ಮೈಸೂರು ಹುಡುಗರ ಶಿವ ಶಿವ ಡ್ಯಾನ್ಸ್ ರೀಲ್ಸ್ ವೈರಲ್; ಫೆಂಟಾಸ್ಟಿಕ್ ಅಂದ್ರು ಧ್ರುವ ಸರ್ಜಾ, ಕಾಲ್ ಮಾಡಿ ಪ್ರೇಮ್ ಹೀಗಂದ್ರು
ಕೆಡಿ ದಿ ಡೆವಿಲ್ ಸಿನಿಮಾದ ಶಿವ ಶಿವ ಹಾಡಿಗೆ ಮೈಸೂರಿನ ಹುಡುಗರು ಮಾಡಿರುವ ಡ್ಯಾನ್ಸ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಡ್ಯಾನ್ಸ್ ನೋಡಿ ಖುಷಿಯಾಗಿ ಸ್ವತಃ ಧ್ರುವ ಸರ್ಜಾ ಕಾಮೆಂಟ್ ಮಾಡಿದ್ದಾರೆ. ನಟಿ ರೀಷ್ಮಾ ನಾಣಯ್ಯ ಕೂಡ ಕಾಮೆಂಟ್ ಮಾಡಿದ್ದಾರೆ. ನಿರ್ದೇಶಕ ಪ್ರೇಮ್ ಕೂಡ ಕಾಲ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ನಟನೆಯ, ಪ್ರೇಮ್ ನಿರ್ದೇಶನದ ಕೆಡಿ ದಿ ಡೆವಿಲ್ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಇತ್ತೀಚೆಗೆ ಈ ಸಿನಿಮಾದ ಶಿವ ಶಿವ ಹಾಡು ಬಿಡುಗಡೆಯಾಗಿತ್ತು. ಇದೀಗ ಕೆಡಿ ದಿ ಡೆವಿಲ್ ಸಿನಿಮಾದ ಇದೇ ಶಿವ ಶಿವ ಹಾಡಿಗೆ ಮೈಸೂರಿನ ಹುಡುಗರು ಮಾಡಿರುವ ಡ್ಯಾನ್ಸ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಡ್ಯಾನ್ಸ್ ನೋಡಿ ಖುಷಿಯಾಗಿ ಸ್ವತಃ ಧ್ರುವ ಸರ್ಜಾ ಕಾಮೆಂಟ್ ಮಾಡಿದ್ದಾರೆ. ನಟಿ ರೀಷ್ಮಾ ನಾಣಯ್ಯ ಕೂಡ ಕಾಮೆಂಟ್ ಮಾಡಿದ್ದಾರೆ. ನಿರ್ದೇಶಕ ಪ್ರೇಮ್ ಅಂತೂ ಈ ಹುಡುಗರಿಗೆ ಕಾಲ್ ಮಾಡಿ "ಒಂದು ದಿನ ಕಾಲ್ ಮಾಡ್ತಿನಿ, ಸಿಗಿ" ಎಂದಿದ್ದಾರೆ. ಒಟ್ಟಾರೆ, ಈ ರೀಲ್ಸ್ ಮೂಲಕ ಮೈಸೂರು ಹುಡುಗರು ಫೇಮಸ್ ಆಗಿದ್ದಾರೆ.
ಶಿವ ಶಿವ ಹಾಡಿನ ರೀಲ್ಸ್ ವೈರಲ್
ಸಿದ್ದಾರ್ಥ್, ಅಭಿರಥ, ಹರ್ಷ, ಮಂಜು, ಸಂಜಯ್ ಎಂಬ ಮೈಸೂರು ಹುಡುಗರು ಮಾಡಿರುವ ರೀಲ್ಸ್ ವೈರಲ್ ಆಗಿದೆ. ಇವರಲ್ಲಿ ಮೂವರು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಕೋರಿಯೊಗ್ರಫಿ, ಕ್ಯಾಮೆರಾ ವರ್ಕ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಈ ವಿಡಿಯೋ ನೋಡಿ ಕೆಡಿ ಸಿನಿ ತಂಡ ಏನು ಪ್ರತಿಕ್ರಿಯೆ ನೀಡಿದೆ ಎನ್ನುವುದನ್ನು ತಿಳಿಯುವ ಮುನ್ನ ಆ ವೈರಲ್ ವಿಡಿಯೋ ನೋಡಿ.
