Max First Half Review: ಕಿಚ್ಚ ಸುದೀಪ್‌ ಮ್ಯಾಕ್ಸಿಮಮ್‌ ಆ್ಯಕ್ಷನ್‌ಗೆ ಸಾಕ್ಷಿಯಾದ ಮ್ಯಾಕ್ಸ್‌, ಒಂದು ರಾತ್ರಿ ನಡೆಯುವ ಘಟನೆ
ಕನ್ನಡ ಸುದ್ದಿ  /  ಮನರಂಜನೆ  /  Max First Half Review: ಕಿಚ್ಚ ಸುದೀಪ್‌ ಮ್ಯಾಕ್ಸಿಮಮ್‌ ಆ್ಯಕ್ಷನ್‌ಗೆ ಸಾಕ್ಷಿಯಾದ ಮ್ಯಾಕ್ಸ್‌, ಒಂದು ರಾತ್ರಿ ನಡೆಯುವ ಘಟನೆ

Max First Half Review: ಕಿಚ್ಚ ಸುದೀಪ್‌ ಮ್ಯಾಕ್ಸಿಮಮ್‌ ಆ್ಯಕ್ಷನ್‌ಗೆ ಸಾಕ್ಷಿಯಾದ ಮ್ಯಾಕ್ಸ್‌, ಒಂದು ರಾತ್ರಿ ನಡೆಯುವ ಘಟನೆ

Max Movie First Half Review: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಇಂದು ಬಿಡುಗಡೆಯಾಗಿದೆ. ಸುದೀಪ್‌ ಜತೆಗೆ ವರಲಕ್ಷ್ಮಿ ಶರತ್ ಕುಮಾರ್​, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿರುವ ಮ್ಯಾಕ್ಸ್‌ ಸಿನಿಮಾದ ಮೊದಲಾರ್ಧ ಹೇಗಿದೆ ಎಂದು ತಿಳಿಯೋಣ.

Max Movie: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಮೊದಲಾರ್ಧ ಹೇಗಿದೆ?
Max Movie: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಮೊದಲಾರ್ಧ ಹೇಗಿದೆ?

Max Movie First Half Review: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಡಿಸೆಂಬರ್‌ 25ರ ಕ್ರಿಸ್‌ಮಸ್‌ ದಿನದಂದು ಬಿಡುಗಡೆಯಾಗಿದೆ. ಇದೀಗ ಈ ಸಿನಿಮಾದ ಫಸ್ಟ್‌ ಶೋ ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಫಸ್ಟ್‌ ಶೋ ಟಿಕೆಟ್‌ಗಳು ಖಾಲಿಯಾಗಿವೆ. ಮ್ಯಾಕ್ಸ್‌ ಬಿಡುಗಡೆಯಾಗಿರುವ ಚಿತ್ರಮಂದಿರಗಳು ಬೆಳ್ಳಂಬೆಳಗ್ಗೆಯೇ ಪ್ರೇಕ್ಷಕರ ದಟ್ಟಣೆಯಿಂದ ಕೂಡಿದೆ. ಈ ಸಿನಿಮಾ ಹೇಗಿದೆ? ಇನ್‌ಸ್ಪೆಕ್ಟರ್ ಅರ್ಜುನ್ ಮಹಾಕ್ಷಯ್ ಆಗಿ ಕಿಚ್ಚ ಸುದೀಪ್‌ ಹೇಗೆ ನಟಿಸಿದ್ದಾರೆ? ಚಿತ್ರದ ಕಥೆಯೇನು? ಇತ್ಯಾದಿ ಪ್ರಶ್ನೆಗಳು ಇನ್ನೂ ಸಿನಿಮಾ ನೋಡದೆ ಇರುವವರಿಗೆ ಮತ್ತು ಇನ್ಮುಂದೆ ನೋಡಬೇಕೆಂದುಕೊಂಡವರಿಗೆ ಇರಬಹುದು. ಇದಕ್ಕಾಗಿ ಇಲ್ಲಿ ಈ ಸಿನಿಮಾದ ಮೊದಲಾರ್ಧದ ವಿಮರ್ಶೆ ನೀಡಲಾಗಿದೆ. ಮ್ಯಾಕ್ಸ್‌ ಸಿನಿಮಾದಲ್ಲಿ ಕಿಚ್ಚ ಸುದೀಪ್‌, ವರಲಕ್ಷ್ಮಿ ಶರತ್ ಕುಮಾರ್ ಜತೆಗೆ ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಇಂಟರ್‌ವಲ್‌ ತನಕ ಈ ಸಿನಿಮಾ ನೋಡಿದಾಗ ಏನು ಅನಿಸಿತ್ತು? ತಿಳಿಯೋಣ ಬನ್ನಿ.

