KD – The Devil: ಧ್ರುವ ಸರ್ಜಾ ನಟನೆಯ ಕೆಡಿ- ದಿ ಡೆವಿಲ್‌ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಶೀಘ್ರ
ಕನ್ನಡ ಸುದ್ದಿ  /  ಮನರಂಜನೆ  /  Kd – The Devil: ಧ್ರುವ ಸರ್ಜಾ ನಟನೆಯ ಕೆಡಿ- ದಿ ಡೆವಿಲ್‌ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಶೀಘ್ರ

KD – The Devil: ಧ್ರುವ ಸರ್ಜಾ ನಟನೆಯ ಕೆಡಿ- ದಿ ಡೆವಿಲ್‌ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಶೀಘ್ರ

KD – The Devil: ಪ್ರೇಮ್‌ ನಿರ್ದೇಶನದ ಕೆಡಿ ದಿ ಡೆವಿಲ್‌ ಸಿನಿಮಾವು ಅಂದುಕೊಂಡಂತೆ ಆಗಿದ್ದರೆ, ಈ ಡಿಸೆಂಬರ್‌ ತಿಂಗಳಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಚಿತ್ರತಂಡ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಮಾಡುತ್ತಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆ ಕುರಿತು ಮಾಹಿತಿ ದೊರಕಿದೆ.

KD – The Devil: ಕೆಡಿ- ದಿ ಡೆವಿಲ್‌ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಶೀಘ್ರ
KD – The Devil: ಕೆಡಿ- ದಿ ಡೆವಿಲ್‌ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಶೀಘ್ರ

ಬೆಂಗಳೂರು: ಪ್ರೇಮ್‌ ನಿರ್ದೇಶನದ ಕೆಡಿ ದಿ ಡೆವಿಲ್‌ ಸಿನಿಮಾವು ಅಂದುಕೊಂಡಂತೆ ಆಗಿದ್ದರೆ, ಈ ಡಿಸೆಂಬರ್‌ ತಿಂಗಳಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಚಿತ್ರತಂಡ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಮಾಡುತ್ತಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆ ಕುರಿತು ಮಾಹಿತಿ ದೊರಕಿದೆ. ಕೆಲವು ತಿಂಗಳ ಹಿಂದೆ ಈ ವರ್ಷ ಧ್ರುವ ಸರ್ಜಾ ಅವರ ಎರಡು ಸಿನಿಮಾ ಬಿಡುಗಡೆಯಾಗುವುದಾಗಿ ಸುದ್ದಿಯಾಗಿತ್ತು. ಮಾರ್ಟಿನ್‌ ಮತ್ತು ಕೆಡಿ ದಿ ಡೆವಿಲ್‌ ಸಿನಿಮಾ ಬಿಡುಗಡೆಯಾಗುವ ಸೂಚನೆ ಇತ್ತು. ಆದರೆ, ಇದಾದ ಬಳಿಕ ಕೆಡಿ ಸಿನಿಮಾವು ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂಬ ಅಪ್‌ಡೇಟ್‌ ದೊರಕಿತ್ತು. ಸಿನಿಮಾದ ಪ್ರಮುಖ ಭಾಗವಾದ ಶೂಟಿಂಗ್‌ ಈಗಾಗಲೇ ಮುಗಿದಿದೆ. ಈಗ ಡಬ್ಬಿಂಗ್‌ ಮತ್ತು ಪೊಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತವೆ. ಸಿನಿಮಾದ ಪ್ರಮೋಷನ್‌ ಕೂಡ ಆರಂಭವಾಗಿದೆ.

ಕೆಡಿ- ದಿ ಡೆವಿಲ್‌ ಮೊದಲ ಹಾಡು ಬಿಡುಗಡೆ

ಕೆವಿಎನ್‌ ಪ್ರೊಡಕ್ಷನ್‌ನ ಕೆಡಿ ದಿ ಡೆವಿಲ್‌ ಸಿನಿಮಾದ ಮೊದಲ ಹಾಡು ಡಿಸೆಂಬರ್‌ 24ರಂದು ಬಿಡುಗಡೆಯಾಗಲಿದೆ. ಶಿವ ಶಿವ ಎಂಬ ಈ ಹಾಡನ್ನು ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಈ ಸಿನಿಮಾದ ಹಾಡು ಬಿಡುಗಡೆಯಾಗುವ ಸಮಯ, ಸ್ಥಳದ ಕುರಿತು ಚಿತ್ರತಂಡ ಡಿಸೆಂಬರ್‌ 15ರಂದು ಅಪ್‌ಡೇಟ್‌ ನೀಡಲಿದೆ. ಈ ಹಾಡಿಗೆ ಅರ್ಜುನ್‌ ಜನ್ಯ ಸಂಗೀತವಿದೆ. ಈ ಸಿನಿಮಾದಲ್ಲಿ ಸುಮಾರು ಆರು ಹಾಡುಗಳು ಇವೆ ಎನ್ನಲಾಗಿದೆ.