ಫೆಂಟಾಸ್ಟಿಕ್ ಅಂದ್ರು ಧ್ರುವ ಸರ್ಜಾ
ಈ ರೀಲ್ಸ್‌ಗೆ ಸ್ವತಃ ಧ್ರುವ ಸರ್ಜಾ ಕಾಮೆಂಟ್ ಮಾಡಿ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. "ಫೆಂಟಾಸ್ಟಿಕ್, ಥ್ಯಾಂಕ್‌ಯು, ಜೈ ಹನುಮಾನ್" ಎಂದು ಧ್ರುವ ಸರ್ಜಾ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಮೈಸೂರು ಹುಡುಗರು ಖುಷಿಯಾಗಿ "ಥ್ಯಾಂಕ್ ಯು ಬಾಸ್, ಥ್ಯಾಂಕ್ ಯು, ಜೈ ಹನುಮಾನ್" ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರೀಷ್ಮಾ ನಾಣಯ್ಯ ಕೂಡ ಈ ರೀಲ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀಲ್ಸ್ ಬೆಂಕಿ ಎಂದು ಬರೆದು ಬೆಂಕಿ ಇಮೋಜಿ ಹಾಕಿದ್ದಾರೆ. ಈ ವಿಡಿಯೋ ಐವತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ಪ್ರೇಮ್ ಕಾಲ್ ಮಾಡಿ ಹೀಗಂದ್ರು
"ಹೇ ಸಖತ್ ಆಗಿ ಮಾಡಿದ್ರಿ ಕಣೋ, ನೋಡಿ ಖುಷಿಯಾಯ್ತು. ತುಂಬಾ ಚೆನ್ನಾಗಿ ಮಾಡಿದ್ರಿ ಕಣ್ರೋ. ಒಂದು ಕೆಲಸ ಮಾಡ್ರಿ. ನಾನು ಫೋನ್ ಮಾಡಿಸ್ತಿನಿ. ಮೀಟ್ ಮಾಡೋಣ ಬರ್ರೋ" ಎಂದು ನಿರ್ದೇಶಕ ಪ್ರೇಮ್ ಸ್ವತಃ ಕಾಲ್ ಮಾಡಿದ್ದಾರೆ.
ದೌಲತ್ತಲ್ ಮೆರದೋರೆಲ್ಲ ಹಾಡು
ಈ ಮೈಸೂರು ಹುಡುಗರು ಶಿವ ಶಿವ ಹಾಡಿನ ದೌಲತ್ತಲ್ ಮೆರೆದೋರೆಲ್ಲ... ಸಾಲಿನಿಂದ ಶುರುವಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ದೌಲತ್ತಲ್ ಮೆರದೋರೆಲ್ಲ ಹಿಸ್ಟರಿ ಲಿ ಉಳಿದೆಯಿಲ್ಲ..
ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಳ್ದೊದ್ರಲ್ಲ
ನೀನ್ ಅಂತೋನ್ ಅಲ್ವೇ ಅಲ್ಲ...ನೀನ್ ಅಂತೋನ್ ಅಲ್ವೇ ಅಲ್ಲ... ನಿನ್ನಂಗೆ ಯಾರು ಇಲ್ಲ..
ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತಯೀರ್ಲಾ ..
ಬೆಳೆದ ಬೆಳೆದ ಬೆಳೆದ ನೋಡೋ..
ಗುರುವೇ ನಿನ್ನಾಟ ಬಲ್ಲೋರ್..ಗುರುವೇ ನಿನ್ನಾಟ ಬಲ್ಲೋರ್..
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, ಶಿವಾ..
ಶಿವಾ..ಶಿವಾ..ಶಿವಾ..ಶಿವಾ..ಶಿವಾ..
ಶಿವ ಶಿವ ಹಾಡಿನ ಲಿರಿಕ್ಸ್ ಇಲ್ಲಿದೆ: Shiva Shiva Song Lyrics: ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ... ಕೆಡಿ ಸಿನಿಮಾದ ಶಿವ ಶಿವ ಹಾಡಿಗೆ ಧ್ರುವ ಸರ್ಜಾ ಫ್ಯಾನ್ಸ್ ಖುಷ್
ಕೆಡಿ ದಿ ಡೆವಿಲ್ ಸಿನಿಮಾದ ಕುರಿತು
‘ಕೆಡಿ – ದಿ ಡೆವಿಲ್’ ಎಂಬ ಮುಂಬರುವ ಕನ್ನಡ ಸಿನಿಮಾಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೋನ ವೆಂಕಟನಾರಾಯಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿರಲಿದೆ. ಮೊದಲ ಬಾರಿಗೆ 260 ಪೀಸ್ ಆರ್ಕೆಸ್ಟ್ರಾ ಬಳಸಿ ಸಂಗೀತ ನೀಡಲಾಗುತ್ತಿದೆ.
ವಿಭಾಗ