68ನೇ ಫಿಲಂಫೇರ್‌ನಲ್ಲಿ ಕಾಂತಾರ ಚಿತ್ರಕ್ಕೆ ಒಟ್ಟು 6 ಪ್ರಶಸ್ತಿ; ಇಲ್ಲಿದೆ ಅವಾರ್ಡ್‌ ಪಡೆದ ಸ್ಯಾಂಡಲ್‌ವುಡ್‌ ಸಿನಿಮಾಗಳ ಪಟ್ಟಿ
ಕನ್ನಡ ಸುದ್ದಿ  /  ಮನರಂಜನೆ  /  68ನೇ ಫಿಲಂಫೇರ್‌ನಲ್ಲಿ ಕಾಂತಾರ ಚಿತ್ರಕ್ಕೆ ಒಟ್ಟು 6 ಪ್ರಶಸ್ತಿ; ಇಲ್ಲಿದೆ ಅವಾರ್ಡ್‌ ಪಡೆದ ಸ್ಯಾಂಡಲ್‌ವುಡ್‌ ಸಿನಿಮಾಗಳ ಪಟ್ಟಿ

68ನೇ ಫಿಲಂಫೇರ್‌ನಲ್ಲಿ ಕಾಂತಾರ ಚಿತ್ರಕ್ಕೆ ಒಟ್ಟು 6 ಪ್ರಶಸ್ತಿ; ಇಲ್ಲಿದೆ ಅವಾರ್ಡ್‌ ಪಡೆದ ಸ್ಯಾಂಡಲ್‌ವುಡ್‌ ಸಿನಿಮಾಗಳ ಪಟ್ಟಿ

2023ರ ಫಿಲಂ ಫೇರ್ ಸೌತ್ ಅವಾರ್ಡ್ಸ್ ಘೋಷಣೆಯಾಗಿದೆ. 2022ರ ಅವಧಿಯಲ್ಲಿ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ವಿಜೇತರ ಪಟ್ಟಿ ಹೊರಬಿದ್ದಿದೆ. ಕನ್ನಡದಲ್ಲಿ ಕಾಂತಾರ ಚಿತ್ರಕ್ಕೆ ಅತಿ ಹೆಚ್ಚು ಪ್ರಶಸ್ತಿಗಳು ಲಭ್ಯವಾಗಿವೆ.

68ನೇ ಫಿಲಂಫೇರ್‌ನಲ್ಲಿ ಕಾಂತಾರ ಚಿತ್ರಕ್ಕೆ ಒಟ್ಟು 6 ಪ್ರಶಸ್ತಿ; ಇಲ್ಲಿದೆ ಅವಾರ್ಡ್‌ ಪಡೆದ ಸ್ಯಾಂಡಲ್‌ವುಡ್‌ ಸಿನಿಮಾಗಳ ಪಟ್ಟಿ
68ನೇ ಫಿಲಂಫೇರ್‌ನಲ್ಲಿ ಕಾಂತಾರ ಚಿತ್ರಕ್ಕೆ ಒಟ್ಟು 6 ಪ್ರಶಸ್ತಿ; ಇಲ್ಲಿದೆ ಅವಾರ್ಡ್‌ ಪಡೆದ ಸ್ಯಾಂಡಲ್‌ವುಡ್‌ ಸಿನಿಮಾಗಳ ಪಟ್ಟಿ

68th Filmfare Awards South: 2023ರ ಫಿಲಂ ಫೇರ್ ಸೌತ್ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ. ಕಳೆದ ವರ್ಷ ಅನಿರೀಕ್ಷಿತ ಕಾರಣಗಳಿಂದ ಜನವರಿ 1, 2022 ರಿಂದ ಡಿಸೆಂಬರ್ 31, 2022ರ ನಡುವೆ ಬಿಡುಗಡೆಯಾದ ಸಿನಿಮಾಗಳಿಗಾಗಿ ಫಿಲಂ ಫೇರ್ ಅವಾರ್ಡ್ಸ್ ಸೌತ್ 2023ಅನ್ನು ನಡೆಸಲಾಗಲಿಲ್ಲ. ಆ ಬೆನ್ನಲ್ಲೇ ಇದೀಗ ಯಾವೆಲ್ಲ ಚಿತ್ರಗಳು ಪ್ರಶಸ್ತಿ ಪಡೆದಿವೆ ಎಂಬುದನ್ನು ಫಿಲಂ ಫೇರ್‌ ಘೋಷಿಸಿದೆ. 

777 ಚಾರ್ಲಿ ಚಿತ್ರಕ್ಕಾಗಿ ಕಿರಣ್‌ರಾಜ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಚಿತ್ರವಾಗಿ ಕಾಂತಾರ, ಚೈತ್ರಾ ಜೆ ಆಚಾರ್ ಅವರು ತಲೆದಂಡ ಚಿತ್ರದಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರೆ, ಕಾಂತಾರ ಚಿತ್ರದ ನಟನೆಗಾಗಿ ನಾಯಕ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

68ನೇ ಫಿಲಂ ಫೇರ್ ಅವಾರ್ಡ್ಸ್ ಸೌತ್ 2023 ಕನ್ನಡ ವಿಭಾಗದ ವಿಜೇತರು

ಅತ್ಯುತ್ತಮ ಚಿತ್ರ: ಕಾಂತಾರ

ಅತ್ಯುತ್ತಮ ನಿರ್ದೇಶಕ: ಕಿರಣ್‌ರಾಜ್ ಕೆ (777 ಚಾರ್ಲಿ)

ಅತ್ಯುತ್ತಮ ಚಲನಚಿತ್ರ ವಿಮರ್ಶಕರ ಆಯ್ಕೆ: ಧರಣಿ ಮಂಡಲ ಮಧ್ಯದೊಳಗೆ (ಶ್ರೀಧರ್ ಶಿಕಾರಿಪುರ)

ಲೀಡಿಂಗ್‌ ರೋಲ್‌ ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ)

ಲೀಡಿಂಗ್‌ ರೋಲ್‌ ಅತ್ಯುತ್ತಮ ನಟಿ: ಚೈತ್ರ ಜೆ ಆಚಾರ್ (ತಲೆದಂಡ)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಸಪ್ತಮಿ ಗೌಡ (ಕಾಂತಾರ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ಅಚ್ಯುತ್ ಕುಮಾರ್ (ಕಾಂತಾರ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಮಂಗಳಾ ಎನ್ (ತಲೆದಂಡ)

ಅತ್ಯುತ್ತಮ ಸಂಗೀತ ಆಲ್ಬಮ್: ಬಿ ಅಜನೀಶ್ ಲೋಕನಾಥ್ (ಕಾಂತಾರ)

ಅತ್ಯುತ್ತಮ ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ- ಬನಾರಸ್)

ಅತ್ಯುತ್ತಮ ಹಿನ್ನೆಲೆ ಗಾಯಕ: ಸಾಯಿ ವಿಘ್ನೇಶ್ (ವರಾಹ ರೂಪ-ಕಾಂತಾರ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ- ವಿಕ್ರಾಂತ್ ರೋಣ)

ತೆಲುಗು ಪ್ರಶಸ್ತಿಗಳ ವಿಭಾಗದ ವಿಜೇತರು

ಅತ್ಯುತ್ತಮ ಚಿತ್ರ: ಆರ್‌ಆರ್‌ಆರ್‌

ಅತ್ಯುತ್ತಮ ನಿರ್ದೇಶಕ: ಎಸ್‌. ಎಸ್‌. ರಾಜಮೌಳಿ (ಆರ್‌ಆರ್‌ಆರ್‌)

ಅತ್ಯುತ್ತಮ ಚಲನಚಿತ್ರ ವಿಮರ್ಶಕರ ಆಯ್ಕೆ: ಸೀತಾ ರಾಮಂ (ಹನು ರಾಘವಪುಡಿ)

ಅತ್ಯುತ್ತಮ ನಟ: ಜೂನಿಯರ್‌ ಎನ್.ಟಿ.ಆರ್ (RRR) ರಾಮ್ ಚರಣ್ (RRR)

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ದುಲ್ಕರ್ ಸಲ್ಮಾನ್ (ಸೀತಾ ರಾಮಂ)

ಅತ್ಯುತ್ತಮ ನಟಿ: ಮೃಣಾಲ್ ಠಾಕೂರ್ (ಸೀತಾ ರಾಮಂ)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಸಾಯಿ ಪಲ್ಲವಿ (ವಿರಾಟ ಪರ್ವಂ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ರಾಣಾ ದಗ್ಗುಬಾಟಿ (ಭೀಮ್ಲಾ ನಾಯಕ್)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ನಂದಿತಾ ದಾಸ್ (ವಿರಾಟ ಪರ್ವಂ)

ಅತ್ಯುತ್ತಮ ಸಂಗೀತ: ಎಂ. ಎಂ. ಕೀರವಾಣಿ (ಆರ್‌ಆರ್‌ಆರ್‌)

ಅತ್ಯುತ್ತಮ ಸಾಹಿತ್ಯ: ಸಿರಿವೆಣ್ಣೆಲ ಸೀತಾರಾಮ ಶಾಸ್ತ್ರಿ- ಕಾನುಣ್ಣ ಕಲ್ಯಾಣಂ (ಸೀತಾ ರಾಮಂ)

ಅತ್ಯುತ್ತಮ ಹಿನ್ನೆಲೆ ಗಾಯಕ: ಕಾಲ ಭೈರವ- ಕೊಮುರಂ ಭೀಮುದೋ (ಆರ್‌ಆರ್‌ಆರ್‌)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಚಿನ್ಮಯಿ ಶ್ರೀಪಾದ (ಓಹ್ ಪ್ರೇಮ- ಸೀತಾ ರಾಮಂ)

ತಮಿಳು ಪ್ರಶಸ್ತಿಗಳ ವಿಭಾಗದ ವಿಜೇತರು

ಅತ್ಯುತ್ತಮ ಚಿತ್ರ: ಪೊನ್ನಿಯಿನ್ ಸೆಲ್ವನ್ ಭಾಗ 1

ಅತ್ಯುತ್ತಮ ನಿರ್ದೇಶಕ: ಮಣಿ ರತ್ನಂ (ಪೊನ್ನಿಯಿನ್ ಸೆಲ್ವನ್ ಭಾಗ 1)

ಅತ್ಯುತ್ತಮ ಚಲನಚಿತ್ರ ವಿಮರ್ಶಕರ ಆಯ್ಕೆ: ಕಡೈಸಿ ವಿವಸಾಯಿ (ಮಣಿಕಂದನ್)

ಅತ್ಯುತ್ತಮ ನಟ: ಕಮಲ್ ಹಾಸನ್ (ವಿಕ್ರಮ್)

ಅತ್ಯುತ್ತಮ ನಟಿ: ಸಾಯಿ ಪಲ್ಲವಿ (ಗಾರ್ಗಿ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ಕಾಳಿ ವೆಂಕಟ್ (ಗಾರ್ಗಿ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಊರ್ವಶಿ (ವೀಟ್ಲ ವಿಶೇಷಂ)

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಧನುಷ್ (ತಿರುಚಿತ್ರಾಂಬಲಂ) ಆರ್. ಮಾಧವನ್ (ರಾಕೆಟ್ರಿ: ದಿ ನಂಬಿ ಎಫೆಕ್ಟ್)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ; ನಿತ್ಯಾ ಮೆನೆನ್ (ತಿರುಚಿತ್ರಾಂಬಲಂ)

ಅತ್ಯುತ್ತಮ ಸಂಗೀತ: ಎ.ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ ಭಾಗ 1)

ಅತ್ಯುತ್ತಮ ಸಾಹಿತ್ಯ: ತಾಮರೈ (ಮರಕ್ಕುಮ ನೆಂಜಂ- ವೆಂದು ತನಿಂಧತ್ತು ಕಾಡು)

ಅತ್ಯುತ್ತಮ ಹಿನ್ನೆಲೆ ಗಾಯಕ: ಸಂತೋಷ್ ನಾರಾಯಣನ್ (ತೆನ್ಮೋಳಿ- ತಿರುಚಿತ್ರಾಂಬಲಂ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಂತರ ನಂದಿ (ಅಲೈಕದಲ್- ಪೊನ್ನಿಯಿನ್ ಸೆಲ್ವನ್ ಭಾಗ 1)

Whats_app_banner