ಬೆಂಗಳೂರಿನ 1970ರ ಆಸುಪಾಸಿನ ಭೂಗತಲೋಕದ ಕಥೆಯನ್ನು ಕೆಡಿ ಸಿನಿಮಾ ಹೊಂದಿದೆ. ಇದು ಪ್ರೇಮ್‌ ಮತ್ತು ಧ್ರುವ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾವಾಗಿದೆ. ಇತ್ತೀಚೆಗೆ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ಬಿಡುಗಡೆಯಾಗಿತ್ತು. ಈ ಬಿಗ್‌ ಬಜೆಟ್‌ ಸಿನಿಮಾವು ಚಿತ್ರಮಂದಿರ ಮತ್ತು ಒಟಿಟಿಗಳಲ್ಲಿ ಯಶಸ್ಸು ಪಡೆಯಲಿಲ್ಲ.

ಕೆಡಿ ಸಿನಿಮಾ ಬಿಡುಗಡೆ ವಿಳಂಬ

ಈ ಡಿಸೆಂಬರ್‌ ತಿಂಗಳಲ್ಲಿಯೇ ಕೆಡಿ ದಿ ಡೆವಿಲ್‌ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರೇಮ್‌ ಹೇಳಿದ್ದರು. "ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತದೆ, ಚಿತ್ರ ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ" ಎಂದು ಪ್ರೇಮ್‌ ಹೇಳಿದ್ದರು. ಆದರೆ, ವರಮಹಾಲಕ್ಷ್ಮೀ ಹಬ್ಬದಂದು ಚಿತ್ರದ ಟೀಸರ್ ಬಿಡುಗಡೆ ಆಗಲಿಲ್ಲ. ಇದಾದ ಬಳಿಕ ಚಿತ್ರ ಬಿಡುಗಡೆ ವಿಳಂಬವಾಗುವ ಸೂಚನೆ ದೊರಕಿತ್ತು.

ಪ್ರೇಮ್‍ ತಮ್ಮ ಚಿತ್ರಗಳನ್ನು ಸುಮ್ಮನೆ ಬಿಡುಗಡೆ ಮಾಡುವುದಿಲ್ಲ. ಸಾಕಷ್ಟು ಪ್ರಚಾರ ಮಾಡಿ, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿ, ಆ ನಂತರ ಬಿಡುಗಡೆ ಮಾಡುತ್ತಾರೆ. ಹೀಗಾಗಿ, ಈ ಸಿನಿಮಾ ಈ ವರ್ಷ ಬಿಡುಗಡೆಯಾಗದು. ಮುಂದಿನ ವರ್ಷ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾದು ನೋಡಬೇಕಿದೆ.

‘ಕೆಡಿ – ದಿ ಡೆವಿಲ್‍’ ಸಿನಿಮಾದ ಬಗ್ಗೆ

ಈ ಸಿನಿಮಾದಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಪ್ರೇಮ್‌ ಅವರದ್ದು. ಕೆ.ವಿ.ಎನ್‍. ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೋನ ವೆಂಕಟನಾರಾಯಣ್‍ ‘ಕೆಡಿ – ದಿ ಡೆವಿಲ್‍’ ಸಿನಿಮಾವನ್ನು ನಿರ್ಮಿಸಿದ್ದಾರೆ. ಧ್ರುವ ಸರ್ಜಾಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಸಂಯೋಜಿಸಿದ್ದು, ಮೊದಲ ಬಾರಿಗೆ 260 ಪೀಸ್‍ ಆರ್ಕೆಸ್ಟ್ರಾ ಬಳಸಿದ್ದಾರೆ. ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಬಾಲಿವುಡ್‌ನ ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ ಮುಂತಾದವರು ಚಿತ್ರದಲ್ಲಿ ಇರುವುದರಿಂದ ಕೆಡಿ ಕುರಿತು ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ತುಸು ಹೆಚ್ಚೇ ಇದೆ.

Whats_app_banner