ಮ್ಯಾಕ್ಸ್‌ ಸಿನಿಮಾದ ಮೊದಲಾರ್ಧದ ವಿಮರ್ಶೆ

ಮ್ಯಾಕ್ಸ್‌ ಸಿನಿಮಾ ಇಂಟರ್‌ವಲ್‌ ತನಕ ಎಲ್ಲೂ ಬೋರ್‌ ಹೊಡೆಸದೆ ಸಂಪೂರ್ಣ ಆಕ್ಷನ್‌ ಪ್ಯಾಕ್ಡ್‌ ಆಗಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಇದೆ. ಒಂದು ದಿನದಲ್ಲಿ (ಒಂದು ರಾತ್ರಿಯಲ್ಲಿ) ನಡೆಯುವ ಘಟನೆಯಲ್ಲಿ ಇಂಟರ್‌ವಲ್‌ ತನಕವೂ ರಾತ್ರಿಯೇ ಇತ್ತು. ಈ ರೀತಿ ಒಂದು ರಾತ್ರಿಯಲ್ಲಿ ನಡೆಯುವ ಘಟನೆ ಇಟ್ಟುಕೊಂಡು ಒಂದಿಷ್ಟು ಸಸ್ಪೆನ್ಸ್‌ ಕಾಯ್ದುಕೊಂಡು ಚಿತ್ರ ವೇಗವಾಗಿ ಸಾಗಿದೆ.

ಇಲ್ಲಿ ಪೊಲೀಸ್‌ ಆಗಿರುವ ಸುದೀಪ್‌ ಸಸ್ಪೆಂಡ್‌ ಆಗಿ ಮತ್ತೆ ಡ್ಯೂಟಿಗೆ ಜಾಯಿನ್‌ ಆಗುವ ಒಂದು ದಿನದ ಹಿಂದಿನ ಕಥೆ ಇದೆ. ಅರ್ಜುನ್‌ ಮಹಾಕ್ಷಯ್‌ ಎಂಬ ಎಸಿಪಿಯಾಗಿ ಸುದೀಪ್‌ ಚಿತ್ರದ ಉದ್ದಕ್ಕೂ ಕಿಚ್ಚು ಹಚ್ಚಿದ್ದಾರೆ ಎನ್ನಬಹುದು.

ಈ ಸಿನಿಮಾದ ಬಹುತೇಕ ಕಥೆ ನಡೆಯುವುದು ಒಂದು ಪೊಲೀಸ್‌ ಸ್ಟೇಷನ್‌ನ ಒಳಗೆ. ಇಂಟರ್‌ವಲ್‌ ಬಳಿಕ ಪೊಲೀಸ್‌ ಸ್ಟೇಷನ್‌ ಹೊರಗೆ ಕತೆ ಇರಬಹುದೇ ಗೊತ್ತಿಲ್ಲ.

ಅರ್ಜುನ್‌ ಮಹಾಕ್ಷಯ್‌ ಡ್ಯೂಟಿಗೆ ಜಾಯಿನ್‌ ಆಗುವ ಮೊದಲ ದಿನ ನಡೆದ ಘಟನೆ. ರಸ್ತೆಯಲ್ಲಿ ಕಾರು ಅಪಘಾತ ಮಾಡಿದ ಎಂಎಲ್‌ಎ, ಮಿನಿಸ್ಟರ್‌ಗಳ ಇಬ್ಬರು ಮಕ್ಕಳನ್ನು ಪೊಲೀಸ್ ಸ್ಟೇಷನ್‌ ಸೆಲ್‌ಗೆ ಹಾಕುತ್ತಾರೆ. ಅಲ್ಲಿ ಅವರಿಬ್ಬರು ಸಾಯುತ್ತಾರೆ. ಅವರವರೇ ಹೊಡೆದುಕೊಂಡು ಸತ್ತಂತೆ ಆರಂಭದಲ್ಲಿ ಕಾಣಿಸುತ್ತದೆ. ಆ ಇಬ್ಬರನ್ನು ಹುಡುಕುತ್ತ ನೂರಾರು ರೌಡಿಗಳು, ಮಿನಿಸ್ಟರ್‌ಗಳು ಪೊಲೀಸ್‌ ಸ್ಟೇಷನ್‌ನತ್ತ ಬರುತ್ತಾರೆ. ಇವರಿಬ್ಬರ ಸಾವಿನ ಪ್ರಕರಣವನ್ನು ಅರ್ಜುನ್‌ ಮಹಾಕ್ಷಯ್‌ ಹೇಗೆ ನಿಭಾಯಿಸುತ್ತಾನೆ ಎಂಬ ಕುತೂಹಲವನ್ನು ಮೂಡಿಸುತ್ತದೆ.

ವಿಲನ್‌ಗಳನ್ನು ಪರಿಚಯಿಸಲು ಸಿನಿಮಾ ಆರಂಭವಾದ ಹತ್ತೇ ನಿಮಿಷದಲ್ಲಿ ಟಪಾಂಗುಚ್ಚಿ ಹಾಡು ಬರುತ್ತದೆ. ವಿಲನ್‌ ಪಾತ್ರದಾರಿಗಳು ಗಮನ ಸೆಳೆಯುತ್ತಾರೆ.

ಇಂಟರ್‌ವಲ್‌ಗೆ ಒಂದಿಷ್ಟು ಸಮಯ ಇರುವಾಗ ಚಿತ್ರದ ನಾಯಕಿ (ವಿಲನ್‌) ವರಲಕ್ಷ್ಮಿ ಶರತ್‌ ಕುಮಾರ್‌ ಎಂಟ್ರಿಯಾಗುತ್ತದೆ. ಆಕೆ ಕ್ರೈಂ ಇನ್‌ಸ್ಪೆಕ್ಟರ್‌ ರೂಪ ಪಾತ್ರದಲ್ಲಿ ನಿರೀಕ್ಷೆ ಹೆಚ್ಚಿಸಿದ್ದಾರೆ. ಈಕೆ ವಿಲನ್‌ಗಳ ಜತೆ ಇರುವ ಕ್ರೈಂ ಇನ್‌ಸ್ಪೆಕ್ಟರ್‌.

ಒಟ್ಟಾರೆ ಇಂಟರ್‌ವಲ್‌ ತನಕ ಫುಲ್‌ ಆಕ್ಷನ್‌ ಪ್ಯಾಕ್ಡ್‌ ಚಿತ್ರವಾಗಿ ಗಮನ ಸೆಳೆದಿದೆ. ಶಕ್ತಿಮಾನ್‌ನಂತೆ ಸುದೀಪ್‌ ಈ ಚಿತ್ರದ ಇಂಟರ್‌ವಲ್‌ ತನಕವೂ ಫೈಟಿಂಗ್‌ ಮಾಡಿದ್ದಾರೆ. ಇಂಟರ್‌ವಲ್‌ ನಂತರ ಫೈಟಿಂಗ್‌ ಇನ್ನಷ್ಟು ಇರುವ ಸೂಚನೆಯಿದೆ.

ಮ್ಯಾಕ್ಸ್‌ ಸಿನಿಮಾದ ಬಗ್ಗೆ

ನಿರ್ದೇಶನ: ವಿಜಯ್‌ ಕಾರ್ತಿಕೇಯ
ನಿರ್ಮಾಣ: ಕಲೈಪ್ಪುಲಿ ಎಸ್. ಥಾನು
ತಾರಾಗಣ: ಸುದೀಪ್‌, ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ ಮುಂತಾದವರು
ಕ್ಯಾಮೆರಾ: ಶೇಖರ್‌ ಚಂದ್ರ
ಸಂಕಲನ: ಎಸ್‌. ಆರ್‌. ಗಣೇಶ್‌ ಬಾಬು
ಸಂಗೀತ: ಬಿ. ಅಜನೀಶ್‌ ಲೋಕನಾಥ್‌
ಸಿನಿಮಾದ ಅವಧಿ: 132 ನಿಮಿಷ

Whats_app_banner