ಬಾಕ್ಸ್ ಆಫೀಸ್‌ನಲ್ಲಿ ನಾಲ್ಕನೇ ದಿನವೂ ಅಬ್ಬರಿಸಿದ ಮ್ಯಾಕ್ಸ್; ಈವರೆಗಿನ ಕಲೆಕ್ಷನ್ ಎಷ್ಟು, ಪರಭಾಷೆಗಳಲ್ಲಿ ಹೇಗಿದೆ ರೆಸ್ಪಾನ್ಸ್?
Max box office Collection Day 4: ಮ್ಯಾಕ್ಸ್ ಸಿನಿಮಾ ನಾಲ್ಕನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಮೊದಲ ದಿನ 8.75 ರೂ. ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ ಅದಾದ ಬಳಿಕ ಎರಡು ದಿನ ಇಳಿಕೆ ಕಂಡಿತ್ತು. ಇದೀಗ ಶನಿವಾರ ಮತ್ತೆ ಹಳೇ ಲಯಕ್ಕೆ ಮರಳಿದೆ. ಭಾನುವಾರದ ಗಳಿಕೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದೂ ಹೇಳಲಾಗುತ್ತಿದೆ.
Max Box office Collection Day 4: ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಮತ್ತೆ ಗೆದ್ದು ಬೀಗಿದ್ದಾರೆ. ಮ್ಯಾಕ್ಸ್ ಸಿನಿಮಾ ಮೂಲಕ ಮ್ಯಾಕ್ಸಿಮಮ್ ಹಿಟ್ ನೀಡಿದ್ದಾರೆ ಸುದೀಪ್. ಡಿಸೆಂಬರ್ 25ರಂದು ಬಿಡುಗಡೆ ಆಗಿದ್ದ ಮ್ಯಾಕ್ಸ್ ಚಿತ್ರಕ್ಕೆ ಪ್ರೇಕ್ಷಕರಿಂದ ಭರಪೂರ್ ಮೆಚ್ಚುಗೆ ಸಿಗುತ್ತಿದೆ. ಕಿಚ್ಚನ ಅಭಿಮಾನಿ ವಲಯದಿಂದಲೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ದಿನದಿಂದ ದಿನಕ್ಕೆ ಚಿತ್ರವೂ ಹೆಚ್ಚೆಚ್ಚು ಗಳಿಕೆ ಕಾಣುತ್ತ ಮುಂದುವರಿಯುತ್ತಿದೆ. ಕ್ರಿಸ್‌ಮಸ್ ರಜಾ ದಿನಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಸಿನಿಮಾ, ಅಂದುಕೊಂಡಂತೆ ಆ ದಿನಗಳನ್ನೇ ಎನ್‌ಕ್ಯಾಶ್ ಮಾಡಿಕೊಳ್ಳುತ್ತಿದೆ.
ಈ ಬಾರಿ ಕ್ರಿಸ್‌ಮಸ್ ಪ್ರಯುಕ್ತ ಬೇರೆ ಭಾಷೆಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿಲ್ಲ. ಅದರಲ್ಲೂ ಒಂದಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಕಂಡರೂ ಅವುಗಳ ಹೈಪ್ ಅಷ್ಟಾಗಿ ಇರಲಿಲ್ಲ. ಆ ಗ್ಯಾಪ್‌ನಲ್ಲಿಯೇ ಮ್ಯಾಕ್ಸ್ ಸಿನಿಮಾ ಕನ್ನಡದ ಜತೆಗ ಪರಭಾಷೆಗಳಲ್ಲಿಯೂ ಮೋಡಿ ಮಾಡುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ತೆರೆಕಂಡಿದೆ. ಅಲ್ಲಿನ ಪ್ರೇಕ್ಷಕರಿಂದಲೂ ಬಹುಪರಾಕ್ ಪಡೆದುಕೊಳ್ಳುತ್ತಿದೆ. ಹಾಗಾದರೆ, ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಈ ಸಿನಿಮಾದ ಬೊಕ್ಕಸಕ್ಕೆ ಹರಿದು ಬಂದಿದ್ದು ಎಷ್ಟು ಕೋಟಿ?
2024ನೇ ವರ್ಷ ಕನ್ನಡ ಚಿತ್ರೋದ್ಯಮದ ಪಾಲಿಗೆ ಹೇಳಿಕೊಳ್ಳುವಂಥ ವರ್ಷವಾಗಿಲ್ಲ. ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆದರೂ, ಅವುಗಳ ಗಳಿಕೆ ವಿಚಾರ ಹೆಚ್ಚು ಸದ್ದು ಮಾಡಲಿಲ್ಲ. ಬೆರಳೆಣಿಕೆ ಸಿನಿಮಾಗಳು ಮಾತ್ರ ಈ ವರ್ಷ ಕೋಟಿ ಲೆಕ್ಕದಲ್ಲಿ ಎರಡಂಕಿ ದಾಟಿವೆ. ಹೀಗಿರುವಾಗಲೇ ವರ್ಷಾಂತ್ಯಕ್ಕೆ ಆಗಮಿಸಿದ ಮ್ಯಾಕ್ಸ್ ಮತ್ತು ಯುಐ ಸಿನಿಮಾಗಳು ಆ ನೋವನ್ನು ಮರೆಮಾಚಿವೆ. ಈ ಎರಡು ಸಿನಿಮಾಗಳು ಕಲೆಕ್ಷನ್ ವಿಚಾರದಲ್ಲಿ ಒಳ್ಳೆಯ ನಂಬರ್ ಕಲೆಹಾಕಿವೆ. ಆ ಪೈಕಿ ಮ್ಯಾಕ್ಸ್ ಸಿನಿಮಾ ಒಂದು ಹೆಜ್ಜೆ ಮುಂದಿದೆ.
