Kannada OTT Release: ಮ್ಯಾಕ್ಸ್, ಯುಐ, ಆರಾಮ್ ಅರವಿಂದ್ ಸ್ವಾಮಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಕನ್ನಡ ಒಟಿಟಿ ವೀಕ್ಷಕರಿಗೆ ಕಾತರ
Upcoming Kannada OTT Releases: ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್, ಉಪೇಂದ್ರರ ಯುಐ, ಅನೀಶ್ ಮತ್ತು ಮಿಲನಾ ನಾಗರಾಜ್ ನಟನೆಯ ಆರಾಮಾ ಅರವಿಂದ ಸ್ವಾಮಿ ಸಿನಿಮಾಗಳನ್ನು ಮನೆಯಲ್ಲಿಯೇ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾಗಳು ಇದೇ ಜನವರಿ ಕೊನೆಗೆ ಬಿಡುಗಡೆಯಾಗಲಿದೆ ಎಂಬ ವದಂತಿಗಳಿವೆ.

Upcoming Kannada OTT Releases: ಹೊಸ ಕನ್ನಡ ಸಿನಿಮಾಗಳನ್ನು ಈಗಾಗಲೇ ಥಿಯೇಟರ್‌ಗಳಲ್ಲಿ ನೋಡಿರುವವರು ಮನೆಯಲ್ಲಿ ಮತ್ತೊಮ್ಮೆ ಒಟಿಟಿಯಲ್ಲಿ ನೋಡಲು ಬಯಸಿರಬಹುದು. ಇದೇ ಸಮಯದಲ್ಲಿ ಅನಿವಾರ್ಯ ಕಾರಣಗಳಿಂದ ಅಥವಾ ಸ್ವಯಂ ಆಸಕ್ತಿಯಿಂದ ಚಿತ್ರಮಂದಿರಕ್ಕೆ ಹೋಗದೆ ಇರುವವರು ಹೊಸ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಕಾಯುತ್ತಿರಬಹುದು. ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅದೇ ಸಮಯದಲ್ಲಿ ಉಪೇಂದ್ರ ಅವರು ಪ್ರೇಕ್ಷಕರ ತಲೆಗೆ ಹುಳ ಬಿಟ್ಟ ಯುಐ ಸಿನಿಮಾವೂ ಬಿಡುಗಡೆಯಾಗಿತ್ತು. ಕೆಲವು ಸಮಯದ ಹಿಂದೆಯೇ ಬಿಡುಗಡೆಯಾದ ಆರಾಮ್ ಅರವಿಂದ್ ಸ್ವಾಮಿ ಎಂಬ ಸಿನಿಮಾವೂ ಒಟಿಟಿಯಲ್ಲಿ ಬಿಡುಗಡೆಯಾಗಲು ಸರತಿಯಲ್ಲಿವೆ. ಕೆಲವು ಮೂಲಗಳ ಪ್ರಕಾರ ಈ ಸಿನಿಮಾಗಳು ಇದೇ ಜನವರಿ 30-31ರೊಳಗೆ ಬಿಡುಗಡೆಯಾಗಲಿದೆಯಂತೆ. ಇವು ಜಸ್ಟ್ ವದಂತಿ. ಅಧಿಕೃತ ದಿನಾಂಕವನ್ನು ಆಯಾ ಒಟಿಟಿ ವೇದಿಕೆಗಳು ಇನ್ನಷ್ಟೇ ಖಚಿತಪಡಿಸಬೇಕಿವೆ.
ಯುಐ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಯಾವಾಗ?
