ವಿಪಕ್ಷ ನಾಯಕನನ್ನು ಕೈ ಪಕ್ಷದಿಂದಲೇ ಆರಿಸಿಕೊಳ್ಳಿ; ಬಿಜೆಪಿಯ ಕಿವಿಹಿಂಡಿದ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್
ಚಿತ್ರ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್, ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 100 ದಿನಗಳಾದರೂ, ಬಿಜೆಪಿ ಮಾತ್ರ ಈ ವರೆಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
Nagathihalli Chandrashekara: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 100 ದಿನ ಪೂರೈಸಿತು. ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಪಂಚ ಗ್ಯಾರಂಟಿಗಳಲ್ಲಿಯೂ ಬಹುತೇಕ ಎಲ್ಲವನ್ನೂ ನಾಡಿನ ಜನರ ಮಡಿಲಿಗೆ ಹಾಕಿತು. ಆದರೆ, ಬಿಜೆಪಿ ಮಾತ್ರ ಈ ವರೆಗೂ ವಿಪಕ್ಷ ನಾಯಕನನ್ನು ಘೋಷಣೆ ಮಾಡಿಕೊಂಡಿಲ್ಲ. ಇತ್ತ ತೆರೆಮರೆಯಲ್ಲಿ ಈ ವಿಚಾರದ ಚರ್ಚೆ ನಡೆದಿದೆಯಾದರೂ, ಇನ್ನೂ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿಯುತ್ತಲೇ ಬರುತ್ತಿದೆ.
ಈ ವಿಪಕ್ಷ ನಾಯಕನ ವಿಚಾರವನ್ನೇ ಆಡಳಿತಾರೂಢ ಕಾಂಗ್ರೆಸ್, ರಾಜ್ಯ ಬಿಜೆಪಿಯನ್ನೇ ಲೇವಡಿ ಮಾಡುತ್ತಿದೆ. ರಾಜ್ಯ ಬಿಜೆಪಿಯನ್ನಷ್ಟೇ ಅಲ್ಲದೆ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿಯನ್ನೂ ಇದೇ ವಿಚಾರಕ್ಕೆ ಅಣಕಿಸುತ್ತಿದೆ. ಆದರೆ, ಇತ್ತ ಬಿಜೆಪಿ ಪಾಳಯದಲ್ಲಿ ಮಾತ್ರ ಅಂಥ ಬೆಳವಣಿಗೆಗಳು ಕಾಣುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನ ಪೂರೈಸಿದರೂ, ವಿಪಕ್ಷ ನಾಯಕನಿಲ್ಲದೇ ಬಿಜೆಪಿ ಮುಂದಡಿಯಿಡುತ್ತಿದೆ. ಈ ವಿಚಾರದ ಬಗ್ಗೆಯೇ ಚಿತ್ರ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಭಾರತೀಯ ಜನತಾ ಪಾರ್ಟಿಯ ಕಿವಿ ಹಿಂಡಿದ್ದಾರೆ.
ಚಂದನವನದ ಹಿರಿಯ ನಿರ್ದೇಶಕ, ಸಾಕಷ್ಟು ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ನಾಗತೀಹಳ್ಳಿ ಚಂದ್ರಶೇಖರ್, ಕೊಂಚ ಖಾರವಾಗಿಯೇ ವಿಪಕ್ಷ ನಾಯಕನ ವಿಚಾರವಾಗಿ ಬಿಜೆಪಿಯ ಕಾಲೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ಕಾಂಗ್ರೆಸ್‌ನಲ್ಲಿನ ಒಬ್ಬರನ್ನು ನೇಮಿಸಿಕೊಂಡು ಬಿಡಿ ಎಂದು ಲೇವಡಿ ಮಾಡಿದ್ದಾರೆ. ನಿರ್ದೇಶಕರ ಈ ಮಾತಿಗೆ ಪರ ವಿರೋಧ ಚರ್ಚೆಗಳೂ ನಡೆಯುತ್ತಿವೆ. ನಿಮಗೆ ಬೇರೆ ಕೆಲಸ ಇಲ್ಲವೇ ಎಂದು ನಾಗತೀಹಳ್ಳಿ ಅವರಿಗೇ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
ನಾಗತೀಹಳ್ಳಿ ಚಂದ್ರಶೇಖರ್ ಮಾತೇನು?
"ಬಿಜೆಪಿಗೆ ಒಂದು ವಿನಮ್ರ ಸಲಹೆ. ವಿಪಕ್ಷ ನಾಯಕನಿಲ್ಲದೆ ವಿಧಾನ ಸಭೆ ಅಪೂರ್ಣ ಎನಿಸುತ್ತಿದೆ. ನಿಮಗೆ ಆಯ್ಕೆ ತೀರಾ ಕಷ್ಟವಾದಲ್ಲಿ ಕಾಂಗ್ರೆಸ್ ನಲ್ಲೇ ಸೂಕ್ತರಾದ ಒಬ್ಬರನ್ನು ಹುಡುಕಿ ವಿಪಕ್ಷ ನಾಯಕನ ಹುದ್ದೆಯನ್ನು ‘ಔಟ್ ಸೋರ್ಸ್’ ಮಾಡಿ!" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆದಷ್ಟು ಬೇಹ ಅಪೋಸಿಷನ್ ಲೀಡರ್ ಆಯ್ಕೆಯಾಗಲಿ ಎಂದಿದ್ದಾರೆ. ಇವರ ಈ ಮಾತಿಗೆ ಹಲವರು ದನಿ ಗೂಡಿಸಿದರೆ, ಇನ್ನು ಕೆಲವರು ಟೀಕೆ ಮಾಡಿದ್ದಾರೆ.
ನಿರ್ದೇಶಕರ ಪೋಸ್ಟ್‌ಗೆ ನೆಟ್ಟಿಗರ ಕಾಮೆಂಟ್
- ಅವರು ಮಾಡುತ್ತಾರೆ ಬಿಡಿ, ನಿಮಗೆ ಯಾಕೆ ಚಿಂತೆ. ಲೋಕಸಭೆಯಲ್ಲಿ ವಿರೋಧ ಪಕ್ಷಕ್ಕೆ ಅರ್ಹತೆ ಇಲ್ಲ ಯಾವ ಪಕ್ಷಕೆ
- ಬಿಜೆಪಿಯಲ್ಲಿ ಎಷ್ಟೊಂದು ಅಂತಃಕಲಹ ಇದೆ ಎಂದು ಇದರಲ್ಲೇ ಗೊತ್ತಾಗುತ್ತದೆ. ಇವರ ಪಕ್ಷದೊಳಗೆನೇ ಏಕತೆ ಇಲ್ಲ.
- ಸಾರ್ ನೀವು ಬಿಜೆಪಿ ಪಕ್ಷಕ್ಕೆ ಬನ್ನಿ ನಿಮ್ಮನ್ನೇ ವಿರೋಧ ಪಕ್ಷ ನಾಯಕನಾಗಿ ಮಾಡೋಣ
- ಕಾಂಗ್ರೆಸ್ನಲ್ಲಿ ಎಲ್ಲರಿಗೂ ಸೂಕ್ತ ಸ್ಥಾನ ನೀಡುತ್ತಿಲ್ಲ ಎಂದು ಹೇಳುತ್ತ ಇದ್ದೀರಾ??
- ನಿಮಗೂ ಅಷ್ಟೇ, ನಿಮ್ಮ ಚಿತ್ರಗಳನ್ನು "ಮೀ ಟೂ " ನವರಿಗೆ outsource ಮಾಡಿ ಆರಾಮಾಗಿರಿ..
- ನಿಮಗೆ ಮಾರ್ಕೆಟ್ ನಲ್ಲಿ ಒಂದು ಬೆಲೆ ಇದೆ ಅದನ್ನು ಫಸ್ಟ್ ಉಳಿಸಿಕೊಳ್ಳಿ ಅದು ಬಿಟ್ಟು ವಿರೋಧ ಯಾಕೆ ನಿಮಗೆ? ಇಲ್ಲ ಅಂದ್ರೆ ನೀವೇ ಅಕ್ತಿರಾ ಹಂಸ ಲೆಕ್ಕ ನಾ ಕರೆದರೂ ಅಂತ ನನ್ನ ಯಾಕೆ ಕಾಂಗ್ರೆಸ್ ಕರೀಲಿಲ್ಲ ಅಂತ ನಾ ಅಂಗೇ ನಾದ್ರೂ ನಿಮ್ಮನ್ನು ನಾವೇ ಬಿಜೆಪಿ ಪಕ್ಷದವರು ಕರೀತಿವಿ ಸರ್
- ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕಾಗಿ ಸಿಂಟೆಕ್ಸ್ ಇಡಿಬೇಡಿ
- ಸರ್ ನೀವು ಯಾಕೆ ಹೀಗಾದ್ರೆ, ನೀವ್ ಎಲ್ಲಿದ್ದೆರೋ ಅಲ್ಲೇ ನಿಮ್ಮನ್ನ ನೋಡೋಕೆ ಚಂದ. ಇದೆಲ್ಲಾ ಬೇಡ ಬಿಡಿ. ನಿಮ್ಗೆ ಗೊತ್ತಲ್ಲ ಮೇಲೆ ಪಕ್ಷ ದ ಅದ್ಯಕ್ಷನ್ನ ಮಾಡೋಕೆ ಅವ್ರು ಎಷ್ಟು ಟೈಮ್ ತಗೊಂಡ್ರು. ಇವೆಲ್ಲ ರಾಜಕೀಯದಲ್ಲಿ ಐದ್ದದ್ದೆ. ನೀವು ಆರಾಮಾಗಿರಿ.
- ನಿಮಗ್ಯಾಕೆ ಅ ಚಿಂತೆ ಯಾಕೆ ಕೆಲಸ ಮಾಡೋಕ್ ಧಾರಾವಾಹಿ ಇಲ್ಲವೇ ಇಲ್ಲ ಹಂಸಲೇಖ ಅವರ ಇತ್ತೀಚಿಗಿನ ಸುದ್ದಿ ನೋಡಿ ಆಸೆಯ ಹಕ್ಕಿ ರೆಕ್ಕೆ ತೆರೆಯಲು ಪ್ರಾರಂಭಿಸಿದೆಯೇ?
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