗಿ ಒಂದು ವಸ್ತುವನ್ನು ಕೇಂದ್ರೀಕರಿಸಿದೆ.
ನಟ ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರದ ಟೀಸರ್ ರಿಲೀಸ್ ಆಗಿದೆ. 2025ರ ಬಹುನಿರೀಕ್ಷೆಯ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಕರಾವಳಿ ಸಿನಿಮಾ ಕೂಡ ಜಾಗ ಗಿಟ್ಟಿಸಿಕೊಂಡಿರುವುದು ವಿಶೇಷ. 'ಕರಾವಳಿ' ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಪೋಸ್ಟರ್ಸ್ ಮತ್ತು ಟೀಸರ್ ಮೂಲಕ ಈಗಾಗಲೇ ಕುತೂಹಲ ಹೆಚ್ಚಿಸಿರುವ ಕರಾವಳಿ ಹೊಸ ವರ್ಷದ ಪ್ರಯುಕ್ತ ಮತ್ತೊಂದು ಭರ್ಜರಿ ಟೀಸರ್ ಮೂಲಕ ಸಿನಿಅಭಿಮಾನಿಗಳ ಮುಂದೆ ಬಂದಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಗುರುದತ್ ಗಾಣಿಗ ನಿರ್ದೇಶನದ ಕರಾವಳಿಯ ವಿಭಿನ್ನವಾದ ಟೀಸರ್ ಆಕರ್ಷಕವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಪ್ರತಿಷ್ಠಿಯ ಕುರ್ಚಿಯೇ ಹೈಲೆಟ್
ಕರಾವಳಿಯಿಂದ ಬಂದಿರುವ ಹೊಸ ಟೀಸರ್ ಒಂದು ಪ್ರತಿಷ್ಠಿಯ ವಸ್ತುವಿನ ಮೇಲೆ ಇರುವುದು ವಿಶೇಷ. ಆದರೆ ಸಾಮಾನ್ಯವಾಗಿ ಟೀಸರ್ ನಾಯಕ, ನಾಯಕಿ ಅಥವಾ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪ್ರತಿಷ್ಠಿಯ ಕುರ್ಚಿ ಹೈಲೆಟ್. ಅದು ಬರಿ ಕುರ್ಚಿಯಲ್ಲ ಪ್ರತಿಷ್ಠಿಯ ಪಿಚಾಚಿ ಎನ್ನುವ ಸಂಭಾಷಣೆಯಿಂದ ಟೀಸರ್ ಪ್ರಾರಂಭವಾಗುತ್ತೆ. ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ ಕಣ್ಣಿಟ್ಟವರನ್ನು ಬಿಡಲ್ಲ ಎಂದು ನಟ ಮಿತ್ರ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೀಸರ್ ಮೈ ಜುಮ್ ಎನ್ನುವಂತಿದೆ.
ಈ ಸಿನಿಮಾದಿಂದ ಈಗಾಗಲೇ ಪ್ರಜ್ವಲ್ ದೇವರಾಜ್ ಅವರ ಮೂರು ರೀತಿಯ ಲುಕ್ ರಿವೀಲ್ ಆಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು ಪ್ರಜ್ವಲ್ ಇಲ್ಲಿ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಕೂಡ ಮೂಡಿಸಿದೆ.
ಅಂದಹಾಗೆ ಕರಾವಳಿ ಕಂಬಳ ಪ್ರಪಂಚದ ಬಗ್ಗೆ ಇರುವ ಸಿನಿಮಾ. ಈ ಮೊದಲು ರಿಲೀಸ್ ಆಗಿರುವ ಟೀಸರ್ ನಲ್ಲಿ ಒಂದು ಮಗು ಜನಿಸುತ್ತದೆ ಅದೇ ಸಮಯಕ್ಕೆ ಕೊಟ್ಟಿಗೆಯಲ್ಲಿ ಒಂದು ಕರುವಿನ ಜನನವು ಆಗುತ್ತೆ. ಸದ್ಯ ರಿಲೀಸ್ ಆಗಿರುವ ಟೀಸರ್ ಮುಂದುವರೆದ ಭಾಗ ಎಂಬಂತೆ ಆ ಮಗು ಹುಟ್ಟಿದಾಗಿನಿಂದ ಪ್ರತಿಷ್ಠಿಯ ಕುರ್ಚಿಯನ್ನು ನೋಡುತ್ತಾ ಬೆಳೆದವನು, ಆ ಕುರ್ಚಿಯ ಮೇಲೆ ಎಲ್ಲರ ಕಣ್ಣು ಬಿದ್ದಿರುವುದು ಈ ಟೀಸರ್ ನಲ್ಲಿ ಗೊತ್ತಾಗುತ್ತಿದೆ. ನಟ ಮಿತ್ರ, ರಮೇಶ್ ಇಂದಿರ ಅವರ ಕ್ರೌರ್ಯತ್ವ ಕೂಡ ಟೀಸರ್ ನಲ್ಲಿ ಕಾಣುತ್ತದೆ. ಕೆಕೆ ಮಠ ಹಾಗೂ ಟೀಸರ್ ನ ಕೊನೆಯಲ್ಲಿ ಒಂದು ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಪ್ರಜ್ವಲ್ ದೇವರಾಜ್ ಕೂಡ ತುಂಬಾ ಇಂಟ್ರಸ್ಟಿಂಗ್ ಎನಿಸುತ್ತಿದ್ದಾರೆ.
ನಟ ಪ್ರಜ್ವಲ್ ನಾಯಕನಾದರೆ ಸಂಪದಾ ನಾಯಕಿ
ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಈಗಾಗಲೇ 80ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಇದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope