ಕನ್ನಡ ಸುದ್ದಿ  /  Entertainment  /  Sandalwood Movie News Vinu Balanja Directs Bera Movie First Look Teaser Released By Century Star Shiva Rajkumar Mnk

Shiva Rajkumar: ಬೇರ ಸಿನಿಮಾಕ್ಕೆ ಸಿಕ್ತು ಸೆಂಚುರಿ ಸ್ಟಾರ್‌ ಪವರ್;‌ ಶಿವಣ್ಣನ ಕಡೆಯಿಂದ ಟೀಸರ್‌ ರಿಲೀಸ್‌

ತುಳು ಪದವನ್ನೇ ಆಯ್ದುಕೊಂಡು ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ವಿನು ಬಳಂಜ. ಚಿತ್ರಕ್ಕೆ ಬೇರ ಎಂಬ ಶೀರ್ಷಿಕೆ ಇಟ್ಟಿದ್ದು, ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದರ್ಥ.

ಬೇರ ಸಿನಿಮಾಕ್ಕೆ ಸಿಕ್ತು ಸೆಂಚುರಿ ಸ್ಟಾರ್‌ ಪವರ್;‌ ಶಿವಣ್ಣನ ಕಡೆಯಿಂದ ಟೀಸರ್‌ ರಿಲೀಸ್‌
ಬೇರ ಸಿನಿಮಾಕ್ಕೆ ಸಿಕ್ತು ಸೆಂಚುರಿ ಸ್ಟಾರ್‌ ಪವರ್;‌ ಶಿವಣ್ಣನ ಕಡೆಯಿಂದ ಟೀಸರ್‌ ರಿಲೀಸ್‌

Shiva Rajkumar: ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಹೊಸಬರ ಸಿನಿಮಾಗಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಎಷ್ಟೋ ಹೊಸ ನಿರ್ದೇಶಕರು, ಹೊಸ ನಟರು ಅವರ ಮನೆವರೆಗೂ ಹೋಗಿ ಆಶೀರ್ವಾದ ಪಡೆದು ಬರುತ್ತಾರೆ. ಅವರಿಂದಲೇ ಫಸ್ಟ್‌ ಲುಕ್‌, ಟೀಸರ್‌ ಬಿಡುಗಡೆಯನ್ನೂ ಮಾಡಿಸಿದ ಉದಾಹರಣೆಗಳು ಸಾಕಷ್ಟು. ಇದೀಗ ನಿರ್ದೇಶಕ ವಿನು ಬಳಂಜ ನಿರ್ದೇಶನದ ಸಿನಿಮಾಕ್ಕೂ ಹ್ಯಾಟ್ರಿಕ್‌ ಹೀರೋ ವಿಶ್‌ ಮಾಡಿದ್ದಾರೆ. ಬೇರ ಹೆಸರಿನ ಚಿತ್ರದ ಟೀಸರ್‌ ರಿಲೀಸ್‌ ಮಾಡಿದ್ದಾರೆ.

ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ "ಬೇರ" ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಎಸ್ಎಲ್‌ವಿ ಕಲರ್ಸ್ ಬ್ಯಾನರ್‌ನಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಅದಾದ ಬಳಿಕ ಶಿವರಾಜ್‌ ಕುಮಾರ್‌ ಅವರನ್ನು ಭೇಟಿ ಮಾಡಿದ ತಂಡ ಅವರಿಂದಲೂ ಶೀರ್ಷಿಕೆ ಫಸ್ಟ್‌ ಲುಕ್‌, ಟೀಸರ್‌ ಅನ್ನು ಬಿಡುಗಡೆ ಮಾಡಿಸಿತು.

ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ವಿನು ಬಳಂಜ, "ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದರು ನಿರ್ದೇಶಕರು.

ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ಎಲ್‌ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ಎಲ್‌ವಿ ಕಲರ್ಸ್ ಲಾಂಛನದಲ್ಲಿ ಬೇರ ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು ನಿರ್ಮಾಪಕ ದಿವಾಕರ ದಾಸ.

ರಾಜಶೇಖರ್ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ರಾಮದಾಸ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದ ಖುಷಿಯಿದೆ. ನಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದರು ಕಲಾವಿದರು. ಈ ಚಿತ್ರದಲ್ಲಿ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಳಾ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಮುಂತಾದವರು ನಟಿಸಿದ್ದಾರೆ.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

Kantara 2: ಕಾಂತಾರ ಎರಡನೇ ಭಾಗಕ್ಕೆ ನಟ್ಟಿಲ್ ಪಂಜುರ್ಲಿ ದೈವದ ಅಭಯ; ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿಗೆ ಸಿಕ್ತು ಆಶೀರ್ವಾದ

ಕಾಂತಾರ ಸಿನಿಮಾ ಮೂಲಕ ಕರುನಾಡಿನ ಸಿನಿಮಾ ಪ್ರೇಕ್ಷಕರನ್ನಷ್ಟೇ ಅಲ್ಲದೆ, ಭಾರತದ ಸಿನಿಮಾ ಮಂದಿಯ ಗಮನ ಸೆಳೆದವರು ರಿಷಬ್‌ ಶೆಟ್ಟಿ. ಇದೀಗ ಸದ್ದಿಲ್ಲದೆ ಕಾಂತಾರ 2ರ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಸ್ಕ್ರಿಪ್ಟಿಂಗ್‌ ಕೆಲಸಗಳಲ್ಲಿ ತೊಡಗಿಸಿಕೊಂಡು, ಇನ್ನೇನು ಶೀಘ್ರದಲ್ಲಿ ಚಿತ್ರೀಕರಣಕ್ಕೂ ಚಾಲನೆ ನೀಡುವ ಉತ್ಸಾಹದಲ್ಲಿದ್ದಾರೆ. ಈ ನಡುವೆಯೇ ಮುತ್ತೂರು ಶ್ರೀ ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಎರಡನೇ ಭಾಗದ ಸಿನಿಮಾಕ್ಕೆ ಪಂಜುರ್ಲಿ ದೈವ ಪೂರ್ಣ ಅಭಯ ನೀಡಿದ್ದು ವಿಶೇಷ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point