ಮ್ಯಾಕ್ಸ್ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುವುದಕ್ಕಿಂತ ಒಂದು ವಾರ ಮೊದಲು ಬಿಡುಗಡೆಯಾಗಿದ್ದ ಯುಐ ದಿ ಮೂವಿ ಯಾವಾಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಸಾಕಷ್ಟು ಜನರು ಕಾಯುತ್ತಿರಬಹುದು. ಈ ಸಿನಿಮಾವು ಜನವರಿ 30ರಂದು ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಈ ಕುರಿತು ಜೀ 5 ಕಡೆಯಿಂದ ಇನ್ನಷ್ಟೇ ಅಪ್‌ಡೇಟ್ ಬರಬೇಕಿದೆ. ಉಪೇಂದ್ರ ನಿರ್ದೇಶನದ ಕ್ಯಾಪ್ ತೊಟ್ಟು ನಟಿಸಿರುವ ಯುಐ ಸಿನಿಮಾದ ಥಿಯೇಟರ್‌ನಲ್ಲಿ ಬಿಡುಗಡೆಯಾದಗ ಭಿನ್ನ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಇದು ಪಕ್ಕಾ ಉಪೇಂದ್ರ ಶೈಲಿಯ ಸಿನಿಮಾವಾಗಿ ಎಲ್ಲರ ಗಮನ ಸೆಳೆಯಿತು. ಉಪ್ಪಿ ಯುಐ ಸಿನಿಮಾದ ವಿಮರ್ಶೆ ಇಲ್ಲಿದೆ ಓದಿ.
ಮ್ಯಾಕ್ಸ್ ಸಿನಿಮಾದ ಒಟಿಟಿ ಅಪ್‌ಡೇಟ್
ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ಮ್ಯಾಕ್ಸ್ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ಜೀ 5 ಪಡೆದಿದೆ. ಆದರೆ, ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ವರದಿಗಳ ಪ್ರಕಾರ ಈ ಸಿನಿಮಾ ಇದೇ ಜನವರಿ 31ರಂದು ಬಿಡುಗಡೆಯಾಗಲಿದೆಯಂತೆ. ಲೈಪುಲಿ ಎಸ್ ದಾನು ನಿರ್ಮಾಣದಲ್ಲಿ ಮೂಡಿಬಂದಿರುವ ಮ್ಯಾಕ್ಸ್ ಸಿನಿಮಾವು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮುಂತಾದ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. "ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ಮ್ಯಾಕ್ಸಿಮಮ್ ಫೈಟಿಂಗ್ ಇದೆ. ಮಿನಿಮಮ್ ಸೆಂಟಿಮೆಂಟ್ ಇದೆ. ಕಾಮಿಡಿ ಝೀರೋ ಇದೆ. "ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಿನಿಮಾ" ಬಯಸುವವರಿಗೆ ಮ್ಯಾಕ್ಸ್ ತುಸು ನಿರಾಸೆ ಮೂಡಿಸಬಹುದು" ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಈಗಾಗಲೇ ಈ ಸಿನಿಮಾದ ವಿಮರ್ಶೆ ಪ್ರಕಟಿಸಿದೆ.
ಆರಾಮ್ ಅರವಿಂದ್ ಸ್ವಾಮಿ ಒಟಿಟಿ ಅಪ್‌ಡೇಟ್
ಅನೀಶ್ ತೇಜೇಶ್ವರ್ ನಟನೆಯ ಆರಾಮ್ ಅರವಿಂದ್ ಸ್ವಾಮಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಕೂಡ ಒಟಿಟಿಯಲ್ಲಿ ಸದ್ಯದಲ್ಲಿಯೇ ಬಿಡುಗಡೆಯಾಲಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಈ ಸಿನಿಮಾದ ಬಿಡುಗಡೆ ದಿನಾಂಕದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ. ಈ ಸಿನಿಮಾ ಕೂಡ ಜೀ 5ನಲ್ಲಿ ಬಿಡುಗಡೆಯಾಗುವ ಸೂಚನೆಯಿದೆ.
ಜೀ 5 ಮಾತ್ರವಲ್ಲದೆ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್‌ನಲ್ಲಿಯೂ ಹೊಸ ಕನ್ನಡ ಸಿನಿಮಾಗಳು ಬಿಡುಗೆಯಾಗುವುದೇ ಎಂದು ಈ ಒಟಿಟಿಗಳ ಚಂದಾದಾರರು ಕಾಯುತ್ತಿದ್ದಾರೆ. ಬಹುತೇಕ ಇತರೆ ಒಟಿಟಿಗಳಲ್ಲಿ ಇತರೆ ಭಾಷೆಗಳ ಸಿನಿಮಾಗಳ ಕನ್ನಡ ಡಬ್ಬಿಂಗ್ ಆವೃತ್ತಿಗಳು ಹೆಚ್ಚಾಗಿ ಬಿಡುಗಡೆಯಾಗುತ್ತಿವೆ.