ನಾಲ್ಕನೇ ದಿನದ ಕಲೆಕ್ಷನ್ ಎಷ್ಟು?
ನಾಲ್ಕನೇ ದಿನವಾದ ಶನಿವಾರ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಕ್ಸ್ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಬರೋಬ್ಬರಿ 5 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಎರಡು ಮತ್ತು ಮೂರನೇ ದಿನಕ್ಕೆ ಹೋಲಿಕೆ ಮಾಡಿದರೆ, ಕಲೆಕ್ಷನ್‌ನಲ್ಲಿಯೂ ಏರಿಕೆ ಕಂಡಿದೆ. ಹೆಚ್ಚೆಚ್ಚು ಜನ ಚಿತ್ರಮಂದಿರದ ಕಡೆಗೂ ಆಗಮಿಸುತ್ತಿದ್ದಾರೆ. ಅದೇ ರೀತಿ ಇಂದು (ಭಾನುವಾರ) ಆ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಗಳಿವೆ. ಸ್ಟ್ರೀನ್‌ಗಳ ಸಂಖ್ಯೆ ಹೆಚ್ಚಾಗುವುದರ ಜತೆಗೆ, ಕಲೆಕ್ಷನ್‌ನಲ್ಲಿಯೂ ದೊಡ್ಡ ನಂಬರ್ ಸಿಗಲಿದೆ ಎಂದೇ ಹೇಳಲಾಗುತ್ತಿದೆ.
ಈ ವರೆಗಿನ ಕಲೆಕ್ಷನ್ ಎಷ್ಟು?
ಕಾರ್ತಿಕೇಯ ನಿರ್ದೇಶನದಲ್ಲಿ ಕಲೈಪುಲಿ ಎಸ್ ಧಾನು ನಿರ್ಮಾಣ ಮಾಡಿರುವ ಮ್ಯಾಕ್ಸ್ ಸಿನಿಮಾ ಕನ್ನಡ ಮಾತ್ರವಲ್ಲದೆ ಪರಭಾಷೆಗಳಿಂದಲೂ ಬಹುಪರಾಕ್ ಪಡೆದುಕೊಳ್ಳುತ್ತಿದೆ. ಮೊದಲ ದಿನ 8.7 ಕೋಟಿ ರೂ. ಗಳಿಕೆ ಕಂಡ ಈ ಸಿನಿಮಾ, ಎರಡನೇ ದಿನ 3.8 ಕೋಟಿ ರೂ., ಮೂರನೇ ದಿನ 4.7 ಕೋಟಿ ರೂ. ಗಳಿಸಿದೆ. ನಾಲ್ಕನೇ ದಿನ 5 ಕೋಟಿ ಗಳಿಸುವ ಮೂಲಕ ಒಟ್ಟಾರೆಯಾಗಿ 22.25 ಕೋಟಿ ರೂಪಾಯಿ ಬಾಚಿಕೊಂಡಿದೆ.
ಮ್ಯಾಕ್ಸ್‌ನಲ್ಲಿ ಸಾಹಸವೇ ಮ್ಯಾಕ್ಸಿಮಮ್
ಮ್ಯಾಕ್ಸ್ ಸಿನಿಮಾದಲ್ಲಿ ಅರ್ಜುನ್ ಮಹಾಕ್ಷಯ್ ಹೆಸರಿನ ಪಾತ್ರದಲ್ಲಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಇದಾಗಿದೆ. ಸುದೀಪ್ ಅವರ ಸಿನಿಮಾಗಳೆಂದರೆ, ಅಲ್ಲಿ ಕಲರ್‌ಫುಲ್ ಹಾಡುಗಳು, ನಾಯಕಿ ಜತೆಗಿನ ರೊಮ್ಯಾಂಟಿಕ್ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಮ್ಯಾಕ್ಸ್‌ನಲ್ಲಿಅಂಥ ಯಾವುದೇ ದೃಶ್ಯಗಳು ಕಾಣಿಸುವುದಿಲ್ಲ. ಅದರ ಬದಲಿಗೆ ಮ್ಯಾಕ್ಸಿಮಮ್ ಮಾಸ್ ಸೀನ್‌ಗಳೇ ಅಧಿಕವಾಗಿವೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.