ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ
ಕನ್ನಡ ಸುದ್ದಿ  /  ಮನರಂಜನೆ  /  ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

ನಟಿ ಸಿತಾರಾ ಕಳೆದ 3 ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಸೌತ್‌ನ ಎಲ್ಲ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ ಹೀರೋಯಿನ್‌ ಆಗಿ ಮಿಂಚಿದ್ದಾರೆ. ಆದರೆ, ಇದೇ ನಟಿಗೆ ಈಗ 50 ವರ್ಷ ವಯಸ್ಸಾದರೂ, ಇಂದಿಗೂ ಅವಿವಾಹಿತರಾಗಿಯೇ ಉಳಿದಿದ್ದಾರೆ.

ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ
ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

Actress Sithara: ಸಿತಾರಾ ದಕ್ಷಿಣ ಭಾರತದ ಖ್ಯಾತ ನಟಿ. ಮೂಲ ಮಲಯಾಳಿಯಾದರೂ, ಮಲಯಾಳಂ, ಕನ್ನಡ, ತಮಿಳು, ತೆಲುಗು ಚಿತ್ರೋದ್ಯಮದಲ್ಲಿ ತಮ್ಮದೇ ಖ್ಯಾತಿಯನ್ನು ಗಳಿಸಿದವರು. 90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸಿತಾರಾ, ಇಂದಿಗೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಸಿನಿಮಾಗಳ ಜತೆಯಲ್ಲಿ ಕಿರುತೆರೆ ಕ್ಷೇತ್ರದಲ್ಲಿಯೂ ಸಿತಾರಾ ಗುರುತಿಸಿಕೊಂಡಿದ್ದಾರೆ. ಇಂದಿಗೂ ತಮಿಳಿನ ಪೂವ ತಲಾಯ ಸೀರಿಯಲ್‌ನಲ್ಲಿ ರಾಜೇಶ್ವರಿ ಹೆಸರಿನ ಪಾತ್ರದಲ್ಲಿ ಸಿತಾರಾ ನಟಿಸುತ್ತಿದ್ದಾರೆ.

ಕನ್ನಡದಲ್ಲಿ 1994ರಲ್ಲಿ ಬಂದ ವಿಷ್ಣುವರ್ಧನ್‌ ನಾಯಕನಾಗಿ ನಟಿಸಿದ ಹಾಲುಂಡ ತವರು ಸಿನಿಮಾದಿಂದ ಸಿತಾರ ಸಿನಿಮಾ ಜರ್ನಿ ಶುರುವಾಯ್ತು. ಅಲ್ಲಿಂದ ಮತ್ತೆ ಹಿಂದೆ ತಿರುಗಿ ನೋಡದ ಅವರು, ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ, ಯಶಸ್ಸಿನ ಅಲೆಯಲ್ಲಿ ಮುಂದುವರಿದರು. 1995ರಲ್ಲಿ ಒಂದೇ ವರ್ಷದಲ್ಲಿ ಒಂದಲ್ಲ ಎರಡಲ್ಲ ಒರೋಬ್ಬರಿ ಐದು ಸಿನಿಮಾಗಳು ತೆರೆಗೆ ಬಂದವು. ಕರುಳಿನ ಕುಡಿ, ಕಾವ್ಯಾ, ಬಂಗಾರದ ಕಳಶ, ದೀರ್ಘ ಸುಮಂಗಲಿ, ಗಣೇಶನ ಗಲಾಟೆ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟವು.

2001ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಗೆ ಬಂದ ಜೇನು ಗೂಡು ಸಿನಿಮಾ ಬಳಿಕ, ಸುದೀರ್ಘ 10 ವರ್ಷಗಳ ನಂತರ, ಪ್ರಕಾಶ್‌ ರಾಜ್‌ ಜತೆಗೆ ನಾನು ನನ್ನ ಕನಸು ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದ ಸಿತಾರಾ, ಅದಾದ ಬಳಿಕ 2015ರಲ್ಲಿ ಮಿ. ಐರಾವತ, ಚಕ್ರವ್ಯೂಹ, ಬೃಹಸ್ಪತಿ, ಬಕಾಸುರ ಸಿನಿಮಾಗಳಲ್ಲಿ ನಟಿಸಿದರು. 2018ರಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ ಅಮ್ಮ ಐ ಲವ್‌ ಯೂ ಚಿತ್ರವೇ ಅವರ ಕೊನೆಯ ಕನ್ನಡ ಸಿನಿಮಾ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಜತೆಗೆ ಕಿರುತೆರೆಯಲ್ಲಿಯೂ ಹೆಚ್ಚೆಚ್ಚು ಕಾಣಿಸತೊಡಗಿದರು.

ಇಂದಿಗೂ ಅವಿವಾಹಿತರಾಗಿಯೇ ಉಳಿದ ಸಿತಾರಾ..

ಹೀಗೆ ವೃತ್ತಿಯಲ್ಲಿ ಯಶಸ್ಸು ಕಂಡರೂ, ವೈಯಕ್ತಿಕ ಜೀವನದಲ್ಲಿ ಮಾತ್ರ ಸಿತಾರಾ ನೋವು ಅನುಭವಿಸಿದರು. ಸದ್ಯ ಅವರಿಗೆ 50 ವರ್ಷ ವಯಸ್ಸು. ಇಂದಿಗೂ ಸಿತಾರಾ ಮದುವೆಯಾಗಿಲ್ಲ. ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಹಲವು ಸ್ಟಾರ್ ನಟರ ಜೊತೆ ಜೋಡಿಯಾಗಿ ನಟಿಸಿ ಚಿತ್ರರಂಗದಲ್ಲಿ 30 ವರ್ಷವನ್ನು ಸವೆಸಿ ಸ್ಟಾರ್‌ ನಟಿಯಾಗಿ ಮಿಂಚಿದರೂ ಸಿತಾರಾ ಮಾತ್ರ ಇಂದಿಗ ಅವಿವಾಹಿತರಾಗಿಯೇ ಉಳಿದಿದ್ದಾರೆ. ಅದಕ್ಕೆ ಕಾರಣ ಏನೆಂದು ಕೇಳಿದರೆ, ಅವರಿಂದ ಬರುವ ಉತ್ತರ ಅದೊಂದೆ.

ಅವನ ನೆನಪಿನಲ್ಲಿ...

ನಟಿ ಸಿತಾರಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಮನೆಯವರಿಂದ ಮದುವೆಯ ಪ್ರಪೋಸಲ್‌ಗಳು ಸಾಕಷ್ಟು ಬಂದಿದ್ದವು. ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಬಿಜಿಯಾಗಿದ್ದಾಗ ಒಬ್ಬರನ್ನು ಪ್ರೀತಿಸುತ್ತಿದ್ದೆ. ಆದರೆ ದುರದೃಷ್ಟವಶಾತ್ ಆ ಪ್ರೀತಿ ಉಳಿಯಲಿಲ್ಲ. ನಾನು ಯಾವಾಗಲೂ ಅವನ ಬಗ್ಗೆಯೇ ಯೋಚಿಸುತ್ತಿದ್ದರಿಂದ, ಬೇರೆಯವರನ್ನು ಮದುವೆಯಾಗುವ ಮನಸು ಮಾಡಲಿಲ್ಲ. ಇಂದಿಗೂ ನಾನು ಮದುವೆ ಬಗ್ಗೆ ನಿರ್ಧರಿಸಿಲ್ಲ" ಎಂದು ನಟಿ ಸಿತಾರಾ ಹೇಳಿಕೊಂಡಿದ್ದಾರೆ.

ಅಪ್ಪ ಅಮ್ಮನಿಂದ ದೂರವಾಗಲು ಇಷ್ಟವಿರಲಿಲ್ಲ..

ಇನ್ನು ಇದರ ಜತೆಗೆ ಸಿತಾರಾ ಮದುವೆ ಆಗದಿರುವುದಕ್ಕೆ ಇನ್ನೊಂದು ಬಲವಾದ ಕಾರಣವೂ ಇದೆ. ಅದನ್ನೂ ಈ ಹಿಂದೆ ಸಂದರ್ಶನದಲ್ಲಿ ಸಿತಾರಾ ಹೇಳಿಕೊಂಡಿದ್ದಾರೆ. "ನನ್ನ ತಂದೆ ಪರಮೇಶ್ವರನ್ ನಾಯರ್ ಅವರಿಗೆ ನಾನು ತುಂಬಾ ಕ್ಲೋಸ್‌. ಅವರನ್ನು ಬಿಟ್ಟು ನಾನು ಇರುತ್ತಿರಲಿಲ್ಲ. ತಂದೆತಾಯಿಯನ್ನು ಬಿಟ್ಟು ಅವರಿಂದ ದೂರ ಉಳಿಯಲು ನನ್ನಿಂದ ಆಗದು. ಆ ಕಾರಣಕ್ಕೂ ನಾನು ಮದುವೆಯಾಗಲಿಲ್ಲ. ನನ್ನ ತಂದೆ ತೀರಿಕೊಂಡ ಬಳಿಕ, ಮದುವೆಯಾಗಿ ಇನ್ಯಾರದೋ ಜತೆಗೆ ಸೆಟಲ್‌ ಆಗುವ ಆಲೋಚನೆ ಸಂಪೂರ್ಣವಾಗಿ ಮರೆಯಾಯಿತು" ಎಂದೂ ಹೇಳಿಕೊಂಡಿದ್ದರು ಸಿತಾರಾ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

Whats_app_banner